ವಿಷಯಕ್ಕೆ ಹೋಗು

ಹಾರ್ನಿಮನ್ ಸರ್ಕಲ್, ಮುಂಬೈ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಾರ್ನಿಮನ್ ಸರ್ಕಲ್, ಮುಂಬಯಿ

'ಹಾರ್ನಿಮನ್ ಸರ್ಕಲ್,'('Horniman Circle', Mumbai') ದಕ್ಷಿಣ ಮುಂಬಯಿ ನ ಕೋಟೆ ಪ್ರದೇಶದ, ಸಾರ್ವಜನಿಕ ಪಾರ್ಕ್ ಗಳಲ್ಲಿ, ಪ್ರಮುಖವಾದದ್ದು.[] ಒಟ್ಟು ವಿಸ್ತೀರ್ಣ, ೧೨,೦೮೧ ಚದರಗಜಗಳು, (೧೦,೧೦೧ ಚದರ ಮೀಟರ್ ಗಳು). ಇಲ್ಲಿ ದೇಶದ 'ಪ್ರಮುಖ ಬ್ಯಾಂಕ್ ಗಳು', 'ಆಫೀಸ್ ಕಾಂಪ್ಲೆಕ್ಸ್ 'ಗಳು, ೧೮ ನೆಯ ಶತಮಾನದಲ್ಲಿ, 'ಮುಂಬಯಿ ಗ್ರೀನ್ಸ್', ಎಂದು ಕರೆಯಲಾಗಿತ್ತು. ಈ ಪ್ರದೇಶದಲ್ಲಿ ಹತ್ತಿ ಬೇಲ್ ಗಳನ್ನು ಶೇಖರಿಸಿಡಲಾಗುತ್ತಿತ್ತು. ನಂತರ ಅವುಗಳನ್ನು ಕೊಲಾಬಾ ದಲ್ಲಿ ವರ್ಗಾಯಿಸಲಾಯಿತು. ಡಾಕ್ ಯಾರ್ಡ್ ಹತ್ತಿರವೇ ಇರುವುದರಿಂದ, ಸರಕು-ಸಾಮಾನುಗಳನ್ನು ಎತ್ತಿ ಹಡಗುಗಳಲ್ಲಿ ಇಟ್ಟು, ರವಾನಿಸಲು ಅನುಕೂಲವಾಗುತ್ತಿತ್ತು. ೧೮೪೨ ರ ಮಧ್ಯಭಾಗದಲ್ಲಿ, ತೆಂಗಿನ ಕಾಯಿಗಳನ್ನು ಇಲ್ಲಿ ಸಂಗ್ರಹಿಸಿಡುತ್ತಿದ್ದರು. ಕಸ, ಕಡ್ಡಿ ಮತ್ತು ತ್ಯಾಜ್ಯವಸ್ತುಗಳಿಗೆ ಇದು ಜಾಗವಾಗಿತ್ತು. ಆಗಿನ ಪೋಲಿಸ್ ಕಮೀಶನರ್, 'ಮಿ. ಚಾರ್ಲ್ಸ್ ಫೋಜೆಟ್,'ರವರು, ಈ 'ಗ್ರೀನ್ ಪ್ರದೇಶ,' ವನ್ನು ಅನೇಕ ವಾಣಿಜ್ಯ ಕಟ್ಟಡಗಳಮಧ್ಯೆ, 'ಉದ್ಯಾನದ ವೃತ್ತವನ್ನಾಗಿ,' ಪರಿವರ್ತಿಸಲು, ಆಶಿಸಿದ್ದರು. " ಲಾರ್ಡ್ ಎಲ್ಫಿನ್ ಸ್ಟನ್," ಮತ್ತು ಸರ್ ಬಾರ್ಟ್ ಫ್ರೆರ್", ಗವರ್ನರ್ ಗಳು, ಅವರ ಮಾತನ್ನು ಅನುಮೋದಿಸಿ, ೧೮೬೯ ರಲ್ಲಿ ಈ ಉದ್ಯಾನವನವನ್ನು, ಪ್ರಾರಂಭಿಸಿದರು ; ಮುಗಿದದ್ದು, ೧೮೭೨ ರಲ್ಲಿ. ಪಾರ್ಕ್ ನ ಸುತ್ತಲೂ ನಡೆಯಲು ಕಾಲುದಾರಿಯನ್ನು ನಿರ್ಮಾಣಮಾಡಿ, ಸುತ್ತಲೂ ಗಿಡಮರಗಳನ್ನು ನೆಟ್ಟರು. ಆಗ ಈ ವೃತ್ತಕ್ಕೆ, 'ಎಲ್ಫಿನ್ ಸ್ಟನ್ ಸರ್ಕಲ್', ಎಂದು ಹೆಸರಿಟ್ಟರು. ಸನಿಹದಲ್ಲಿ, ಒಂದು ಅತ್ಯಾಧುನಿಕವಾದ, 'ಆರ್ಟ್ ಡೆಕೊ, ಕಬ್ಬಿಣದ ಪೈಪ್,' ಗಳಿಂದ ನೀರಿನ ಕಾರಂಜಿ, ಯನ್ನೂ, ನಿರ್ಮಿಸಿದರು.

ಬೆಂಜಮಿನ್ ಹಾರ್ನಿಮನ್, 'ಮುಂಬಯಿ ಕ್ರಾನಿಕಲ್ ಪತ್ರಿಕೆ,' ಯ, ಸಂಪಾದಕ

[ಬದಲಾಯಿಸಿ]
ಚಿತ್ರ:Harniman Circle-2.jpg
ಹಾರ್ನಿಮನ್ ಸರ್ಕಲ್, ಮುಂಬಯಿ
  • ಬೊಂಬಾಯಿನ, ಪಾರ್ಸಿ ಸಮುದಾಯಗಳು, ಈ ಪಾರ್ಕ್ ನ್ನು, ಸ್ವಾತಂತ್ರ್ಯಪೂರ್ವದಲ್ಲಿ, ಸಾಮಾಜಿಕ ಕಾರ್ಯಕ್ರಮಗಳಿಗಾಗಿ ಬಳಸುತ್ತಿದ್ದರು. ಪ್ರತಿ ಸಾಯಂಕಾಲದಲ್ಲಿ, 'ಮಿಲಿಟರಿ ಬ್ಯಾಂಡ್ ಸಂಗೀತ,' ವನ್ನು ನುಡಿಸುತ್ತಿದ್ದರು. 'ಏಶಿಯಾಟಿಕ್ ಲೈಬ್ರರಿ,' ಗೆ ಅಭಿಮುಖವಾಗಿರುವ, ಈ ಉದ್ಯಾನ, ಮುಂಬಯಿ ನಗರದ ಅತಿ ಪ್ರಮುಖ ಪ್ರದೇಶಗಳಲ್ಲೊಂದು. ೧೯೪೭ ರ ನಂತರ ಈ ಪಾರ್ಕ್ ಗೆ, "ಮುಂಬಯಿ ಕ್ರಾನಿಕಲ್ ಪತ್ರಿಕೆ" ಯ ಸಂಪಾದಕ, 'ಬೆಂಜಮಿನ್ ಗೈ ಹಾರ್ನಿಮನ್,' ರವರ ಹೆಸರನ್ನು ಇಡಲಾಯಿತು. ಬೆಂಜಮಿನ್ ರವರು, ಸ್ವಾತಂತ್ರ್ಯದ ಹೋರಾಟದಸಮಯದಲ್ಲಿ, ಬ್ರಿಟಿಷ್ ಸರ್ಕಾರದ ಪಾಲಿಸಿಗಳನ್ನು ವಿರೋಧಿಸಿ, ಬರೆಯುತ್ತಿದ್ದರು.

'ಹಾರ್ನಿಮನ್ ಸರ್ಕಲ್,' ಹತ್ತಿರದ ಖ್ಯಾತ ಸ್ಥಳಗಳು :

[ಬದಲಾಯಿಸಿ]
ಚಿತ್ರ:Harniman Circle-3.jpg
ಹಾರ್ನಿಮನ್ ಸರ್ಕಲ್, ಮುಂಬಯಿ

ಉಲ್ಲೇಖಗಳು

[ಬದಲಾಯಿಸಿ]
  1. " ಹಾರ್ನಿಮನ್ ಸರ್ಕಲ್ ಗಾರ್ಡನ್ಸ್'