ವಿಷಯಕ್ಕೆ ಹೋಗು

ಸುಶೀಲ್ ಕುಮಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಶೀಲ್ ಕುಮಾರ್
Born (1983-05-26) ೨೬ ಮೇ ೧೯೮೩ (ವಯಸ್ಸು ೪೧)
Nationalityಭಾರತೀಯ
Citizenshipಭಾರತೀಯ
Occupationಕ್ರೀಡಾಪಟು (ಕುಸ್ತಿ)
Height163 cm (5 ft 4 in)

ಸುಶೀಲ್ ಕುಮಾರ ಸೋಳಂಕಿ ಇವರು ವಿಶ್ವ ಚಾಂಪಿಯನ್ 2010 ವಿಶ್ವ ಕುಸ್ತಿ ಚಾಂಪಿಯನ್‌ಷಿಪ್,ಮಾಸ್ಕೋ (66 ಕೆಜಿ ಫ್ರೀಸ್ಟೈಲ್ ವಿಭಾಗ) ಕುಸ್ತಿಪಟು, ಇವರು ೨೦೦೮ ರ ಬೀಜಿಂಗ್ ಓಲಂಪಿಕ್ಸ್‌ನಲ್ಲಿ ಕಂಚಿನ ಪದಕ (೬೬ ಕೆಜಿ ಫ್ರೀಸ್ಟೈಲ್ ವಿಭಾಗ) ಗೆಲ್ಲುವ ಮೂಲಕ ಬೆಳಕಿಗೆ ಬಂದರು. ಇದು ೧೯೫೨ ರ ಹೆಲ್ಸಿಂಕ್ಸಿ ಓಲಂಪಿಕ್ಸ್ ನಂತರ ಕುಸ್ತಿಯಲ್ಲಿ ಬಂದ ಮೊದಲ ಓಲಂಪಿಕ್ಸ್ ಪದಕವಾಗಿತ್ತು. ಸುಶೀಲ್ ಕುಮಾರ್ ತದನಂತರ ರಷ್ಯಾದ ಮಾಸ್ಕೋದಲ್ಲ್ಲಿ ೨೦೧೦ರಲ್ಲಿ ನಡೆದ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲೂ ಅಮೋಘ ಪ್ರದರ್ಶನ ನೀಡಿ ೬೬ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದರು. ೨೦೧೨ರಲ್ಲಿ ಲಂಡನ್‌ನಲ್ಲಿ ನಡೆದ ಓಲಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಸತತವಾಗಿ ಎರಡು ವೈಯಕ್ತಿಕ ಓಲಂಪಿಕ್ ಪದಕ ಗೆದ್ದ ಮೊದಲ ಹಾಗೂ ಏಕೈಕ ಭಾರತೀಯ ಕ್ರೀಡಾಪಟು ಎನಿಸಿಕೊಂಡರು. ಸುಶೀಲ್ ಕುಮಾರ್ ‌ರವರನ್ನು ಭಾರತ ಸರ್ಕಾರವು ೨೦೦೯ರ ಜುಲೈನಲ್ಲಿ ರಾಜೀವ್ ಗಾಂಧೀ ಖೇಲ್‌ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಸ್ತುತ(೨೦೧೪) ಸುಶೀಲ್ ಕುಮಾರ್‌ರವರು ಸ್ಕಾಟ್ಲೆಂಡಿನ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ೭೪ ಕೆಜಿ ವಿಭಾಗದ ಫ್ರೀಸ್ಟೈಲ್ ವಿಭಾಗದ ಕುಸ್ತಿಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. [] []

ಉಲ್ಲೇಖಗಳು

[ಬದಲಾಯಿಸಿ]
  1. http://m.varthabharati.in/article/2016_12_30/55091
  2. ಪದ್ಮಭೂಷಣ ಪ್ರಶಸ್ತಿಗೆ ಕುಸ್ತಿಪಟು ಸುಶೀಲ್ ಹೆಸರು ಶಿಫಾರಸು