ವಿಷಯಕ್ಕೆ ಹೋಗು

ಗೇಟ್ ವೇ ಆರ್ಚ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೇಟ್‌ವೇ ಆರ್ಚ್ ನ ವಿಹಂಗಮ ನೋಟ

'ಗೇಟ್ ವೇ ಆರ್ಚ್,[] ಅಮೆರಿಕಾದೇಶದ ಪಶ್ಚಿಮದ ಮಹಾ-ತಲೆಬಾಗಿಲೆಂದು ಮೆಚ್ಚುಗೆ ಪಡೆದ, ’ಸೇಂಟ್ ಲೂಯಿಸ್ ನಗರ,’ ದ ಬಳಿ, ಮಿಸ್ಸೂರಿ ಹಾಗೂ ಮಿಸಿಸಿಪ್ಪಿನದಿಗಳ ಸಂಗಮ-ಪ್ರದೇಶದಲ್ಲಿ ವಿಜೃಂಭಿಸುತ್ತಿರುವ ಅತ್ಯಂತ ಮಹತ್ವದ ತಾಣವಾಗಿದೆ. ಇದು 'ಜೆಫರ್ಸನ್ ನ್ಯಾಷನಲ್ ಎಕ್ಸ್ ಪ್ಯಾನ್ಶನ್ ಮೆಮೋರಿಯಲ್,' ಎಂದು ಹೆಸರುಪಡೆದಿದೆ. ದುರ್ಗಮವಾಗಿದ್ದ ’ವೈಲ್ಡ್ ವೆಸ್ಟ್,’ ಎಂದೇ ಪ್ರಸಿದ್ಧವಾಗಿದ್ದ ’ಲ್ಯೂಸಿಯಾನ ರಾಜ್ಯ,’ ದ ಪಶ್ಚಿಮ ದಿಶೆಯ ಭೂಭಾಗದ ಹುಡುಕಾಟಕ್ಕೆ ಟೊಂಕಕಟ್ಟಿ ದುಡಿದ, 'ಲೂಯಿಸ್,' ಮತ್ತು 'ಕ್ಲಾರ್ಕ್,' ರ ಶೌರ್ಯ, ತ್ಯಾಗ ಹಾಗೂ ನಿಷ್ಠೆಯ ಸಂಕೇತವಾಗಿದೆ. ೧೮೪೦ ರ ಹೊತ್ತಿಗೆ ಅಮೆರಿಕದ ಪಶ್ಚಿಮಭಾಗ, ಎಲ್ಲರಿಗೂ ಗೊತ್ತಾಯಿತು. ಆಗ ಈ ತಲೆಬಾಗಿಲಿನ ನಿರ್ಮಾಣಕಾರ್ಯ ಶುರುವಾಗಿ, ಅಮೆರಿಕದಲ್ಲಿರುವ ಅತಿಎತ್ತರದ ಸ್ಮಾರಕಗಳಲ್ಲಿ ಇದು ಮೊದಲನೆಯದೆಂದು ಖ್ಯಾತಿಗಳಿಸಿದೆ. ೬೩೦ ಅಡಿ ಎತ್ತರದ 'ಈ ಬೃಹತ್ ಕಮಾನು', ನಗರದಲ್ಲಿ ನಿಂತು ನೋಡಿದೆಡೆಗಳೆಲ್ಲೆಲ್ಲಾ ಕಣ್ಣಿಗೆ-ಗೋಚರಿಸುತ್ತದೆ. 'ಸೇಂಟ್ ಲೂಯಿಸ್ ನಗರ,' ದ ಹೆಮ್ಮೆಯ ಪ್ರತೀಕವಾದ 'ಗೇಟ್ ವೇ ಆರ್ಚ್', ನ ನಿರ್ಮಾಣ ಕಾರ್ಯ, ೧೨, ೧೯೬೩ ಫೆಬ್ರವರಿ ತಿಂಗಳಲ್ಲಿ ಪ್ರಾರಂಭವಾಗಿ, ಅಂತಿಮವಾಗಿ ಕೊನೆಯಹಂತ ಮುಗಿದದ್ದು, ಅಕ್ಟೋಬರ್, ೨೮, ೧೯೬೫, ರಲ್ಲಿ.

ಗೇಟ್‌ವೇ ಆರ್ಚ್ ನ ಅದ್ಭುತ ನೋಟ

ಈ ಸ್ಮಾರಕವು ಸಾರ್ವಜನಿಕರಿಗೆ, ಜುಲೈ,೨೪, ೧೯೬೭ ರಲ್ಲಿ ಉಪಲಬ್ಧವಾಯಿತು. 'ಒಂದು ಹಾರದ ಎರಡು ತುದಿಗಳನ್ನೂ ಒಂದೊಂದು ಕೈನಲ್ಲಿ ಹಿಡಿದಾಗ ಗೋಚರಿಸುವತರಹ ವಿನ್ಯಾಸ'ವನ್ನು ಗೋಪುರ ನಿರ್ಮಾಣದ ಕಾರ್ಯಕ್ಕೆ ಅಳವಡಿಸಲಾಗಿದೆ. ಕಮಾನಿನ-ಭವ್ಯ ಶಿಲ್ಪವನ್ನು ನಿರ್ಮಿಸಿದವರು, ’ಈರೋ ಸರಿನನ್’, ಒಬ್ಬ ದಕ್ಷ-ಪ್ರತಿಭಾನ್ವಿತ, ಹೆಸರುವಾಸಿಯಾಗಿದ್ದ ’ಫಿನಿಷ್ ಅಮೆರಿಕನ್ ವಾಸ್ತು-ಶಿಲ್ಪಿ.’ ಈ ಭವ್ಯ ಕಮಾನ್ ದ್ವಾರದ ನಿರ್ಮಾಣಕ್ಕೆ ಸುಮಾರು, ೧೭ ವರ್ಷಗಳ ಸಮಯ ಹಿಡಿಯಿತು. ’ಮಿಸ್ಸೂರಿನದಿ,’ ತನ್ನ ಅಂತಿಮ ಪಯಣದಲ್ಲಿ, ತನ್ನ ನೀರನ್ನು 'ಮಿಸಿಸಿಪ್ಪಿನದಿ,’ ಯಲ್ಲಿ ಸುರಿದು ನಂತರ ಅವೆರಡೂ ಒಟ್ಟಾಗಿ-ಸೇರಿ ಹರಡಿಕೊಂಡು ಮುಂದುವರಿದು ’ಗಲ್ಫ್ ಆಫ್ ಮೆಕ್ಸಿಕೋ,’ ನಲ್ಲಿ ತಮ್ಮ ಅಂತ್ಯವನ್ನು ಕಂಡುಕೊಳ್ಳುತ್ತವೆ.

'ಸ್ಟೇನ್ ಲೆಸ್ ಸ್ಟೀಲ್,' ಉಪಯೋಗದ 'ಭವ್ಯ ಕಾರೀಗರಿ-ಕೆಲಸ'

[ಬದಲಾಯಿಸಿ]

ಕಮಾನುಕಟ್ಟಡ ನಿರ್ಮಾಣದಲ್ಲಿ ಅತಿಗಟ್ಟಿಯಾಗಿದ್ದು ಹೆಸರುವಾಸಿಯಾಗಿದೆ. ಆರ್ಚ್ [] ನ ಕೆಳಗಿನಕಾಲಿನ ಮಟ್ಟದಿಂದ, ಕೊನೆಯವರೆಗಿನ ಎತ್ತರ, ೬೩೦ ಅಡಿ. ಸುಮಾರು ಒಂದು ಮಿಲಿಯನ್ ಪರ್ಯಟಕರು, ಪ್ರತಿವರ್ಷವೂ, ಟ್ರಾಮ್ ಹತ್ತಿ ಅಲ್ಲಿಂದ ನಗರವನ್ನು ವೀಕ್ಷಿಸುತ್ತಾರೆ. ೩೦ ವರ್ಷಗಳಿಂದ ೨.೫ ಲಕ್ಷ, ೨೫ ಮಿ. ೧೭,೨೪೬ ಟನ್ ತೂಕ. ೯೦೦ ಟನ್ಸ್ 'ಸ್ಟೇನ್ ಲೆಸ್ ಸ್ಟೀಲ್' , ಉಪಯೋಗ ದ ಆರ್ಚ್, ಚರಿತ್ರೆಯಪುಟಗಳಲ್ಲಿ ಧಾಖಲಾಗಿದೆ. ೧೩ ಮಿಲಿಯನ್, ಡಾಲರ್ ಹಣ, ಖರ್ಚಾಗಿದೆ. ಅದರ ಸಾಗಣಿಕೆಗೆ ೩,೫೦೦,೦೦೦.

ಅತ್ಯಾಧುನಿಕ ತಂತ್ರಜ್ಞಾನಗಳ ಉಪಯೋಗವಿಲ್ಲದೇ ನಿರ್ಮಿಸಿದ ಭವ್ಯ ಕಮಾನು

[ಬದಲಾಯಿಸಿ]

ಎರಡು ಬಾಗಗಳತುದಿಗಳನ್ನು ಸೇರಿಸಿದಾಗ ಅದರಲ್ಲಿ ಆಗಬಹುದಾದ ವ್ಯತ್ಯಾಸ, ಕೇವಲ ೧/೬೪ ಅಂಗುಲದಷ್ಟು ಮಾತ್ರ. ಸೂರ್ಯನ ರಷ್ಮಿ ಕಣ್ಣಿಗೆಹೊಡೆಯುವ ಕಾರಣಕ್ಕಾಗಿ, ಆಗ ಕಮಾನಿನ ನಿರ್ಮಾಣವನ್ನು ರಾತ್ರಿಕಾಲದಲ್ಲೇ ಮಾಡಿದರಂತೆ. ಕಂಪ್ಯೂಟರ್ ತಂತ್ರಜ್ಞಾನದ ಆವಿಷ್ಕಾರವಿನ್ನೂ ಆಗಿರಲಿಲ್ಲ. ಆಕಾಲದಲ್ಲೇ ಅತ್ಯಂತದಕ್ಷತೆಯಿಂದ ಸಿಕ್ಕಸಾಮಾನ್ಯ ಪರಿಕರಗಳಿಂದಲೇ ಇಂತಹ ಸಂಕೀರ್ಣಕಾರ್ಯವನ್ನು ಇಷ್ಟು ಅಚ್ಚುಕಟ್ಟಾಗಿ ನಿರ್ವಹಿಸಿರುವುದು ಶ್ಲಾಘನೀಯವಾದ ಸಂಗತಿ. ೧೯೬೧ ರಲ್ಲಿ 'ಈರೋ ಸರಿನನ್,' ಮೃತರಾದರು. ಆದರೂ ಅವರ ಸಹೋದ್ಯೋಗಿಗಳು ಧರ್ಯಗೆಡದೆ, ಕಟ್ಟಡದ ನಿರ್ಮಾಣಕಾರ್ಯವನ್ನು ಅತ್ಯಂತ ದಕ್ಷತೆಯಿಂದ ಸಂಪನ್ನಗೊಳಿಸಿದರು.

ಗೇಟ್‌ವೇ ಆರ್ಚ್ ನಿಂದ ಕೆಳಗಡೆ ಕಾಣುವ ಅದ್ಭುತ ದೃಷ್ಯ

ದುರ್ಗಮವಾಗಿದ್ದ ಪಶ್ಚಿಮದ ಕಡೆಗೆ ವಲಸೆ

[ಬದಲಾಯಿಸಿ]

ಕ್ಯಾಲಿಫೋರ್ನಿಯದಲ್ಲಿ ಬಂಗಾರದ ನಿಧಿದೊರೆಯುವುದೆಂಬ ಆಸೆಯಿಂದ ಜನ, ನೂಕು-ನುಗ್ಗಲಿನಲ್ಲಿ ಪಶ್ವಿಮದ-ಕಡೆಗೆ, ವಲಸೆಹೋದರು ೧೮೪೮ ರಲ್ಲಿ ’ಕ್ಯಾಲಿಫೋರ್ನಿಯ,’ ದಲ್ಲಿ ಬಂಗಾರ ಸಿಕ್ಕಿತು. ತಂಡ-ತಂಡವಾಗಿ ಜನರು ಬಂಗಾರದ ಆಸೆಯಿಂದ ’ಕ್ಯಾಲಿಫೋರ್ನಿಯ’ ದ ಕಡೆಗೆ ವಲಸೆ ಹೋಗಲಾರಂಭಿಸಿಸರು. ಹೀಗೆ ಒಂದುಕಾಲದಲ್ಲಿ ಅಮೆರಿಕದ ದುರ್ಗಮ-ಕಾಡುಗಳ-ನಾಡು, ಜನವಸತಿಗಳ ಕೇಂದ್ರಬಿಂದುವಾಗಿ ಪರಿವರ್ತಿತವಾಯಿತು.

'ಗೇಟ್ ವೇ ಆರ್ಚ್' ನ ಸೂಕ್ಷ್ಮಾತಿ ಸೂಕ್ಷ್ಮ ವಿವರಗಳು

[ಬದಲಾಯಿಸಿ]
'ಗೇಟ್ ವೇ ಕಮಾನಿ'ನಿಂದ ಕೆಳಗೆ ಕಾಣಿಸುವ ದೃಷ್ಯ
  • The Arch sways a maximum of 18" (9" each way) in a 150 mph wind.[]
  • The usual sway is 1/2".
  • Elevators (for stand-by emergency and maintenance service)
  • ಎಲಿವೇಟರ್ ಗಳ ಸಂಖ್ಯೆ - 2
  • 12 ಜನ ಕುಳಿತುಕೊಳ್ಳಲು ಜಾಗವಿದೆ.
  • ವೇಗ : 400 ಅಡಿ/ಪ್ರತಿ ನಿಮಿಷಕ್ಕೆ (2.0 m/s)
  • ಗೇರ್ ವಿವರ  : varm
  • Service Elevator's Rise Angle 78 degrees (1.36 radians)
  • ಹತ್ತಲು ಮೆಟ್ಟಿಲುಗಳು (ಎಮರ್ಜೆನ್ಸಿಯಲ್ಲಿ ಮಾತ್ರ)  : 1,076
  • Number of Landings : 105

ಕೆಲವು ಸ್ವಾರಸ್ಯಕರವಾದ ಸಂಗತಿಗಳು

[ಬದಲಾಯಿಸಿ]
  • Outer Width - (Outside North Leg to Outer South Leg) *630 ಅಡಿಗಳು (192 ಮೀ.)
  • Maximum Height 630 ಅಡಿಗಳು (192 ಮೀ.)
  • Shape of Arch Section Equilateral Triangle
  • Dimension of Arch at Base 54 ಅಡಿಗಳು. (16.46 ಮೀ.)
  • Dimension of Arch at Top 17 ಅಡಿಗಳು. (5.18 ಮೀ.)
  • Size of Windows Approx. 7 ಅಂಗುಲಗಳು x 27 ಅಂಗುಲಗಳು (180 ಮೀ. ಮೀ x 690 ಮಿ. ಮೀ)
  • Construction of Windows 3/4 ಅಂಗುಲಗಳು. (19 ಮಿ. ಮೀ) Plate Glass; Hinged and Locked
  • Size of Observation Room 7' 2" x 65' x 6' 9" high (2.18 ಮಿ x 19.8 ಮಿ x 2.06ಮಿ)
  • Capacity of Observation Platform 100 - 140 ಜನಗಳಿಗೆ.
  • Deflection of Arch 18" - 150 ಪ್ರತಿ/ಗಂಟೆಗೆ ಬೀಸುವ ಗಾಳಿ(0.46 mI in 240 ಕಿ. ಮೀ /ಪ್ರತಿ ಗಂಟೆಗೆ)
  • Method of Determining Deflection of Arch Calculations and Wind Tunnel Tests (240 ಕಿ. ಮೀ. ಪ್ರತಿ ಗಂಟೆಗೆ)
  • Number of Sections in Arch 142
  • Thickness of Plates for Outer Skin 1/4" (6.3 ಮಿ. ಮೀ)
  • Type of Material Used in Arch Exterior
  • Stainless Steel; #3 Finish Type 304
  • Structural Capacity of Observation Area
  • 100 ಪೌ/ಚದರಡಿ. (488 ಕಿ. ಗ್ರಾಂ/ಮೀ)

ಉಲ್ಲೇಖಗಳು

[ಬದಲಾಯಿಸಿ]
  1. "The Gate way Arch, St.Louis". Archived from the original on 2014-07-13. Retrieved 2014-07-08.
  2. Gate way Arch completed
  3. The Gateway Arch particulars

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]