ನೇರುಲ್ ಬಾಲಾಜಿ ಮಂದಿರ್, ನವಿ ಮುಂಬೈ, ಮಹಾರಾಷ್ಟ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
'ನೇರುಲ್ ನಲ್ಲಿರುವ ಬಾಲಾಜಿ ಮಂದಿರ'

'ಬಾಲಾಜಿ ದೇವಸ್ಥಾನದ ಪ್ರಧಾನ ದ್ವಾರದಲ್ಲಿನ ರಾಜಗೋಪುರ'[ಬದಲಾಯಿಸಿ]

ನೇರುಲ್ ನಲ್ಲಿರುವ ಬಾಲಾಜಿಮಂದಿರದ ಒಂದು ವಿಶೇಷತೆಯೆಂದರೆ, ಅದು ತಿರುಪತಿಯಂತೆ ಎತ್ತರದ ಬೆಟ್ಟವಲ್ಲದಿದ್ದರೂ ಚಿಕ್ಕ ಬೆಟ್ಟದಮೇಲಿದೆ. 'ನೇರುಲ್ ರೈಲ್ವೆ ನಿಲ್ದಾಣ'(ಪಶ್ಚಿಮ)ದೇವಸ್ಥಾನಕ್ಕೆ ಸಮೀಪವಾಗಿದೆ. ಈ ಸನ್ನಿಧಾನದ ಪ್ರಮುಖವಾದ ಆರಾಧ್ಯದೇವತೆ ವೆಂಕಟರಮಣದೇವರಾದರೂ ಗಣಪತಿ, ಯೋಗಮುದ್ರೆ ಭಂಗಿಯಯಲ್ಲಿ ಕುಳಿತಿರುವ, ಆಂಜನೇಯಸ್ವಾಮಿ, ನರಸಿಂಹಸ್ವಾಮಿ, ಮತ್ತು ಪದ್ಮಾವತಿ ಅಮ್ಮನವರ ದೇವಾಲಯಗಳಿವೆ. ರಾಮಾನುಜಾಚಾರ್ಯರ ಸನ್ನಿಧಾನವನ್ನೂ ಪಕ್ಕದಲ್ಲಿ ಕಾಣಬಹುದು. ದಕ್ಷಿಣದ ದೇವಾಲಯಗಳ ಪರಂಪರೆಯಂತೆ ಬಾಲಾಜಿಮಂದಿರದ ಪರಿಸರದಲ್ಲಿ ಸಾಮಾನ್ಯವಾಗಿ ಗಣಪತಿಯ ದೇವಾಲಯವಿರುವುದು ಅತಿ ವಿರಳ. ಆದರೆ ಗಣಪತಿಯ ಪೂಜೆಯ ಪರಂಪರೆ ಮಹಾರಾಷ್ಟ್ರದಲ್ಲಿ ಅತ್ಯಧಿಕವಾಗಿರುವುದರಿಂದ ಮಹಾಗಣಪತಿಯ ವಿಗ್ರಹದ ಪ್ರತಿಷ್ಠಾಪನೆಯ ಏರ್ಪಾಡನ್ನು ಮಾಡಲಾಗಿದೆ.'ನೇರುಲ್'(ಪೂ)ದಲ್ಲಿ 'ಆಂಜನೇಯಸ್ವಾಮಿ ದೇವಾಲಯ'ವಿದೆ.

ನವಗ್ರಹಗಳ ಪ್ರತಿಷ್ಠಾಪನೆಯನ್ನು ದೇವಸ್ಥಾನದ ಹೊರವಲಯದಲ್ಲಿ ಮಾಡಲಾಗಿದೆ[ಬದಲಾಯಿಸಿ]

ಎಲ್ಲಾ ಕಡೆಯಿರುವಂತೆ ನವಗ್ರಹಗಳು ದೇವಾಲಯದ ಒಳಗಡೆಯಿಲ್ಲದೆ, ಮಂದಿರದ ಹೊರವಲಯದಲ್ಲಿ ನಿರ್ಮಿಸಿರುವುದು ಇಲ್ಲಿನ ವಿಶೇಷಗಳಲ್ಲೊಂದು. ದೇವಸ್ಥಾನದ ಆದಿದ್ವಾರದಲ್ಲಿ ೬೦ ಅಡಿಎತ್ತರದ ಭವ್ಯ ರಾಜಗೋಪುರವಿದೆ. ಹತ್ತಿರದಲ್ಲೇ ಪಾದರಕ್ಷೆಯಳನ್ನಿಡಲು ಸ್ಟಾಂಡ್ ಗಳನ್ನು ಹೊಂದಿಸಿರುವ ಒಂದು ಚಿಕ್ಕ ’ಪಾದರಕ್ಷಾಗೃಹ’ವಿದೆ. ಬಾಲಾಜಿ ಗುಡಿಯ ಮುಂಭಾಗದಲ್ಲಿ ಸುಂದರವಾದ ಉದ್ಯಾನವನವನ್ನೂ ನಿರ್ಮಿಸಲಾಗಿದೆ. ಅಲ್ಲಿ ದೊಡ್ಡಮರಗಳ ನೆರಳಿನಲ್ಲಿ ಭಕ್ತರು ವಿಶ್ರಮಿಸಲು ಅನುಕೂಲವಿದೆ. ಸ್ವಲ್ಪ ಬೆಟ್ಟದವಾತಾವಣವಿರುವ ಮಂದಿರವನ್ನು ತಲುಪಲು ಎರಡೂ ಕಡೆಯಲ್ಲಿ ಹತ್ತಿಬರಲು, ಮೆಟ್ಟಿಲುಗಳಿವೆ. ಮಂದಿರದ ಕಡೆಯಿಂದ ಪಾಮ್ ಬೀಚ್ ರಸ್ತೆಯಲ್ಲಿರುವ, ಪಾಮ್ ಮರಗಳನ್ನು ವೀಕ್ಷಿಸಲು ತುಂಬಾ ಚೆನ್ನಾಗಿದೆ. ಅದೇ ರಸ್ತೆಯಲ್ಲಿ ಮುಂದೆ ಸಾಗಿದರೆ, 'ಬೇಲಾಪುರ್' ಮತ್ತು 'ನೇರುಲ್ ಮಾರ್ಗ'ವಾಗಿ, 'ವಾಶಿ' ಯನ್ನು ಸೇರಬಹುದು.

ನೇರುಲ್ ಬಡಾವಣೆಯ ಸುಂದರ ದೃಷ್ಯ ಮುದನೀಡುತ್ತದೆ[ಬದಲಾಯಿಸಿ]

ನೇರುಲ್ ಬಡಾವಣೆಯ,ಪಾಮ್ ಬೀಚ್ ರಸ್ತೆ ಯ ಆಕಡೆಯವರಗಿನ ಮುಂಬಯಿನ ಸುಂದರವಾದ ಕಡಲಿನ ದೃಷ್ಯವನ್ನು ನೋಡಲು,ಮುದವೆನ್ನಿಸುತ್ತದೆ.ನೇರುಲ್ ತಲುಪಲು ರೈಲು ಹಾಗೂ ಬಸ್ ಗಳನ್ನು ಬಳಸಬಹುದು.

'ಹಾರ್ಬರ್ ರೈಲ್ವೆ ಲೈನ್'/'ಕೊಂಕಣ್ ರೈಲ್ವೆ' ಯಲ್ಲಿ 'ನೇರುಲ್' ಸಿಗುತ್ತದೆ[ಬದಲಾಯಿಸಿ]

'ಘಾಟ್ಕೋಪರ್' ನಿಂದ 'ನೇರುಲ್' ತಲುಪಲು, ಸೆಂಟ್ರೆಲ್ ರೈಲ್ವೆಯಲ್ಲಿ ಥಾಣೆ ತಲುಪಿ, ಅಲ್ಲಿ ೯-೧೦ 'ಪ್ಲಾಟ್ ಫಾರಂ' ನಲ್ಲಿ 'ವಾಶಿ ರೈಲು' ಹತ್ತಬೇಕು. ಅಲ್ಲಿಂದ 'ಕೊಂಕಣ ರೈಲ್ವೆ'ಯಲ್ಲಿ 'ನೇರುಲ್' ತಲುಪಬಹುದು.

  • ವಾಶಿ,
  • ಸಾನ್ ಪಾಡ,
  • ಜಯಿ ನಗರ್,
  • ನೇರುಲ್,
  • ಸೀ ವುಡ್,
  • ಬೇಲಾಪುರ್,
  • ಖಾರ್ ಘರ್,
  • ಮಾನಸರೋವರ್,
  • ಖಾಂಡ್ವೇಶ್ವರ್,
  • ಪನ್ವೇಲ್

'ಕುರ್ಲಾ ರೈಲ್ವೆ ಸ್ಟೇಷನ್' ನ ೭-೮ ನೇ 'ಪ್ಲಾಟ್ ಫಾರಂ' ನಿಂದ ಹಾರ್ಬರ್ ಲೈನ್ ಗಾಡಿಯಲ್ಲಿ ಹೊರಟು ವಾಶಿ ತಲುಪಿ, ಅಲ್ಲಿಂದ ಕೊಂಕಣ್ ರೈಲಿನಲ್ಲಿ ಹೋದರೆ, ನೇರುಲ್ ಸಿಗುತ್ತದೆ. 'ನೇರುಲ್ ರೈಲ್ವೆ ನಿಲ್ದಾಣ'ದಿಂದ ವೆಂಕಟೇಶ್ವರ ಮಂದಿರ (ಬಾಲಾಜಿ ಮಂದಿರ)ಕ್ಕೆ 'ರಿಕ್ಷಾ'ದಲ್ಲಿ ಹೋಗುವುದಾದರೆ, ೧೫-೨೦ ರೂಪಾಯಿ 'ಕಿರಾಯ' ಕೊಡಬೇಕಾಗುತ್ತದೆ.

ಬಸ್ ನಲ್ಲಿ ನೇರುಲ್ ತಲುಪುವ ಬಗೆ[ಬದಲಾಯಿಸಿ]

  • ದಾದರ್ ಬಸ್ ನಿಲ್ದಾಣದಿಂದ ೫೧೨ ಬಸ್ 'ನೇರುಲ್ ಬಸ್ ನಿಲ್ದಾಣ'ಕ್ಕೆ ಹೋಗಬಹುದು.
  • ಸಾಂತಾ ಕ್ರುಝ್ ಬಸ್ ನಿಲ್ದಾಣದಿಂದ ನೇರುಲ್ ಗೆ ೫೦೭ ಬಸ್ ಸೌಕರ್ಯವಿದೆ. ಇದು, ಘಾಟ್ಕೋಪರ್, ಭಾಂಡೂಪ್, ಮುಲುಂಡ್, ವಾಶಿಯ ಮುಖಾಂತರ 'ನೇರುಲ್' ರೈಲ್ವೆ ನಿಲ್ದಾಣವನ್ನು ತಲುಪುವುದು.
  • 'ನೇರುಲ್ ಬಸ್ ನಿಲ್ದಾಣ'ದಿಂದ 'ಬಾಲಾಜಿ ಮಂದಿರ' ತಲುಪಲು ೩೦ ರಿಂದ ೩೫ ರೂಪಾಯಿ ರಿಕ್ಷಾ ದರವಿದೆ.