ವಿಷಯಕ್ಕೆ ಹೋಗು

ಡಿ. ವಿ. ಕೆ. ಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

(೧೯೨೬ ರ ಮೇ, ೯-೨೦೦೯, ಡಿಸೆಂಬರ್, ೯)

ಮೈಸೂರಿನ ಹೆಮ್ಮೆಯ ಪುಸ್ತಕ ಪ್ರಕಾಶಕ, ದಿವಂಗತ, ಶ್ರೀ.ಡಿ.ವಿ.ಕೆ.ಮೂರ್ತಿಯವರು,[] ಮೌಲಿಕ ಕೃತಿಗಳನ್ನು ಸುಂದರವಾಗಿ ಪ್ರಕಟಿಸಿ, ಜನರಿಗೆ ಕೈಗೆಟುಕುವ ಮಾದರಿಯಲ್ಲಿ ವಿತರಿಸುತ್ತಿದ್ದರು. ಈ ಸಾಹಿತ್ಯಿಕ-ಕಾರ್ಯ, ಅವರಿಗೆ, ಧನ್ಯತಾ ಭಾವವನ್ನು ತಂದಿತ್ತು.

ಮೂರ್ತಿಯವರ ಪರಿವಾರ

[ಬದಲಾಯಿಸಿ]

ತಂದೆ, ಪಂಡಿತರತ್ನಂ ವಾಸುದೇವಾಚಾರ್ಯ, ತಾಯಿ ರುಕ್ಮಿಣಮ್ಮನವರು. ಕೋಲಾರಜಿಲ್ಲೆಯ ಬೇತಮಂಗಲಗ್ರಾಮದಲ್ಲಿ ೧೯೨೬ ರ ಮೇ ೯ ರಂದು ಜನಿಸಿದರು. ಡಿ. ವಿ .ಕೆ. ಮೂರ್ತಿ, ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಎ.(ಆನರ್ಸ್) ಮಾಡಿ, ಅರ್ಥಶಾಸ್ತ್ರದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು. ಅವರಿಗೆ 'ಬಾಲಮಣಿ ಚಿನ್ನದ ಪದಕ' ದೊರೆಯಿತು. ಡಿ. ವಿ .ಕೆ. ಮೂರ್ತಿ, ೭ ವರ್ಷಗಳ ಕಾಲ, ಆರ್ಷಪದ್ಧತಿಯಲ್ಲಿ, ವೇದಾಧ್ಯಯನ ಮಾಡಿದರು. ಸಾಂಖ್ಯ ಲೋಕಾಯತ ತತ್ವಗಳು ಅವರ ಜೀವನದುದ್ದಕ್ಕೂ ಮಾರ್ಗದರ್ಶನಮಾಡಿದವು. ಪ್ರೊ. ವಿ. ಎಲ್. ಡಿ’ಸೊಝ ರವರು, ಮೂರ್ತಿಯವರನ್ನು ಅರ್ಥಶಾಸ್ತ್ರ-ವಿಭಾಗದಲ್ಲಿ ಅಧ್ಯಾಪಕನಾಗಬೇಕೆಂಬ ಆಶೆ ಹೊಂದಿದ್ದರು. ಮುಂಬಯಿನ ಪ್ರೊ. ಎಸ್. ಕೆ. ಮುನಿರಂಜನ್, ಸಂಶೋಧನ ಕ್ಷೇತ್ರಕ್ಕೆ ಆಹ್ವಾನಿಸಿದರು. ಮುಂಬಯಿ ವಿಶ್ವವಿದ್ಯಾಲಯದಲ್ಲಿ ಅದಕ್ಕೆ ಬೇಕಾದ ಶಿಷ್ಯವೇತನವನ್ನೂ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು. ಡಿ,ವಿ.ಕೆ ಅವರು ಇವ್ಯಾವುದಕ್ಕೂ ಮನಕೊಡದೆ, ತಮ್ಮ ಬಂಧುಗಳು ನಡೆಸಿಕೊಂಡು ಬಂದ, ಪುಸ್ತಕ ಪ್ರಕಟಣೆಯನ್ನೇ ಸ್ವತಂತ್ರ್ಯವಾಗಿ ಮುಂದುವರೆಸಿಕೊಂಡು ಹೋಗುವುದಾಗಿ ನಿರ್ಧರಿಸಿದರು.

ಪಾರಿವಾಳ-ಹಕ್ಕಿಗಳನ್ನು ಸಾಕುವ ಹವ್ಯಾಸವಿತ್ತು

[ಬದಲಾಯಿಸಿ]

ಡಿ. ವಿ .ಕೆ. ಮೂರ್ತಿಯವರಿಗೆ, ಪಾರಿವಾಳದ ಹಕ್ಕಿಗಳನ್ನು ಪೋಷಿಸುವ ಮತ್ತು ಮಾರುವ ಹವ್ಯಾಸದಲ್ಲೂ ಆಸಕ್ತಿ ತೋರಿಸಿದರು. ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ಉಗ್ರಾಣವೊಂದನ್ನು ಕಿರಾಯಕ್ಕೆ ಪಡೆದು,ಕಾಗದ ಮಾರಾಟ ಪ್ರಾರಂಭಿಸಿದರು. ಕಚೇರಿಗಳಿಗೆ ಬೇಕಾದ ಲೇಖನ ಸಾಮಗ್ರಿಗಳನ್ನು ಕಾರ್ಖಾನೆಗೆ ಕಳಿಸುತ್ತಿದ್ದರು. ಹಳೆಯ ರದ್ದಿ ಕಾಗದವನ್ನು ಸಂಗ್ರಹಿಸಿ ತಮ್ಮದೇ ಆದ ಪ್ರಕಾಶನ ಸಂಸ್ಥೆಯೊಂದನ್ನು ಶುರುಮಾಡಿದರು.

  • ಪ್ರಚಾರ ಸಾಹಿತ್ಯ ಮಾಲೆ (೧೯೪೬)
  • ಹಂಸ ಸಾಹಿತ್ಯ (೧೯೪೮)
  • ಸಾಹಿತ್ಯ ವಾಹಿನಿ,
  • ಡಿ.ವಿ.ಕೆ ಮೂರ್ತಿ ಪ್ರಕಾಶನ. ಇವೇ ಮೂರ್ತಿಯವರ ಪ್ರಕಾಶನಗಳು

ಈ ಸಂಸ್ಥೆಗಳು ಇದುವರೆಗೆ ಸುಮಾರು ೫೦೦ ಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತಂದಿವೆ. ಸುಪ್ರಸಿದ್ಧ ಲೇಖಕರುಗಳು, ಪುತಿನ, ಅನಕೃ, ಡಿ ಎಲ್.ಎನ್, ದೇವುಡು, ತರಾಸು, ತ್ರಿವೇಣಿ, ವಾಣಿ, ಎಂ.ಕೆ.ಇಂದಿರ, ಅನುಪಮ ನಿರಂಜನ, ಕೆ.ಎಸ್.ಎನ್, ನಿರಂಜನ,ಮುಂತಾದವರು.

ಮುಂಬಯಿನಲ್ಲಿ ಕಂಡ ಕಾರ್ಮಿಕರ ಕಾರ್ಪಣ್ಯದ ಜೀವನಶೈಲಿ, ಗಾಢವಾಗಿ ನಾಟಿತ್ತು

[ಬದಲಾಯಿಸಿ]

ಮುಂಬಯಿನಲ್ಲಿ ಡಿವಿಕೆ ಗೆ ಮಾರ್ಕ್ಸ್ ಸಿದ್ಧಾಂತ ಮನವರಿಕೆಯಾಯಿತು. ಕಾರ್ಮಿಕರ ದೀನ ಸ್ಥಿತಿಯನ್ನು ಅವರು ಕಣ್ಣಾರೆ ಕಂಡಾಗ ಈ ಪರಿವರ್ತನೆಯಾಯಿತು. ಇಂಗ್ಲೀಷ್, ಫ್ರೆಂಚ್, ಜರ್ಮನ್, ರಷ್ಯನ್ ಭಾಷೆಗಳ ತತ್ವಜ್ಞಾನಿಗಳ ಸಾಹಿತ್ಯ, ಸೌಂದರ್ಯ, ಮೀಮಾಂಸೆಗಳನ್ನು ಕೃತಿಗಳನ್ನು ಚೆನ್ನಾಗಿ ಅಭ್ಯಾಸಮಾಡಿದರು. ಭಾರತೀಯ ಕೃತಿಗಳಾದ, ಬಂಕಿಂಚಂದ್ರ, ಶರತ್ಚಂದ್ರ, ಪ್ರೇಮ್ ಚಂದ್ ರನ್ನು ಓದಿದರು. ಕಾರಂತ, ಅನಕೃ, ಮತ್ತಿತರ ಕೃತಿಗಳನ್ನೂ ಅಭ್ಯಾಸಮಾಡಿದರು. ೧೯೫೬ ರಲ್ಲಿ ತಮ್ಮ ಆಪ್ತ ಸ್ನೇಹಿತರೊಡಗೂಡಿ, ಇಂಡೋ ಸೋವಿಯತ್ ಸೊಸೈಟಿ ಯ ಸ್ಥಾಪನೆಮಾಡಿ ಅದರ ಅಧ್ಯಕ್ಷರಾದರು.

ಸಮಾಜವಾದ,’ ಅವರನ್ನು ತೀವ್ರವಾಗಿ ಆಕರ್ಷಿಸಿತ್ತು

[ಬದಲಾಯಿಸಿ]

ಸಮಾಜವಾದದ ಅಧ್ಯಯನದಿಂದ ಡಿ. ವಿ .ಕೆ. ಮೂರ್ತಿಯವರು, ಮಹಾನ್ ಮಾನವತಾವಾದಿಯಾದರು. ತಾವು ಆರಿಸಿಕೊಂಡ ವೃತ್ತಿ ಪುಸ್ತಕಪ್ರಕಾಶನದಲ್ಲಿ ಜನರ ನಿರೀಕ್ಷೆಯೆಂದರೆ, ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಪುಸ್ತಕಗಳ ಬೆಲೆ, ಕೈಗೆಟುಕುವಂತಿರಬೇಕು. ಲೇಕಕರಿಗೆ ಗೌರವ-ಧನವನ್ನು ಅವರು ತಕ್ಷಣ ಕೊಡುತ್ತಿದ್ದರು.

'ಅನುಪಮ ನಿರಂಜನರ' ’ತಾಯಿ ಮಗು’-(೩೭ ಬಾರಿ ಪ್ರಕಟಣೆ)

'ಎ.ಎನ್.ಮೂರ್ತಿರಾಯರ ದೇವರು',-(೧೭ ಬಾರಿ ಪ್ರಕಟಿತ)

'ದಾಂಪತ್ಯ ದೀಪಿಕೆ', ಮತ್ತು, ’ದಿನಕ್ಕೊಂದು ಕಥೆ,’ ಮುಂತಾದ ಕೃತಿಗಳನ್ನು ಅತಿ ಕಡಿಮೆ ಬೆಲೆಗೆ ಮಾರಿದರು.

ಡಿ. ವಿ .ಕೆ. ಮೂರ್ತಿ, ಸ್ವತಃ ಒಬ್ಬ ಒಳ್ಳೆಯ ಲೇಖಕರು

[ಬದಲಾಯಿಸಿ]

ವಿದ್ವತ್ಪೂರ್ಣ ಕೃತಿಗಳನ್ನು ತಾವೇ ಖುದ್ದಾಗಿ ರಚಿಸಿದರು. ಅವುಗಳಲ್ಲಿ ಕೆಲವು ಪ್ರಮುಖ ಕೃತಿಗಳು ಹೀಗಿವೆ.

  • 'ಪರದೆಯ ಹಿಂದೆ',
  • 'ವೆಂಕಪ್ಪಯ್ಯನ ಕೊನೆಯ ಅಕ್ಷರಗಳು',
  • 'ಜೀವನ ಮೌಲ್ಯಗಳು, ಮತ್ತು ಸಾಹಿತ್ಯ',
  • 'ಬಾಳ್ವೆಯ ದರ್ಶನ', (ಅನುವಾದ), ಇವು ಮೂರ್ತಿಯವರ ಉಪಯುಕ್ತ ಕೃತಿಗಳು.

ಡಿ.ವಿ.ಕೆ, ತಾವೂ ಬೆಳೆದು, ಇತರ ಸಂಸ್ಥೆಗಳೂ ಬೆಳೆಯಲು ಶ್ರಮಿಸಿದರು

[ಬದಲಾಯಿಸಿ]

’ಮಂಗಳೂರಿನ ಅತ್ರಿ ಬುಕ್ ಸೆಂಟರ್’, ’ಮೈಸೂರಿನ ಮೂರ್ತಿ ಬುಕ್ ಹೌಸ್’, ’ರವಿ ಬುಕ್ ಹೌಸ್,’ ’ಅಭಿರುಚಿ ಪ್ರಕಾಶನ’, ಗಳನ್ನು ಬೆಳೆಯಲು ತಮ್ಮ ಅನುಪಮಸಹಾಯ ಹಾಗೂ ಪ್ರೋತ್ಸಾಹಗಳನ್ನು ನೀಡಿದರು.

ಪ್ರಶಸ್ತಿ ಪುರಸ್ಕಾರಗಳು

[ಬದಲಾಯಿಸಿ]
  • ಕನ್ನಡ ಪ್ರಾಧಿಕಾರದ ಮುಖ್ಯಸ್ಥ, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಡಿ ವಿ ಕೆ ರವರಿಗೆ ’೨೦೦೨ ರ ಸಾಲಿನ ಶ್ರೇಷ್ಠ ಪುಸ್ತಕ ಪ್ರಕಾಶಕ ಪ್ರಶಸ್ತಿ’ ನೀಡಲು ಮುಂದಾದರು.
  • ೬ ದಶಕಗಳ ದೀರ್ಘಾವಧಿಯಲ್ಲಿ, ಮಾದರಿ ಪುಸ್ತಕ ಪ್ರಕಾಶನಾಲಯದಿಂದ ಸಾಮಾಜಿಕ ಬದ್ಧತೆಯನ್ನು ಗುರಿಯಾಗಿಟ್ಟುಕೊಂಡು, ಉತ್ತಮ ಗುಣಮಟ್ಟದ ಸಾಹಿತ್ಯದ ಪುಸ್ತಕಗಳನ್ನು, ಅತ್ಯಂತ ಕಡಿಮೆ ಬೆಲೆಯಲ್ಲಿ ಒದಗಿಸುತ್ತಿರುವುದು ಜನತೆಗೆ ಒಪ್ಪಿಗೆಯಾಗಿದೆ. ಆ ಗುರಿಯನ್ನು ಸದಾ ಕಾಪಾಡಿಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದುವುದು ಅತಿಮುಖ್ಯ. ಆದ್ದರಿಂದ ಸರಕಾರ ಘೋಷಿಸುವ ಪ್ರಶಸ್ತಿಗಳನ್ನು ಅವರು, ಒಪ್ಪಿಕೊಳ್ಳಲಿಲ್ಲ.

೨೦೦೯ ರ ಡಿಸೆಂಬರ್, ೯ ನೇ ತಾರೀಖಿನಂದು ಮೂರ್ತಿಯವರು ನಿಧನರಾದರು. ಕೊನೆಯವರೆವಿಗೂ ಸಾಹಿತ್ಯ ಪ್ರಕಾಶನಕ್ಕೆ ಅವರು ತೋರಿಸಿದ ಸಾಮಾಜಿಕ-ಬದ್ಧತೆ, ಹಾಗೂ, ಮೌಲಿಕ ಸಾಹಿತ್ಯವನ್ನು ಜನಸಾಮಾನ್ಯರಿಗೆ ಒದಗಿಸುವ ಕಾರ್ಯವೈಖರಿ,ಮಾದರಿಯಾಗಿದೆ.

ಉಲ್ಲೇಖಗಳು

[ಬದಲಾಯಿಸಿ]


<References / >