ಟಿ.ಕೆ.ರಾಮಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
T. K. Ramamoorthy
ಮೂಲಸ್ಥಳTiruchirapalli, Madras Presidency, British India
ವೃತ್ತಿFilm score composer, music director
ವಾದ್ಯಗಳುkeyboard/harmonium/violin

ತುಮಕೂರು ಕರಣಿಕ ರಾಮಮೂರ್ತಿ ಕರ್ನಾಟಕ ಶಾಸ್ತ್ರೀಯ ಸಂಗೀತ(ಜನನ: ಡಿಸೆಂಬರ್ ೧೪, ೧೯೨೬ ಮರಣ: ಜುಲೈ ೧೧, ೧೯೮೮) ಪದ್ಧತಿಯ ಅತಿ ಪ್ರಸಿದ್ಧ ಗಾಯಕರಲ್ಲಿ ಒಬ್ಬರು.

ಟಿ.ಕೆ.ರಾಮಮೂರ್ತಿಯವರು ೧೯೨೬ ರಲ್ಲಿ ತುಮಕೂರು ನಗರದಲ್ಲಿ ಜನಿಸಿದರು. ಸಣ್ಣ ವಯಸ್ಸಿನಲ್ಲಿಯೇ ತಾಯಿಯಿಂದ ಸಂಗೀತವನ್ನು ಕಲಿಯಲಾರಂಭಿಸಿದ ಇವರು ನಂತರ ತುಮಕೂರು ಜಿಲ್ಲೆಯ ಪ್ರಸಿದ್ಧ ಗಾಯಕರಾದ ಹೊನ್ನಂಜಾಚಾರ್ಯರ ಶಿಷ್ಯರಾದರು. ಕಿರಿಯ ವಯಸ್ಸಿನಲ್ಲೇ ಸಂಗೀತದಲ್ಲಿ ಅಪಾರ ಸಾಧನೆ ಗೈದು ತಮ್ಮ ಕಂಠಸಿರಿಯಿಂದ ಕೇಳುಗರನ್ನು ರಂಜಿಸಿದ ಇವರು, ನಾಟಕಗಳಲ್ಲೂ, ಸಿನಿಮಾ ರಂಗದಲ್ಲೂ ಪಾತ್ರವಹಿಸಿದ್ದರು. ಕನ್ನಡದ ಮೊದಲ ಪುರಂದರದಾಸ ಚಲನಚಿತ್ರದಲ್ಲಿ ಆ ಪಾತ್ರದಲ್ಲಿ ನಟಿಸಿದವರು ಇವರೇ ಎಂದು ತಿಳಿದಿರುವುದು ಕೆಲವರಿಗೆ ಮಾತ್ರ! ತದನಂತರ ಪಂಜಾಬ್ ಕೇಸರಿ ಚಿತ್ರದಲ್ಲೂ ನಟಿಸಿದ್ದರು. ಆದರೂ ಸಂಗೀತ ಕ್ಷೇತ್ರವೇ ಮತ್ತೆ ಇವರನ್ನು ಕೈಬೀಸಿ ಕರೆಯಿತು. ಅಲ್ಲಿಂದ ಚಿತ್ರರಂಗವನ್ನು ತೊರೆದು ಕರ್ನಾಟಕ ಶಾಸ್ತ್ರೀಯ ಸಂಗೀತವನ್ನೇ ಉಸಿರಾಗಿಸಿಕೊಂಡರು.

ಪ್ರಶಸ್ತಿಗಳು[ಬದಲಾಯಿಸಿ]