ಪ್ರೊ. ಎಸ್. ಕೆ. ರಾಮಚಂದ್ರರಾವ್
ಸಾಲಿಗ್ರಾಮ ಕೃಷ್ಣ ರಾಮಚಂದ್ರರಾಯರು, ಒಬ್ಬ ಘನ ವಿದ್ವಾಂಸರು, ಪುರಾತನ ಆಧುನಿಕ ಮೇಳೈಸಿ ಸಂಸ್ಕೃತ, ಪಾಳಿ, ಕನ್ನಡ, ಇಂಗ್ಲೀಷ್ ಭಾಷೆಗಳನ್ನು ಚೆನ್ನಾಗಿ ಅರಿತು ಅವುಗಳಲ್ಲಿ ಅಗಾಧ ಪರಿಣತಿ ಹೊಂದಿದ್ದರು. ವೇದ, ವೇದಾಂತ, ಮೀಮಾಂಸೆ, ಶಾಸ್ತ್ರ, ಆಗಮಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಶಿಲ್ಪಶಾಸ್ತ್ರ, ಸಂಗೀತ ಶಾಸ್ತ್ರ, ಹಾಗೂ ಆಯುರ್ವೇದ ಶಾಸ್ತ್ರ ಮುಂತಾದ ಶಾಸ್ತ್ರಗಳನ್ನು ಆಳವಾಗಿ ಅಭ್ಯಸಿಸಿ ಅವುಗಳಲ್ಲಿ ಮೇರು-ಪಾಂಡಿತ್ಯವನ್ನು ಸಂಪಾದಿಸಿದ್ದರು.
ಜನನ
[ಬದಲಾಯಿಸಿ]ರಾಮಚಂದ್ರರಾಯರು, ಕರ್ನಾಟಕ ರಾಜ್ಯದ ಹಾಸನದಲ್ಲಿ ೪, ಸೆಪ್ಟೆಂಬರ್, ೧೯೨೭ ರಲ್ಲಿ ದೊಡ್ಡ ಮಾಧ್ವ ದೇಶಸ್ಥ-ಮಡಿವಂತ ಬ್ರಾಹ್ಮಣ ಪಂಡಿತೋತ್ತಮರ ಕುಟುಂಬದಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ಭಾರತೀಯ ಪರಂಪರೆ, ಭಾರಾತೀಯ ವೇದಾಂತ, ಅವರ ಮೇಲೆ ಗಾಢವಾದ ಪ್ರಭಾವಬೀರಿತ್ತು. ಪರಂಪರಾಗತ ಪಂಡಿತರಲ್ಲಿ ಅಧ್ಯಯನ ಮಾಡಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದರು. ಅವರು ಮದುವೆಯಾದದ್ದು ಒಬ್ಬ ಮನೋವಿಜ್ಞಾನಿಯನ್ನು. ಆಕೆಯ ಹೆಸರು,’ರಮಾದೇವಿ’. ಈ ದಂಪತಿಗಳಿಗೆ, ’ಉಮಾ’ಹಾಗೂ ’ಸುದರ್ಶನ’ ಎಂಬ ಇಬ್ಬರು ಮಕ್ಕಳಾದರು. ಸುದರ್ಶನ ’ಹೋಮಿಯೋಪತಿ’, ’ಆಯುರ್ವೇದದ ವೈದ್ಯ’ರಾಗಿ, ಮನೆಯಲ್ಲೇ ಒಂದು ’ವೈದ್ಯಶಾಲೆ’ ಯನ್ನು ನಡೆಸುತ್ತಿದ್ದಾರೆ.
ವೃತ್ತಿಜೀವನ
[ಬದಲಾಯಿಸಿ]ರಾಮಚಂದ್ರರಾವ್ ರವರು,ಬೆಂಗಳೂರಿನ ’ನಿಮ್ಹಾನ್ಸ್ ವೈದ್ಯಕೀಯ ಸಂಸ್ಥೆ,’ ಯಲ್ಲಿ, ’ಮಾನಸಿಕ ಶಿಕ್ಷಣದ ವಿಭಾಗದ ಪ್ರಮುಖರಾಗಿ’ (Clinical Psychology at the National Institute of Mental Health and Neurosciences (NIMHANS). ಸೇವೆಸಲ್ಲಿಸಿದ್ದಾರೆ. ’ಅಮೆರಿಕ ಪಸಿಫಿಕ್ ವಿಶ್ವವಿದ್ಯಾಲಯ’ ದ, ಬೆಂಗಳೂರು ಶಾಖೆಯ ಭಾರತೀಯ ಮುಖ್ಯಸ್ಥರಾಗಿ ಸೇವೆ. ಸಂದರ್ಶನ ಪ್ರಾಧ್ಯಾಪಕರಾಗಿ. ಬೆಂಗಳೂರಿನ ಹೆಸರಾಂತ, ’ಭಾರತೀಯ ವ್ಯವಸ್ಥಾಪನಾ ಸಂಸ್ಥೆ’, ಭಾರತೀಯ ವಿಜ್ಞಾನ ಸಂಸ್ಥೆ, ಚಿತ್ರಕಲಾ ಪರಿಷದ್, ಸಂಸ್ಕೃತ, ತಿರುಮಲೈ ತಿರುಪತಿ, ಸಂಶೋಧನಾ ವಿಭಾಗ, ಲಲಿತಕಲಾ ಅಕಾಡಮಿ, ಸಮಾಜಕಾರ್ಯ, ಹಾಗೂ ಆಡಳಿತ ಸಂಸ್ಥೆ, ಮತ್ತು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೇವೆ.ಕರ್ನಾಟಕ ಸರ್ಕಾರದ ಆಗಮ ಬೋಧಕ ಸದಸ್ಯರು, ಶಿಲ್ಪಕಲಾ ಪ್ರತಿಷ್ಠಾನದ ಅಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ.
ಪುರಸ್ಕಾರಗಳು
[ಬದಲಾಯಿಸಿ]- ’ಕರ್ನಾಟಕ ಲಲಿತಕಲಾ ಅಕಾಡೆಮಿ’
- ’ಕರ್ನಾಟಕ ಸಂಗೀತ ಹಾಗೂ ನೃತ್ಯ ಅಕಾಡೆಮಿ’
- ’ಕರ್ನಾಟಕ ಸಾಹಿತ್ಯ ಅಕಾಡೆಮಿ’
- ’ಶಿಲ್ಪ ಕಲಾ’
- ’ಕರ್ನಾಟಕ ಸಾಹಿತ್ಯ ಅಕಡೆಮಿ’
- ’ಕರ್ನಾಟಕ ಕಲಾಶ್ರೀ ಸನ್ಮಾನ’
- ’ಸಂಗೀತ ಕಲಾರತ್ನ’
- ’ವೇದರತ್ನ ಡಿ. ವಿ. ಜಿ. ಪ್ರಶಸ್ತಿ’
- ’ಭಾರತ ಸರಕಾರದ ವೇದಸನ್ಮಾನ ಪ್ರಶಸ್ತಿ’
- ’ಕರ್ನಾಟಕ ವಿಶ್ವವಿದ್ಯಾಲಯ’, ’ತಿರುಪತಿ ವಿಶ್ವವಿದ್ಯಾಲಯ’, 'ದ ಗೌರವ ಡಿ. ಲಿಟ್ ಪದವಿಗಳು’
ರಾಮಚಂದ್ರರಾವ್ ಒಬ್ಬ ’ಖ್ಯಾತ ಪಂಡಿತರು, ’ಬರಹಗಾರರು, ’ಚಿತ್ರಕಲೆ, ’ಶಿಲ್ಪಕಲೆಸಂಗೀತ, ’ತಜ್ಞರು, ’ಕಲ್ಪತರು, ಸಂಶೋಧನ ಅಕಾಡೆಮಿ’ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದರು. ’ಶೃಂಗೇರಿ ಮಹಾಸಂಸ್ಥಾನದ ಶಾರದಾ ಪೀಠ’ ದ ಆಗಮ ಪದ್ಧತಿಯ ಮೇಲೆ ಅಧಿಕಾರಯುಕ್ತವಾಗಿ ವ್ಯಾಖ್ಯಾನಮಾಡಬಲ್ಲ ಪಾಂಡಿತ್ಯವನ್ನು ಗಳಿಸಿದ್ದರು. ಋಗ್ವೇದದ ಮೇಲೆ ಒಂದು ಸಂಪುಟವನ್ನು ತರುವ ಆಲೋಚನೆಯನ್ನು ಹೊಂದಿದ್ದರು. ಬರೆದ ’ವೇಂಗಡಮ್ ಹಿಲ್ ಪ್ಲೈನ್,’ ಒಂದು ಮೇರು ಕೃತಿಯೆಂದು ಪರಿಗಣಿಸಲ್ಪಟ್ಟಿದೆ. ತತ್ವೈಧಿ ಅನುವಾದ, ವಿದ್ವಾಸಂರಿಗೆ ಸಹಾಯವಾಯಿತು. ’ರಾಳ್ಳಪಳ್ಳಿ ಅನಂತ ಕೃಷ್ಣ ಶರ್ಮ,’ ರ ಬಗೆಗೆ ರಚಿಸಿದ ಕೃತಿ, ’ಪುರುಷ ಸರಸ್ವತಿ,’ ಅಧಿಕೃತ ವೆಂದೇ ಪರಿಗಣಿಸಲ್ಪಟ್ಟಿದೆ.
ಪ್ರಕಟಿಸಿದ ಕೃತಿಗಳು
[ಬದಲಾಯಿಸಿ]- ’ಶ್ರೀವಿದ್ಯಾದಲ್ಲಿನ ತಾಂತ್ರಿಕ ಸಂಪ್ರದಾಯಗಳು’ (The Tantrik Practices in Sri-Vidya ISBN 81-7030-836-4)
- ’ಶ್ರೀ ವಿದ್ಯಾಕೋಶ’ (Srividya Kosa ISBN 81-7030-832-1)
- ’ಭಾರತೀಯ ದೇವಾಲಯಗಳ ಕಲೆ ಹಾಗೂ ವಾಸ್ತುಶಿಲ್ಪ’ (Art and Architecture of Indian Temples ISBN 0836431154)
- ’ಭಾರತೀಯ ಔಷಧ ಚಿಕಿತ್ಸೆ ಮತ್ತು ಪತ್ತೆಯ ವಿಧಾನಗಳು ವಿಶ್ವಕೋಶ’ (Encyclopedia of Indian Medicine: Clinical Examination and Diagnostic Methods ISBN 0836423240)
- ’ನವಗ್ರಹ ಕೋಶ’ (Navagraha Kosa, 2 Vols. ISBN 8170308399)
- ’ಆಗಮ ವಿಶ್ವ ಕೋಶ’ (’೧೨ ಸಂಪುಟಗಳು’)The Agama Encyclopedia: Consecrations (in 12 Volumes)
- ’ಗಣೇಶ ಸಂಹಿತೆ’ (The Compendium on Ganesa ISBN 8170308283)
- ’ಭಾರತೀಯ ಪ್ರಾಚೀನ ಪ್ರತಿಮಾಕಾವ್ಯ ವಿಶ್ವಕೋಶ’
- ’ಟಿಬೆಟ್ ನಲ್ಲಿಯ ತಾಂತ್ರಿಕ ಪರಂಪರೆಗಳು’ (Encyclopedia of Indian Iconography: Hinduism-Buddhism-Jainism (In 3 Volumes) ISBN 81-7030-764-3) (Tantrik Traditions in Tibet ISBN 81-7030-747-3 )
- ’ಆರೋಗ್ಯ ಹಾಗೂ ರೋಗ-ಪ್ರಬಲ ಬಲ’ (Vital Force In Health And Disease ISBN 81-7030-741-4)
- ’ದೇವಾಲಯ ವಾಸ್ತು ಭಾಗ-೧’ (Devalaya - Vastu Volume 1)
- ’ಪ್ರಾಚೀನ ಭಾರತದ ದರ್ಶನೋದಯ-ಚಿಂತನೆ’ (Darsanodaya Early Indian Thought)
- I- Introduction,
- II- Saiva & Sakta Agamas,
- III- Vaikhanasa Agamas,
- IV- Pancaratragama,
- V- Devyagama,
- VI- Alaya & Aradhana,
- VII- Preparation for Puja,
- VIII- Mudras in Puja,
- IX- Consecration,
- X- Nityarcana,
- XI- Utsavas,
- XII- Source Book ISBN 8170308119, ISBN 8170308127, ISBN 8170308135, ISBN 8170308143, ISBN 8170308151, ISBN 817030816X, ISBN 8170308178, ISBN 8170308186, ISBN 8170308194, ISBN 8170308208, ISBN 8170308216, ISBN 8170308224
ನಿಧನ
[ಬದಲಾಯಿಸಿ]ಪ್ರೊ. ರಾಮಚಂದ್ರರಾಯರು, ತಮ್ಮ ೭೮ ನೆಯ ವಯಸ್ಸಿನಲ್ಲಿ ೨, ಫೆಬ್ರವರಿ, ೨೦೦೬ ರಂದು, ನಿಧನರಾದರು.