ಅಮೇರಿಕ ಖಂಡಗಳ ಸ್ಥಳೀಯ ಜನ
ಗೋಚರ
ಅಮೇರಿಕ ಖಂಡಗಳ ಸ್ಥಳೀಯ ಜನರು ಅಮೇರಿಕ ಖಂಡಗಳ ಕಲಂಬಸ್ನ ಪೂರ್ವದ ನಿವಾಸಿಗಳು, ಅವರ ವಂಶಸ್ಥರು, ಮತ್ತು ಆ ಜನರೊಡನೆ ಗುರುತಿಸಿಕೊಳ್ಳುವ ಹಲವು ಜನಾಂಗೀಯ ಗುಂಪುಗಳು. ಹಲವುವೇಳೆ ಅವರು ಸ್ಥಳೀಯ ಅಮೇರಿಕದವರು, ಮೊದಲ ರಾಷ್ಟ್ರಗಳು, ಅಮೆರಿಜಿನ್, ಮತ್ತು ಕ್ರಿಸ್ಟಫರ್ ಕಲಂಬಸ್ನ ಭೌಗೋಳಿಕ ಪ್ರಮಾದವಾದ ಇಂಡಿಯನ್ಸ್, ಈಗ ದ್ವಂದ್ವಾರ್ಥ ನಿವಾರಣೆಗೊಂಡು ಅಮೇರಿಕದ ಇಂಡಿಯನ್ ಜನಾಂಗ, ಅಮೇರಿಕದ ಇಂಡಿಯನ್ನರು, ಅಮೇರಿಂಡಿಯನ್ಸ್, ಅಮೇರಿಂಡ್ಸ್, ಅಥವಾ ರೆಡ್ ಇಂಡಿಯನ್ಸ್ ಎಂದು ನಿರ್ದೇಶಿಸಲ್ಪಡುತ್ತಾರೆ. ಈಗಲೂ ಚರ್ಚಿಸಲಾಗುತ್ತಿರುವ ನವ ಪ್ರಪಂಚ ಸ್ಥಳಾಂತರಿಕೆ ಮಾದರಿಯ ಪ್ರಕಾರ, ಯೂರೇಷ್ಯಾದಿಂದ ಅಮೇರಿಕ ಖಂಡಗಳಿಗೆ, ಈಗ ಬೀರಿಂಗ್ ಜಲಸಂಧಿ ಎಂದು ತಿಳಿಯಲಾಗುವ ಜಲಸಂಧಿಗೆ ಅಡ್ಡವಾಗಿ ಈ ಎರಡೂ ಖಂಡಗಳನ್ನು ಜೋಡಿಸಿದ್ದ ಭೂಸೇತುವೆಯಾದ ಬರಿಂಜಿಯಾ ಮೂಲಕ ಮಾನವರ ವಲಸೆಯಾಯಿತು.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |