ವಿಷಯಕ್ಕೆ ಹೋಗು

ಚಿರಾಯು ಅಮಿನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿರಾಯು ಅಮಿನ್ ವಡೋದರ ನಗರದ ಉದ್ಯಮಿ. ಅವರು ಅಲ್ಲಿನ ಅಲೆಂಬಿಕ್ ಫಾರ್ಮಸಿಟಿಕಲ್ ಕಂಪೆನಿಯ ಮುಖ್ಯವ್ಯವಸ್ಥಾಪಕ ನಿರ್ದೇಶಕರಾಗಿ ಕೆಲಸಮಾಡುತ್ತಿದ್ದಾರೆ. 'ಅಲೆಂಬಿಕ್ ಕಂಪೆನಿಗೆ ಸುಮಾರು ನೂರು ವರ್ಷಗಳ ಇತಿಹಾಸವಿದೆ'. ಇದರ ವ್ಯವಹಾರ ೧,೨೦೦ ಕೋಟಿಗೂ ಮಿಗಿಲಾಗಿದೆ.

ಚಿರಾಯು ಅಮೀನರ ವೃತ್ತಾಂತ

[ಬದಲಾಯಿಸಿ]

ಬಿ ಎಸ್. ಸಿ; ಎಂ.ಬಿ.ಎ; ಪದವೀಧರರಾಗಿರುವ, ಚಿರಾಯು ಅಮೀನ್ ರವರು, ಗುಜರಾತ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಅಡಳಿತಗಾರರಾಗಿ ಆರಂಭಮಾಡಿ ಬರೋಡ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ, ಬಿ ಸಿ. ಸಿ ಐ ನ ಉಪಾಧ್ಯಕ್ಷ, ಮಂಡಳಿಯ ಮಾರುಕಟ್ಟೆ ಸಮಿತಿಯ ಸದಸ್ಯರಾಗಿದ್ದರು. ಸನ್ ೨೦೦೪ ರಲ್ಲಿ ಅವರ ಒಲವು ಕ್ರಿಕೆಟ್ ಆಡಳಿತದ ಕಡೆಗೆ ವಾಲಿತು. ಈ ಹಿಂದೆ ಎಫ್.ಐ.ಸಿ.ಸಿ.ಐ.ನ ಅಧ್ಯಕ್ಷಸ್ಥಾನದಲ್ಲಿದ್ದ ಅಮೀನ್, ಮಾರುಕಟ್ಟೆ ಹಾಗೂ ಹಣಕಾಸಿನ ವ್ಯವಹಾರಗಳಲ್ಲಿ ಅತ್ಯುತ್ತಮ ಅನುಭವಿಯಾದ್ದರಿಂದ, ಅವರನ್ನು ಹಂಗಾಮಿಯಾಗಿ ಐಪಿಎಲ್ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಐಪಿಎಲ್ ನ ಮಾಜಿ-ಅಧ್ಯಕ್ಷಶ್ರೀ.ಲಲಿತ್ ಮೋದಿಯವರನ್ನು ಅಧಿಕಾರದಿಂದ ಕೆಳಗಿಳಿಸಿದ್ದರ ಫಲವಾಗಿ, ಈ ಕ್ರಮವನ್ನು ಅನುಸರಿಸಲಾಗಿದೆ.

ಚಿರಾಯುರವರ ಪರಿವಾರ

[ಬದಲಾಯಿಸಿ]

ಅಮೀನ್ ರವರ ಪತ್ನಿ, 'ಮಲ್ಲಿಕಾ,' ಅಲೆಂಬಿಕ್ ಕಂಪೆನಿಯ ನಿರ್ದೇಶಕಿಯಾಗಿದ್ದಾರೆ. ಈ ದಂಪತಿಗಳಿಗೆ ೩ ಮಕ್ಕಳಿದ್ದು ಅವರೆಲ್ಲರೂ ಅಲೆಂಬಿಕ್ ಕಂಪೆನಿಯ ಆಡಳಿತದಲ್ಲಿ ಆಸಕ್ತಿ ವಹಿಸಿಕೊಂಡು ಕೆಲಸಮಾಡುತ್ತಿದ್ದಾರೆ. ಚಿರಾಯು ಕ್ರಿಕೆಟ್ ಅಲ್ಲದೆ 'ಗಾಲ್ಫ್' ಆಟದಲ್ಲೂ ಆಸಕ್ತರು.

[[https://web.archive.org/web/20100305175613/http://www.expresspharmaonline.com/20090131/anniversaryspecial07.shtml Archived 2010-03-05 ವೇಬ್ಯಾಕ್ ಮೆಷಿನ್ ನಲ್ಲಿ.]]