ಸಾಂಬಾ (ಬ್ರೆಜಿಲಿಯನ್ ನೃತ್ಯ)
ಸಾಂಬಾ ಎಂಬುದು ೨/೪ ಅವಧಿಯಲ್ಲಿ ಬ್ರೆಜಿಲ್ ನಲ್ಲಿ ಹುಟ್ಟಿಕೊಂಡ ಒಂದು ಉತ್ಸಾಹಭರಿತ, ಲಯಬದ್ಧವಾದ ನೃತ್ಯವಾಗಿದ್ದು, ಇದರಲ್ಲಿ ಸಾಂಬಾ ಸಂಗೀತಕ್ಕೆ ಹೆಜ್ಜೆ ಹಾಕಲಾಗುತ್ತದೆ. ಆದಾಗ್ಯೂ, ಪ್ರತಿಯೊಂದು ಲಯರೇಖೆಗೆ ಮೂರು ಹೆಜ್ಜೆಗಳನ್ನು ಹಾಕಲಾಗುತ್ತದೆ, ಇದು ಸಾಂಬಾ ೩/೪ ಅವಧಿ ನೃತ್ಯವೆಂದು ಪರಿಗಣಿಸುವಂತೆ ಮಾಡುತ್ತದೆ. ಇದರ ಮೂಲಗಳಲ್ಲಿ ಮ್ಯಾಕ್ಸಿಕ್ಸೆಗಳು ಸೇರಿವೆ.
ಸಾಂಬಾ ಸಂಗೀತದ ಲಯಕ್ಕೆ ೧೯ನೇ ಶತಮಾನದಲ್ಲಿ ಅದು ಬ್ರೆಜಿಲ್ ನಲ್ಲಿ ಆರಂಭಗೊಂಡ ಅವಧಿಯಿಂದಲೂ ನೃತ್ಯ ಮಾಡಲಾಗುತ್ತಿದೆ. ವಾಸ್ತವವಾಗಿ ಇದರಲ್ಲಿ ಏಕೈಕ ನೃತ್ಯದ ಹೊರತಾಗಿ, ನೃತ್ಯಗಳ ಒಂದು ಗುಂಪೇ ಇದೆ, ಇದು ಬ್ರೆಜಿಲ್ ನ ಸಾಂಬಾ ನೃತ್ಯದ ದೃಶ್ಯಾವಳಿಯನ್ನು ನಿರೂಪಿಸುತ್ತದೆ, ಯಾವುದೇ ಒಂದು ನೃತ್ಯವನ್ನು "ಮೂಲ" ಸಾಂಬಾ ಶೈಲಿಯ ನಿಶ್ಚಿತತೆಯೊಂದಿಗೆ ಸಮರ್ಥಿಸಲಾಗುವುದಿಲ್ಲ.
ಬ್ರೆಜಿಲಿಯನ್ ಸಾಂಬಾ ನೃತ್ಯ ಶೈಲಿಗಳ ಜೊತೆಯಲ್ಲಿ ಸಾಂಬಾ ನೃತ್ಯದ ಮತ್ತೊಂದು ಪ್ರಮುಖ ಪ್ರಕಾರವೆಂದರೆ ಬಾಲ್ ರೂಂ ಸಾಂಬಾ, ಇದು ಗಮನಾರ್ಹವಾಗಿ ಭಿನ್ನವಾಗಿರುತ್ತದೆ.[೧]
ಸಾಂಬಾ ನೋ ಪೆ
[ಬದಲಾಯಿಸಿ]ಸಾಂಬಾ ನೋ ಪೆ ಎಂಬುದು ಒಂದು ಒಂಟಿ ನೃತ್ಯವಾಗಿದ್ದು ಇದಕ್ಕೆ ಸಾಮಾನ್ಯವಾಗಿ ಸಾಂಬಾ ಸಂಗೀತವನ್ನು ಚಾಲನೆಗೊಳಿಸಿದಾಗ ಪೂರ್ವಸಿದ್ಧತೆಯಿಲ್ಲದೆ ಹೆಜ್ಜೆ ಹಾಕಲಾಗುತ್ತದೆ. ಇದರ ಮೂಲ ಅಂಗಾಂಗ ಚಲನೆಗಳಲ್ಲಿ ದೇಹವನ್ನು ನೇರವಾಗಿ ಇರಿಸಿಕೊಳ್ಳುವುದರ ಜೊತೆಗೆ ಏಕಕಾಲಿಕವಾಗಿ ಒಂದು ಮಂಡಿಯನ್ನು ಬಾಗಿಸುವುದು ಒಳಗೊಂಡಿದೆ. ಕಾಲುಗಳನ್ನು ಸ್ವಲ್ಪಮಟ್ಟಿಗೆ ತಿರುಗಿಸಲಾಗುತ್ತದೆ - ಏಕಕಾಲಿಕವಾಗಿ ಕೆಲವೇ ಕೆಲವು ಇಂಚುಗಳು. ೨/೪ ಇದರ ಲಯಬದ್ಧತೆಯಾಗಿದ್ದು, ಜೊತೆಗೆ ಪ್ರತಿ ಕುಣಿತಕ್ಕೆ ಮೂರು ಹೆಜ್ಜೆಗಳನ್ನು ಹಾಕಲಾಗುತ್ತದೆ. ಇದನ್ನು ಪ್ರತಿ-ಬಾಲ್ ಗೆ-ಬದಲಾವಣೆಯಾಗುವ ಹೆಜ್ಜೆಯೆಂದು ಪರಿಗಣಿಸಬಹುದು.ಇದನ್ನು ಏ-ಒನ್ ಹಾಗು ಏ-ಟೂ, ನಂತರದಲ್ಲಿ ಮರಳಿ ಒಂದನೇ ಹೆಜ್ಜೆಗೆ ಕುಣಿತವೆಂದು ವಿವರಿಸಬಹುದು. ಮೂಲವಾಗಿ ಚಲನೆಯು ಎರಡೂ ಕಡೆಗೆ ಒಂದೇ ಆಗಿರುತ್ತದೆ, ಆದರೆ ಒಂದು ಕಾಲು ಮೊದಲ ತಾಳಕ್ಕೆ ಮುಂಚೆ ಹೊರಭಾಗದಲ್ಲಿ ಮೇಲಕ್ಕೆತ್ತಲಾಗುತ್ತದೆ(ಅಂದರೆ ಬಲಕಾಲು ಬಲಬದಿಗೆ ಸ್ವಲ್ಪವಾಗಿ ಚಾಲನೆಯಾಗುತ್ತದೆ) ಹಾಗು ಕಾಲನ್ನು ನೇರವಾಗಿ ಏ ನ ಮಾದರಿ ಇರಿಸಿಕೊಂಡಿರಲಾಗುತ್ತದೆ. ಮತ್ತೊಂದು ಕಾಲು ಸ್ವಲ್ಪಮಟ್ಟಿಗೆ ಮುಂದಕ್ಕೆ ಚಲಿಸುತ್ತದೆ, ಹಾಗು ಮೊದಲ ಕಾಲಿನ ಸ್ವಲ್ಪ ಸಮೀಪದಲ್ಲಿರುತ್ತದೆ. ಎರಡನೇ ಕಾಲು ಮಂಡಿಯ ಹತ್ತಿರ ಸ್ವಲ್ಪವೇ ಬಾಗಿಸಲಾಗುತ್ತದೆ, ಈ ರೀತಿಯಾಗಿ ಸೊಂಟದ ಎಡ ಬದಿಯು ಸ್ವಲ್ಪ ಬಾಗುತ್ತದೆ ಹಾಗು ಬಲ ಬದಿಯು ಎತ್ತರಕ್ಕೆ ಚಲಿಸುತ್ತಿರುವಂತೆ ಕಂಡುಬರುತ್ತದೆ. ಮುಂದಿನ "ಅಂಡ್-ಏ" ಹೆಜ್ಜೆಗೆ ಕಾಲನ್ನು ಸ್ವಲ್ಪ ಒಳಕ್ಕೆ ತಳ್ಳಿಕೊಂಡು ಭಾರವನ್ನು ಬಿಡಲಾಗುತ್ತದೆ, ನಂತರದಲ್ಲಿ "ಎರಡನೇ" ಲಯಕ್ಕೆ ಮತ್ತೆ ಹೊರಭಾಗದ ಕಾಲಿನ ಮೇಲೆ ಭಾರ ಬಿಡಲಾಗುತ್ತದೆ, ಹಾಗು ಮತ್ತೊಂದು ಬದಿಯಲ್ಲೂ ಸಹ ಇದೆ ರೀತಿಯ ಸರಣಿ ಹೆಜ್ಜೆಗಳನ್ನು ಪುನರಾವರ್ತಿಸಲಾಗುತ್ತದೆ.
ನೃತ್ಯವು ಕೇವಲ ಸಂಗೀತದ ತಾಳವನ್ನು ಅನುಸರಿಸುತ್ತದೆ ಹಾಗು ತಾಳವು ಸರಾಸರಿ ಮಟ್ಟದಿಂದ ಬಹಳ ವೇಗವಾದ ಗತಿಯವರೆಗೂ ಹೋಗಬಹುದು. ಪುರುಷರು ನೆಲೆದ ಮೇಲೆ ಸಂಪೂರ್ಣವಾಗಿ ಕಾಲನ್ನು ಇರಿಸಿ ನರ್ತಿಸಿದರೆ, ಸಾಮಾನ್ಯವಾಗಿ ಹೀಲ್ಸ್ ನ್ನು ಧರಿಸುವ ಮಹಿಳೆಯರು, ಕೇವಲ ಕಾಲಿನ ಹೆಬ್ಬೆರಳಿನ ಬುಡದ ಉಬ್ಬಿನ ಮೇಲೆ ನರ್ತಿಸುತ್ತಾರೆ. ವೃತ್ತಿಪರರು ಹೆಜ್ಜೆಗಳನ್ನು ಸ್ವಲ್ಪಮಟ್ಟಿಗೆ ಬದಲಾವಣೆ ಮಾಡಿಕೊಳ್ಳುತ್ತಾರೆ, ಇವರುಗಳು ೩ ಹೆಜ್ಜೆಗಳಿಗೆ ಬದಲಾಗಿ ೪ ಹೆಜ್ಜೆಗಳನ್ನು ಹಾಕುತ್ತಾರೆ, ಜೊತೆಗೆ ಸಂಗೀತದ ಭಾವವನ್ನು ಅವಲಂಬಿಸಿ ಕೈಗಳ ಹಲವಾರು ಭಂಗಿಗಳನ್ನು ಸೇರಿಸುತ್ತಾರೆ.
ಬ್ರೆಜಿಲ್ ನಲ್ಲಿ ನೃತ್ಯದ ಪ್ರಾದೇಶಿಕ ರೂಪಗಳೂ ಸಹ ಇವೆ, ಇದರಲ್ಲಿ ಮೂಲಭೂತವಾಗಿ ಹೆಜ್ಜೆಗಳು ಒಂದೇ ರೀತಿ ಇರುತ್ತವೆ, ಆದರೆ ಸಂಗೀತದ ಒತ್ತುಗಳಲ್ಲಿನ ಬದಲಾವಣೆಯ ಕಾರಣದಿಂದ ಜನರು ಸ್ವಲ್ಪಮಟ್ಟಿಗೆ ಬದಲಾದ ಒತ್ತುಗಳನ್ನು ಅನುಸರಿಸಿ ಸದೃಶವಾದ ಹೆಜ್ಜೆಗಳನ್ನು ಹಾಕುತ್ತಾರೆ. ಉದಾಹರಣೆಗೆ, ಬಹಿಯಾನಲ್ಲಿ, ಹುಡುಗಿಯರು ರಿಯೋ ಡಿ ಜನೈರೊನಲ್ಲಿ ಅನುಸರಿಸುವ ಪದ್ಧತಿಗಿಂತ ಭಿನ್ನವಾಗಿ ತಮ್ಮ ಮೊಣಕಾಲುಗಳನ್ನು ಒಟ್ಟಾಗಿ ಜೋಡಿಸಿಕೊಂಡಿರುವ ಬದಲು ತಮ್ಮ ಕಾಲುಗಳನ್ನು ಹೊರಭಾಗಕ್ಕೆ ಬಾಗುವಂತೆ ಇರಿಸಿಕೊಂಡಿರುತ್ತಾರೆ.
ಈ ಮಾದರಿಯ ಸಾಂಬಾವನ್ನು ಬ್ರೆಜಿಲಿಯನ್ ಉತ್ಸವದ ಮೆರವಣಿಗೆಗಳಲ್ಲಿ ಹಾಗು ವಿಶ್ವಾದ್ಯಂತ ಜರುಗುವ ಇತರ ಸಾಂಬಾ ಉತ್ಸವಗಳಲ್ಲಿ ಕಾಣಬಹುದು. ಇದು ಕೂಡ ಒಂದು ಅತ್ಯಂತ ಜನಪ್ರಿಯ ಸಾಂಬಾಗಳಲ್ಲಿ ಒಂದೆನಿಸಿದೆ.
ಸಾಂಬಾ ಡೆ ಗಫಿಯೇಯಿರ
[ಬದಲಾಯಿಸಿ]ಸಾಂಬಾ ಡೆ ಗಫಿಯೇಯಿರ ಜೋಡಿಗಳು ನರ್ತಿಸುವ ನೃತ್ಯವಾಗಿದ್ದು, ಇದು ಬಾಲ್ ರೂಂ ಸಾಂಬಾಕ್ಕಿಂತ ಗಮನಾರ್ಹವಾಗಿ ಭಿನ್ನವಾಗಿರುತ್ತದೆ. ಇದು ೧೯೪೦ರ ದಶಕದಲ್ಲಿ ಬಳಕೆಗೆ ಬಂದಿತು ಹಾಗು ಗಫಿಯೇಯಿರ ಎಂಬ ತನ್ನ ಹೆಸರನ್ನು - ರಿಯೋ ಡೆ ಜನೈರೊನಲ್ಲಿ ಅಂದಿಗೆ ಜನಪ್ರಿಯವಾಗಿದ್ದ ನಗರದ ರಾತ್ರಿ ಕ್ಲಬ್ಬುಗಳಿಂದ ಪಡೆದುಕೊಂಡಿದೆ.
ಈ ನೃತ್ಯವು ಮಾಕ್ಸಿಕ್ಸೆ ಶೈಲಿಯಿಂದ ಹುಟ್ಟಿಕೊಂಡಿರುವುದರ ಜೊತೆಗೆ ಕ್ಹೊರೋನ (ಮತ್ತೊಂದು ಸಾಂಬಾ ಸಂಗೀತಕ ಶೈಲಿ) ಆಗಮನದಿಂದ ಅದನ್ನು ಅನುಸರಿಸಿತು. ಇದು ಮಕ್ಸಿಕ್ಸೆ ಶೈಲಿಯ ಪೋಲ್ಕಾದ ಹೆಚ್ಚಿನ ಅಂಶಗಳನ್ನು ಒಳಗೊಂಡಿರಲಿಲ್ಲ ಆದರೆ ಅರ್ಜೆನ್ಟೀನ ಟ್ಯಾನ್ಗೋದ ಸುರುಳಿ ಸುತ್ತುವ ಹೆಜ್ಜೆಯ ಚಲನೆಗಳನ್ನು ಅನುಸರಿಸಿತ್ತು, ಆದರೆ ನಂತರ ಶೈಲಿಗಿಂತ ಹೆಚ್ಚು ಆರಾಮದಾಯಕ ಭಂಗಿಯನ್ನು ಅಳವಡಿಸಿಕೊಂಡಿತು. ಹಲವರು ಸಾಂಬಾದ ಈ ಶೈಲಿಯನ್ನು ವಾಲ್ಟ್ಜ್ ಹಾಗು ಟ್ಯಾನ್ಗೋದ ಸಂಯೋಜನೆಯೆಂದು ಪರಿಗಣಿಸುತ್ತಾರೆ. ಹಲವಾರು ಬ್ರೆಜಿಲಿಯನ್ ನೃತ್ಯ ಶಾಲೆಗಳು, ಸಾಂಬಾ ಡೆ ಗಫಿಯೇಯಿರದ ಹೆಜ್ಜೆಗಳು ಹಾಗು ನೃತ್ಯ ಪ್ರಾಕಾರಗಳನ್ನು ಕಲಿಸಲು ಈ ಎರಡೂ ನೃತ್ಯ ಶೈಲಿಗಳ ಅಂಶಗಳು ಹಾಗು ವಿಧಾನಗಳನ್ನು ಬಳಕೆ ಮಾಡಿಕೊಳ್ಳುತ್ತವೆ.
ಇದರಲ್ಲಿ ಹೆಜ್ಜೆಗಳನ್ನು ಚಿಕ್ಕದು-ಚಿಕ್ಕದು-ದೊಡ್ಡದಾದ ಗತಿಯಲ್ಲಿ ಹಾಕಲಾಗುತ್ತದೆ ಹಾಗು ಮೂಲವಾಗಿ ಹೆಜ್ಜೆಯ ಚಲನೆಯು ಈ ರೀತಿಯಾಗಿರುತ್ತದೆ:
- ಹೆಜ್ಜೆ - ಬದಲಾವಣೆ - ಮುಂದಕ್ಕೆ (ದೊಡ್ಡದು)
- ಹೆಜ್ಜೆ - ಬದಲಾವಣೆ - ಹಿಂದಕ್ಕೆ (ದೊಡ್ಡದು)
ಇದು ಆರಂಭಗೊಂಡ ದಿನದಿಂದ ಇಲ್ಲಿಯವರೆಗೆ ಸಾಂಬಾ ಡೆ ಗಫಿಯೇಯಿರ ದೊಂಬರಾಟದಂತಹ ಹಲವು ಚಲನೆಗಳನ್ನು ಅಳವಡಿಸಿಕೊಂಡಿದೆ ಹಾಗು ಬ್ರೆಜಿಲ್ ನ ಸಾಂಬಾ ನೃತ್ಯದ ಅತ್ಯಂತ ಸಂಕೀರ್ಣ ನೃತ್ಯ ಶೈಲಿಯಾಗಿ ಹೊರಹೊಮ್ಮಿದೆ. ಈ ಶೈಲಿಯನ್ನು ವಿಶ್ವಾದ್ಯಂತ ಇರುವ ನೃತ್ಯ ಶಾಲೆಗಳಲ್ಲಿ ಕಲಿಸಲಾಗುತ್ತದೆ.
ಸಾಂಬಾ ಪಗೊಡೆ
[ಬದಲಾಯಿಸಿ]ಸಾಂಬಾ ಪಗೊಡೆ ಎಂಬುದು ಸಾಂಬಾ ಶೈಲಿಯ ಮತ್ತೊಂದು ಜೋಡಿ ನೃತ್ಯವಾಗಿದ್ದು ಇದು ಸಾಂಬಾ ಡೆ ಗಫಿಯೇಯಿರವನ್ನು ಹೋಲುತ್ತದೆ ಆದರೆ ದೊಂಬರಾಟದ ಚಲನೆಗಳು ಕಡಿಮೆಯಿದ್ದು, ನೈಜತೆಗೆ ಹೆಚ್ಚು ಒತ್ತು ನೀಡುತ್ತದೆ. ಪಗೊಡೆಯ ಪ್ರದರ್ಶನದ ನಂತರ ಇದು ನೃತ್ಯ ಶೈಲಿಯಾಗಿ ಹೊರಹೊಮ್ಮಿತು ಹಾಗು ಇದು ಸಾವೋ ಪಾಲೋ ನಗರದಲ್ಲಿ ಮೊದಲ ಬಾರಿಗೆ ಆರಂಭಗೊಂಡಿತು.
ಸಾಂಬ ಆಕ್ಸ್
[ಬದಲಾಯಿಸಿ]ಸಾಂಬಾ ಆಕ್ಸ್ ಎಂಬುದು ೧೯೯೨ರಲ್ಲಿ ಬಹಿಯಾನಲ್ಲಿ ನಡೆದ ಬ್ರೆಜಿಲಿಯನ್ ಉತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡ ಸಾಂಬಾದ ಶೈಲಿಯ ಏಕವ್ಯಕ್ತಿ ನೃತ್ಯವಾಗಿದೆ, ಲಂಬಡಾ ಶೈಲಿಯ ಸ್ಥಾನವನ್ನು ಆಕ್ಸ್ ಲಯಬದ್ಧತೆಯು ಆಕ್ರಮಿಸಿಕೊಂಡಿದೆ. ರಜಾ ದಿವಸಗಳ ಅವಧಿಯಲ್ಲಿ ಈಶಾನ್ಯ ಬ್ರೆಜಿಲ್ ನಲ್ಲಿ ವರ್ಷಾನುಗಟ್ಟಲೆ ಇದೊಂದು ಪ್ರಮುಖ ನೃತ್ಯ ಪ್ರಕಾರವಾಗಿ ಚಾಲ್ತಿಯಲ್ಲಿತ್ತು. ಈ ಶೈಲಿಯ ನೃತ್ಯವು ಸಂಪೂರ್ಣವಾಗಿ ರಚನೆಯಾಗಿದ್ದು, ಹೆಜ್ಜೆಗಳು ಗೀತರಚನೆಯನ್ನು ಅನುಕರಿಸುತ್ತವೆ. ಇದೊಂದು ಬಹಳ ಚುರುಕಾದ ನೃತ್ಯ ಶೈಲಿಯಾಗಿದ್ದು ಇದು ಸಾಂಬಾ ನೋ ಪೆ ಹಾಗು ಏರೋಬಿಕ್ಸ್ ನ ಮಿಶ್ರಿತ ಅಂಶಗಳನ್ನು ಒಳಗೊಂಡಿದೆ ಹಾಗು ಮನೋರಂಜನೆಗಾಗಿ ರಚಿಸಲಾಗುವ ಗೀತೆಯ ಕಾರಣದಿಂದಾಗಿ, ನೃತ್ಯವು ಸಾಧಾರಣವಾಗಿ ಲುಡಿಕ್ ಅಂಶಗಳನ್ನು ಹೊಂದಿರುತ್ತವೆ.
ಹಲವಾರು ಆಕ್ಸ್ ಸಂಗೀತ ತಂಡಗಳು ಉದಾಹರಣೆಗೆ "ಎ ಓ ತ್ಚಾನ್", ತಮ್ಮ ಪ್ರತಿಯೊಂದು ಹಾಡಿನ ಬಿಡುಗಡೆಯೊಂದಿಗೆ ಆ ಹಾಡಿಗೆ ನೃತ್ಯ ಸಂಯೋಜನೆಯನ್ನು ಮಾಡುವ ಮೂಲಕ ಮಾರುಕಟ್ಟೆಯ ತಂತ್ರದ ಒಂದು ಭಾಗವಾನ್ನಾಗಿಸಿಕೊಂಡಿವೆ; ಈ ರೀತಿಯಾಗಿ, ಸಾಂಬಾ ಆಕ್ಸ್ ಯಾವುದೇ ವಿಧ್ಯುಕ್ತ ಬಗೆಯ ಹೆಜ್ಜೆಗಳು ಅಥವಾ ವಾಡಿಕೆಯ ಅನುಕ್ರಮವನ್ನು ಹೊಂದಿರದ ನೃತ್ಯ ಪ್ರಕರವಾಗಿದ್ದು, ಬದಲಾವಣೆಯನ್ನು ಹೊಂದುತ್ತಲೇ ಇರುತ್ತದೆ (ವಾಸ್ತವವಾಗಿ ಸಾಂಬಾ ಆಕ್ಸ್ ನಲ್ಲಿ ಮೂಲ ಹೆಜ್ಜೆ ಎಂಬ ಯಾವುದೇ ಒಂದು ಹೆಜ್ಜಿಯಿಲ್ಲ).
ಸಾಂಬಾ ರೆಗಾಯೆ
[ಬದಲಾಯಿಸಿ]ಇದೂ ಸಹ ಬಹಿಯಾದಿಂದಲೇ ಆರಂಭಗೊಂಡಿದ್ದು, ಇದು ಸಾಂಬಾದ ಡ್ರಮ್ಸ್ ನೊಂದಿಗೆ ರೆಗಾಯೆ ತಾಳಗಳ ಮಿಶ್ರಣವಾಗಿದೆ. ಇದು ಡೆನಿಯಲ ಮರ್ಕ್ಯೂರಿಯವರ ಅತ್ಯಂತ ಜನಪ್ರಿಯ ಹಾಡುಗಳಲ್ಲಿ ಕಂಡುಬರುತ್ತದೆ, ಇವರು "ಸೋಲ್ ಡ ಲಿಬರ್ಡೆಡ್" "ಓ ರೆಗಾಯೆ ಎ ಓ ಮಾರ್" ಹಾಗು "ಪೆರೋಲಾ ನಗರ" ನಂತಹ ಹಾಡುಗಳೊಂದಿಗೆ ಜಗತ್ತಿಗೆ ತಮ್ಮ ಲಯಬದ್ಧವಾದ ಚಲನೆಯನ್ನು ಹಾರಿಸಿದ್ದಾರೆ. ಸಾಂಬಾ ರೆಗಾಯೆ, ಬಹಿಯಾನಲ್ಲಿ ಸಾಂಬಾ ಶೈಲಿಯ ಎರಡನೇ ಅತ್ಯಂತ ಜನಪ್ರಿಯ ಶೈಲಿಯಾಗಿದ್ದು, ಬ್ರೆಜಿಲ್ ನಲೆಲ್ಲ ತನ್ನ ಅಭಿಮಾನಿಗಳನ್ನು ಹೊಂದಿದೆ.
ಸಾಂಬಾ-ರಾಕ್
[ಬದಲಾಯಿಸಿ]ಸಾಂಬಾ ರಾಕ್ ಎಂಬುದು ಸಾಂಬಾದ ಅತ್ಯಂತ ವಿನೋದಭರಿತ ಪ್ರಕಾರವಾಗಿದ್ದು, ಇದು ಸಾವೋ ಪಾಲೋನಲ್ಲಿ ಮೊದಲ ಬಾರಿಗೆ ಆರಂಭಗೊಂಡಿತು. ಇದು ಲ್ಯಾಟಿನ್ ರಾತ್ರಿ ಕ್ಲಬ್ ಗಳ ನೃತ್ಯವಾಗಿದೆ. ಸಾಂಬಾ ರಾಕ್, ಸಾಂಬಾ ಡೇ ಗಫಿಯೇಯಿರ, ಫಾರ್ರೋ, ಜೌಕ್-ಲಂಬಾಡ ಹಾಗು ಸಾಲ್ಸವನ್ನು ಸ್ವಲ್ಪಮಟ್ಟಿಗೆ ಹೋಲುತ್ತದೆ.
ಸಾಂಬಾ ಡೆ ರೋಡ
[ಬದಲಾಯಿಸಿ]ಇದನ್ನು ಹಲವು ಕಾಪೋಯೆಯಿರ ಗುಂಪುಗಳು ಪ್ರದರ್ಶಿಸುತ್ತವೆ; ಸಾಂಬಾ ಡೆ ರೋಡ ಒಂದು ಸಾಂಪ್ರದಾಯಿಕ ಆಫ್ರೋ-ಬ್ರೆಜಿಲಿಯನ್ ನೃತ್ಯವಾಗಿದ್ದು ಹಲವು ವರ್ಷಗಳಿಂದ ಕಾಪೋಯೆಯಿರದೊಂದಿಗೆ ಸಹಯೋಗವನ್ನು ಹೊಂದಿದೆ. ವಾದ್ಯಗೋಷ್ಠಿಯು ಪಂಡೆಯಿರೋ, ಆಟಬಾಕ್, ಬೇರಿಂಬೌ-ಬಿಯೋಲ(ಸಣ್ಣ ಗೌರ್ಡ್ ಕಾಬಕಾ ಹಾಗು ಅಧಿಕ ಸ್ಥಾಯಿಯನ್ನು ಹೊಂದಿರುವ ಒಂದು ಬೇರಿಂಬೌ), ಚೋಕಾಲ್ಹೋ (ರಾಟಲ್ - ಒಂದು ಪರ್ಕಷನ್ ವಾದನ), ಇದರೊಟ್ಟಿಗೆ ಹಾಡು ಹಾಡುವ ಹಾಗು ಚಪ್ಪಾಳೆ ಹೊಡೆಯುವ ಕ್ರಿಯೆಗಳೂ ಸಹ ನಡೆಯುತ್ತವೆ.
ಇವನ್ನೂ ಗಮನಿಸಿ
[ಬದಲಾಯಿಸಿ]- ಕ್ಯಾರಿಯೋಕ (ನೃತ್ಯ)
- ನೃತ್ಯಗಳ ಪಟ್ಟಿ
- ಕಾಪೋಯೇಯಿರ ಅಂಗೋಲಾ
- ಬ್ರೆಜಿಲಿಯನ್ ಉತ್ಸವ
- ಸಾಂಬಾ
- ಸಾಂಬಾ ಪರಂಪರೆ
ಬಾಹ್ಯ ಕೊಂಡಿಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]