ಹಿಮಾಲಯೇಶ್ವರ್ ಮಹಾದೇವ್ ಮಂದಿರ್, ಘಾಟ್ಕೋಪರ್ (ಪ,) ಮುಂಬೈ
ಹಿಮಾಲಯೇಶ್ವರ್ ಮಹಾದೇವ್ ಮಂದಿರ್,ಮುಂಬಯಿನ ಉಪನಗರವೊಂದಾದ 'ಘಾಟ್ಕೋಪರ್' ನ,'ಹಿಮಾಲಯ ಕೋ.ಹೌ.ಸೊ'ಯ ಪರಿಸರದಲ್ಲಿ, ಸುಮಾರು ೩೦ ವರ್ಷಗಳಿಂದ ಇದೆ.'ಹಿಮಾಲಯೇಶ್ವರ್ ಮಹಾದೇವ್ ಮಂದಿರ್'ದ ಜೀರ್ಣೋದ್ಧಾರದ ಕೆಲಸ ಮುಕ್ತಾಯವಾಗಿದ್ದು, ಸನ್, ೨೦೧೧ ರ ಮಾರ್ಚ್ ತಿಂಗಳ ೨ ನೇ ತಾರೀಖಿನ 'ಶಿವರಾತ್ರಿ ಹಬ್ಬ'ದ ಶುಭದಿನದಂದು, 'ಹಿಮಾಲಯೇಶ್ವರ', 'ಪಾರ್ವತಿ', 'ಗಣಪತಿ','ಶೀತಲಾಮಾತಾ', 'ಸಾಯಿಬಾಬ' ಮೂರ್ತಿಗಳ 'ಪ್ರತಿಶ್ಠಾಪನಾ ಮಹೋತ್ಸವ' ಶ್ರೀ ಮಹೇಶ್ವರನ ಕೃಪೆಯಿಂದ ಅತ್ಯಂತ ವಿಧಿಪೂರ್ವಕವಾಗಿ, ಋತ್ವಿಜರ ಮಂತ್ರಘೋಷದಿಂದ ಸಂಪನ್ನಗೊಂಡಿತು. ಮಂದಿರದಲ್ಲಿ ನೆರೆದಿದ್ದ ಅಪಾರ ಭಕ್ತಾದಿಗಳ,ಹಾಗೂ ಶ್ರದ್ಧಾಳುಗಳ ಅತ್ಯಂತ ಶ್ರದ್ಧಾ ಭಕ್ತಿಗಳಿಂದಲೂ ಸಂಭ್ರಮದಿಂದಲೂ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನೆರವೇರಿತು. ಈ ಸಮಾರಂಭದ ಮುಂದಾಳತ್ವವನ್ನು ಕಾಲೋನಿಯ 'ಆದರ್ಶ ಮಹಿಳಾ ಮಂಡಲದ ಸದಸ್ಯೆಯರು' ಯಶಸ್ವಿಯಾಗಿ ನಿರ್ವಹಿಸಿದರು.
'ಶಿವರಾತ್ರಿ ದಿನ'ದ 'ಪ್ರಾಣಪ್ರತಿಷ್ಠಾಪನೆಯ ಕಾರ್ಯಕ್ರಮಗಳು' ಹೀಗಿದ್ದವು
[ಬದಲಾಯಿಸಿ]- 'ಪ್ರಾಣಪ್ರತಿಷ್ಠೆ' : 'ಮಹಾಶಿವರಾತ್ರಿಯ ಶುಭದಿನ'ದಂದು, ಬುಧವಾರ, ೨, ಮಾರ್ಚ್, ೨೦೧೧ ರಂದು,
- 'ಅಭಿಷೇಕ' : 'ಬೆಳಿಗ್ಯೆ' ೭ ಗಂಟೆಗೆ ಆರಂಭ,
- 'ತೀರ್ಥ ಪ್ರಸಾದ' : 'ಮಧ್ಯಾನ್ಹ' ೨ ರ, ನಂತರ,
- 'ಭಜನ್ ಮತ್ತಿ ಕೀರ್ತನ್' : 'ಮಧ್ಯಾನ್ಹ' ೩ ಗಂಟೆಯ ಬಳಿಕ,
- 'ಮಹಾ ಭಂಡಾರ್ ಸೇವೆ' : 'ಸಾಯಂಕಾಲ', ೭ ಗಂಟೆಯ ನಂತರ,
ಹಿಮಾಲಯ ಕೋ.ಹೌ.ಸೊಸೈಟಿ', 'ಅಸಾಲ್ಫ ವಿಲೇಜ್'ನಲ್ಲಿದೆ. ಈ ಪ್ರದೇಶವನ್ನು 'ಗೋವಿಂದ್ ನಗರ' ವೆಂದೂ ಕರೆಯಲಾಗುತ್ತದೆ. ಈ ದೇವಾಲಯದ ಸಮೀಪದಲ್ಲೇ
- 'ಸಂಕಟ ವಿಮೋಚನ ಹನುಮಾನ್ ಮಂದಿರ',
- 'ಗೀತಾಂಬಿಕಾ ಮಂದಿರ', ಸ್ವಲ್ಪಮುಂದೆ ಹೋದರೆ
- 'ವಿನಾಯಕ' ('ಭಟ್ವಾಡಿ'ಯಲ್ಲಿ)
- 'ವಿಘ್ನಹರ್ತ ಗಣೇಶ್ ಮಂದಿರ',
- 'ಆಂಜನೇಯ,'
- 'ಸಾಯಿಬಾಬ',
- 'ಜಂಗಲೇಶ್ವರ',
- 'ಜಗದಂಬಾ,'
- 'ದತ್ತಾತ್ರೇಯ ಮಂದಿರ'ಗಳಿವೆ.
'ಘಾಟ್ಕೋಪರ್ ರೈಲ್ವೆನಿಲ್ದಾಣ'(ಪ)ದಿಂದ 'ಹಿಮಾಲಯ ಸೊಸೈಟಿ'ಗೆ ಬರಲು
[ಬದಲಾಯಿಸಿ]'ಘಾಟ್ಕೋಪರ್ ರೈಲ್ವೆ ನಿಲ್ದಾಣ'(ಪ)ದಿಂದ ಈ ದೇವಾಲಯಗಳಿಗೆ ಬರಲು '೪೨೯ ಬಿ.ಇ.ಎಸ್.ಟಿ ಬಸ್' ನಲ್ಲಿರಬಹುದು. ಇಲ್ಲವೆ 'ರಿಕ್ಷಾ'ದಲ್ಲೂ ಬರಬಹುದು.'ಎಲ್.ಬಿ.ಎಸ್.ಮಾರ್ಗ್'ದಲ್ಲಿ 'ಕುರ್ಲಾ'ಕಡೆಗೆ ಬರುವ ಬಸ್,'ಮಹೇಂದ್ರ ಮಹೇಂದ್ರ ಅಪಾರ್ಟ್ಮೆಂಟ್ಸ್'ಬಳಿಯ ತಿರುವಿನಲ್ಲಿರುವ ಗಲ್ಲಿಯಲ್ಲಿ 'ನೇತಾಜಿ ಫಾಲ್ಕರ್ ಮಾರ್ಗ'ದಲ್ಲಿ ನೇರವಾಗಿ ಸಾಗಿ,(ಈ ರಸ್ತೆಗೆ 'ನಾರಿ ಸೇವಾಸದನ್ ರಸ್ತೆ'ಯೆಂದೂ ಹೆಸರಿದೆ)'ಹೋಮ್ ಗಾರ್ಡ್ಸ್ ಟ್ರೈನಿಂಗ್ ಸೆಂಟರ್','ಹಿಮಾಲಯ ಸೊಸೈಟಿ'ಯಿಂದ ಮುಂದೆ ಹೋಗುತ್ತಾ,'ಮಿಲಿಂದ್ ನಗರ ಸ್ಟಾಪ್'ನಲ್ಲಿ ಕೊನೆಗೊಂಡು, ಪುನಃ 'ಘಾಟ್ಕೋಪರ್'ಗೆ ವಾಪಸ್ ಹೋಗುತ್ತದೆ. ಕೊನೆನಿಲ್ದಾಣದ ಹೆಸರು,'ಮಿಲಿಂದ್ ನಗರ ಸ್ಟಾಪ್.'ಅಲ್ಲಿಂದ ನಡೆದೇ ಮೇಲೆ ತಿಳಿಸಿದ ದೇವಾಲಯಗಳಿಗೆ ಹೋಗಬಹುದು.