ಕೆ. ಜೆ. ಶೆಟ್ಟಿ
'
'ಕಡಂದಲೆ ಜಯರಾಮ ಶೆಟ್ಟಿ','(ಕೆ. ಜೆ. ಶೆಟ್ಟಿ)' ಯವರು, 'ಪುತ್ತಿಗೆಗುತ್ತು' ಬಳಿಯ 'ಕಡಂದಲೆ'ಯ 'ಪರಾರಿ' ಊರಿನಲ್ಲಿ, ಸನ್ ೧೯೩೦ ರಲ್ಲಿ ಜನಿಸಿದರು. ತಮ್ಮ ೧೫ ರ ಪ್ರಾಯದಲ್ಲೇ ಬೊಂಬಾಯಿಗೆ ಹೋಗಿ, ಅಲ್ಲಿನ ಪರಿಸರವನ್ನು ಅಭ್ಯಸಿಸಿ, ಮತ್ತೆ ತಮ್ಮ ಊರಿಗೆ ವಾಪಸ್ ಬಂದಮೇಲೆ, ಅಧ್ಯಾಪಕ ವೃತ್ತಿಯನ್ನು ಕೈಗೊಂಡರು. ೨೦ ವರ್ಷ ಅಧ್ಯಾಪಕರಾಗಿ ದುಡಿದಬಳಿಕ, ತಾವೇ ಸ್ವಯಂ ನಿರ್ಣಯದ ಮೇರೆ, ರಾಜೀನಾಮೆ ನೀಡಿ, ಪತ್ರಿಕಾ ಪ್ರಕಟಣೆಯನ್ನೇ ಹೆಚ್ಚಾಗಿ ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡರು.
'ಕೆ. ಜೆ. ಶೆಟ್ಟಿ' ಯವರ ವೃತ್ತಿ ಜೀವನ
[ಬದಲಾಯಿಸಿ]ಕನ್ನಡನಾಡಿನ ಹಿರಿಯ ಪತ್ರಕರ್ತ, ಸಾಹಿತಿ, ಶಿಕ್ಷಕ, ಚಲನಚಿತ್ರ ನಿರ್ಮಾಪಕ, ಪರಿಸರ-ಹೋರಾಟಗಾರ ಎಂದೆಲ್ಲಾ ಕರೆಸಿಕೊಂಡ 'ಕೆ. ಜೆ. ಶೆಟ್ಟಿ' ಯವರ ಕ್ರಿಯಾಶೀಲ ಜೀವನ,ಹೋರಾಟ ಹಾಗೂ ಸಂಘರ್ಷಮಯವಾಗಿತ್ತು. ಸರಳ, ನಿರಾಡಂಬರ ವ್ಯಕ್ತಿಯಾದ ಅವರು, ತುಳುನಾಡಿನ ಒಬ್ಬ ಧೀಮಂತ ಹೋರಾಟಗಾರರೆಂದು ತಮನ್ನು ಗುರುತಿಸಿಕೊಂಡಿದ್ದಾರೆ. ಇದರ ನಿಮಿತ್ತವಾಗಿಯೇ ಅವರು 'ಜೈಲುವಾಸ'ವನ್ನು ಅನುಭವಿಸಬೇಕಾಯಿತು. ’ನವಶಕ್ತಿ ಪ್ರಕಾಶನ ಮಂದಿರ’, ವನ್ನು ಸ್ಥಾಪಿಸಿದರು.
'ಕೆ. ಜೆ. ಶೆಟ್ಟಿ' ಯವರು ಬಳಸುತ್ತಿದ್ದ ಉಡುಪು, ತೀರಾ ಸಾಮಾನ್ಯವಾಗಿತ್ತು
[ಬದಲಾಯಿಸಿ]ಸಾಮಾನ್ಯವಾಗಿ 'ಕೆ. ಜೆ. ಶೆಟ್ಟಿ' ಯವರು, ಯಾವಾಗಲೂ ಹೆಚ್ಚಾಗಿ ಬಿಳಿ ಪಂಚೆ, ಅರ್ಧತೋಳಿನ ಬಿಳಿ ಶರ್ಟು, ಧರಿಸುತ್ತಿದ್ದ ರನ್ನು ಗುರುತಿಸುವುದು ಬಹಳ ಸುಲಭವಾಗಿತ್ತು. ’ಚಂದನ ಮಾಸಪತ್ರಿಕೆ’, ಯಲ್ಲಿ ಶೆಟ್ಟಿಯವರು ಬರೆಯುತ್ತಿದ್ದ ಅಂಕಣ, 'ಸರಸ-ವಿರಸ', 'ಸಂಜೆ ರಂಗು' ವಿಡಂಬನಾ ಬರಹಗಳು, ಬಹಳ ಜನ ಅದರ ಮೇಲೆ ತಮ್ಮ ಅನಿಸಿಕೆಗಳನ್ನು ಪ್ರಕಟಿಸುತ್ತಿದ್ದರು. ಕಾವ್ಯನಾಮ ಸಂಜಯ, ದಲ್ಲಿ 'ಕೆ.ಜೆ'.ಯವರು ಬರವಣಿಗೆಯನ್ನು ಮಾಡುತ್ತಿದ್ದರು. ೧೯೮೪ ರಲ್ಲಿ ’ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘ’ಕ್ಕೆ ಅಧ್ಯಕ್ಷರಾದರು. 'ಪುಟ್ಟ ಸ್ವರ್ಗಕ್ಕೆ ಹೋದ’ ಮಕ್ಕಳ ಹಾಸ್ಯ ಸಂಕಲನ ’ತುಳುನಾಡ ಸೇನೆ’ಯ, ’ಸಾಧುಶೆಟ್ಟಿ’ಯವರು ಹೊರತಂದ ಪತ್ರಿಕೆ, ’ಕರಾವಳಿ ಮಿತ್ರ ಪತ್ರಿಕೆ’ಯ ಸಂಪಾದಕರಾಗಿದ್ದರು.
ಶೆಟ್ಟಿಯವರು ಗಳಿಸಿದ ಪ್ರಶಸ್ತಿ ಸನ್ಮಾನಗಳು
[ಬದಲಾಯಿಸಿ]- 'ಕರ್ನಾಟಕ ಪತ್ರಿಕ ಅಕ್ಯಾಡಮಿ ಪ್ರಶಸ್ತಿ',
- 'ದಕ್ಷಿಣ ಕನ್ನಡ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿ', ಸನ್, ೨೦೦೭ ರಲ್ಲಿ,
- 'ಬೊಂಬಾಯಿನ ಜಯಂತಿ ಕುರ್ಕಲ್ ಪ್ರಶಸ್ತಿ',
- 'ಕಾರ್ಕಳದಲ್ಲಿ ಜರುಗಿದ, ೫ ನೇ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ'ರಾಗಿದ್ದರು.
- 'ಶಾಂಭವಿ ನದಿ ಪರಿಸರ ಸಂರಕ್ಷಕ ಸಮಿತಿಯ ಅಧ್ಯಕ್ಷರಾಗಿ ದುಡಿದಿದ್ದಾರೆ'.
- 'ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರಿಯ ವರ್ಕಿಂಗ್ ಜರ್ನಲಿಸ್ಟ್ಸ್ ಅಸೋಸಿಯೇಷನ್ ವತಿಯಿಂದ ಪುರಸ್ಕೃತರಾಗಿದ್ದಾರೆ'.
- 'ಮುಲ್ಕಿ ಜರ್ನಲಿಸ್ಟ್ಸ್ ಅಸೋಸಿಯೇಷನ್' ಅವರನ್ನು ಸನ್ಮಾನಿಸಿತು.
ಕೃತಿಗಳು
[ಬದಲಾಯಿಸಿ]- ’ತುಳುನಾಡ ಸಿರಿ’,
- ’ಅಬ್ಬಗ ದರ್ಗ’,
- ’ಹೊಸ ಹೆಂಡತಿ’,
- ’ವರದಕ್ಷಿಣೆ’,
- ’ಅಪ್ಪದ ಮರ’,
- ’ಅಜ್ಜಿ ಹೇಳಿದ ಕಥೆ’,
- ’ಬಾಲರ ಬಂಧು’,
- ’ಸರಸ ವಿರಸ’,
- ’ಬೇವು-ಬೆಲ್ಲ’,
- ’ಕಲಿಯುಗ ಮತ್ತು ಸುಳ್ಳು’,
- ’ಪುಟ್ಟನ ತಲೆಹರಟೆ’,
- ’ಬೊಂಬಾಯಿಯ ವರ’,
- ’ಸಂಜೆ ರಂಗು’,
- ’ಮುಗುಳು ಮಲ್ಲಿಗೆ’,
- ’ಚಿನ್ನರ ಹಾಡುಗಳು’,
- ’ಬಾಲಗೀತೆ’,
- ’ಪುಟ್ಟ ಸ್ವರ್ಗಕ್ಕೆ ಹೋದ’,
- ’ಕಪ್ಪು ಹುಡುಗಿ ಮತ್ತು ಲಕ್ಸ್ ನೊರೆ’.
- ಒಟ್ಟಾರೆ, ಸುಮಾರು ೨೦ ರಷ್ಟು ಕೃತಿಗಳು ಹೊರಬಂದಿವೆ.
' 'ಕೆ.ಜೆ.ಶೆಟ್ಟಿ' ಯವರು, ’ಚಂದನ ಮಾಸಿಕ ಪತ್ರಿಕೆ’ಯ ಸಂಪಾದಕ ಮತ್ತು ಪ್ರಕಾಶಕರಾಗಿದ್ದರು. ’ಕರಾವಳಿ ಮಿತ್ರ’ ಎಂಬ ಸಾಯಂಕಾಲದ ಪತ್ರಿಕೆಗೆ ಸಂಪಾದಕರಾಗಿದ್ದರು.
'ಶೆಟ್ಟಿಯವರು, ಕನ್ನಡ ಚಲನಚಿತ್ರಗಳ ನಿರ್ಮಾಣವನ್ನೂ ಕೈಗೊಂಡರು
[ಬದಲಾಯಿಸಿ]ಚಲನಚಿತ್ರವಾದ 'ತುಳುನಾಡ ಸಿರಿ,' ’ತುಳು ಪಾಡ್ದನದ ಕಥೆ,’ದ್ವಿತೀಯ ಮುದ್ರಣ ಬಿಡುಗಡೆ ಸಮಾರಂಭ,' ೨೦೦೩ ಮೂಡಬಿದ್ರೆ ನಗರದಲ್ಲಿ ಆಯೋಜಿಸಲಾಗಿತ್ತು. ಡಾ. ಮೋಹನ ಆಳ್ವ, ಅಭಯಚಂದ್ರ ಜೈನ್, ಡಾ. ಜೈಪ್ರಕಾಶ್ ಮಾವಿನಕುಳಿ, ಬೋಳ ಚಿತ್ತರಂಜನದಾಸ್ ಶೆಟ್ಟಿ, ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶೆಟ್ಟಿಯವರು ವಿಡಂಬನಾತ್ಮಕ ಬರವಣಿಗೆಗೆ ಎತ್ತಿದ ಕೈ. 'ಪ್ರತಿವ್ಯಂಗೋಕ್ತಿಯ ಹಿಂದೆಯೂ ಒಂದು ಗಂಭೀರವಾದ ನೋವಿನ ಎಳೆಯನ್ನು ನಾವು ಕಾಣುತ್ತೇವೆ' ಎನ್ನುತ್ತಾರೆ, ಶಿಟ್ಟಿಯವರು. 'ಲೋಕೋಕ್ತಿ'
'ಕಡಂದಲೆ ಶೆಟ್ಟಿ' ಯವರಿಗೆ, ಸನ್, ೨೦೦೪ ರಲ್ಲಿ, 'ಅಭಿನಂದನ ಕಾರ್ಯಕ್ರಮ'ವನ್ನು ಹಮ್ಮಿಕೊಳ್ಳಲಾಯಿತು
[ಬದಲಾಯಿಸಿ]ಅವರ ಗೌರವಾರ್ಥವಾಗಿ ಗೆಳೆಯರು, ಮತ್ತು ಕಾವ್ಯಾಸಕ್ತರು 'ಅಭಿನಂದನ ಗ್ರಂಥ', ನಂದನ ಗ್ರಂಥವನ್ನು ಹೊರತರಲು ಸಾಧ್ಯವಾದರು. ಅಭಿನಂದನ ಗ್ರಂಥ, ಕ್ಕೆ, 'ಜೆ.ಡಿ ಶ್ರೀಯಾನ್' ಸಂಘಟನಾ ಕಾರ್ಯದರ್ಶಿಗಳಲ್ಲೊಬ್ಬರಾಗಿದ್ದರು. 'ಕೆ.ಸೋಮನಾಥ ಶೆಟ್ಟಿ', 'ಪ್ರೇಮ್ ನಾಥ್ ಮಂಡ್ಕೂರು', ಮತ್ತು 'ಶ್ರೀನಿವಾಸ ಜೋಕಟ್ಟೆ'ಯವರು, ಪ್ರಧಾನ ಕಾರ್ಯದರ್ಶಿಗಳಾಗಿ ಕೆಲಸಮಾಡಿದರು. 'ರವೀಂದ್ರ ಡಿ'. ಮತ್ತು 'ಪೂಂಜಾ' ಈ ಹೊತ್ತಗೆ ತರುವಲ್ಲಿ ಶ್ರಮಿಸಿ ಓಡಾಟ ನಡೆಸಿದ್ದರು.
ಮರಣ
[ಬದಲಾಯಿಸಿ]ಸನ್, ೨೦೧೦ ರ ಸೆಪ್ಟೆಂಬರ್ ತಿಂಗಳ ೧೫ ನೆಯ ತಾರೀಖು, ಬುಧವಾರ, ಸಂಜೆ, ಕೆ. ಜೆ. ಶೆಟ್ಟಿಯವರು, ನಿಧನರಾದರು. ಮೃತರು ಹೆಂಡತಿ, ಮತ್ತು ೫ ಜನ ಗಂಡುಮಕ್ಕಳು ಮತ್ತು ೫ ಜನ ಹೆಣ್ಣುಮಕ್ಕಳನ್ನು ಅಗಲಿದ್ದಾರೆ.