ವಿಷಯಕ್ಕೆ ಹೋಗು

ಡ್ರ್ಯಾಗನ್‌ ನೃತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Dragon Dance
ಸಾಂಪ್ರದಾಯಿಕ ಚೀನೀ 舞龍
ಸರಳೀಕಸರಿಸಿದ ಚೀನೀ 舞龙
ಡ್ರ್ಯಾಗನ್‌ ನೃತ್ಯ ವೇಷಭೂಷಣದ ತಲೆ
ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ಏಪ್ರಿಲ್‌ನಲ್ಲಿ ನಡೆದ 2008ರ ಬೇಸಿಗೆ ಒಲಿಂಪಿಕ್ಸ್‌ನ ದೀವಟಿಗೆಯ ರಿಲೇ ಓಟದ ಸಂದರ್ಭದಲ್ಲಿ ಒಂದು ಸಿಂಹ ನೃತ್ಯದ ಜೊತೆಜೊತೆಗೆ ಒಂದು ಡ್ರ್ಯಾಗನ್‌ ನೃತ್ಯದ ಪ್ರದರ್ಶನವನ್ನು ನೀಡುತ್ತಿರುವುದು.
2002ರ ಸೆಪ್ಟೆಂಬರ್‌ನಲ್ಲಿ ಚೀನಾದ ರಾಷ್ಟ್ರೀಯ ದಿವಸದ ಸಂದರ್ಭದಲ್ಲಿ ನಡೆದ ಒಂದು ವಾರದ ಅವಧಿಯ ಸಂಭ್ರಮಾಚರಣೆಯ ಅವಧಿಯಲ್ಲಿ ಚೀನಾದ ಚಾಂಗ್‌ಕಿಂಗ್‌ನಲ್ಲಿ ನಡೆದ ಒಂದು ಜೋಡಿ ಡ್ರ್ಯಾಗನ್‌ ನೃತ್ಯ.

ಡ್ರ್ಯಾಗನ್‌ ನೃತ್ಯ (simplified Chinese: 舞龙; traditional Chinese: 舞龍; pinyin: wǔ lóng) ಎಂಬುದು ಚೀನಿಯರ ಸಂಸ್ಕೃತಿಯಲ್ಲಿನ ಸಾಂಪ್ರದಾಯಿಕ ನೃತ್ಯ ಮತ್ತು ಪ್ರದರ್ಶನದ ಒಂದು ಸ್ವರೂಪವಾಗಿದೆ. ಸಿಂಹ ನೃತ್ಯದ ರೀತಿಯಲ್ಲಿಯೇ ಇದನ್ನು ಹಬ್ಬದ ಸಂಭ್ರಮಾಚರಣೆಗ ಳಲ್ಲಿ ಅನೇಕವೇಳೆ ಕಾಣಬಹುದಾಗಿದೆ. ಅನೇಕ ಚೀನಿ ಜನರು "ಡ್ರ್ಯಾಗನ್ ವಂಶಸ್ಥರು " (龍的傳人 ಅಥವಾ 龙的传人, ಲೋಂಗ್‌ ಡೆ ಚುವಾನ್‌ ರೇನ್‌ ) ಎಂಬ ಪರಿಭಾಷೆಯನ್ನು ಜನಾಂಗೀಯ ಗುರುತಿನ ಒಂದು ಸಂಕೇತವಾಗಿ ಬಳಸುತ್ತಾರೆ; ಇದು ೧೯೭೦ರ ದಶಕದಲ್ಲಿ ಆರಂಭವಾದ ಒಂದು ಪ್ರವೃತ್ತಿಯ ಭಾಗವಾಗಿದೆ ಎನ್ನಬಹುದು. ಮತ್ತೊಂದು ವ್ಯುತ್ಪತ್ತಿಯು (農的傳人) ಎಂಬುದರಿಂದ, ಅಂದರೆ ಷೆನ್ನಾಂಗ್‌‌‌‌ನ ವಂಶಸ್ಥರು ಎಂಬುದರಿಂದ ಬಂದಿದೆ; ಷೆನ್ನಾಂಗ್ ಎಂಬಾತ ಚೀನಿ ಜನರ ಮೊದಲ ಪುರಾಣಪ್ರಸಿದ್ಧ ರಾಜನಾಗಿದ್ದು, ನಾಗರಿಕತೆಯ ತಳಹದಿಗಳಾದ ವ್ಯವಸಾಯ, ಕಾನೂನು ಮತ್ತು ಔಷಧಿ ಮೊದಲಾದ ವಿಷಯಗಳನ್ನು ಜನರಿಗೆ ಕಲಿಸಿದ.

ನೃತ್ಯದ ವೈಶಿಷ್ಟ್ಯ

[ಬದಲಾಯಿಸಿ]
  • ಈ ನೃತ್ಯದಲ್ಲಿ, ಜನರ ಒಂದು ತಂಡವು ಡ್ರ್ಯಾಗನ್‌ನ್ನು ಕಂಬಗಳ ಮೇಲೆ ಸಾಗಿಸುತ್ತದೆ ಮತ್ತು ಸದರಿ ಡ್ರ್ಯಾಗನ್‌ ಎಂಬುದು ಚೀನಿಯರ ಡ್ರ್ಯಾಗನ್‌‌‌ನ ಒಂದು ಬಿಂಬವಾಗಿರುತ್ತದೆ. ಒಂದು ಡ್ರ್ಯಾಗನ್‌ ೫೦ರವರೆಗಿನ ಜನರನ್ನು ಒಳಗೊಂಡಿರಲು ಸಾದ್ಯವಿದೆ.[] ಈ ನದಿಯ ಚೇತನದ ಹಾಗಿತ್ತೆಂದು ಭಾವಿಸಲಾದ ಚಲನೆಗಳನ್ನು ನೃತ್ಯ ತಂಡವು ಅನುಕರಿಸುತ್ತದೆ ಮತ್ತು ಆ ಚಲನೆಯು ಹಾವಿನಂತೆ ವಕ್ರಗತಿಯಲ್ಲಿ ಸಾಗುವ, ತರಂಗವಾಗಿಸುವ ವಿಧಾನದಲ್ಲಿ ಇರುತ್ತದೆ.
  • ಪ್ರದರ್ಶನವೊಂದರಲ್ಲಿನ ಚಲನೆಗಳು ಶಕ್ತಿ ಮತ್ತು ಘನತೆಯನ್ನು ನಿರೂಪಿಸುವ ಡ್ರ್ಯಾಗನ್‌ಗಳ ಐತಿಹಾಸಿಕ ಪಾತ್ರಗಳನ್ನು ಸಾಂಪ್ರದಾಯಿಕವಾಗಿ ಸಂಕೇತಿಸುತ್ತವೆ. ಪ್ರಪಂಚದಾದ್ಯಂತ ಹಬ್ಬಿಕೊಂಡಿರುವ ಚೀನಿಪಾಳೆಯಗಳಲ್ಲಿ ವಿಶ್ವವ್ಯಾಪಿಯಾಗಿ ಆಯೋಜಿಸಲಾಗುವ ಚೀನಿಯರ ಹೊಸವರ್ಷದ ಸಂಭ್ರಮಾಚರಣೆಗಳ ಸಂದರ್ಭದಲ್ಲಿ ಈ ಡ್ರ್ಯಾಗನ್‌ ನೃತ್ಯವು ಒಂದು ಎದ್ದು ಕಾಣುವ ರಸನಿಮಿಷವಾಗಿರುತ್ತದೆ. ಡ್ರ್ಯಾಗನ್‌ಗಳು ಜನರಿಗೆ ಅದೃಷ್ಟವನ್ನು ತಂದುಕೊಡುತ್ತವೆ ಎಂದು ನಂಬಲಾಗುತ್ತದೆ.
  • ಮಹಾನ್‌ ಶಕ್ತಿ, ಘನತೆ, ಫಲವಂತಿಕೆ (ಲೈಂಗಿಕತೆ), ಬುದ್ಧಿವಂತಿಕೆ ಮತ್ತು ಮಂಗಳವನ್ನು ಒಳಗೊಂಡಿರುವ ಅವುಗಳ ಗುಣಗಳಲ್ಲಿ ಇದು ಪ್ರತಿಬಿಂಬಿತವಾಗುತ್ತದೆ. ಡ್ರ್ಯಾಗನ್‌ ಒಂದರ ಚಹರೆಯು ಭಯಹುಟ್ಟಿಸುವ ರೀತಿಯಲ್ಲಿಯೂ ಮತ್ತು ದಿಟ್ಟವಾಗಿಯೂ ಇರುತ್ತದೆಯಾದರೂ, ಇದು ಒಂದು ಉಪಕಾರ ಬುದ್ಧಿಯ ಮನೋವೃತ್ತಿಯನ್ನು ಹೊಂದಿರುತ್ತದೆ. ಆದ್ದರಿಂದ ಇದು ಅಂತಿಮವಾಗಿ ಚಕ್ರಾಧಿಪತ್ಯದ ಅಧಿಕಾರ-ವರ್ಚಸ್ಸನ್ನು ಪ್ರತಿನಿಧಿಸುವ ಒಂದು ಲಾಂಛನವಾಗಿ ಹೊರಹೊಮ್ಮುತ್ತದೆ.

ಇತಿಹಾಸ

[ಬದಲಾಯಿಸಿ]
  • ಬೌದ್ಧ ಮತೀಯ ವಿದ್ವತ್ತು ಮತ್ತು ಮತಕ್ರಿಯಾ ವಿಧಿ ಅಥವಾ ಆಚರಣೆಗಳ ಜೊತೆಜೊತೆಗೆ ಸಿಂಹ ನೃತ್ಯಗಳು ಭಾರತದಲ್ಲಿ ಹುಟ್ಟಿಕೊಂಡವು. ಇಂದಿನ ಚೀನಿಯರ ಸಂಸ್ಕೃತಿಯ ಸಿಂಹ ನರ್ತನದ ಜನಪ್ರಿಯ ಪ್ರಕಾರವು ಚೀನಾದಲ್ಲಿ ವಿಕಸನಗೊಂಡಿತಾದರೂ, ಜಪಾನ್‌ ಸೇರಿದಂತೆ ಏಷ್ಯಾದ ವಲಯದ ಉದ್ದಗಲಕ್ಕೂ ಇರುವ ಹಲವಾರು ದೇಶಗಳು ಹಲವಾರು ಶತಮಾನಗಳಿಂದ ತಮ್ಮದೇ ಆದ ಸಿಂಹ ನೃತ್ಯದ ಶೈಲಿಗಳನ್ನು ಅಭಿವೃದ್ಧಿಪಡಿಸಿವೆ.
  • ಡ್ರ್ಯಾಗನ್‌ ನೃತ್ಯವು ಸ್ವತಃ ಹಾನ್‌ ರಾಜವಂಶದ ಅವಧಿಯಲ್ಲಿ ಹುಟ್ಟಿಕೊಂಡಿತು ಮತ್ತು ಡ್ರ್ಯಾಗನ್‌ನೆಡೆಗೆ ಮಹಾನ್‌ ನಂಬಿಕೆ ಮತ್ತು ಗೌರವವನ್ನು ಇಟ್ಟುಕೊಂಡಿದ್ದ ಚೀನಿಯರಿಂದ ಇದು ಆರಂಭವಾಯಿತು. ಕೃಷಿ ಮತ್ತು ಸುಗ್ಗಿಕಾಲದ ಸಂಸ್ಕೃತಿಯ ಭಾಗವಾಗಿ ಇದು ಆರಂಭವಾಗಿದೆ ಎಂದು ನಂಬಲಾಗುತ್ತದೆಯಾದರೂ, ಅಸ್ವಸ್ಥತೆಯನ್ನು ಗುಣಪಡಿಸುವ ಮತ್ತು ತಡೆಗಟ್ಟುವ ಒಂದು ವಿಧಾನವಾಗಿಯೂ ಇದು ಮೂಲಗಳನ್ನು ಹೊಂದಿದೆ.
  • ಸಾಂಗ್‌ ರಾಜವಂಶದ ಅವಧಿಯಲ್ಲಿ ಇದಾಗಲೇ ಒಂದು ಜನಪ್ರಿಯ ಸಂಗತಿಯಾಗಿತ್ತು ಹಾಗೂ ಒಂದು ಜಾನಪದ ಚಟುವಟಿಕೆಯಾಗಿ ಹೊರಹೊಮ್ಮಿತ್ತು; ಅಷ್ಟೇ ಅಲ್ಲ, ಸಿಂಹ ನೃತ್ಯದ ರೀತಿಯಲ್ಲೇ ಇದೂ ಸಹ ಹಬ್ಬದ ಸಂಭ್ರಮಾಚರಣೆಗಳಲ್ಲಿ ಅನೇಕವೇಳೆ ಕಂಡುಬರುತ್ತಿತ್ತು.[]
  • ಡ್ರ್ಯಾಗನ್‌ ಮಹಾನ್‌ ಗೌರವದ ಒಂದು ಅನುಭೂತಿಯನ್ನು ಜನರಿಗೆ ನೀಡುವುದರಿಂದ, ಇದನ್ನು ಅನೇಕವೇಳೆ ಪವಿತ್ರ ಡ್ರ್ಯಾಗನ್ ಎಂದು ಕರೆಯಲಾಗುತ್ತದೆ. ಪ್ರಾಚೀನ ಚೀನಾದ ಸಾಮ್ರಾಟರು ಸ್ವತಃ ತಮ್ಮನ್ನು ಡ್ರ್ಯಾಗನ್‌ಗಳೆಂದು ಪರಿಗಣಿಸಿಕೊಂಡಿದ್ದರು. ಡ್ರ್ಯಾಗನ್‌ ಎಂಬುದು ಚಕ್ರಾಧಿಪತ್ಯದ ಅಧಿಕಾರ-ವರ್ಚಸ್ಸಿನ ಲಾಂಛನವೂ ಆಗಿದೆ. ಅತಿಮಾನುಷ ಶಕ್ತಿ, ಒಳ್ಳೆಯತನ, ಫಲವಂತಿಕೆ, ಜಾಗರೂಕತೆ ಮತ್ತು ಘನತೆ ಮೊದಲಾದವುಗಳನ್ನು ಇದು ಸಂಕೇತಿಸುತ್ತದೆ.
*ಕಿಂಗ್‌ ರಾಜವಂಶದ ಅವಧಿಯಲ್ಲಿ, ಫೂಚೌ ಪ್ರಾಂತದ ಡ್ರ್ಯಾಗನ್‌ ನೃತ್ಯ ತಂಡವನ್ನು ಪೀಕಿಂಗ್‌ನಲ್ಲಿ ಪ್ರದರ್ಶನ ನೀಡುವುದಕ್ಕಾಗಿ ಆಹ್ವಾನಿಸಲಾಗಿತ್ತು ಮತ್ತು ಆ ತಂಡವು ಕಿಂಗ್‌ ಸಾಮ್ರಾಟನಿಂದ ಮಹತ್ತರವಾಗಿ ಹೊಗಳಲ್ಪಟ್ಟಿತ್ತು ಮತ್ತು ಮೆಚ್ಚುಗೆಗೆ ಪಾತ್ರವಾಗಿತ್ತು; ಇದು ತಂಡಕ್ಕೆ ಮಹಾನ್‌ ಪ್ರಸಿದ್ಧಿಯನ್ನು ತಂದುಕೊಟ್ಟಿತು.

ಪ್ರದರ್ಶನ

[ಬದಲಾಯಿಸಿ]
ಚೀನಿಯರ ಹೊಸವರ್ಷದ ಸಂದರ್ಭದಲ್ಲಿ ಪ್ರದರ್ಶನ ನೀಡುತ್ತಿರುವ ಮೆಲ್ಬೋರ್ನ್‌ನ ಚೈನೀಸ್‌ ಯೂತ್‌ ಸೊಸೈಟಿಯ ಸದಸ್ಯರು ಒಂದು ಮೂಲಭೂತ "ಬಿರಡೆ ತಿರುಪು" ಚಾತುರ್ಯವನ್ನು ನಿರೂಪಿಸುತ್ತಿರುವುದು.
  • ಡ್ರ್ಯಾಗನ್‌ ನೃತ್ಯವು ಒಂದು ಪರಿಣಿತ ತಂಡದಿಂದ ಪ್ರದರ್ಶಿಸಲ್ಪಡುತ್ತದೆ. ಚಲನೆಯಿಲ್ಲದ ದೇಹಕ್ಕೆ ಜೀವವನ್ನು ತುಂಬುವುದು ತಂಡದ ಸದಸ್ಯರ ಕೆಲಸವಾಗಿರುತ್ತದೆ. ಸ್ವತಃ ಡ್ರ್ಯಾಗನ್‌ ಎಂಬುದು ಕಂಬಗಳ ಮೇಲಿನ ಒಂದು ಉದ್ದವಾದ ಸರ್ಪಾಕಾರದ ದೇಹವಾಗಿದ್ದು, ಪ್ರತಿಯೊಂದು ಭಾಗದ ಮೇಲೆ ಪಟ್ಟಿಯ ಬಳೆಗಳ ಸರಣಿಯನ್ನು ಸೇರಿಸುವ ಮೂಲಕ ಇದನ್ನು ಜೋಡಿಸಲಾಗಿರುತ್ತದೆ; ಈ ದೇಹದ ತುದಿಗಳಲ್ಲಿ ಅಲಂಕಾರಿಕ ತಲೆ ಮತ್ತು ಬಾಲದ ತುಣುಕುಗಳನ್ನು ಜೋಡಿಸಲಾಗಿರುತ್ತದೆ. ಸಾಂಪ್ರದಾಯಿಕವಾಗಿ ಹೇಳುವುದಾದರೆ, ಡ್ರ್ಯಾಗನ್‌ಗಳು ಮರದಿಂದ ನಿರ್ಮಿಸಲ್ಪಡುತ್ತಿದ್ದವು; *ಒಳಭಾಗದಲ್ಲಿ ಬಿದಿರು ಪಟ್ಟಿಯ ಬಳೆಗಳನ್ನು ಇದು ಹೊಂದಿರುತ್ತಿತ್ತು ಹಾಗೂ ಭವ್ಯವಾದ ನೆಯ್ದಬಟ್ಟೆಯೊಂದನ್ನು ಇದಕ್ಕೆ ಹೊದಿಸಲಾಗುತ್ತಿತ್ತು. ಏನೇ ಆದರೂ, ಆಧುನಿಕ ಯುಗದಲ್ಲಿ ಅಲ್ಯುಮಿನಿಯಂ ಮತ್ತು ಪ್ಲಾಸ್ಟಿಕ್‌ಗಳಂಥ ಹಗುರವಾದ ಸಾಮಗ್ರಿಗಳು ಮರ ಮತ್ತು ಭಾರವಾದ ಸಾಮಗ್ರಿಗಳನ್ನು ಪಲ್ಲಟಗೊಳಿಸಿವೆ.[] ಡ್ರ್ಯಾಗನ್‌ಗಳ ಉದ್ದದಲ್ಲಿ ವೈವಿಧ್ಯತೆಯಿದೆ. ಹೆಚ್ಚು ದೊಂಬರಾಟದ ಮಾದರಿಗಳಂತೆ ಕಾಣಬೇಕೆಂದರೆ ಇದರ ಉದ್ದವು ಸುಮಾರು ೨೫ರಿಂದ ೩೫ ಮೀಟರುಗಳವರೆಗೆ ಇರುತ್ತದೆ. *ಸಾರ್ವಜನಿಕ ಮೆರವಣಿಗೆ ಮತ್ತು ಉತ್ಸವಾಚರಣೆಗಳಲ್ಲಿ ಬಳಸುವಂಥ ಅತಿದೊಡ್ಡದಾಗಿರುವ ಶೈಲಿಗಳಿಗಾದರೆ ಇದರ ಉದ್ದವು ೫೦ರಿಂದ ೭೦ ಮೀಟರುಗಳವರೆಗೆ ಇರುತ್ತದೆ. ಡ್ರ್ಯಾಗನ್‌ ಜೀವಿಯ ಪ್ರತಿಕೃತಿಯು ಉದ್ದವಾದಷ್ಟೂ ಅದು ಹೆಚ್ಚು ಅದೃಷ್ಟವನ್ನು ಹೊತ್ತು ತರುತ್ತದೆ ಎಂಬುದಾಗಿ ಪುರಾಣದ ಭಾಗವೊಂದರಲ್ಲಿ ಉಲ್ಲೇಖವು ಇರುವುದೇ ಇದಕ್ಕೆ ಕಾರಣ. ಲಭ್ಯವಿರುವ ಮಾನವ ಶಕ್ತಿ, ಹಣಕಾಸಿನ ಶಕ್ತಿ, ಸಾಮಗ್ರಿಗಳು, ನೈಪುಣ್ಯಗಳು ಮತ್ತು ಮೈದಾನದ ಗಾತ್ರ ಇವುಗಳನ್ನು ಡ್ರ್ಯಾಗನ್‌ ಒಂದರ ಗಾತ್ರ ಮತ್ತು ಉದ್ದ ಅವಲಂಬಿಸಿರುತ್ತದೆ.
  • ೯ ವಿಭಾಗಗಳಿಂದ ೧೫ ವಿಭಾಗಗಳಷ್ಟಿರುವ ಅಳತೆಯವರೆಗೆ ಇದರ ಉದ್ದದ ವಿಶಿಷ್ಟತೆಯಿದೆಯಾದರೂ, ಕೆಲವೊಂದು ಡ್ರ್ಯಾಗನ್‌ಗಳು ೬ ವಿಭಾಗಗಳಷ್ಟಿರುವ ಉದ್ದವನ್ನು ಹೊಂದಿರುತ್ತವೆ. ಒಂದು ಅತ್ಯಂತ ಉದ್ದ ಡ್ರ್ಯಾಗನ್‌ನ್ನು ನಿರ್ವಹಿಸುವುದು ಒಂದು ಸಣ್ಣ ಸಂಘಟನೆಗೆ ಸಾಧ್ಯವಾಗಲಾರ ದು. ಏಕೆಂದರೆ, ಇದಕ್ಕೆ ಮಹಾನ್‌ ಮಾನವ ಶಕ್ತಿ, ಮಹಾನ್‌ ವೆಚ್ಚಗಳು ಮತ್ತು ವಿಶೇಷ ನೈಪುಣ್ಯಗಳು ಅಗತ್ಯವಾಗಿರುತ್ತವೆ ಹಾಗೂ ಈ ಅಂಶಗಳನ್ನು ನಿರ್ವಹಿಸುವುದು ಕಷ್ಟಕರವಾಗಿರುತ್ತದೆ.
  • ಡ್ರ್ಯಾಗನ್‌ಗಾಗಿ ಶಿಫಾರಸು ಮಾಡಲಾದದ ದೇಹದ ಸಾಮಾನ್ಯ ಉದ್ದ ಮತ್ತು ಗಾತ್ರವು ೧೧೨ ಅಡಿಗಳಷ್ಟಿದ್ದು (೩೪ ಮೀಟರುಗಳು), ಇದನ್ನು ೯ ಪ್ರಮುಖ ವಿಭಾಗಗಳಾಗಿ ವಿಭಜಿಸಲಾಗುತ್ತದೆ. ಪ್ರತಿ ಕಿರು (ಏಣುಗಳಂಥ) ವಿಭಾಗದ ಅಂತರವು ೧೪ ಇಂಚುಗಳಷ್ಟು ಪ್ರತ್ಯೇಕವಾಗಿರುತ್ತದೆ; ಆದ್ದರಿಂದ ದೇಹವು ೮೧ ಉಂಗುರಗಳನ್ನು ಒಳಗೊಂಡಿರುತ್ತದೆ. ಡ್ರ್ಯಾಗನ್‌ ನೃತ್ಯವನ್ನು ನಾನಾಬಗೆಯ ವಿಧಾನಗಳು, ಬಗೆಗಳು ಮತ್ತು ಬಣ್ಣಗಳಲ್ಲಿ ಪ್ರದರ್ಶಿಸಲಾಗುತ್ತದೆ ಎಂಬುದಾಗಿ ಇತಿಹಾಸವು ನಮಗೆ ತಿಳಿಸುತ್ತದೆ.
  • ಹಸಿರು ಬಣ್ಣವನ್ನು ಕೆಲವೊಮ್ಮೆ ಡ್ರ್ಯಾಗನ್‌ನ ಒಂದು ಮುಖ್ಯ ಬಣ್ಣವಾಗಿ ಆರಿಸಲಾಗುತ್ತದೆ ಮತ್ತು ಹಸಿರು ಬಣ್ಣವು ಒಂದು ಮಹಾನ್‌ ಸುಗ್ಗಿಕಾಲವನ್ನು ಸಂಕೇತಿಸುತ್ತದೆ. ಇತರ ಬಣ್ಣಗಳು ಮತ್ತು ಅವುಗಳ ಪ್ರಾಮುಖ್ಯತೆಯ ವಿವರ ಹೀಗಿದೆ: ಧೀರ ಸಾಮ್ರಾಜ್ಯವನ್ನು ಸಂಕೇತಿಸುವ ಹಳದಿ ಬಣ್ಣ, ಏಳಿಗೆಯನ್ನು ಸಂಕೇತಿಸುವ ಬಂಗಾರದ ಅಥವಾ ಬೆಳ್ಳಿಯ ಬಣ್ಣಗಳು, ಸಂಭ್ರಮವನ್ನು ಪ್ರತಿನಿಧಿಸುವ ಕೆಂಪು ಬಣ್ಣ. ಇಷ್ಟೇ ಅಲ್ಲ, ಇದರ ಶಲ್ಕಗಳು ಮತ್ತು ಬಾಲವು ಬಹುತೇಕವಾಗಿ ಸುಂದರವಾದ ಬೆಳ್ಳಿಯ ಬಣ್ಣಗಳನ್ನು ಹೊಂದಿರುತ್ತವೆ ಹಾಗೂ ಎಲ್ಲ ಕಾಲದಲ್ಲೂ ಹೊಳೆಯುತ್ತಿರುತ್ತವೆ. *ಈ ಎಲ್ಲಾ ಅಂಶಗಳೂ ಸೇರಿಕೊಂಡು ಆನಂದದಾಯಕ ವಾತಾವರಣದ ಒಂದು ಅನುಭೂತಿಯನ್ನು ಒದಗಿಸುತ್ತವೆ. ಡ್ರ್ಯಾಗನ್‌ ನೃತ್ಯದ ಪ್ರದರ್ಶನವನ್ನು ಪ್ರತಿನಿತ್ಯವೂ ನೀಡುವುದಿಲ್ಲವಾದ್ದರಿಂದ, ಡ್ರ್ಯಾಗನ್‌ನ ಬಟ್ಟೆಯನ್ನು ತೆಗೆದುಹಾಕಬೇಕಾಗುತ್ತದೆ ಮತ್ತು ಮುಂದಿನ ಪ್ರದರ್ಶನಕ್ಕೆ ಮುಂಚಿತವಾಗಿ ಅತಿ-ಬಣ್ಣದ ಒಂದು ಹೊಸ ಸ್ಪರ್ಶವನ್ನು ಅದಕ್ಕೆ ನೀಡಬೇಕಾಗುತ್ತದೆ. ಒಂದು ನೃತ್ಯವು ಯಶಸ್ವಿಯಾಗಬೇಕೆಂದರೆ, ಡ್ರ್ಯಾಗನ್‌ನ ವಿಭಿನ್ನ ಭಾಗಗಳ ಸರಿಯಾದ ಸಂಯೋಜನೆ ಮತ್ತು ಸೂಕ್ತವಾದ ಕಾಲಯೋಜನೆ ಅತ್ಯಂತ ಮುಖ್ಯವಾಗಿರುತ್ತದೆ.
  • ಪ್ರದರ್ಶನ ಕಲಾವಿದರ ಪೈಕಿ ಕೆಲವೇ ಕೆಲವರು ಯಾವುದೇ ತಪ್ಪುಗಳನ್ನು ಮಾಡಿದರೂ ಸಹ, ಅದು ಇಡೀ ಪ್ರದರ್ಶನವನ್ನು ಹಾಳುಗೆಡವುತ್ತದೆ. ನೃತ್ಯದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಬೇಕೆಂದರೆ, ನಗಾರಿಯ ಕಾಲಯೋಜನೆಯೊಂದಿಗೆ ಮಿಳಿತಗೊಂಡಿರುವ ದೇಹದೊಂದಿಗೆ ಡ್ರ್ಯಾಗನ್‌ನ ತಲೆಯು ಸಹಕಾರ ನೀಡುವಷ್ಟು ಸಮರ್ಥವಾಗಿರಬೇಕಾಗುತ್ತದೆ. ಉತ್ಸವಾಚರಣೆಯ ಮತ್ತು ಸಾರ್ವಜನಿಕ ಮೆರವಣಿಗೆಯ ಶೈಲಿಯ ದೊಡ್ಡ ಡ್ರ್ಯಾಗನ್‌ಗಳಿಗಾದರೆ ತಲೆಯು ೧೨ ಕಾಟಿಸ್‌‌ನಷ್ಟು (೧೪.೪ ಕೆ.ಜಿ., ಸುಮಾರು ೩೨ ಪೌಂಡುಗಳಷ್ಟು) ತೂಗಬಲ್ಲದಾಗಿರುತ್ತದೆ.
  • ತಲೆಯ ಚಲನೆಗಳೊಂದಿಗೆ ಡ್ರ್ಯಾಗನ್‌ ಬಾಲವೂ ಸಹ ಸರಿಯಾಗಿ ವರ್ತಿಸಬೇಕಿರುವುದರಿಂದ, ಈ ನೃತ್ಯದಲ್ಲಿ ಬಾಲವೂ ಸಹ ಒಂದು ಮುಖ್ಯ ಪಾತ್ರವನ್ನು ವಹಿಸುತ್ತದೆ. ಐದನೇ ವಿಭಾಗವು ಮಧ್ಯದ ಭಾಗ ಎಂಬುದಾಗಿ ಪರಿಗಣಿಸಲ್ಪಟ್ಟಿದೆ ಮತ್ತು ದೇಹದ ಚಲನೆಗಳು ಕಾಲಾನುಕಾಲಕ್ಕೆ ಬದಲಾಗುವುದರಿಂದ ಪ್ರದರ್ಶನ ಕಲಾವಿದರು ಅತ್ಯಂತ ಜಾಗರೂಕರಾಗಿರಬೇಕಾಗುತ್ತದೆ.
  • ಆದಾಗ್ಯೂ, ಸ್ಪರ್ಧೆಯ ಪ್ರದರ್ಶನಗಳಲ್ಲಿ, ಡ್ರ್ಯಾಗನ್‌ ದೇಹದ ವಿಶಿಷ್ಟತೆಗಳನ್ನು ಹಾಗೂ ಪ್ರದರ್ಶಿಸಲ್ಪಡುವ ವಾಡಿಕೆಯ ಅನುಕ್ರಮವನ್ನು ನಿರ್ಣಾಯಕವಾಗಿಸುವ ಕಟ್ಟುನಿಟ್ಟಾದ ನಿಯಮಗಳು ಕಂಡುಬರುತ್ತವೆ. ಆದ್ದರಿಂದ, ಈ ಸ್ಪರ್ಧೆಗಳಿಗಾಗಿ ರೂಪಿಸಲ್ಪಟ್ಟ ಡ್ರ್ಯಾಗನ್‌ಗಳನ್ನು ಮತ್ತು ಪ್ರಭಾವ ಶಾಲಿ ರಂಗ ಪ್ರದರ್ಶನಗಳಲ್ಲಿ ಬಹುತೇಕವಾಗಿ ಕಾಣಲಾಗುವ ಡ್ರ್ಯಾಗನ್‌ಗಳನ್ನು ವೇಗ ಮತ್ತು ಶೀಘ್ರಗತಿಯ ಉದ್ದೇಶದೊಂದಿಗೆ ರೂಪಿಸಲಾಗಿರುತ್ತದೆ. ಗರಿಷ್ಟ ಮಟ್ಟದಲ್ಲಿ ಗಹನವಾಗಿರುವ ಚಾತುರ್ಯವನ್ನು ನಿರ್ವಹಿಸುವ ಪ್ರದರ್ಶನ ತಂಡಗಳು ಇದನ್ನು ಬಳಸುತ್ತವೆ.
  • ಈ ಡ್ರ್ಯಾಗನ್‌ಗಳಲ್ಲಿ, ತಲೆಯು ಸಣ್ಣದಾಗಿರುತ್ತದೆ ಮತ್ತು ಸುತ್ತಲೂ ಥಟಕ್ಕನೆ ಚಲಿಸಲ್ಪಡುವುದಕ್ಕೆ ಸಮರ್ಥವಾಗುವಷ್ಟು ಹಗುರವಾಗಿರುತ್ತವೆ, ಹಾಗೂ ಕನಿಷ್ಟಪಕ್ಷ ೩ ಕೆ.ಜಿ.ಯಷ್ಟು ತೂಕವನ್ನು ಹೊಂದಿರಬೇಕಾಗುತ್ತದೆ. ದೇಹ ತುಣುಕುಗಳು ಒಂದು ಹಗುರ ಅಲ್ಯುಮಿನಿಯಂನಿಂದ ಮತ್ತು ಬಿದಿರಿನಿಂದ ಮಾಡಲ್ಪಟ್ಟಿರುತ್ತದೆ. ಪಟ್ಟಿಯ ಬಳೆಗಳ ಬಹುತೇಕ ಭಾಗವು ಅತ್ಯಂತ ತೆಳುವಾದ PVC ಕೊಳವೆಗಳಿಂದ ಮಾಡಲ್ಪಟ್ಟಿರುತ್ತವೆ. ೮-೧೦ ನಿಮಿಷ ಅವಧಿಯ ವಾಡಿಕೆಯ ಅನುಕ್ರಮಗಳನ್ನು ಹಾಗೂ ಒಂದು ಜತೆಗೂಡುವ ತಾಳವಾದ್ಯದ ವೃಂದವನ್ನು ಪ್ರದರ್ಶನಗಳು ವಿಶಿಷ್ಟವಾಗಿ ಒಳಗೊಂಡಿರುತ್ತವೆ.[] ಪಾಶ್ಚಾತ್ಯ ಪ್ರದರ್ಶನಗಳಲ್ಲಿ ಅಪರೂಪವಾಗಿ ಕಂಡುಬರುವ ಒಂದು ಜೋಡಿ ಡ್ರ್ಯಾಗನ್‌ ನೃತ್ಯವು ಡ್ರ್ಯಾಗನ್‌ಗಳನ್ನು ಹೆಣೆದುಕೊಂಡಿರುವ ನರ್ತಕರ ಎರಡು ಗುಂಪುಗಳನ್ನು ಒಳಗೊಂಡಿರುತ್ತದೆ.
  • ಇದಕ್ಕಿಂತಲೂ ಅಪರೂಪವಾಗಿರುವ ನೃತ್ಯಗಳೆಂದರೆ, ಒಂಬತ್ತು ಡ್ರ್ಯಾಗನ್‌ಗಳ ಸಂಪೂರ್ಣ ವ್ಯೂಹವನ್ನು ಒಳಗೊಂಡಿರುವ ನೃತ್ಯಗಳು. ಏಕೆಂದರೆ ಒಂಬತ್ತು ಎಂಬುದು ಒಂದು "ಪರಿಪೂರ್ಣ" ಸಂಖ್ಯೆಯಾಗಿರುತ್ತದೆ. ಇಂಥ ನೃತ್ಯಗಳಲ್ಲಿ ನಾನಾಬಗೆಯ ಸಂಘಟನೆಗಳಿಗೆ ಸೇರಿದ ಸಹಭಾಗಿಗಳು ದೊಡ್ಡ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಆದ್ದರಿಂದ ಮಹತ್ತರವಾದ ಸಮುದಾಯದ ಆಶ್ರಯಗಳ ಅಡಿಯಲ್ಲಿ ಮಾತ್ರವೇ ಇಂಥ ನೃತ್ಯಗಳು ಅನೇಕವೇಳೆ ಸಾಧ್ಯವಿರುತ್ತವೆ.
  • ಪ್ರದರ್ಶನ ಕಲಾವಿದರು ಗಳಿಸಿಕೊಂಡಿರುವ ನೈಪುಣ್ಯಗಳು ಮತ್ತು ಅನುಭವಗಳ ಅನುಸಾರವಾಗಿ ಡ್ರ್ಯಾಗನ್‌ ನೃತ್ಯದ ಮಾದರಿಗಳ ನೃತ್ಯ-ಸಂಯೋಜನೆಯು ಕಂಡುಬರುತ್ತದೆ. ಡ್ರ್ಯಾಗನ್‌ ನೃತ್ಯದ ಅಂಥ ಒಂದಷ್ಟು ಮಾದರಿಗಳೆಂದರೆ: "ಮೋಡದ ಗವಿ" (ಕ್ಲೌಡ್‌ ಕೇವ್‌), "ನೀರಿನ ಸುಳಿ" (ವರ್ಲ್‌ಪೂಲ್‌), ತಾಯ್‌-ಚಿ ಮಾದರಿ, "ಕೋತಿಯನ್ನು ಕಟ್ಟುವಿಕೆ" (ಥ್ರೆಡಿಂಗ್‌ ದಿ ಮಂಕಿ), "ಮುತ್ತಿಗಾಗಿ ಕಾಯುವಿಕೆ" (ಲುಕಿಂಗ್‌ ಫಾರ್‌ ಪರ್ಲ್‌), ಹಾಗೂ "ಸ್ತಂಭವನ್ನು ಸುತ್ತುವರೆಯುವ ಡ್ರ್ಯಾಗನ್‌" (ಡ್ರ್ಯಾಗನ್‌ ಎನ್‌ಸರ್ಕ್ಲಿಂಗ್‌ ದಿ ಪಿಲ್ಲರ್‌). ಡ್ರ್ಯಾಗನ್‌ ಜೀವಿಯು ಬುದ್ಧಿವಂತಿಕೆಯ ಅರಸುವಿಕೆಯಲ್ಲಿ ನಿರಂತರವಾಗಿ ತನ್ನನ್ನು ತೊಡಗಿಸಿಕೊಂಡಿದೆ ಎಂಬುದನ್ನು "ಮುತ್ತನ್ನು ಬೆನ್ನಟ್ಟುವ ಡ್ರ್ಯಾಗನ್‌" ಚಲನೆಯು ತೋರಿಸುತ್ತದೆ.
  • ಅಲೆಯ-ರೀತಿಯ ಒಂದು ಮಾದರಿಯಲ್ಲಿ ಡ್ರ್ಯಾಗನ್‌ ಚಲಿಸುತ್ತದೆ. ಡ್ರ್ಯಾಗನ್‌ನ ಇಡೀ ದೇಹದ ಪ್ರತಿಯೊಂದು ವಿಭಾಗವೂ ಅನುಕ್ರಮವಾಗಿ ಸುಸಂಘಟಿತವಾದ ತೊನೆದಾಡುವ ಮೂಲಕ ಈ ಚಲನೆಯು ಸಾಧಿಸಲ್ಪಡುತ್ತದೆ. ಈ ತೊನೆದಾಡುವಿಕೆಯು ಡ್ರ್ಯಾಗನ್‌ನ ಮೂಲಭೂತ ಚಲನೆಯನ್ನು ರೂಪಿಸುತ್ತದೆಯಾದರೂ, ಸಂಕೀರ್ಣ ರಚನೆಗಳನ್ನು ಕಾರ್ಯರೂಪಕ್ಕೆ ತರುವಂಥ ಸಾಧನೆಯು ಒಂದು ತಂಡದ ಸೃಜನಶೀಲತೆಯಿಂದ ಮಾತ್ರವೇ ಸಾಧ್ಯ ಎನ್ನಬಹುದು.
  • ಡ್ರ್ಯಾಗನ್‌ ದೇಹವು ಸ್ವತಃ ತಿರುಗುವಂತೆ ಮತ್ತು ಬಳುಕುವಂತೆ ಮಾಡಲು ಸುರುಳಿಯಾಗಿಸಿದ ರಚನೆಗಳ ಒಳಗೆ ಓಡುವುದುನ್ನು, ಪ್ರದರ್ಶಿಸಲ್ಪಡುವ ಮಾದರಿಗಳು ಮತ್ತು ಚಾತುರ್ಯಗಳು ಸಾಮಾನ್ಯವಾಗಿ ಒಳಗೊಂಡಿರುತ್ತವೆ. ಇದರಿಂದಾಗಿ ಪ್ರದರ್ಶನ ಕಲಾವಿದರು ಡ್ರ್ಯಾಗನ್‌ನ ದೇಹದ ವಿಭಾಗಗಳ ಮೇಲೆ ಅಥವಾ ಅದರ ಮೂಲಕ ಜಿಗಿಯಬೇಕಾಗುತ್ತದೆ. ಇದು ದೃಶ್ಯಗೋಚರ ಪ್ರದರ್ಶನದ ಗುಣಮಟ್ಟವನ್ನು ಹೆಚ್ಚಿಸುತ್ತದೆ.
  • ಬಿರಡೆ ತಿರುಪಿನ-ರೀತಿಯಲ್ಲಿ ತಿರುಗುವಂಥ ನಾನಾಬಗೆಯ ಚಾತುರ್ಯಗಳು ಹಾಗೂ ಹೆಚ್ಚು ದೊಂಬರಾಟದಂಥ ಚಲನೆಗಳು, ಇತರ ಮುಂದುವರಿದ ಕುಶಲ ಚಲನೆಗಳಲ್ಲಿ ಸೇರಿರುತ್ತವೆ. ಹೀಗೆ ಮಾಡುವಾಗ ಪ್ರದರ್ಶನ ಕಲಾವಿದರು ಪರಸ್ಪರರ ಕಾಲುಗಳು ಮತ್ತು ಭುಜಗಳ ಮೇಲೆ ನಿಂತುಕೊಂಡು ಡ್ರ್ಯಾಗನ್‌ನ ಚಲನೆಗಳ ಎತ್ತರವನ್ನು ಹೆಚ್ಚಿಸುತ್ತಾರೆ.[]
  • ಡ್ರ್ಯಾಗನ್‌ ನೃತ್ಯ ತಂಡವೊಂದರಲ್ಲಿ ಪ್ರದರ್ಶನ ನೀಡಬೇಕೆಂದರೆ ಹಲವಾರು ಅಂಶಗಳು ಮತ್ತು ನೈಪುಣ್ಯಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ; ಒಂದು ರೀತಿಯಲ್ಲಿ ಇದು ಒಂದು ಅಡ್ಡ-ಹಾಯುವ ಚಟುವಟಿಕೆಯಾಗಿದ್ದು, ಒಂದು ಕ್ರೀಡಾ ತಂಡದ ತರಬೇತಿ ಮತ್ತು ಮನೋಧರ್ಮವನ್ನು ಪ್ರದರ್ಶನ ಕಲೆಗಳ ನಟವರ್ಗದ ರಂಗಕೌಶಲ ಮತ್ತು ಸಹಜಶಕ್ತಿಯೊಂದಿಗೆ ಸಂಯೋಜಿಸುವುದನ್ನು ಇಲ್ಲಿ ಕಾಣಬಹುದಾಗಿರುತ್ತದೆ. ಮೂಲಭೂತ ನೈಪುಣ್ಯಗಳನ್ನು ಕಲಿತುಕೊಳ್ಳುವುದಕ್ಕೆ ಸರಳವಾಗಿವೆ.
  • ಅದೇನೇ ಇದ್ದರೂ ಓರ್ವ ಸಮರ್ಥ ಪ್ರದರ್ಶನ ಕಲಾವಿದನಾಗಬೇಕೆಂದರೆ ಚಲನೆಗಳು ಎರಡನೇ ಸ್ವರೂಪವಾಗಿ ಮಾರ್ಪಡುವ ಮತ್ತು ಸಂಕೀರ್ಣ ರಚನೆಗಳು ಸಾಧಿಸಲ್ಪಡುವವರೆಗೆ ಆತ ಸಮರ್ಪಣಾ ಭಾವದ ತರಬೇತಿಯನ್ನು ತೆಗೆದುಕೊಳ್ಳಬೇಕಾಗುತ್ತದೆ - ಇವು ಏಕೋದ್ದಿಷ್ಟ ಸದಸ್ಯನ ನೈಪುಣ್ಯ ಮೇಲಷ್ಟೇ ಅಲ್ಲದೇ, ಸಹಕಾರದೊಂದಿಗೆ ಸಾಗುವಲ್ಲಿ ಒಟ್ಟಾರೆಯಾಗಿ ತಂಡವು ಹೊಮ್ಮಿಸುವ ಏಕಾಗ್ರತೆಯ ಮೇಲೂ ಅವಲಂಬಿತವಾಗಿದೆ.[]

ಸಾಹಿತ್ಯದಲ್ಲಿ

[ಬದಲಾಯಿಸಿ]

ಲಾರೆನ್ಸ್‌ ಫರ್ಲಿಂಘೆಟಿ ಎಂಬಾತನ "ದಿ ಗ್ರೇಟ್‌ ಚೈನೀಸ್‌ ಡ್ರ್ಯಾಗನ್‌" ಎಂಬ ಕವಿತೆಯು ೧೯೬೧ರಲ್ಲಿ ಬಂದ ಅವನ ಸ್ಟಾರ್ಟಿಂಗ್‌ ಫ್ರಂ ಸ್ಯಾನ್‌ ಫ್ರಾನ್ಸಿಸ್ಕೊ ಎಂಬ ಕವನಸಂಗ್ರಹದಲ್ಲಿ ಪ್ರಕಟಿಸಲ್ಪಟ್ಟಿತು ಮತ್ತು ಇದು ಡ್ರ್ಯಾಗನ್‌ ನೃತ್ಯದಿಂದ ಪ್ರೇರೇಪಿಸಲ್ಪಟ್ಟಿತು. ಗ್ರೆಗರಿ ಸ್ಟೀಫನ್‌ಸನ್‌ ಎಂಬಾತ ಡ್ರ್ಯಾಗನ್‌ ಕುರಿತು ಮಾತನಾಡುತ್ತಾ "… ಇದು 'ಜೀವನದ ಬಲ ಮತ್ತು ನಿಗೂಢತೆಯನ್ನು' ಪ್ರತಿನಿಧಿಸುತ್ತದೆ; ಇದು ಐಹಿಕ ಪ್ರಪಂಚದಲ್ಲಿ ಎಲ್ಲೆಡೆ ಪಾರದರ್ಶಕವಾಗಿರುವ ಆಧ್ಯಾತ್ಮಿಕತೆಯನ್ನು ನೋಡುವ ನಿಜವಾದ ದೃಶ್ಯವಾಗಿದೆ" ಎಂದು ಅಭಿಪ್ರಾಯಪಡುತ್ತಾನೆ.[][] ಅರ್ಲ್‌ ಲವ್‌ಲೇಸ್‌ ಎಂಬಾತನ "ದಿ ಡ್ರ್ಯಾಗನ್‌ ಕೆನಾಟ್‌ ಡಾನ್ಸ್‌" ಎಂಬ ಕಾದಂಬರಿಯು ವೆಸ್ಟ್‌ಇಂಡೀಸ್‌ನಲ್ಲಿನ ಸಾಮಾಜಿಕ ಬದಲಾವಣೆ ಮತ್ತು ಇತಿಹಾಸವನ್ನು ಪರಿಶೋಧಿಸಲು ಜಾತ್ರೆ ನೃತ್ಯದ ವಿಷಯವನ್ನು ಬಳಸಿಕೊಳ್ಳುತ್ತದೆ.[]

ಟಿಪ್ಪಣಿಗಳು

[ಬದಲಾಯಿಸಿ]
  1. "Longest Chinese-style Dragon Journeys to Olympics". Archived from the original on 2011-07-16. Retrieved 2010-02-08.
  2. ೨.೦ ೨.೧ ೨.೨ ೨.೩ ೨.೪ ಚೀನಿಯರ ಡ್ರ್ಯಾಗನ್‌ ನರ್ತನದ ಇತಿಹಾಸ ಮತ್ತು ಪ್ರದರ್ಶನದ ಕುರಿತು ಸಂಗ್ರಹಿಸಲಾದ ಮಾಹಿತಿ ಹಾಗೂ ದಾಖಲೆ ಸಂಗ್ರಹ
  3. ೩.೦ ೩.೧ "Ferlinghetti, Lawrence (Vol. 111) - Introduction". eNotes.com. Retrieved 2010-02-18.
  4. Daryl Cumber Dance (1986). Fifty Caribbean writers: a bio-bibliographical critical sourcebook. Greenwood Publishing Group. p. 282. ISBN 0313239398.


ಬಾಹ್ಯ ಕೊಂಡಿಗಳು‌‌

[ಬದಲಾಯಿಸಿ]