ಮೂತ್ರಪಿಂಡ
ಮೂತ್ರಪಿಂಡಗಳು (ಮೂತ್ರಜನಕಾಂಗ) ಮೂತ್ರದ ಉತ್ಪಾದನೆಯನ್ನು ತಮ್ಮ ಪ್ರಮುಖ ಕಾರ್ಯವಾಗಿ ಹೊಂದಿರುವ ಜೋಡಿಯಾಗಿರುವ ಅಂಗಗಳು. ಮೂತ್ರಪಿಂಡಗಳು, ಕಶೇರುಕಗಳು ಮತ್ತು ಕೆಲವು ಅಕಶೇರುಕಗಳನ್ನು ಒಳಗೊಂಡಂತೆ, ಹಲವು ಪ್ರಕಾರಗಳ ಪ್ರಾಣಿಗಳಲ್ಲಿ ಕಾಣುತ್ತವೆ. ಅವು ವಿಸರ್ಜನಾ ವ್ಯವಸ್ಥೆಯ ಮುಖ್ಯವಾದ ಭಾಗವಾಗಿವೆ, ಜೊತೆಗೆ ಹೋಮಿಯೋಸ್ಟೇಸಿಸ್‌ಗೆ (ಆಂತರಿಕ ಸಮತೋಲನ) ಸಂಬಂಧಿಸಿದಂತೆ ಹಲವು ಆನುಷಂಗಿಕ ಕ್ರಿಯೆಗಳನ್ನು ಹೊಂದಿವೆ.
ಮೂತ್ರಜನಕಾಂಗದ ರಚನೆ
[ಬದಲಾಯಿಸಿ]ಮೂತ್ರಜನಕಾಂಗದ ಅಡ್ಡ ಸೀಳಿಕೆಯಲ್ಲಿ ಹೊರಗಿನ ಕಾಟೆಕ್ಸ್,ಒಳಗಿನ ಮೆಡುಲ್ಲಾಗಳೆಂಬ ಎರಡು ಭಾಗಗಳಿವೆ.ಮೆಡುಲ್ಲಾದಲ್ಲಿ ೮ ರಿಂದ ೧೮ ಪಿರಮಿಡ್ ಆಕಾರದ ರಚನೆಗಳಿರುತ್ತದೆ.ಈ ಪಿರಮಿಡ್ಗಳ ತುದಿಯಲ್ಲಿ ರೀನಲ್ ಪ್ಯಾಪಿಲ್ಲಾಗಳೆಂಬ ಸೂಕ್ಷ್ಮರಂಧ್ರಗಳಿರುತ್ತವೆ.ಪಿರಮಿಡ್ ಗಳು ಒಳಭಾಗದ ಟೊಳ್ಳಾದ ಪೆಲ್ವಿಸ್ಗೆ ಚಾಚಿಕೊಂಡಿರುತ್ತದೆ. ಮೂತ್ರನಾಳ ಪೆಲ್ವಿಸ್ ನಿಂದ ಪ್ರಾರಂಭಗೊಳ್ಳುತ್ತದೆ. ಪ್ರತಿಯೊಂದು ಮೂತ್ರಜನಕಾಂಗದಲ್ಲಿ ೧೦೦೦೦೦೦ ಗಳಷ್ಟು ನೆಫ್ರಾನ್ ಗಳೆಂಬ ಸೂಕ್ಷ್ಮನಳಿಕೆಗಳಿವೆ.ಇವುಗಳ ಜೊತೆಗೆ ರಕ್ತ ಲೋಮನಾಳಗಳು ಮತ್ತು ಸಂಯೋಜಕ ಅಂಗಾಂಶವಿರುತ್ತದೆ.[೧]
ನೆಫ್ರಾನಿನ ರಚನೆ
[ಬದಲಾಯಿಸಿ]ನೆಫ್ರಾನ್ ಮೂತ್ರಜನಕಾಂಗದ ರಚನಾತ್ಮಕ ಮತ್ತು ಕಾರ್ಯನಿವಾಹಕ ಘಟಕಗಳಾಗಿವೆ. ನೆಫ್ರಾನಿನ ಮುಂಭಾಗವು ಬಟ್ಟಲಿನ ಆಕಾರವಾಗಿದೆ.ಇದನ್ನು ಬೌಮನ್ನನ ಹೊದಿಕೆ ಎಂದು ಕರೆಯುತ್ತಾರೆ.ಈ ಕೋಶದ ಗೋಡೆಯಲ್ಲಿ ಎರಡು ಪದರದ ಅನುಲೇಪಕ ಜೀವಕೋಶಗಳು ಇರುತ್ತವೆ. ಬೌಮನ್ನನ ಹೊದಿಕೆಯಿಂದ ಮುಂದೆ ನೆಫ್ರಾನಿನ ನಾಳವು ನುಲಿಚಿಕೊಂಡಿರುತ್ತದೆ.ನಂತರ" U" ಆಕಾರವಾಗಿದೆ.ಇದನ್ನು ಹೆನ್ಲೆಯ ಕುಣಿಕೆ ಎನ್ನುತ್ತಾರೆ.ನಂತರ ನಾಳ ಮತ್ತೆ ನುಲಿಚಿಕೊಂಡು ನೆರೆಯ ನೆಫ್ರಾಗಳಿಂದ ಬರುವ ಗ್ರಾಹಕ ನಾಳಕ್ಕೆ ಸೇರಿ ಪಿರಮಿಡ್ ಗಳ ತುದಿಯಲ್ಲಿರುವ ರೀನಲ್ ಪ್ಯಾಪಿಲ್ಲಗಳ ಮೂಲಕ ಪೆಲ್ವಿಸ್ ಗೆ ತೆರೆಯುತ್ತದೆ.
ಬೌಮನ್ನನ ಹೊದಿಕೆ ಕಾಟೆಕ್ಸ್ ನಲ್ಲಿ ಇರುತ್ತದೆ.ಹೆನ್ಲೆಯ ಕುಣಿಕೆ ಮೆಡುಲ್ಲಾದಲ್ಲಿದ್ದು ನಂತರ ನುಲಿಚಿಕೊಂಡಿರುವ ನಾಳ ಕಾಡೆಕ್ಸನಲ್ಲಿ ಗ್ರಾಹಕ ನಾಳವನ್ನು ಸೇರುತ್ತದೆ. ರೀನಲ್ ಅಪಧಮನಿಯ ಒಂದು ಕವಲು ಬೌಮನ್ನನ ಹೊದಿಕೆಯಲ್ಲಿ ಕೋಶದಲ್ಲಿ ಕವಲೊಡೆದು ಸೂಕ್ಷ್ಮ ಅಪದಮನಿಗಳಾಗುತ್ತವೆ.ಇದನ್ನು ಗ್ಲಾಮರುಲಸ್ ಎಂದು ಕರೆಯುತ್ತಾರೆ.ಸೂಕ್ಷ್ಮನಾಳಗಳು ಮತ್ತೆ ಕೂಡಿಕೊಂಡು ಸಣ್ಣ ಅಪದಮನಿಗಳಾಗಿ ನೆರೆಯ ನೆಫ್ರಾನ್ ಗಳಿಂದ ಬರುವ ಸಣ್ಣ ಅಭಿದಮನಿಗಳೊಂದಿಗೆ ಸೇರಿ ರೀನಲ್ ಅಪಧಮನಿಗಳಾಗುತ್ತದೆ. ಸಸ್ಯಗಳಿಗೆ ಹೋಲಿಸಿದಲ್ಲಿ ಮಾನವನಲ್ಲಿ ಚಲನೆ ಮುಂತಾದ ಚಟುವಟಿಕೆಗಳು ಹೆಚ್ಚು.ಹೀಗಾಗಿ ಮಾನವನಲ್ಲಿ ಶಕ್ತಿಯ ಅವಶ್ಯಕತೆ ಹೆಚ್ಚು. ಈ ಕಾರಣದಿಂದ ಮಾನವನ ದೇಹದಲ್ಲಿ ಹೆಚ್ಚು ತ್ಯಾಜ್ಯ ವಸ್ತುಗಳು ಉತ್ಪತ್ತಿಯಾಗುತ್ತದೆ.ಮಾನವನ ದೇಹದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ವಸ್ತುಗಳೆಂದರೆ,ಕಾರ್ಬನ್ ಡೈ ಆಕ್ಸೈಡ್,ನೀರು,ಲವಣಗಳು ಮತ್ತು ಸಸಾರಜನಕವಸ್ತುಗಳಾದ ಅಮೋನಿಯ,ಕ್ರೆಟನೈನ್,ಯೂರಿಯ ಮತ್ತು ಯೂರಿಕಾಮ್ಲಗಳು. ಕೋಶದಲ್ಲಿ ಉತ್ಪತ್ತಿಯಾದ ಕಾರ್ಬನ್ ಡೈ ಆಕ್ಸೈಡ್ ಹೆಚ್ಚಿನ ಪ್ರಮಾಣದಲ್ಲಿ ಶ್ವಾಸಕೋಶಗಳ ಮೂಲಕ ನಿಶ್ವಾಸದ ಗಾಳಿಯ ಜೊತೆಗೆ ಹೊರಹಾಕಲ್ಪಡುತ್ತದೆ.ಸ್ವಲ್ಪ ಪ್ರಮಾಣದಲ್ಲಿ ಅಮೋನಿಯವನ್ನು ಯೂರಿಯಾವಾಗಿ ಪರಿವರ್ತಿಸಲು ಸಹಾಯ ಮಾಡುತ್ತದೆ ಮತ್ತು ಸ್ವಲ್ಪ ಪ್ರಮಾಣದ ದೇಹದ ಆಮ್ಲೀಯ ಸಮತೋಲನವನ್ನು ಕಾಪಾಡಲು ಬಳಸಲ್ಪಡುತ್ತದೆ.
ಮಾನವನ ದೇಹದಲ್ಲಿ ಯೂರಿಯಾ ಉತ್ಪಾದನೆ
[ಬದಲಾಯಿಸಿ]ಮಾನವನು ಸೇವಿಸಿದ ಪ್ರೋಟಿನ್ಗಳು ಸಂಪೂರ್ಣವಾಗಿ ಜೀರ್ಣವಾದಾಗ ಸರಳ ಕಣಗಳಾದ ಅಮಿನೋ ಆಮ್ಲಗಳಾಗಿ ಪರಿವರ್ತಿಸಲ್ಪಡುತ್ತದೆ ಮತ್ತು ರಕ್ತದಿಂದ ಹೀರಲ್ಪಟ್ಟು ಜೀವಕೋಶಗಳಿಗೆ ಸಾಗಿಸ್ಪಡುತ್ತವೆ.ಕೋಶಗಳು ಅಮೀನೋ ಆಮ್ಲಗಳನ್ನು ಬಳಸಿಕೊಳ್ಳುತ್ತವೆ.ಹೆಚ್ಚಾದ ಅಮೀನೋ ಆಮ್ಲಗಳು ಕೋಶಗಳಲ್ಲಿ ಶೇಖರವಾದರೆ ವಿಷ ವಸ್ತುಗಳಾಗಿ ಪರಿವರ್ತಿಸುತ್ತವೆ.ಆದ್ದರಿಂದ ಅವು ರಕ್ತದ ಮೂಲಕ ಯಕೃತ್ತಿಗೆ ಸಾಗಿಸ್ಪಡುತ್ತವೆ.ಅಲ್ಲಿಯ ಕೋಶಗಳು ಕಲವು ಕಿಣ್ವಗಳ ಮೂಲಕ ಅಮೈನೋ ಆಮ್ಲಗಳನ್ನು ಅಮೋನಿಯವಾಗಿ ಪರಿವರ್ತಿಸುತ್ತದೆ.ಇವು ತಕ್ಷಣ ಕಾರ್ಬನ್ ಡೈ ಆಕ್ಸೇಡ್ ನೊಂದಿಗೆ ಸೇರಿ ಯೂರಿಯಾ ಮತ್ತು ಸ್ವಲ್ಪ ಪ್ರಮಾಣದ ಯೂರಿಕಾಮ್ಲವಾಗುತ್ತದೆ.ಹೀಗೆ ಉತ್ಪತ್ತಿಯಾದ ಯೂರಿಯಾ ಮತ್ತು ಯೂರಿಕಾಮ್ಲಗಳು ರಕ್ತದಿಂದ ಮೂತ್ರ ಜನಕಾಂಗ ಮತ್ತು ಚರ್ಮಕ್ಕೆ ಸಾಗಿಸಲ್ಪಟ್ಟು ವಿಸರ್ಜಿಸಲ್ಪಡುತ್ತದೆ.
ಮೂತ್ರಜನಕಾಂಗದ ಕಾರ್ಯಗಳು
[ಬದಲಾಯಿಸಿ]- ಯೂರಿಯಾದಂತಹ ತ್ಯಾಜ್ಯ ವಸ್ತುಗಳನ್ನು ವಿಸರ್ಜಿಸುತ್ತದೆ.
- ಹೆಚ್ಚಾದ ನೀರನ್ನು ವಿಸರ್ಜಿಸುತ್ತದೆ.
- ಒಂದು ನಿರ್ದಿಷ್ಟವಾದ ಪ್ರಮಾಣಕ್ಕಿಂತ ಹೆಚ್ಚಾದ ಲವಣಗಳನ್ನು ದೇಹದಿಂದ ವಿಸರ್ಜಿಸುತ್ತದೆ.
ಉಲ್ಲೇಖಗಳು
[ಬದಲಾಯಿಸಿ]