ಪೀಡೊಫಿಲಿಯಾ (ಶಿಶುಕಾಮ)
ಪೀಡೊಫಿಲಿಆ [ಇಂಗ್ಲಿಷ್: Pedophilia / Paedophilia ಪೀಡೊಫಿಲಿಆ] ಎನ್ನುವುದು ವಯಸ್ಕರು ಮಗುವಿನ ಅಥವಾ ಮಕ್ಕಳ ಮೇಲೆ ಹೊಂದಿದಂತ ಲೈಂಗಿಕ ದೃಷ್ಟಿಕೋನ ಅಥವಾ ವಯಸ್ಕರು ಹಾಗು ಮಕ್ಕಳ ನಡುವಿನ ಲೈಂಗಿಕ ಚಟುವಟಿಕೆಯಾಗಿದೆ. [೧]
ಪೀಡೊಫಿಲಿಆವನ್ನು ವೈದ್ಯಕೀಯ ಕ್ಷೇತ್ರದಲ್ಲಿ ಒಂದು ಪ್ಯಾರಾಫಿಲಿಆ (paraphilia) (ಅಂದರೆ ಅಸಾಧಾರಣ ಲೈಂಗಿಕ ವ್ಯಾಮೋಹ ಮತ್ತು/ಅಥವಾ ಲೈಂಗಿಕ ಚಟುವಟಿಕೆ) ಎಂತಲೂ ಹಾಗೂ ಅದರ ಪುನಾರವರ್ತಿತ ಹಾಗು ತೀವ್ರ ಸ್ವರೂಪದ ಸ್ಥಿತಿಯನ್ನು ಒಂದು ಅಸ್ತವ್ಯಸ್ತತೆ (disorder) ಎಂತಲೂ ಪರಿಗಣೆಸಲಾಗುತ್ತದೆ. [೨] ವಿಶ್ವ ಆರೋಗ್ಯ ಸಂಘಟನೆಯ (WHO) ಐಸಿಡಿ-೧೦ರ (ICD-10) ೨೦೧೫ನೇ ಆವೃತ್ತಿಯಲ್ಲಿ ಇದನ್ನು "ಸಾಮಾನ್ಯವಾಗಿ ಪ್ರಾಯಕ್ಕೆ ಮುಂಚಿನ ಅಥವಾ ಪ್ರಾಯಕ್ಕೆ ಸಮೀಪದ ವಯಸ್ಸಿನ ಮಕ್ಕಳ, ಹುಡುಗರ ಅಥವಾ ಹುಡುಗಿಯರ ಅಥವಾ ಇಬ್ಬರ ಮೇಲಿನ ಒಂದು ಲೈಂಗಿಕ ವ್ಯಾಮೋಹ" ["A sexual preference for children, boys or girls or both, usually of prepubertal or early pubertal age".] ಎಂಬುದಾಗಿ ವ್ಯಾಖ್ಯಾನಿಸಲಾಗಿದೆ. [೩]
ವ್ಯುತ್ಪತ್ತಿ
[ಬದಲಾಯಿಸಿ]- 'ಪೀಡೊಫಿಲಿಆ' ಎಂಬ ಪದದ ಮೂಲ ಗ್ರೀಕ್‌ನ 'ಪೈಡೊಫಿಲಿಆ' (παιδοφιλια paidophilia) - 'ಪೈಸ್' (παις pais : ಮಗು) ಮತ್ತು 'ಫಿಲಿಆ' (φιλια philea : ಒಲವು, ಇಚ್ಚೆ) ಎಂಬುದಾಗಿದೆ.
- ಪೈಡೊಫಿಲಿಆ ಎಂಬ ಪದವು ಗ್ರೀಕ್ ಕವಿಗಳಿಂದ ಪೈಡೆರಾಸ್ಟಿಆ (paiderastia) ಎಂಬ ಪದದ ಪರ್ಯಾಯವಾಗಿ ರಚನೆಯಾಯಿತು.
- ೧೮೮೬ ರಲ್ಲಿ 'ಪೀಡೊಫಿಲಿಆ ಏರೋಟಿಕಾ' (paedophilia erotica) ಎಂಬ ಪದವನ್ನು ಆಸ್ಟ್ರೋ-ಜರ್ಮನಿಯ ಮನೋವೈದ್ಯ ರಿಚರ್ಡ್ ವೊನ್ ಕ್ರಾಫ಼್ಟ್-ಎಬಿಂಗ್ (Richard Von Krafft-Ebing) ಎಂಬುವವರು ಅವರ ಸೈಕೊಪಾತಿಆ ಸೆಕ್ಸ್ಯ್^ಆಲಿಸ್ (Psychopathia Sexualis) ಎಂಬ ಬರಹದಲ್ಲಿ ಬಳಸಿದರು.
- ೨೦ನೇ ಶತಮಾನದಿಂದ 'ಫಿಡೊಫಿಲಿಆ' ಎಂಬ ಪದವನ್ನು ಈಗಿನ ಅರ್ಥದಂತೆ ಬಳಸಲಾಗುತ್ತಿದೆ. [೪]
ವಿಧಗಳು
[ಬದಲಾಯಿಸಿ]- ಹೆಬೀಫಿಲಿಆ (hebephilia) : ಇದು ವಯಸ್ಕರು ಪ್ರಾಯಕ್ಕೆ ಸಮೀಪದ ವಯಸ್ಸಿನ ಮಕ್ಕಳ (ಸಾಮಾನ್ಯವಾಗಿ ೧೧-೧೪ ವಯಸ್ಸಿನ) ಮೇಲೆ ಹೊಂದಿದಂತ ಲೈಂಗಿಕ ವ್ಯಾಮೋಹವಾಗಿದೆ. [೫]
- ನೆಪಿಒಫಿಲಿಆ ಅಥವಾ ಇನ್^ಫ್ಯಾ಼ನ್ಟೊಫಿಲಿಆ (nepiophilia or infantophilia) : ಇದು ವಯಸ್ಕರು ಎಳೆಯ ಮಕ್ಕಳ (ಸಾಮಾನ್ಯವಾಗಿ ೦-೩ ವಯಸ್ಸಿನ) ಮೇಲೆ ಹೊಂದಿದಂತ ಲೈಂಗಿಕ ವ್ಯಾಮೋಹವಾಗಿದೆ. [೬] ಇದು ಸಾಮಾನ್ಯವಾಗಿ ಅತ್ಯಂತ ವಿರಳವಾಗಿ ಕಂಡುಬರುತ್ತದೆ.
ಪೀಡೊಫೈಲ್
[ಬದಲಾಯಿಸಿ]ಮಗು ಅಥವಾ ಮಕ್ಕಳ ಮೇಲೆ ಲೈಂಗಿಕ ದೃಷ್ಟಿಕೋನವನ್ನು ಹೊಂದಿರುವ ವಯಸ್ಕನನ್ನು ಪೀಡೊಫೈಲ್ (pedophile or paedophile) ಎನ್ನಲಾಗುತ್ತದೆ. [೭] ಪೀಡೊಫೈಲ್ ಪುರುಷ ಅಥವಾ ಸ್ತ್ರೀ ಆಗಿರಬಹುದು ಆದರೆ ಸಾಮಾನ್ಯವಾಗಿ ಪೀಡೊಫೈಲ್^ಗಳಲ್ಲಿ ಹೆಚ್ಚಿನವರು ಪುರುಷರಾಗಿರುತ್ತಾರೆ.
ಜನಸಂಖ್ಯೆ
[ಬದಲಾಯಿಸಿ]ಸಾಮಾಜಿಕ ನೋಟ
[ಬದಲಾಯಿಸಿ]ಪೀಡೊಫಿಲಿಆವು ಸಮಾಜ ಹಾಗು ಕಾನೂನು ಬಾಹಿರವಾದಂತ ಒಂದು ಪ್ರಕಾರದ ಲೈಂಗಿಕತೆಯಾಗಿದ್ದು, ಸಮಾಜಗಳಲ್ಲಿ ಇದನ್ನು ಒಂದು ಅತ್ಯಂತ ಹೀನ ಕೃತ್ಯ ಹಾಗು ಅಪರಾಧ ಎಂಬಂತೆ ಪರಿಗಣೆಸಲಾಗುತ್ತದೆ. ಈ ರೀತಿಯ ಲೈಂಗಿಕತೆಯಲ್ಲಿ ತೂಡಗುವ ವ್ಯಕ್ತಿಗಳ ವಿರುದ್ಧ ಹೆಚ್ಚಿನ ಆಕ್ರೋಶ ವ್ಯಕ್ತವಾಗುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಹಾಗೆಯೇ ಪೀಡೊಫಿಲಿಆ ಹಾಗೂ ಮಕ್ಕಳ ಲೈಂಗಿಕ ಅತ್ಯಚಾರಕ್ಕು ಸಾಕಷ್ಟು ವ್ಯತ್ಯಾಸಗಳಿದ್ದಾಗ್ಯೂ ಸಮಾಜಗಳಲ್ಲಿ ಅವೆರಡನ್ನೂ ಸಾಮಾನ್ಯವಾಗಿ ಒಂದೇ ರೀತಿಯಾಗಿ ಪರಿಗಣಿಸಲಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ ನಿಘಂಟುಗಳಲ್ಲಿ 'ಪೀಡೊಫಿಲಿಆ'ವನ್ನು ಅರ್ಥೈಸಿರುವಂತೆ ೧) ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿನಲ್ಲಿ 'ಪೀಡೊಫಿಲಿಆ'ವನ್ನು ಅರ್ಥೈಸಿರುವಂತೆ www
.oxfordlearnersdictionaries .com /definition /english /pedophilia, ೨) ವಿಕಿಟಿಅನರಿ ಇಂಗ್ಲಿಷ್ ನಿಘಂಟಿನಲ್ಲಿ 'ಪೀಡೊಫಿಲಿಆ'ವನ್ನು ಅರ್ಥೈಸಿರುವಂತೆ en .m .wiktionary .org /wiki /pedophilia #English. - ↑ ೧) www
.newworldencyclopedia .org /entry /Pedophilia, ೨) the-medical-dictionary .com /triptorelin _article _5 .htm. - ↑ ಐಸಿಡಿ-೧೦ರ ೨೦೧೫ನೇ ಆವೃತ್ತಿಯಲ್ಲಿ ಎಫ಼್೬೫.೪ ಅನ್ನು ನೋಡಿ apps
.who .int /classifications /icd10 /browse /2015 /en # /F65 .4 - ↑ ೧)ವಿಕಿಟಿಅನರಿ ಇಂಗ್ಲಿಷ್ ನಿಘಂಟಿನಲ್ಲಿ ತಿಳಿಸಿರುವಂತೆ en
.m .wiktionary .org /wiki /pedophilia #English, ೨) ನ್ಯೂ ವರ್ಲ್ಡ್ ವಿಶ್ವಕೋಶದಲ್ಲಿ ತಿಳಿಸಿರುವಂತೆ www .newworldencyclopedia .org /entry /Pedophilia. - ↑ ೧) www
.psychologytoday .com /basics /hebephilia - ↑ ೧) psychology
.wikia .com /wiki /Nepiophilia, ೨) www .thefreedictionary .com /Nepiophilia. - ↑ ನಿಘಂಟುಗಳಲ್ಲಿ 'ಪೀಡೊಫೈಲ್'ಅನ್ನು ಅರ್ಥೈಸಿರುವಂತೆ : ೧) ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟಿನಲ್ಲಿ 'ಪೀಡೊಫೈಲ್'ಅನ್ನು ಅರ್ಥೈಸಿರುವಂತೆ www
.oxfordlearnersdictionaries .com /definition /english /paedophile, ೨) ಕೇಂಬ್ರಿಡ್ಜ್ ಇಂಗ್ಲಿಷ್ ನಿಘಂಟಿನಲ್ಲಿ 'ಪೀಡೊಫೈಲ್'ಅನ್ನು ಅರ್ಥೈಸಿರುವಂತೆ dictionary .cambridge .org /dictionary /british /paedophile.