ತೂಕ
ಗೋಚರ
ತೂಕ(Weight) ಒಂದು ವಸ್ತುವಿನ ಮೇಲೆ ವರ್ತಿಸುವ ಅದು ಇರುವ ಗ್ರಹ (Planet)ದ ಗುರುತ್ವಶಕ್ತಿಯನ್ನು ಆ ವಸ್ತುವಿನ ತೂಕ ಎನ್ನುತ್ತಾರೆ.ಯಾವುದೇ ವಸ್ತುವಿನ ತೂಕವು ಅದು ಇರುವ ಗ್ರಹದ ಗುರುತ್ವಕೇಂದ್ರಕ್ಕಿರುವ ದೂರ ಮತ್ತು ಅದರ ದ್ರವ್ಯರಾಶಿಯನ್ನು ಅವಲಂಬಿಸಿರುತ್ತದೆ.ಯಾವುದೇ ವಸ್ತುವಿನ ತೂಕವು ಗ್ರಹದ ಮೇಲ್ಮೈಯಲ್ಲಿ ಅತ್ಯಧಿಕವಾಗಿದ್ದು ಗುರುತ್ವಕೇಂದ್ರದಿಂದ ದೂರ ಸರಿದಂತೆ ಕಡಿಮೆಯಾಗುತ್ತಾ ಹೋಗುತ್ತದೆ.ಬಾಹ್ಯಾಕಾಶದಲ್ಲಿ ವಸ್ತುವಿನ ತೂಕವು ಅಳತೆಗೆ ಸಿಗದಷ್ಟು ಕಡಿಮೆಯಾಗಿರುತ್ತದೆ.ವಸ್ತುವಿನ ತೂಕವು ಅದು ಇರುವ ಗ್ರಹದ ದ್ರವ್ಯರಾಶಿಯ ಮೇಲೂ ಅವಲಂಬಿತವಾಗಿದೆ. ಉದಾಹರಣೆಗೆ ಭೂಮಿಯ ಮೇಲೆ ೯೧ ಕಿ.ಗ್ರಾಂ.ತೂಗುವ ಮನುಷ್ಯ ಚಂದ್ರನ ಮೇಲೆ ಕೇವಲ ೧೫ ಕಿ.ಗ್ರಾಂ.ತೂಗುತ್ತಾನೆ[೧].