ನೋಅಮ್ ಚಾಮ್ಸ್ಕೀ
ಅವ್ರಮ್ ನೋಅಮ್ ಚಾಮ್ಸ್ಕೀ (ಹುಟ್ತಿದ್ದು ಡಿಸೆಂಬರ್ ೭, ೧೯೨೮) ಅಮೇರಿಕದ ಭಾಷಾ ವಿಜ್ಞ್ನಾನಿ, ತತ್ವಜ್ಞ್ನಾನಿ, ಕಾಗ್ನಿಟಿವ್ ವಿಜ್ಞ್ನಾನಿ, ರಾಜನೀತಿಕ ಚಳುವಳಿಗಾರ, ಲೇಖಕ, ಹಾಗೂ ಉಪನ್ಯಾಸಕ. ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯುಟ್ ಆಫ್ ಟೆಕ್ನಾಲಜಿಯಲ್ಲಿ ಭಾಷಾ ವಿಜ್ಞ್ನಾನದಲ್ಲಿ ಇನ್ಸ್ಟಿಟ್ಯೂಟ್ ಪ್ರಾಚಾರ್ಯ ಆಗಿ ಇರುವರು. ವಿಜ್ಞ್ನಾನದ ಜಗತ್ತಿನಲ್ಲಿ ಆಧುನಿಕ ಭಾಷಾ ವಿಜ್ಞ್ನಾನದ ಪಿತಾಮಹ ಎಂದು ಪ್ರಖ್ಯಾತಿ ಹೊಂದಿರುವರು. ೧೯೬೦ ದಶಕದಿಂದ ಅವರು ರಾಜನೀತಿಕ ಭಿನ್ನಾಭಿಪ್ರಾಯಿ, ಅನಾಯಕತ್ವದ (ಅನಾರ್ಕಿಸಮ್) ಪ್ರತಿಪಾದಕ ಹಾಗೂ ಮುಕ್ತ ಸಮಾಜವಾದಿ (ಲಿಬರ್ಟೇರಿಯನ್ ಸೋಶಿಯಲಿಸ್ಟ್) ಬುದ್ಧಿವಾದಿಯಾಗಿ ಪ್ರಖ್ಯಾತಿ ಹೊಂದಿರುವರು.
೧೯೫೦ ದಶಕದಲ್ಲಿ ಚಾಮ್ಸ್ಕೀ ಭಾಷಾವಿಜ್ಞ್ನಾನದ ಮೇಲೆ ಮಹತ್ವದ ಪ್ರಭಾವವನ್ನು ಬೀರಿರುವ ಜೆನೆರೇಟಿವ್ ವ್ಯಾಕರಣವನ್ನು ಕುದುರಿಸಲು ಆರಂಭಿಸಿದರು. ಔಪಚಾರಿಕ ಭಾಷೆಗಳ ಚಾಮ್ಸ್ಕೀ ತಾರತಮ್ಯವನ್ನು ಅವರು ಪ್ರತಿಸ್ತಾಪಿಸಿದರು. ೧೯೫೯ಅಲ್ಲಿ, ಚಾಮ್ಸ್ಕೀ ಬಿ. ಎಫ್. ಸ್ಕಿನ್ನರ್-ಅವರ ವರ್ಬಲ್ ಬಿಹೇವಿಯರ್ ಎಂಬ ಪುಸ್ತಕದ ನಿರ್ಬಂಧ ರೀತಿಯ ವಿಮರ್ಷೆಯನ್ನು ಪ್ರಕಟಿಸಿದರು. ಪ್ರವೃತ್ತಿ ಸಿದ್ಧಾಂತದ ಪ್ರವೃತ್ತಿವಾದವನ್ನು (ಬಿಹೇವಿಯರಿಸಮ್) ಈ ವಿಮರ್ಷೆಯಲ್ಲಿ ಚಾಮ್ಸ್ಕೀ ಟೀಕಿಸಿದರು. ಭಾಷೆಯ ವಿಜ್ಞ್ನಾನಕ್ಕೆ ಅವರ ವಾಸ್ತವವಾದ (ನ್ಯಾಚುರಲಿಸ್ಟ್) ವಿಚಾರಸರಣ ಭಾಷೆ ತತ್ವಜ್ಞ್ನಾನ ಹಾಗೂ ಮನಸ್ಸಿನ ತತ್ವಜ್ಞ್ನಾನಗಳನ್ನು ಪ್ರಭಾವಿಸಿವೆ.
ರೆಸ್ಪಾನ್ಸಿಬಿಲಿಟಿ ಆಫ್ ದ ಇನ್ಟೆಲ್ಲೆಕ್ಚುಅಲ್ಸ್ ಎಂಬ ಪ್ರಬಂಧದಿಂದ ಶುರು ಮಾಡಿ ಚಾಮ್ಸ್ಕೀಯವರು ಅಮೇರಿಕದ ವಿದೇಶಿ ಹಾಗೂ ದೇಶೀಯ ಕಾರ್ಯನೀತಿಯ ಪ್ರಮುಖ ವಿಮರ್ಶಕರಾಗಿ ಪ್ರತಿಸ್ಥಾಪಿಕೊಂಡಿದ್ದಾರೆ. ಮುಕ್ತ ಸಮಾಜವಾದದ ಸ್ವಯಂ-ಘೋಷಿತ ಅನುಯಾಯಿಯಾಗಿ, ಮುಕ್ತ ಸಮಾಜವಾದವನ್ನು ಕ್ಲ್ಯಾಸಿಕಲ್ ಲಿಬರಲಿಸಮಿನ ಆಧುನಿಕ ಹಾಗೂ ಔದ್ಯಮಿಕ ಯುಗದ ಸರಿಯಾದ ಹಾಗೂ ವಾಸ್ತವಿಕ ಪ್ರಸರಣವೆಂದು ಚಾಮ್ಸ್ಕೀ ವರ್ಣಿಸಿರುವರು.
ಆರ್ಟ್ಸ್ ಆಂಡ್ ಹ್ಯೂಮ್ಯಾನಿಟೀಸ್ ಸೈಟೇಶನ್ ಇಂಡೆಕ್ಸ್ ಪ್ರಕಾರ ೧೯೯೨ಅಲ್ಲಿ ಚಾಮ್ಸ್ಕೀ ೧೯೮೦-೯೨ ಕಾಲದಲ್ಲಿ ಬದುಕಿರುವ ಪ್ರಾಜ್ಞ್ನರಲ್ಲಿ ಅತಿಹೆಚ್ಚು ಬಾರಿ ಹಾಗೂ ಎಲ್ಲಾ ಆಧಾರಗಳಲ್ಲಿ ಎಂಟನೆ ಹೆಚ್ಚಿನ ಉಲ್ಲೇಖನೆಗಳನ್ನು ಪಡೆದಿದ್ದರು. ಚಾಮ್ಸ್ಕೀಯವರು ಓರ್ವ ಪ್ರಮುಖ ಸಾಂಸ್ಕೃತಿಕ ವ್ಯಕ್ತಿಯಾಗೂ ನೋಡಲ್ಪಡುತ್ತಾರೆ. ಅದೇ ಸಮಯದಲ್ಲಿ ಚಾಮ್ಸ್ಕೀಯವರ ಅಮೇರಿಕದ ವಿದೇಶಿ ಕಾರ್ಯನೀತಿಯ ಟೀಕೆಯಿಂದಾಗಿ ವಾದ-ವಿವಾದಗಳಿಗೆ ಒಳಪಡಿದಿರುವರು.
ಜೀವಚರಿತ್ರೆ
[ಬದಲಾಯಿಸಿ]ಚಾಮ್ಸ್ಕೀ ಯೆಹೂದಿ ತಂದೆ-ತಾಯಿಯರಿಗೆ ಅಮೇರಿಕದ ಪೆನ್ಸಿಲ್ವೇನಿಯದ ಫಿಲಡೆಲ್ಫಿಯದ ಈಸ್ಟ್ ಓಕ್ ಲೇನ್ನಲ್ಲಿ ಹುಟ್ಟಿದರು. ಅವರ ತಂದೆ ವಿಲಿಯಮ್ ಚಾಮ್ಸ್ಕೀ ಯೂಕ್ರೇನ್ ಹುಟ್ಟಿನಿಂದ ಬಂದ ಹೀಬ್ರೂ ಭಾಷೆಯ ಪಂಡಿತ ಹಾಗೂ ಇಂಡುಸ್ತ್ರಿಯಲ್ ವರ್ಕರ್ಸ್ ಫ್ ದ ವರ್ಲ್ಡ್ನ ಸದಸ್ಯರಾಗಿದ್ದರು. ಅವರ ತಾಯಿ ಎಲ್ಸೀ ಚಾಮ್ಸ್ಕೀ (ನೀ ಸಿಮನಾಫ್ಸ್ಕೀ) ಇವತ್ತಿನ ಬೆಲಾರೂಸ್ ದೇಶದ ಹುಟ್ಟಿನಿಂದ ಬಂದು ಅಮೇರಿಕದಲ್ಲಿ ಬೆಳದಿದ್ದರು. ಈ ಕಾರಣದಿಂದ ಆಕೆ "ನ್ಯೂ ಯಾರ್ಕ್ ಆಂಗ್ಲ ಭಾಷೆ"ಯನ್ನು ಮಾತನಾದುತ್ತಿದರು. ಅವರ ಮಾತೃಭಾಷೆ ಯಿಡ್ಡಿಶ್ ಆಗಿತ್ತು. ಆದರೆ ಚಾಮ್ಸ್ಕೀಯವರ ಪ್ರಕಾರ ಅವರ ಪರಿವಾರದಲ್ಲಿ ಆ ಭಾಷೆಯು ಮಾತಾಡಲು ನಿಷೇದವಾಗಿತ್ತು. ಚಾಮ್ಸ್ಕೀ ಅವರ ಪರಿವಾರವನ್ನು ಯಿಡ್ಡಿಶ್ ಹಾಗೂ ಹೀಬ್ರೂ ವಿಭಾಗಗಳಿದ್ದ ಯೆಹೂದಿ "ಘೆಟ್ಟೋ"ವಿನಲ್ಲಿ ಇರುವ ಹಾಗೆ ವರ್ಣಿಸುತ್ತಾರೆ. ಅವರ ಪರಿವಾರವು ಹೀಬ್ರೂ ವಿಭಾಗದಲ್ಲಿ ಸಾಲಾಗಿಸಿ ಹೀಬ್ರೂ ಸಂಸ್ಕೃತಿ ಹಾಗೂ ಸಾಹಿತ್ಯದಲ್ಲಿ ನಿರತವಾಗಿತ್ತು. ಚಾಮ್ಸ್ಕೀಯವರು ೧೯೩೦ ದಶಕದಲ್ಲಿ ಐರಿಶ್ ಹಾಗೂ ಜರ್ಮನ್ ಕ್ಯಾಥೊಲಿಕ್ ಕೋಮುಗಳವರ ಜೊತೆ ಯೆಹೂದೀ ವಿರೋಧವನ್ನೂ ಹಾಗು ಬಿಗುವುಗಳನ್ನೂ ವರ್ಣಿಸುತ್ತಾರೆ. ನಾಝೀಗಳ ಪ್ಯಾರಿಸ್ನಲ್ಲಿನ ಗೆಲುವನ್ನು ಕೊಂಡಾಡುವ ಜರ್ಮನ್ ಸಮುದಾಯದ "ಬಿಯರ್-ಪಾರ್ಟಿ"ಗಳನ್ನು ಜ್ಞಾಪಿಸಿಕೊಳ್ಳುತ್ತಾರೆ.
ಚಾಮ್ಸ್ಕೀಯವರು ಓಕ್ ಲೇನ್ ಡೇ ಸ್ಕೂಲ್ನಲ್ಲಿ ಓದುತ್ತಿರುವಾಗ ೧೦ನೆ ವಯಸ್ಸಿನಲ್ಲಿ ಸ್ಪೇನಿಶ್ ಸಿವಿಲ್ ವಾರ್ನಲ್ಲಿ ಬಾರ್ಸೆಲೋನವಿನ ಸೋಲಿನ ಸಮಯದಲ್ಲಿ ಫ್ಯಾಸಿಸಮ್ನ ಹರಡುವಿಕೆಯ ಕುರಿತು ಒಂದು ಲೇಖನವನ್ನು ಬರೆದಿದ್ದರು. ೧೨ ಅಥವ ೧೩ ವಯಸ್ಸಿನವರಾಗಿದ್ದಾಗಲಿಂದಲೂ ಚಾಮ್ಸ್ಕೀಯವಾರು ಅರಾಜ್ಯವಾದ ಅಥವ ಅನಾಯಕವಾದದ (ಅನಾರ್ಕಿಸಮ್) ರಾಜ್ಯನೀತಿಯ ಅನುಯಾಯಿಯದರು.
ಸೆಂಟ್ರಲ್ ಹೈಸ್ಕೊಒಲ್ ಆಫ್ ಫಿಲಡೆಲ್ಫಿಯಾದಿಂದ ಸ್ನಾತಕಗೊಂಡು ಚಾಮ್ಕ್ಸ್ಕೀ ಪೆನ್ಸಿಲ್ವೇನಿಯ ವಿಶ್ವವಿದ್ಯಾನಿಲಯದಲ್ಲಿ ೧೯೪೫ಅಲ್ಲಿ ತತ್ವವಾದ ಹಾಗು ಭಾಷಾ ವಿಜ್ಞಾನವನ್ನು ತತ್ವಜ್ಞಾನಿಗಳಾದ ಸಿ. ವೆಸ್ಟ್ ಚರ್ಚ್ಮ್ಯಾನ್ ಹಾಗು ನೆಲ್ಸನ್ ಗೋಲ್ಡ್ಮ್ಯಾನ್ ಹಾಗು ಭಾಷಾ ವಿಜ್ಞಾನಿ ಝೆಲ್ಲಿಗ್ ಹ್ಯಾರಿಸ್ರವರ ಕೆಳಗೆ ಅಧ್ಯಯಿಸಿದರು. ೧೯೪೯ರಲ್ಲಿ ಬಿ.ಎ. ಪದವಿಯನ್ನು ಹಾಗು ೧೯೫೧ರಲ್ಲಿ ಎಂ.ಎ. ಪದವಿಯನ್ನು ಚಾಮ್ಸ್ಕೀ ಪಡೆದರು.
೧೯೪೯ರಲ್ಲಿ ಭಾಷಾ ವಿಜ್ಞಾನಿ ಕ್ಯಾರೋಲ್ ಸ್ಕಾಟ್ಙ್ ರವರನ್ನು ಮದುವೆಯಾದರು. ದಿಸೆಂಬರ್ ೨೦೦೮ರಲ್ಲಿ ಆಕೆಯ ಮರಣದವರೆಗೆ ೫೯ ವರ್ಷ ಮದುವೆಯಗಿದ್ದರು. ಇಬ್ಬರು ಹೆಣ್ಣುಮಕ್ಕಳು, ಅವೀವ (ಹು. ೧೯೫೭) ಹಾಗು ಡಯಾನ್ (ಹು. ೧೯೬೦), ಹಾಗು ಹ್ಯಾರಿ (ಹು. ೧೯೬೭) ಎಂಬ ಗಂಡು ಮಗ ಇರುವರು.
೧೯೫೫ರಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಿಂದ ಪಿ. ಎಚ್. ಡಿ.ಯನ್ನು ಚಾಮ್ಸ್ಕೀ ಪಡೆದರು. ಈ ಪದವಿಯ ಸಂಶೋದನೆಯನ್ನು ಹಾರ್ವಾರ್ಡ್ ವಿಶ್ವವಿದ್ಯಾನಿಲಯದಲ್ಲಿ ನಾಲ್ಕು ವರ್ಷ ಮಾಡಿದರು. ಮ್ಯಾಸಚೂಸೆಟ್ಸ್ ಇಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯನ್ನು ೧೯೫೧ರಲ್ಲಿ ಸೇರಿ ೧೯೬೧ರಲ್ಲಿ ಪೂರ್ಣ ಪ್ರಾಚಾರ್ಯ (ಪ್ರೊಫೆಸರ್) ಆಗಿ ನೇಮಕಗೊಂಡರು. ೫೪ ವರ್ಷಗಳಿಂದ ಚಾಮ್ಸ್ಕೀರವರು ಅಮ್. ಐ. ಟಿ.ಯಲ್ಲಿ ಅಧ್ಯಾಪನೆ ಮಾಡುತ್ತಿರುವರು.
ಫೆಬ್ರುವರಿ ೧೯೬೭ರಲ್ಲಿ ಚಾಮ್ಸ್ಕೀಯವರು "ನ್ಯೂ ಯಾರ್ಕ್ ರೆವ್ಯೂ ಆಫ್ ಬುಕ್ಸ್ನ"ಲ್ಲಿ ತಮ್ಮ ರೆಸ್ಪಾನ್ಸಿಬಿಲಿಟಿ ಆಫ್ ದ ಇನ್ಟೆಲ್ಲೆಚುಅಲ್ಸ್ ಎಂಬ ಪ್ರಬಂಧದ ಪ್ರಕಟಣೆಯಿಂದ ವಿಯಟ್ನಾಮ್ ಯುದ್ಧದ ಒಬ್ಬ ಪ್ರಮುಖ ವಿರೋಧಿಯದರು. ಇದಾದಮೇಲೆ ತಮ್ಮ ೧೯೬೯ ಲೇಖನೆ ಅಮೇರಿಕನ್ ಪವರ್ ಆಯ್ಂಡ್ ಇಟ್ಸ್ ನ್ಯೂ ಮ್ಯಾಂಡರಿನ್ಸ್ಇಂದ ಅಮೇರಿಕದ ಪ್ರಮುಖ ಪ್ರತಿಭಟನವಾದಿಯಾದರು. ತಮ್ಮ ಅಮೇರಿಕದ ವಿದೇಶಿ ಕಾರ್ಯನೀತಿಯ ಹಾಗು ಅಮೇರಿಕದ ಅಧಿಕಾರದ ನ್ಯಾಯತೆಯ ವಿಮರ್ಷೆಯಿಂದಾಗಿ ಅಮೇರಿಕೀಯ ಮಾಧ್ಯಮಗಳು ಚಾಮ್ಸ್ಕೀಯವರನ್ನು ದೂರವಿಟ್ಟಿದೆ ಆದರೆ ವಿಶ್ವದ ಇತರೆ ದೇಶಗಳ ಮಾಧ್ಯಮಗಳು ಅವರ ಸಂದರ್ಶಗಳನ್ನು ಹಾಗು ನಿಲುವುಗಳನ್ನು ನಿಯಮಿತವಾಗಿ ಪ್ರಕಟಿಸಿರುವರು. ಎಮ್. ಐ. ಟಿ.ಯಲ್ಲಿರುವಾಗ ಚಾಮ್ಸ್ಕೀಯವರಿಗೆ ಹಲವಾರು ಬಾರಿ ಮುಫ್ತಿ ಪೋಲೀಸ್ ರಕ್ಷಣೆ ಸಿಕ್ಕಿದೆಯಾದರು ಅವರು ಇದನ್ನು ಒಪ್ಪುವುದಿಲ್ಲ.
ಲೆಕ್ಸಿಂಗ್ಟನ್, ಮ್ಯಾಸಚ್ಯೂಸೆಟ್ಸ್ನಲ್ಲಿ ಚಾಮ್ಸ್ಕೀಯವರು ನೆಲಸಿರುವರು ಹಾಗು ಆಗಾಗ ರಾಜನೀತಿಯ ಬಗ್ಗೆ ಉಪನ್ಯಾಸಗಳನ್ನು ನೀಡಲು ಪಯಣಿಸುತ್ತಾರೆ
ರಾಜನೀತಿಕ ನಿಲುವು
[ಬದಲಾಯಿಸಿ]ಚಾಮ್ಸ್ಕೀ ತಮ್ಮ ವಯಕ್ತಿಕ ನಿಲುವುಗಳು "ಎನ್ಲೈಟನ್ಮೆನ್ಟ್ ಹಾಗು ಕ್ಲಾಸಿಕಲ್ ಲಿಬರಲಿಸಮಿನಲ್ಲಿ ಬೇರುಗಳಿರುವ ಸಾಂಪ್ರದಾಯಿಕ ಅರ್ರಾಜ್ಯವಾದಿಕ" ಎಂದು ವರ್ಣಿಸಿ ಸಮಾಜವಾದವನ್ನು ಹೊಗಳಿದ್ದರೆ. ಅನಾರ್ಕೋ-ಸಿನ್ಡಿಕಲಿಸಮ್-ನ ಅನುಯಾಯಿಯಾಗಿರುವರು ಹಾಗು ಐ. ಡಬ್ಲ್ಯೂ. ಡಬ್ಲ್ಯೂ. ಎಂಬ ಕಾರ್ಮಿಕ ಸಂಘದ ಸದಸ್ಯರಾಗಿರುವರು. ಅರಾಜ್ಯವಾದದ ಮೇಲೆ ಚಾಮ್ಸ್ಕೀ ಚಾಮ್ಸ್ಕೀ ಆನ್ ಅನಾರ್ಕಿಸಮ್ ಎಂಬ ಪುಸ್ತಕವನ್ನು ಏ.ಕೆ. ಪ್ರೆಸ್-ನಲ್ಲಿ ೨೦೦೬ರಲ್ಲಿ ಪ್ರಕಟಿಸಿರುವರು.
ತಮ್ಮ ಪ್ರೌಢ ಜೀವನವಿಡಿ ರಾಜನೀತಿಕ ಚಳುವಳಿಗಳಲ್ಲಿ ಪಾಲ್ಗೊಂಡಿರುವರು ಹಾಗು ಚಾಮ್ಸ್ಕೀರವರ ರಾಜನೀತಿಕ ಹಾಗು ಜಾಗತಿಕ ನಡುವಳಿಕೆಗಳ ಮೇಲಿನ ಅಭಿಪ್ರಾಯಗಳು ಹಲವಾರು ಕಡೆ ಉಲ್ಲೇಖಿಸಿ, ಪ್ರಕಟಿಸಿ ಹಾಗು ಚರ್ಚಿಸಲಾಗುತ್ತವೆ. ತಮ್ಮ ನಿಲುವುಗಳನ್ನು ಅಧಿಕಾರದಲ್ಲಿರುವರು ಕೇಳಲು ತಯಾರಿಲ್ಲದಿರುವುದರಿಂದ ಚಾಮ್ಸ್ಕೀಯವರನ್ನು ಅಮೇರಿಕೀಯ ರಾಜನೀತಿಕ ಭಿನ್ನಾಭಿಪ್ರಾಯಿ ಎಂದು ಪರಿಗಣಿಸಲಾಗುತ್ತದೆ. ಚಾಮ್ಸ್ಕೀಯವರ ರಾಜನೀತಿಕ ನಿಲುವುಗಳಲ್ಲಿ ಮುಖ್ಯವಾದವು ಕೆಳಗಿರುವವು: ಸಮರ್ಥಿಸಲಾಗದ ರಾಜನೀತಿಕ ಅಧಿಕಾರವು ಸಹಜವಾಗಿ ಅನ್ಯಾಯವಾದದು. ಅಧಿಕಾರದಲ್ಲಿರುವರ ಮೇಲೆ ತಮ್ಮ ಅಧಿಕಾರವನ್ನು ಸಮರ್ಥಿಸಲು ಪ್ರಮಾಣದ ಹೊಣೆಯಿದೆ. ಈ ಹೊಣೆಯನ್ನು ಅವರು ಉತ್ತರಿಸಲಾಗದಿದ್ದಲ್ಲಿ ಆ ಅಧಿಕಾರವನ್ನು ಅಳಿಸ ತಕ್ಕದ್ದು. ಸಮರ್ಥಿಸ ಬಹುದಾದ ಅಧಿಕಾರದ ಉದಾಹರಣೆಯೆಂದರೆ ಒಬ್ಬ ಪ್ರೌಢನು ಮಗುವನ್ನು ರಸ್ತೆಯಲ್ಲಿ ಓಡುವುದರಿಂದ ತಪ್ಪಿಸುವುದು.
ಗುಲಾಮಗಿರಿಯ ಹಾಗು ತನ್ನನ್ನು ತಾನೆ ಒಬ್ಬ ಎಂಪ್ಲಾಯರಿಗೆ ಬಾಡಿಗೆಗೆ ಕೆಲಸ ಮಾಡುವುದರಲ್ಲಿ ಅಥವ "ಸಂಬಳ ಗುಲಾಮಗಿರಿ"ಯ ಮಧ್ಯೆ ಜಾಸ್ತಿ ವ್ಯತ್ಯಾಸವಿಲ್ಲ ಎಂದು ಚಾಮ್ಸ್ಕೀ ಹೇಳುವರು. ಅವರ ಪ್ರಕಾರ ಸಂಬಳ ಗುಲಾಮಗಿರಿಯು ವಯ್ಯಕ್ತಿಕ ಋಜುತೆಯ ಮೇಲಿನ ದಾಳಿ ಹಾಗು ನಮ್ಮ ಸ್ವತಂತ್ರವನ್ನು ಒಳಸಂಚಿನಿಂದ ಕೆಡಿಸುತ್ತದೆ. ಕಾರ್ಮಿಕರು ತಮ್ಮ ತಮ್ಮ ಕಾರ್ಯಜಾಗಗಳನ್ನು ತಾವೆ ನಿರ್ವಹಿಸಬೇಕು ಎಂದು ಹೇಳುವರು.
ಅಮೇರಿಕೀಯ ವಿದೇಶಿ ಕಾರ್ಯನೀತಿಯ ಬಹಳ ಕಟ್ಟು ಟೀಕೆ. ಎಲ್ಲ್ರಿಗೂ ಪ್ರಜಾಪ್ರಭುತ್ವ ಹಾಗು ಸ್ವಾತಂತ್ರ್ಯವನ್ನು ಭೋಧನೆ ಮಾಡುತ್ತ ತಾನೇ ಪ್ರಜಾಪ್ರಭುತ್ವವಲ್ಲದ ಹಾಗು ದಬ್ಬಾಳಿಕೆಯ ದೇಶಗಳ (ಉದಾಹರಣೆಹೆ ಆಗಸ್ಟೋ ಪಿನೋಶೆಯ ಚಿಲೆ ಜೊತೆ ಸಾಲಾಗಿಸುವ ವಿದೆಶಿ ಕಾರ್ಯನೀತಿಯ ಎರಡು ವರ್ಗದ ಗುಣವನ್ನು ಹಾಗು ಇದರಿಂದ ಉಂಟಾಗುವ ಮಾನವ ಹಕ್ಕುಹಳ ಉಲ್ಲಂಘನೆಯನ್ನು ತರಾಟೆಗೆ ತೊಗೋತಾರೆ. ನಿಕರಾಗುವಾದಲ್ಲಿ ಕಾಂಟ್ರಗಳಿಗೆ ಗುಪ್ತ ಸಹಾಯದಂತೆ ಅಮೇರಿಕದ ಇತರ ದೇಶಗಳಲ್ಲಿನ ಹಸ್ತಕ್ಷೇಪವು ಆತಂಕವಾದದ ವರ್ಣನೆಯನ್ನು ಹೊಂದುತ್ತದೆ ಎಂದು ಚಾಮ್ಸ್ಕೀ ವಾದಿಸುತ್ತಾರೆ.
ಅಮೇರಿಕದಲ್ಲಿನ ಮಾಧ್ಯಮಗಳು ಸರ್ಕಾರದ ಹಾಗು ವ್ಯಾಪಾರ ನಿಗಮಗಳ ಪ್ರಚಾರದ ಅಂಗ ಹಾಗು ಗುಲಾಮ ಪೌರೋಹಿತ್ಯವೆಂದು ವಾದಿದುತ್ತ ಈ ಮೂವರೂ ಸಾಮಾನ್ಯ ಆಸಕ್ತಿಗಳಿಂದ ಕೂದಿವೆಯೆಂದು ಚಾಮ್ಸ್ಕೀ ವಾದಿಸುವರು. ವಾಲ್ಟರ್ ಲಿಪ್ಮ್ಯಾನ್-ನನ್ನು ಆಧಾರಿಸಿ ಚಾಮ್ಸ್ಕೀ ಅಮೇರಿಕೀಯ ಮಾಧ್ಯಮಗಳು ಜನತೆಯಲ್ಲಿ ಅಂಗೀಕಾರವನ್ನು ಉತ್ಪಾದಿಸುತ್ತದೆ ಎಂಬ ವಿಷಯದ ಮೇಲೆ ಮ್ಯನುಫ್ಯಾಕ್ಚರಿಂಗ್ ಕಂಸೆಂಟ್ ಎಂಬ ಲೇಖನೆಯನ್ನು ಬರೆದಿರುವರು.
ಅಮೇರಿಕದ ಡ್ರಗ್ಸ್ ಮೇಲಿನ ಜಾಗತಿಕ ಯುದ್ಧ್ವನ್ನು ಚಾಮ್ಸ್ಕೀ ವಿರೋಧಿಸುತ್ತಾರೆ. ಅದರ ಭಾಷೆ ದಾರಿ ತಪ್ಪಿಸುವದಾಗಿದೆಯೆಂದು ಅದು ಕೆಲವು ಡ್ರಗ್ಸ್ ಮೇಲಿನ ಯುದ್ಧವೆಂದು ವರ್ಣಿಸಿರುವರು. ಡ್ರಗ್ಸ್ಗಳ ಪ್ರಯೋಜನೆಯನ್ನು ನಿಲ್ಲಿಸಲು ಪೋಲೀಸ್ ಅಥವ ಸೈನಿಕ ಆಕ್ರಮ್ಣಕ್ಕಿಂತ ಶಿಕ್ಷಣ ಹಾಗು ನಿವಾರಣೆಯನ್ನು ಚಾಮ್ಸ್ಕೀ ಪ್ರತಿಪಾದಿಸುತ್ತಾರೆ.
- "ಅಮೇರಿಕಿದ ರಾಷ್ತ್ರೀಯ ಡ್ರಗ್ಸ್ ರಾಜನೀತಿಯು ಹೇಳಿರುವ ಗುರಿಗಳನ್ನು ಪಾಲಿಸುವುದಿಲ್ಲ ಹಾಗು ರಾಜನೀತಿಕಾರರಿಗೆ ಇದು ಚೆನ್ನಾಗಿ ಗೊತ್ತಿದೆ. ಡ್ರಗ್ಸ್ ಪ್ರಯೊಜನೆಯನ್ನು ನಿಲ್ಲಿಸಲು ಅದು ಇಲ್ಲದಿರುವಾಗ ಅದು ಏನು? ಪ್ರಕೃತ ಹಾಗು ಐತಿಹಾಸಿಕ ಕಾರ್ಯಗಳಿಂದ ಡ್ರಗ್ಸ್ಗಳು ಕೆಲವು "ಅಪಾಯಕಾರಿ ವರ್ಗ"ಗಳ ಜೊತೆ ಸಂಗಡಿಸಿರುವಾಗ ಡ್ರಗ್ಸ್ ರಾಜನೀತಿ ಒಂದು ಸಾಮಾಜಿಕ ಪಾರುಪತ್ಯದ ಒಂದು ತಂತ್ರವೆಂಬುದು ತೋರ್ಪಡುತ್ತದೆ".
ಅಮೇರಿಕದ ಬಂಡವಾಳಶಾಹಿ ವ್ಯವಸ್ಥೆಯನ್ನು ಹಾಗು ದೊಡ್ಡ ವಾಣಿಜ್ಯವನ್ನು ವಿರೋಧಿಸುತ್ತ ಚಾಮ್ಸ್ಕೀ ತಮ್ಮನ್ನು ಲಿಬೆರ್ಟೇರಿಯನ್ ಸಮಾಜವಾದಿಯೆಂದು ವರ್ಣಿಸುತ್ತ ಲೆನಿನ್-ವಾದಿ ಸಮಾಜವಾದವನ್ನು ಕಟ್ಟಾಗಿ ಟೀಕಿಸುತ್ತಾರೆ. ಕ್ಲಾಸಿಕಲ್ ಲಿಬರಲಿಸಮ್ ಹಾಗು ತೀವ್ರಗಾಮಿ ಮಾನವವಾದದ ಔದ್ಯಮಿಕ ಯುಗಕ್ಕೆ ಪ್ರಸರಣವೆಂದು ಲಿಬೆರ್ಟೇರಿಯನ್ ಸಮಾಜವಾದವನ್ನು ವರ್ಣಿಸುತ್ತಾರೆ. ಸಮಾಜವು ತೀವ್ರವಾಗಿ ಸಂಘಟಿತವಾಗಿರಬೇಕು ಹಾಗು ಕಾರ್ಖಾನೆಗಳು ಹಾಗು ಸಮಾಜಗಳು ಪ್ರಜಾಪ್ರಭುತ್ವದ ನಿರ್ವಹನೆಯಲ್ಲಿರಬೇಕು ಎಂದು ಚಾಮ್ಸ್ಕೀ ಪ್ರತಿಪಾದಿಸುತ್ತಾರೆ.
ಚಾಮ್ಸ್ಸ್ ಕಿಯ ಭಾಷಾ ವಿಜ್ಞಾನ
[ಬದಲಾಯಿಸಿ]ಚಾಮ್ಸ್ಕಿ ಜಗತ್ತಿನ ಪ್ರತಿಯೊಬ್ಬ ಮಾನವ ಒಂದೆ ರೀತಿಯಾದ ಭಾಷಾಶಾಸ್ತ್ರವನ್ನು ಹೊಂದಿರುತ್ತಾನೆ,ಬಳಸುತ್ತಾನೆ ಹಾಗು ಯಾವುದೇ ಸಾಮಾಜಿಕ ವ್ಯತ್ಯಾಸವಿರುವುದಿಲ್ಲ ಎಂಬ ತತ್ವವನ್ನು ಅವರ ಭಾಷಾಶಾಸ್ತ್ರದಲ್ಲಿ ಪ್ರತಿಪಾದಿಸುತ್ತಾನೆ. ಅವರು ಬಿಹೇವಿಯರಿಸ್ಟ್ ಸೈಕಾಲಜಿ ಎಂಬ ತತ್ವವನ್ನು ದಿಕ್ಕರಿಸಿ,ಮಾನವ ಭಾಷೆಯು ಸಂವಹನದ ಮೂಲ ಎಂದು ಪ್ರತಿಪಾದಿಸುತ್ತಾರೆ.
ಚಾಮ್ಸ್ ಕಿ ಯವರ ಭಾಷಾಶಾಸ್ತ್ರವು "ಸಿಂಟ್ಯಾಕ್ಟಿಕ್ ಸ್ಟ್ರಕ್ಚರ್" ಎಂಬ ತರ್ಕಶಾಸ್ತ್ರದ ರಚನೆಯಾದ ಪ್ರಬಂದದ ಮೂಲಕ ಪ್ರಾರಂಬಗೊಳ್ಳುತ್ತದೆ. ಚಾಮ್ಸ್ಕಿ ಯವರು "ಟ್ರಾನ್ಸ್ಫಾರ್ಮೆಷನಲ್ ಗ್ರಾಮರ್" ಎಂಬ ಪ್ರಬಂದವನ್ನು ಸಂಶೋದಿಸಿ ಪರಿಚಯಿಸುತ್ತಾರೆ.ಅವರ ಅತ್ಯಂತ ಪ್ರಭಾವಿ ಕೊಡುಗೆಯಾದ "ಫಾರ್ಮಲ್ ಗ್ರಾಮರ್" ಉತ್ಪಾದಕತೆ ಮತ್ತು ಸೃಜನ ತತ್ವಕತೆಯ ಬಳಕೆ ಹಾಗು ಅದರ ಕುರಿತಾದ ಜ್ನಾನವನ್ನು ಪ್ರತಿಪಾದಿಸುತ್ತದೆ.
ಚಾಮ್ಸ್ ಕಿ ಭಾಷೆಯು ನೈಸರ್ಗಿಕವಾದದ್ದು ಎಂದು ಧೃಡಪಡಿಸುವುದಲ್ಲದೆ "ಯುನಿವರ್ಸಲ್ ಗ್ರಾಮರ್" ಎಂಬ ಭಾಷಾವಿಜ್ನಾನವನ್ನು ಪರಿಚಯಿಸುತ್ತಾರೆ.ಒಂದು ಮಗು ಹಾಗು ಒಂದು ಬೆಕ್ಕಿನ ಮರಿ ಎರಡು ಸಹ ಇಂಡಕ್ಟೀವ್ ರೀಸನಿಂಗ್ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು ಅವುಗಳೆರಡನ್ನು ಒಂದೇ ಭಾಷೆಗೆ ಪರಿಚಯಿಸಿದರೆ ಮಾನವ (ಮಗು) ಭಾಷೆಯನ್ನು ಅರ್ಥಮಾಡಿಕೊಳ್ಳುವ ಅಥವಾ ಮಾತನಾಡುವ ಸಾಮರ್ಥ್ಯವನ್ನು ಹೊಂದುತ್ತವೆ ಆದರೆ ಬೆಕ್ಕಿನ ಮರಿ ಅರ್ಥಮಾಡಿಕೊಳ್ಳುವ ಅಥವಾ ಮಾತನಾಡುವುದು ಸಾದ್ಯವಿಲ್ಲ ಎಂಬ ಸಾಧರಣಾ ಅಂಶವನ್ನು ಚಾಮ್ಸ್ ಕಿ ಗಮನಿಸಿ ಉದಾಹರಣೆಯಾಗಿ ನೀಡಿದ್ದಾರೆ. ಚಾಮ್ಸ್ ಕಿ ಸಲಹೆಗಳಿಂದ ಅನೇಕ ಸಂಶೋದನೆಕಾರರು ಪ್ರೇರೆಪಿತರಾಗುತ್ತಾರೆ ಹಾಗೇಯೆ ಅನೇಕ ಸಂಶೋದನೆಕಾರರಾದ "ಎಲಿಜೆಬೆತ್ ಬೆಟ್ಸ್ ಮತ್ತು ಮೈಕೆಲ್ ಟಾಮ್ಸೆ"ಚಾಮ್ಸ್ಕಿ ಪ್ರಬಂದಗಳಾ ವಿರುದ್ದವಾಗಿ ಧೃಡವಾದ ಮಂಡನೆಯನ್ನು ಮಂಡಿಸುತ್ತಾರೆ ಮತ್ತು "ಎರ್ಮಜಾನಿಸ್ಟ್ ಮತ್ತು ಕನೆಕ್ಶಾನಿಸ್ಟ್" ಪ್ರಬಂದಗಳ ಪರವಾಗಿ ಪ್ರತಿಪಾದಿಸುತ್ತಾರೆ.
ಗ್ರಂಥ ವಿವರಣ ಪಟ್ಟಿ
[ಬದಲಾಯಿಸಿ]ನೋಡಿ:ನೋಅಮ್ ಚಾಮ್ಸ್ಕೀ ಗ್ರಂಥ ವಿವರಣ ಪಟ್ಟಿ
ಚಲನಚಿತ್ರಗಳು
[ಬದಲಾಯಿಸಿ]- ಮ್ಯಾನುಫ್ಯಾಕ್ಚರಿಂಗ್ ಕಂಸೆಂಟ್ Archived 2009-04-27 ವೇಬ್ಯಾಕ್ ಮೆಷಿನ್ ನಲ್ಲಿ. (೧೯೯೨)
- ಪವರ್ ಅಂಡ್ ಟೆರರ್ Archived 2011-04-17 ವೇಬ್ಯಾಕ್ ಮೆಷಿನ್ ನಲ್ಲಿ., (೨೦೦೨)
- ಡಿಸ್ಟಾರ್ಟೆಡ್ ಮೊರಾಲಿಟಿ Archived 2008-03-04 ವೇಬ್ಯಾಕ್ ಮೆಷಿನ್ ನಲ್ಲಿ. (೨೦೦೩)
- ನೋಅಮ್ ಚಾಮ್ಸ್ಕೀ: ರೆಬೆಲ್ ವಿಥೊಉಟ್ ಎ ಪಾಸ್ Archived 2011-04-17 ವೇಬ್ಯಾಕ್ ಮೆಷಿನ್ ನಲ್ಲಿ. (೨೦೦೩)
- ದಿ ಕಾರ್ಪೊರೇಶನ್, (೨೦೦೩)
- ಪೀಸ್, ಪ್ರೊಪಗಂಡ ಆಂಡ್ ದ ಪ್ರಾಮಿಸ್ಡ್ ಲ್ಯಾಂಡ್ (೨೦೦೪)
- ಆನ್ ಪವರ್, ಡಿಸೆಂಟ್ ಆಂಡ್ ರೇಸಿಸಮ್ (೨೦೦೪)
ಸಂದರ್ಶನಗಳು
[ಬದಲಾಯಿಸಿ]- ಸಂದರ್ಶನಗಳ ಪಟ್ಟಿ Archived 2008-01-10 ವೇಬ್ಯಾಕ್ ಮೆಷಿನ್ ನಲ್ಲಿ.
ಆಧಾರಗಳು
[ಬದಲಾಯಿಸಿ]- ಬಾರ್ಸ್ಕೀ, ರಾಬರ್ಟ್ ಎಫ್. (೧೯೯೭). ನೋಅಮ್_ಚಾಮ್ಸ್ಕೀ: ಎ ಲೈಫ್ ಆಫ್ ದಿಸ್ಸೆಂಟ್. Archived from the original on 2008-01-12. Retrieved 2009-03-09.
- ಚಾಮ್ಸ್ಕೀ, ನೋಅಮ್ (೧೯೯೬). ಪೆರ್ಸ್ಪೆಕ್ಟಿವ್ಸ್ ಆನ್ ಪವರ್.
- ಕ್ರೈಸ್ಲರ್, ಹ್ಯಾರಿ. "ಆಕ್ಟಿವಿಸಮ್, ಅನಾರ್ಕಿಸಮ್ ಆಂಡ್ ಪವರ್". Archived from the original on 2017-10-10. Retrieved 2009-03-09.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ನೋಅಮ್ ಚಾಮ್ಸ್ಕೀ
- ನೋಅಮ್ ಚಾಮ್ಸ್ಕೀ Archived 2007-02-10 ವೇಬ್ಯಾಕ್ ಮೆಷಿನ್ ನಲ್ಲಿ. (ಎಂ. ಐ. ಟಿ. ಅಂತರ್ಜಾಲದ ಪುಟ)
- ನೋಅಮ್ ಚಾಮ್ಸ್ಕೀ Archived 2009-04-30 ವೇಬ್ಯಾಕ್ ಮೆಷಿನ್ ನಲ್ಲಿ. (academia.edu)
- ನೋಅಮ್ ಚಾಮ್ಸ್ಕೀ Archived 2009-10-01 at the Portuguese Web Archive (Zmag)
- ನೋಅಮ್ ಚಾಮ್ಸ್ಕೀಯವರ ಸಂಭಾಷ್ಣೆಗಳು Archived 2008-12-11 ವೇಬ್ಯಾಕ್ ಮೆಷಿನ್ ನಲ್ಲಿ.
- Chomsky media files
- ಲೇಖನಗಳು Archived 2008-04-12 ವೇಬ್ಯಾಕ್ ಮೆಷಿನ್ ನಲ್ಲಿ. ಹಾಗು ವೀಡಿಯೋಗಳು Archived 2012-11-05 ವೇಬ್ಯಾಕ್ ಮೆಷಿನ್ ನಲ್ಲಿ.
- ಭಾಗ ೧ ಭಾಗ ೨ ಪೊಲಿಟಿಕಲ್ ಎಕಾನಾಮಿ ಆಫ್ ದ ಮಾಸ್ ಮೀಡಿಯ
- OneBigTorrent.org
- ನೋಅಮ್ ಚಾಮ್ಸ್ಕೀ ವೀಡಿಯೋಗಳು Archived 2009-02-27 ವೇಬ್ಯಾಕ್ ಮೆಷಿನ್ ನಲ್ಲಿ.