ಇನ್ನೋವೇಟಿವ್ ಫಿಲ್ಮ್ಸಿಟಿ
ಸಂಸ್ಥೆಯ ಪ್ರಕಾರ | Privately held company |
---|---|
ಸ್ಥಾಪನೆ | ಜನೆವರಿ ೧೮ನೇ, ೨೦೦೮ |
ಮುಖ್ಯ ಕಾರ್ಯಾಲಯ | ಬಿಡದಿ , ಬೆಂಗಳೂರು,ಕರ್ನಾಟಕ, India
ಮೈಸೂರು ರಸ್ತೆಯ ಬಿಡದಿ ಬಳಿ |
ಪ್ರಮುಖ ವ್ಯಕ್ತಿ(ಗಳು) | ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸರವಣ ಪ್ರಸಾದ್ |
ಉದ್ಯಮ | - |
ಮಾಲೀಕ(ರು) | ಸರವಣ ಪ್ರಸಾದ್ |
ಪೋಷಕ ಸಂಸ್ಥೆ | ಇನ್ನೋವೇಟಿವ್ ಸಮೂಹ |
ಜಾಲತಾಣ | www.innovativefilmcity.in |
ಬೆಂಗಳೂರುನ ಬಿಡದಿ ಬಳಿ ಗುಡ್ಡಗಾಡು ಪ್ರದೇಶದಲ್ಲಿ ಸುಮಾರು ೫೦೦ ಎಕರೆ ಪ್ರದೇಶದಲ್ಲಿ ಈ ಪ್ರದೇಶದಲ್ಲಿ ಫಿಲಂ ಸಿಟಿಯನ್ನು ನಿರ್ಮಿಸಲಾಗುತ್ತಿದ್ದು. ಇದರ ನಿರ್ಮಾಣ ವೆಚ್ಚ ೫೦೦ ಕೋಟಿ ರೂಗಳು.
ಇತಿಹಾಸ
[ಬದಲಾಯಿಸಿ]ಇನ್ನೊವೇಟಿವ್ ಮಲ್ಟಿಪ್ಲೆಕ್ಸ್ ಸ್ಟುಡಿಯೊಸ್ನ ಮಾಲೀಕ ಶರವಣ ಪ್ರಸಾದ್ ಈ ಚಿತ್ರನಗರಿಯ ಪ್ರಮುಖ ರೂವಾರಿ. ಜತೆಗೆ ಮನರಂಜನಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ರಿಪ್ಲೇಸ್ ಎಂಟರ್ ರ್ಟೈನ್ಮೆಂಟ್ ಸಂಸ್ಥೆಯ ಅಧ್ಯಕ್ಷ ಬಾಬ್ ಮಾಸ್ಟರ್ ಸನ್ ಕೈಜೋಡಿಸಿದ್ದಾರೆ. ದುಬೈನ ನಿರ್ಮಾಣ ಸಂಸ್ಥೆ ಈಟಿಎನ ವ್ಯವಸ್ಥಾಪಕ ನಿರ್ದೇಶಕ ಸೈಯದ್ ಎಂ. ಸಲಾವುದ್ದಿನ್ ಅವರ ಸಂಪೂರ್ಣ ಸಹಕಾರವಿದೆ. ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಈ ಸಂಸ್ಥೆಯ ನಿರ್ದೇಶಕರಲ್ಲೊಬ್ಬರು. ಚಿತ್ರನಗರಿಯ ಸಂಪೂರ್ಣ ಸಿಂಗಾರದ ಜವಾಬ್ದಾರಿಯನ್ನು ವಿಶ್ವ ಪ್ರಸಿದ್ಧ ವಿನ್ಯಾಸಕಾರ ನಿತೀಶ್ ರಾಯ್ ಯವರು.
ಸ್ಟುಡಿಯೋ ಗುಣಲಕ್ಷಣಗಳು
[ಬದಲಾಯಿಸಿ]ಇದು ಎಲ್ಲಾ ವಯೋಮಾನದವರಿಗೂ ಮನರಂಜನೆಯ ತಾಣವಾಗಲಿದೆ. ಇಲ್ಲಿ ವಸ್ತು ಸಂಗ್ರಹಾಲಯ, ಪ್ರಖ್ಯಾತ ತಾರೆಯರ ಮೇಣದ ಪ್ರತಿಮೆಗಳು, ನೈಸರ್ಗಿಕ ಪರಿಸರದ ಹಿನ್ನಲೆಯಲ್ಲಿ ಘರ್ಜಿಸುವ ಡೈನೋಸಾರ್ಗಳ ಪ್ರತಿಮೆಗಳು, ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದ ಚಿತ್ರಮಂದಿರ, ವಿವಿಧ ನಮೂನೆಯ ಮೀನುಗಳ ಲೋಕ, ಥಾಯ್ ಬೀಚ್, ಕಾರ್ ಮತ್ತು ದೋಣಿ ವಿಹಾರ ಸೌಲಭ್ಯವಿರುವ ಕಾರ್ಟೂನ್ ಸಿಟಿ, ವಾಣಿಜ್ಯ ಮಳಿಗೆಗಳು ಇನ್ನೂ ಮುಂತಾದ ಮನರಂಜನೆಯ ಸೌಲಭ್ಯಗಳು ಫಿಲಂ ಸಿಟಿಯಲ್ಲಿ ಇರುತ್ತವೆ. ೫,೦೦೦ ಪ್ರೇಕ್ಷಕರು ಏಕಕಾಲಕ್ಕೆ ಕುಳಿತುಕೊಳ್ಳಬಹುದಾದ ಬಯಲು ರಂಗಮಂದಿರ, ಅತ್ಯಾಧುನಿಕ ಜೀವನ ಶೈಲಿಗೆ ಹೊಂದುವ ಸರ್ವೀಸ್ ಅಪಾರ್ಟ್ಮೆಂಟ್ಗಳು, ಮತ್ತಿತರ ಐಷಾರಾಮಿ ಸೌಲಭ್ಯಗಳು ಫಿಲಂ ಸಿಟಿಯಲ್ಲಿ ದೊರೆಯಲಿವೆ.
ಡೈನೊಪಾರ್ಕ್
[ಬದಲಾಯಿಸಿ]ಸುಮಾರು ೨೦೦೦೦ ಸಾವಿರ ವರ್ಷಗಳ ಹಿಂದೆ ಬದುಕಿದ್ದವು ಎನ್ನಲಾದ ಡೈನೊಸಾರ್ಗಳು ಇಲ್ಲಿವೆ. ಹಾಗಂತ ಇದು ಕೇವಲ ಚಿತ್ರವಲ್ಲ. ಉತ್ತಮ ಗುಣಮಟ್ಟದ ರಬ್ಬರ್ಗಳನ್ನು ಬಳಸಿ ಬೃಹದಾಕಾರದ ಡೈನೊಸಾರ್ಗಳನ್ನು ನಿರ್ಮಿಸಲಾಗಿದೆ. ಈ ಡೈನೊಸಾರ್ ಪ್ರಪಂಚಕ್ಕೆ ಕಾಲಿಡುತ್ತಿದ್ದಂತೇ ಹಚ್ಚಹಸಿರ ಕಾಡು ಕಂಗೊಳಿಸುತ್ತವೆ. ಡೈನೊಸಾರ್ಗಳ ಅಬ್ಬರದ ಕೂಗು ಕಿವಿಗೆ ರಾಚುತ್ತವೆ. ಎದೆ ಝಲ್ ಎನ್ನುವಂತೆ ಅವು ಆ ಕಡೆ ಈ ಕಡೆ ಚಲಿಸುತ್ತವೆ. ವಾಲ್ಕೆನೊ ಬುಗ್ಗೆಗಳು ಭಯ ಮೂಡಿಸುತ್ತವೆ.
ಲಿಲ್ಲಿ ಪುಟ್ ಪ್ರಪಂಚ
[ಬದಲಾಯಿಸಿ]ವಿಶ್ವದ ಹಲವು ಅದ್ಭುತಗಳನ್ನು ಪುಟ್ಟ ಪುಟ್ಟ ಗಾತ್ರದಲ್ಲಿ ಸೃಷ್ಟಿಸಲಾಗಿದೆ. ಇಲ್ಲಿಗೆ ಪ್ರವೇಶಿಸುತ್ತಿದ್ದಂತೇ ನಾವು ಗಜಗಾತ್ರದಷ್ಟಿದ್ದೇವೇನೋ ಎಂಬ ಭಾವನೆ ಸಹಜವಾಗಿ ಮೂಡುತ್ತವೆ. ಫನ್ ಪ್ಲೆಕ್ಸ್ ಇದು ಇರುವುದು ಮಕ್ಕಳಿಗಷ್ಟೇ ಅಲ್ಲ. ಎಲ್ಲರೂ ಇಲ್ಲಿಗೆ ಬರಬಹುದು. ಬೌಲಿಂಗ್, ಸೈಕಲಿಂಗ್ ಮುಂತಾದ ಹತ್ತಾರು ಕ್ರೀಡೆಗಳು ಇಲ್ಲಿ ಲಭ್ಯ. ೪ಡಿ ಥಿಯೇಟರ್ಗಳು, ಡಿಜಿಟಲ್ ತಂತ್ರಜ್ಞಾನದ ಗೇಮ್ಗಳು ಮನರಂಜನೆಗೆ ಹೇಳಿಮಾಡಿಸಿದಂತಿವೆ.
ವ್ಯಾಕ್ಸ್ ಮ್ಯೂಸಿಯಂ
[ಬದಲಾಯಿಸಿ]ಸಿನಿಮಾ, ಕ್ರೀಡೆ, ಸಂಗೀತ ಮುಂತಾದ ಕ್ಷೇತ್ರಗಳಲ್ಲಿ ವಿಶ್ವ ಮಾನ್ಯತೆ ಪಡೆದ ಮಹಾನ್ ವ್ಯಕ್ತಿಗಳ ಮೇಣದ ಆಕೃತಿಗಳು ಇಲ್ಲಿ ಕಾಣಸಿಗುತ್ತವೆ. ಏಸುಕ್ರಿಸ್ತ, ಶ್ರೀ ಕೃಷ್ಣ, ಮಹಾತ್ಮ ಗಾಂಜಿ, ವಿಲಿಯಂ ಶೇಕ್ಸ್ಪಿಯರ್, ಚಾರ್ಲಿ ಚಾಪ್ಲಿನ್ ಹೀಗೆ ಲೆಕ್ಕವಿಲ್ಲದಷ್ಟು ಕಲಾಕೃತಿಗಳು ಕಣ್ಮನ ತಣಿಸುತ್ತವೆ.
ನಂಬಿ ಇಲ್ಲವೇ ಬಿಡಿ
[ಬದಲಾಯಿಸಿ]ಅಪರೂಪದ ಆನೆಗಳ ಅಸ್ಥಿಪಂಜರಗಳು, ಮುಟ್ಟಿದರೆ ಬಸಿರಾಗಿಬಿಡುವ ವಿಶೇಷ ವಾಸ್ತುಶಿಲ್ಪಗಳು! ಡೈನೊಸಾರ್ ಮೊಟ್ಟೆಗಳು ಮುಂತಾದ ಹಲವುವಿಸ್ಮಯಭರಿತ, ಅಪರೂಪದ, ಚಮತ್ಕಾರಿಕ ವಸ್ತುಗಳು. ಅಬ್ಬಬ್ಬಾ ಅವುಗಳನ್ನೆಲ್ಲ ನೋಡಿಯೇ ಅನುಭವಿಸಬೇಕು.
ಆಂಫಿ ಥಿಯೇಟರ್ಸ್
[ಬದಲಾಯಿಸಿ]ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಚಿತ್ರೋತ್ಸವಗಳು, ಸಂಗೀತೋತ್ಸವಗಳು ಮುಂತಾದ ಕಾರ್ಯಕ್ರಮಗಳನ್ನು ಇಲ್ಲಿ ಹಮ್ಮಿಕೊಳ್ಳಬಹುದಾಗಿದೆ. ಇಲ್ಲಿ ಒಮ್ಮೆಗೇ ೧೫ ಸಾವಿರ ವೀಕ್ಷಕರು ಕೂರುವ ವ್ಯವಸ್ಥೆ ಕಲ್ಪಿಸಲಾಗುವುದು. ಇಂತಹದ್ದೊಂದು ಥಿಯೇಟರ್ ಇರುವುದು ಭಾರತದಲ್ಲೇ ಮೊದಲು.
ವಿಸ್ಮಯ ಜಗತ್ತು
[ಬದಲಾಯಿಸಿ]ಭೂಕಂಪ, ಚಂಡಮಾರುತ, ಬಿರುಗಾಳಿ ಮುಂತಾದವು ಹೇಗೆ ಉದ್ಭವಿಸುತ್ತವೆ ಎಂಬುದನ್ನು ಇಲ್ಲಿ ಪ್ರತ್ಯಕ್ಷವಾಗಿ ಕಾಣಬಹುದಾಗಿದೆ. ವಿಶ್ವದ ನಾನಾ ನುರಿತ ವಿಜ್ಞಾನಿಗಳು ಇವುಗಳ ಕುರಿತು ಪ್ರಾತ್ಯಕ್ಷಿಕೆ ಕಟ್ಟಿಕೊಡಲಿದ್ದಾರೆ. ಮೈ ನವಿರೇಳಿಸುವ ಗಾತ್ರದ ಅಸ್ತಿ ಪಂಜರಗಳು, ದೈತ್ಯಾಕಾರದ, ನಿಗೂಢತೆ ಸೂಸುವ ಭಯಾನಕ, ಭ್ರಮೆ ಮೂಡಿಸುವ, ಮನುಷ್ಯರ ರಕ್ತ ಹೀರುವ ನರಪಿಶಾಚಿಗಳ ಆಕೃತಿಗಳನ್ನು ಇಲ್ಲಿ ಕಾಣಬಹುದಾಗಿದೆ
ಪ್ರವಾಸೋದ್ಯಮ
[ಬದಲಾಯಿಸಿ]ಇದನ್ನು ರಾಜ್ಯ ಸರ್ಕಾರ ಪ್ರಮುಖ ಪ್ರವಾಸಿ ತಾಣ ಎಂದು ಗುರುತಿಸಿದೆ. ಇನ್ನೊವೆಟಿವ್ ಫಿಲ್ಮ ಸಿಟಿಯು ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ-17 ರಲ್ಲಿ ಬರುವ ವಂಡರ್ ಲಾದಿಂದ 2ಕಿ.ಮೀ. ದೂರದಲ್ಲಿದೆ. ಹೆಸರೇ ಹೇಳುವ ಹಾಗೆ ಇದೊಂದು ಕ್ರೀಯಾತ್ಮಕ ಉದ್ದೇಶದ ಅಲಂಕಾರೋದ್ಯಾನವಾಗಿದೆ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರೂ ಇಷ್ಟಪಡುವ ತಾಣವಾಗಿದೆ. ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಒಂದು ದಿನ ಕಳೆಯಲು ಹೇಳಿ ಮಾಡಿಸಿದ ಒಂದು ಸ್ಥಳ. ಬೆಂಗಳೂರಿನಿಂದ ಇಲ್ಲಿಗೆ ಸರಳವಾಗಿ ತಲುಪಬಹುದಾಗಿದ್ದು, ಬೆಳಿಗ್ಗೆ 10 ಘಂಟೆಯಿಂದ ಸಂಜೆ 6.30 ರ ವರೆಗೆ ತೆರೆದಿರುತ್ತದೆ. ಸಾಮಾನ್ಯವಾಗಿ ಶುಲ್ಕವು ಪ್ರತಿ ತಲೆಗೆ 299 ರಿಂದ ಪ್ರಾರಂಭವಾಗಿ, ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ರೂ.499 ವರೆಗೂ ಕೂಡ ಇದೆ. ಈ ಚಿತ್ರಕಾರ್ಯಾಲಯದ ಪ್ರಮುಖ ಆಕರ್ಷಣೆಗಳೆಂದರೆ, ರಿಪ್ಲೇ'ಸ್ ಬಿಲೀವ್ ಇಟ್ ಆರ್ ನಾಟ್ ಸಂಗ್ರಹಾಲಯ, 4-ಡಿ ಚಿತ್ರಮಂದಿರ, ಟೊಡ್ಲರ್'ಸ್ ಡೆನ್, ಲೂಯಿಸ್ ಟಸ್ಸೌಡ್'ಸ್ ಮೇಣದ ಸಂಗ್ರಹಾಲಯ, ವಿಶಿಷ್ಠ ಚಿತ್ರವಿನ್ಯಾಸ ಆಧಾರಿತ ಉಪಹಾರಗೃಹಗಳು. 'ವಾನ್ನಾಡು ಸಿಟಿ'ಯು ಮಕ್ಕಳಿಗೆ ಅತ್ಯಂತ ಪ್ರೀಯವಾಗಿದ್ದು ಅನೇಕ ಬಗೆಯ ಪಾತ್ರಗಳನ್ನು ನಿರ್ವಹಿಸಬಲ್ಲ ಸೌಲಭ್ಯಗಳನ್ನು ಒಳಗೊಂಡಿದೆ. ಡೈನೊಸಾರ್ ವರ್ಡ್ ಅಂತೂ ಆ ಪ್ರಾಣಿಗಳ ಜಗತ್ತಿಗೆ ಕರೆದೊಯ್ಯುತ್ತದೆ. 'ಹಂಟೆಡ್ ಮಾನ್ಶನ್' ನ ಅನುಭವವೂ ಕೂಡ ವಿಶೀಷ್ಟವಾಗಿದೆ. ಜಗತ್ತಿನ ಅದ್ಭುತಗಳ ಪ್ರತಿರೂಪಗಳನ್ನು ಒಂದೇ ಕಡೆ ವೀಕ್ಷಿಸಲು 'ಮಿನಿಯೇಚರ್ ಸಿಟಿ' ಕೂಡ ಇದೆ. ಇವೆಲ್ಲವುಗಳ ನಡುವೆ ವಿಶೀಷ್ಟ ವಿನ್ಯಾಸಗಳಾಧಾರಿತ ಉಪಹಾರಗೃಹಗಳಲ್ಲಿ ತಿನ್ನುವುದೆಂದರೆ, ಸ್ವರ್ಗಕ್ಕೆ ಮೂರೇ ಗೇಣು ಎಂಬ ಭಾವ ಮೂಡುವುದು ಸಹಜ.
ಚಿತ್ರ ಸಂಪುಟ
[ಬದಲಾಯಿಸಿ]-
ಫಿಲ್ಮ್ ಸಿಟಿ ಪ್ರವೇಶ
-
ಫಿಲ್ಮ್ ಸಿಟಿ ಪ್ರವೇಶ
-
ಫಿಲ್ಮ್ ಸಿಟಿ ಪ್ರವೇಶ
-
ಫಿಲ್ಮ್ ಸಿಟಿ ಪ್ರವೇಶ
-
ಫಿಲ್ಮ್ ಸಿಟಿ ಪ್ರವೇಶ
-
ಫಿಲ್ಮ್ ಸಿಟಿ ಪ್ರವೇಶ
-
ಫಿಲ್ಮ್ ಸಿಟಿ ಪ್ರವೇಶ
-
ಫಿಲ್ಮ್ ಸಿಟಿ ಪ್ರವೇಶ
-
ಫಿಲ್ಮ್ ಸಿಟಿ ಪ್ರವೇಶ
-
ಫಿಲ್ಮ್ ಸಿಟಿ ಪ್ರವೇಶ
-
ಫಿಲ್ಮ್ ಸಿಟಿ ಪ್ರವೇಶ
-
ಫಿಲ್ಮ್ ಸಿಟಿ ಪ್ರವೇಶ
-
ಫಿಲ್ಮ್ ಸಿಟಿ ಪ್ರವೇಶ
-
ಫಿಲ್ಮ್ ಸಿಟಿ ಪ್ರವೇಶ
-
ಫಿಲ್ಮ್ ಸಿಟಿ ಪ್ರವೇಶ
-
ಫಿಲ್ಮ್ ಸಿಟಿ ಪ್ರವೇಶ
-
ಫಿಲ್ಮ್ ಸಿಟಿ ಪ್ರವೇಶ
-
ಫಿಲ್ಮ್ ಸಿಟಿ ಪ್ರವೇಶ
-
ಫಿಲ್ಮ್ ಸಿಟಿ ಪ್ರವೇಶ
ಇವನ್ನೂ ಗಮನಿಸಿ
[ಬದಲಾಯಿಸಿ]- ಫಿಲ್ಮ್ ಸಿಟಿ
ಉಲ್ಲೇಖಗಳು
[ಬದಲಾಯಿಸಿ][[೧]]
ಬಾಹ್ಯ ಕೊಂಡಿಗಳು
[ಬದಲಾಯಿಸಿ][೨] Archived 2016-01-14 ವೇಬ್ಯಾಕ್ ಮೆಷಿನ್ ನಲ್ಲಿ.