ಲ್ಹೋತ್ಸೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೌಂಟ್ ಎವರೆಸ್ಟ್ ಒಳಗೊಂಡಿರುವ ಹಿಮಾಲಯ ಪರ್ವತ ಶ್ರೇಣಿಗಳು
ಲ್ಹೋತ್ಸೆ ಪರ್ವತದ ದಕ್ಷಿಣ ಮುಖ

ಲ್ಹೋತ್ಸೆ ಜಗತ್ತಿನ ೪ ನೆಯ ಅತ್ಯುನ್ನತ ಪರ್ವತಶಿಖರ. ನೇಪಾಳ ಮತ್ತು ಟಿಬೆಟ್ ಗಳ ಗಡಿಯಲ್ಲಿರುವ ಲ್ಹೋತ್ಸೆಯ ಮುಖ್ಯ ಶಿಖರವು ೮೫೧೬ ಮೀ.(೨೭೯೪೦ ಅಡಿ) ಗಳಷ್ಟು ಎತ್ತರವಿದ್ದರೆ ಪೂರ್ವ ಉಪಶಿಖರವು ೮೪೧೪ ಮೀ. ಮತ್ತು ಲ್ಹೋತ್ಸೆ ಶಾರ್ ಶಿಖರವು ೮೩೮೩ ಮೀ. ಎತ್ತರವುಳ್ಳವು. ಎವರೆಸ್ಟ್ ಪರ್ವತದ ಸನಿಹದಲ್ಲಿರುವುದರಿಂದಾಗಿ ಲ್ಹೋತ್ಸೆ ಸಾಕಷ್ಟು ಪ್ರಸಿದ್ಧಿ ಹೊಂದಿದೆ. ಇದರ ದಕ್ಷಿಣ ಮುಖವು ಅತಿ ಕಡಿದಾಗಿದ್ದು ಈವರೆಗೆ ಕೆಲವೇ ಪರ್ವತಾರೋಹಿಗಳು ಈ ಮಾರ್ಗದ ಮೂಲಕ ಶಿಖರವನ್ನು ತಲುಪಿರುವರು. ಗಣನೀಯ ಸಂಖ್ಯೆಯಲ್ಲಿ ಪರ್ವತಾರೋಹಿಗಳು ಪ್ರಾಣವನ್ನು ಸಹ ತೆತ್ತಿರುವರು. ೧೯೫೬ರ ಮೇ ೧೮ರಂದೊ ಸ್ವಿಸ್ ತಂಡ ಇಬ್ಬರು ಪರ್ವತಾರೋಹಿಗಳು ಲ್ಹೋತ್ಸೆಯ ಶಿಖರವನ್ನು ಮೊಟ್ಟಮೊದಲ ಬಾರಿಗೆ ತಲುಪಿದರು. ಈ ಹಿಂದೆ ಈ ಶಿಖರವನ್ನು ೧೯೯೫ ರಲ್ಲಿ ಇಂಟರ್ನ್ಯಾಷನಲ್ ಹಿಮಾಲಯದವರು ನಾರ್ಮನ್ ಡಿಹ್ರೆನ್ಫರ್ತ್ ನೇತೃತ್ವದಲ್ಲಿ ದಂಡಯಾತ್ರೆ ನಡೆಸಿದ್ದರು.ಈ ದಂಡಯಾತ್ರೆಯೂ ೨ ಆಸ್ಟ್ರಿಯನ್ನರು,೨ ಸ್ವಿಸ್ ರನ್ನು ಹೊಂದಿತ್ತು.

ಬಾಹ್ಯ ಸಂಪರ್ಕಕೊಂಡಿಗಳು[ಬದಲಾಯಿಸಿ]