ಸಾಸ್ತ್ರ Saastra
This article contains content that is written like an advertisement. |
`ಸಾಸ್ತ್ರ’ ಇಕೋಸಿಸ್ಟಮ್ ಸಾಫ್ಟ್ ವೇರ್ ಭಾರತದಲ್ಲಿ ಸಾಸ್ತ್ರ ಇಕೋಸಿಸ್ಟಮ್ ಸಾಫ್ಟ್ ವೇರ್ ಆತಿಥ್ಯ ಮತ್ತು ಪ್ರವಾಸ ಕ್ಷೇತ್ರದ ವಹಿವಾಟಿನಲ್ಲಿ ಸ್ವಯಂಚಾಲನೆ ತರಲು ಹಾಗೂ ಕಾರ್ಯಕ್ಷಮತೆ ಹೆಚ್ಚಿಸುವ ಉದ್ದೇಶದಿಂದ ತನ್ನ ಕಾರ್ಯವನ್ನು ಭಾರತದಲ್ಲಿ ಪ್ರಾರಂಭಿಸಿದೆ. ಇದು ಮುಲತ: ಬೆಂಗಳೂರಿನ ಸಂಸ್ಥೆ. ಶೇಕಡಾ ೧೦೦ರಷ್ಟು ಅಂತರಜಾಲ ಆಧಾರಿತ ಇಕೋಸಿಸ್ಟಮ್ ಸಾಫ್ಟ್ ವೇರ್ ಆದ ಸಾಸ್ತ್ರ ಕಳೆದ ೨೫ ವರ್ಷಗಳಿಂದಲೂ ಬದಲಾವಣೆ ಕಾಣದ ಆತಿಥ್ಯ ಮತ್ತು ಪ್ರವಾಸ ಕ್ಷೇತ್ರದ ವ್ಯವಹಾರವನ್ನು ಅಭಿವ್ರದ್ದಿ ಪಡಿಸಲಿದ್ದಾರೆ. ಸಾಸ್ತ್ರವು ಗ್ರಾಹಕರಿಗೆ ಅವಶ್ಯವೆನ್ನಿಸಿದ ಸವಲತ್ತುಗಳನ್ನು ಸ್ವಯಂಚಾಲಿತವಾಗಿ ಮುರನೇ ವ್ಯಕ್ತಿಯ ಪ್ರವೇಶವಿಲ್ಲದೆ ನೇರವಾಗಿ ಸಂಪರ್ಕಿಸಬಹುದಾಗಿದ್ದು, ಯಾವುದೇ ಸಂಶಯ ಮತ್ತು ಅವ್ಯವಸ್ಥೆಗೆ ಆಸ್ಪದ ಇರುವುದಿಲ್ಲ. ಸಾಸ್ತ್ರವು ಎಲ್ಲಾ ಗ್ರಾಹಕರಿಗೆ ವೈಯುಕ್ತಿಕವಾಗಿ ಅವಶ್ಯವೆನ್ನಿಸಿದವುಗಳನ್ನು, ಗ್ರಾಹಕರಿಗೆ ಅನುಕೂಲವಾಗುವ ಕಡೆಗಳನ್ನು ನೀಡುತ್ತದೆ. ವಾಸಿಸಲು ಅವಶ್ಯವೆನ್ನಿಸುವ ಹೋಟೆಲ್ ಗಳು, ರೆಸಾರ್ಟ್ ಗಳು, ಸರ್ವೀಸ್ ಅಪಾರ್ಟ್ ಮೆಂಟ್ ಗಳು, ಹೋಮ್ ಸ್ಟೇಗಳು, ಹಾಸ್ಟೆಲ್ ಗಳು, ಕಂಪೆನಿ ಸ್ವಾಮ್ಯದ ಅತಿಥಿ ಗ್ರಹಗಳು ಮುಂತಾದ ವಾಸ್ತವ್ಯಗಳು ಮತ್ತು `MICE'(ಮೀಟಿಂಗ್, ಇನ್ಸೆಂಟಿವ್ಸ್, ಕಾನ್ಫರೆನ್ಸ್, ಎಕ್ಸ್ ಪೋಸಿಷನ್) ವಹಿವಾಟುಗಳಿಗೆ ಅಗತ್ಯವನ್ನು ಪೂರೈಸುವ ಉತ್ಪನ್ನಗಳನ್ನು ಸಾಸ್ತ್ರವು ಈಗಾಗಲೇ ಬಿಡುಗಡೆ ಮಾಡಿದೆ. ‘MICE'ಕೇವಲ ಹೋಟೆಲ್ ಮುಲದ ಕಾನ್ಪರೆನ್ಸ್/ಮೀಟಿಂಗ್ ಕೋಣೆಗಳನ್ನು ಮತ್ತು ಕಾನ್ಪರೆನ್ಸ್/ಕನ್ ವೆನ್ ಷನ್ ಸೆಂಟರ್ ಗಳನ್ನು ಆಯೋಜಿಸಿದೆ. ಸಾಸ್ತ್ರವು ‘MICE'ನ ಎಲ್ಲಾ ಸವಲತ್ತುಗಳನ್ನು ಒಳಗೊಂಡಿರುವುದರ ಜೊತೆಗೆ ಇನ್ನೂ ‘MICE' ಆಯೋಜಿಸದೇ ಇದ್ದಂತಹ ಕ್ರೀಡಾಂಗಣ, ಆಡಿಟೋರಿಯಂ, ವಸ್ತು ಪ್ರದರ್ಶನಾಲಯ ಮತ್ತು ಥಿಯೇಟರ್ ಗಳನ್ನು ಪ್ರಾರಂಭಿಸುವುದರ ಜೊತೆಗೆ ಹೆಚ್ಚಿನ ಆದಾಯ ಮತ್ತು ಲಾಭವನ್ನು ಪಡೆಯಬಹುದು. ಅಧಿಕ ಖರ್ಚು ಮತ್ತು ಲಭ್ಯವಿರುವ ಸಾಫ್ಟ್ ವೇರ್ ಗಳ ಅಸಮರ್ಪಕ ಬಳಕೆಯಿಂದ ಇಂದಿಗೂ ಅನೇಕ ಹೋಟೆಲ್, ರೆಸಾರ್ಟ್, ಹಾಗೂ ಹೆಚ್ಚಿನ ಎಲ್ಲಾ ಸರ್ವೀಸ್ ಅಪಾರ್ಟ್ ಮೆಂಟ್ ಮತ್ತು ಹೋಮ್ ಸ್ಟೇಗಳು ಸ್ವಯಂಚಾಲಿತವಾಗಿಲ್ಲ. ಆದ್ದರಿಂದ ಇನ್ನು ಮುಂದೆ ಸ್ವಯಂಚಾಲಿತವಾದ ಸರ್ವೀಸ್ ಅಪಾರ್ಟ್ ಮೆಂಟ್, ಹೋಮ್ ಸ್ಟೇ ಮುಂತಾದ ವಾಸ್ತವ್ಯಗಳ ವ್ಯವಹಾರದ ಜೊತೆಗೆ ಅವುಗಳ ಸಹೋದರರೆನ್ನಿಸಿದ ಹೋಟೆಲ್ ಮತ್ತು ರೆಸಾರ್ಟ್ ಗಳನ್ನು ಗ್ರಾಹಕರಿಗೆ ನೀಡಿ ಅವರ ಅನುಕೂಲಕ್ಕೆ ತಕ್ಕದಾದ ಹಾಗೂ ಅವರಿಗೆ ಇನ್ನೂ ಹೆಚ್ಚಾಗಿ ವ್ಯವಹಾರದಲ್ಲಿ ಒಳಗೊಳ್ಳಲು ಇವು ಸಹಕಾರಿಯಾಗುವಂತೆ ಮಾಡಲಾಗುವುದು. ಎಲ್ಲವೂ ಉಪಯುಕ್ತಕಾರಿಯಾಗಿದ್ದು ಗ್ರಾಹಕರು ಅತೀ ಕಡಿಮೆ ತಿಂಗಳ ಬಾಡಿಗೆಯನ್ನು ಕೊಟ್ಟು ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಪ್ರಪಂಚದಲ್ಲಿ ಇದೇ ಮೊದಲ ಬಾರಿಗೆ ಮಾಲಿಕರು ಗ್ರಾಹಕರಿಗೆ ನೀಡಲು ಉದ್ದೇಶಿಸಿದ್ದ ಕಾರ್ಯಗಳಿಗಿಂತಲೂ ಹೆಚ್ಚಿನ ಕಾರ್ಯಗಳನ್ನು ಸಾಸ್ತ್ರ ಒದಗಿಸುತ್ತಿದೆ. ಉದಾಹರಣೆಗೆ ಬಹುಪಯೋಗಿ ಸಭಾಂಗಣದ ಮಾಲಿಕನೀಗ ಹೆಚ್ಚಿನ ಸವಲತ್ತುಗಳ ಜೊತೆಗೆ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಗ್ರಾಹಕರಿಗೆ ಹಾಗೂ ಕಾರ್ಪೋರೆಟ್ ಬಳಕೆದಾರರು ನೀಡಬಹುದಾಗಿದೆ. ಅಥವಾ ಮದುವೆ ಸಭಾಂಗಣದ ಮಾಲಿಕನು ಮದುವೆ ಸಮಾರಂಭದ ಬಾಡಿಗೆಯ ಜೊತೆಗೆ ಇತರೆ ಕಾರ್ಯಕ್ರಮಗಳಿಗೂ ಸಭಾಂಗಣವನ್ನು ಬಾಡಿಗೆಗೆ ಕೊಟ್ಟು ಆದಾಯ ಪಡೆಯಬಹುದಾಗಿದೆ.ಕಾರ್ಪೋರೆಟ್ ಬಳಕೆದಾರರು ಮತ್ತು ಗ್ರಾಹಕರು ‘MICE'ನ ಕಾನ್ಫರೆನ್ಸ್, ಮೀಟಿಂಗ್ಸ್, ಪಾರ್ಟೀಸ್, ಮದುವೆಗಳು ಹಾಗೂ ವಸ್ತು ಪ್ರದರ್ಶನಾಲಯಗಳನ್ನು ಸರಿಯಾಗಿದೆಯೇ ಎಂದು ನೋಡಬಹುದು ಅಥವಾ ಅಂತರ್ಜಾಲದ ಮುಲಕ ವಿವಿಧ ಸೌಲಭ್ಯ ಹಾಗೂ ಅವುಗಳ ಬೆಲೆಗಳ ಕುರಿತು ಅವರ ‘MICE'ಗೆ ಬೇಕಾದಂತೆ ಮಾಹಿತಿ ಪಡೆಯಬಹುದು. ಪ್ರಾರಂಭದಲ್ಲಿ ಸಾಸ್ತ್ರವು ಅಂತರಿಕ ವ್ಯವಹಾರದ ಕಾರ್ಯಗಳಾದ ಮೀಸಲಾತಿ, ಅತಿಥಿ ಸೇವಾ ಸೌಲಭ್ಯ, ಕಾರ್ಪೋರೆಟ್ ಗ್ರಾಹಕ ವ್ಯವಸ್ಥೆಯನ್ನು ಸ್ವಯಂಚಾಲಿತವನ್ನಾಗಿಸುತ್ತದೆ. ನಂತರ ಅವರಿಗೆ ವರದಿಗಳನ್ನು ನೀಡಲಾಗುವುದು. ಭಾರತದಲ್ಲಿ ಸಾಸ್ತ್ರ ಸಾಫ್ಟ್ ವೇರನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಷ್ಣು ಮುರಳಿ ಕೊಂಡೂರು ಅವರು ಮಾತನಾಡಿ, ‘ಸಾಸ್ತ್ರವ್ಯ್ ಆಸ್ತಿ ವಹಿವಾಟು’ ಹಂಚಿಕೆ ಮತ್ತು ಮಾರಾಟವನ್ನು ಒಂದೇ ಇಕೋ ಸಿಸ್ಟಮ್ ನಲ್ಲಿ ಕೊನೆಗೊಳಿಸಲ್ಲಿದ್ದು, ಅದು ಆತಿಥ್ಯ ಮತ್ತು ಪ್ರವಾಸ ಪಟ್ಟಿಯಲ್ಲಿರುವ ಮಾಲಿಕರು ನೇರವಾಗಿ ಪಟ್ಟಿಯಲ್ಲಿರುವ ಗ್ರಾಹಕರಿಗೆ ಮಾಹಿತಿ ಒದಗಿಸಲು ಸಹಕಾರಿಯಾಗಲಿದೆ. ಇಂತಹ ಸುಲಭ ಮತ್ತು ಶಕ್ತಿದಾಯಕ ಮಾದರಿಯು ಮಾಲಿಕರಿಗೆ ಕಡಿಮೆ ಖರ್ಚಿನಲ್ಲಿ ವ್ಯವಹಾರ ಮಾಡಲು ಮತ್ತು ಇದರ ಲಾಭವನ್ನು ಗ್ರಾಹಕರಿಗೆ ತಲುಪಿಸಲು ಸಹಕಾರಿಯಾಗಲಿದೆ ಎಂದರು. ಸಾಸ್ತ್ರವು ಶೇ.೧೫ರಷ್ಟು ವ್ಯವಹಾರಿಕ ಕಾರ್ಯಚರಣೆ ವೆಚ್ಚವನ್ನು ಕಡಿಮೆ ಮಾಡಬಲ್ಲದ್ದಾಗಿದ್ದು ಇದರ ಲಾಭವನ್ನು ಗ್ರಾಹಕರಿಗೆ ಕೋಣೆಗಳ ಮೇಲೆ ಕಡಿಮೆ ಪ್ರಮಾಣದ ತೆರಿಗೆ ವಿಧಿಸುವುದರ ಮುಲಕ ತಲುಪಿಸಬಹುದೆಂದು ಅವರು ಆಶಯ ವ್ಯಕ್ತಪಡಿಸಿದರು. ಸಾಸ್ತ್ರವು ವಸತಿ ಹಾಗೂ ‘MICE' ಮಾಲಿಕರೊಡನೆ ನೇರ ಸಂಪರ್ಕ ಹೊಂದಿರುವುದರಿಂದ ವಿತರಣಾ ಪದ್ದತಿಯನ್ನು ಕೈ ಬಿಡಲಾಗುವುದು. ಈ ಕಾರ್ಯಚರಣೆಯಲ್ಲಿ ಇದು ಮಾಲಿಕರು ಒಂದು ವರ್ಷದಲ್ಲಿ ದಲ್ಲಾಳಿಗಳಿಗೆ ನೀಡಬೇಕಾದ ೮೫೦ ಕೋಟಿ ರೂಪಾಯಿಗೆ ಹೆಚ್ಚಿನ ಹಣವನ್ನು ಉಳಿಸಿದೆ. ಇದು ಕೇವಲ ಹೋಟೆಲ್ ಬಗ್ಗೆಗಿನ ಮಾಹಿತಿ. ಇತರೆ ವಸತಿಗಾಗಿ ಇನ್ನೆಷ್ಟು ಖರ್ಚು ಮಾಡಲಿಕ್ಕಿಲ್ಲ ನೀವೇ ಊಹಿಸಿ ನೋಡಿ ಎಂದು ಅವರು ವಿವರಿಸಿದರು. ಸಾಸ್ತ್ರವು ಶೇಕಡಾ ೧೦೦ರಷ್ಟು ಅಂತರಜಾಲ ಅಧಾರಿತ ಉತ್ಪನ್ನವಾದ್ದರಿಂದ ಅವರು ಹೆಚ್ಚು ಖರ್ಚು ಮಾಡದೇ ಅತೀ ಕಡಿಮೆ ತಿಂಗಳ ಬಾಡಿಗೆ ನೀಡಿ ಅತ್ಯುತ್ತಮ ಆಧುನಿಕ ಸೌಲಭ್ಯವನ್ನು ಪಡೆಯುತ್ತಾರೆ. ಇದರಿಂದ ಹಣದ ದುರ್ಬಳಕೆಯನ್ನು ತಡೆಯಬಹುದು’ಎಂದವರು ನುಡಿದರು. ವಿಷ್ಣು ಮುರಳಿ ಕೊಂಡೂರು ಅವರು ಹೋಟೆಲ್, ವಿಮಾನಯಾನ, ಮಾಹಿತಿ ತಂತ್ರಜಾನ ಕ್ಷೇತ್ರಗಳಲ್ಲಿ ೧೭ ವರ್ಷಗಳ ಅನುಭವ ಹೊಂದಿದ್ದಾರೆ. ಅವರ ಈ ಅನುಭವವು ಸರಳ, ಕೈಗೆಟಕುವ ಬೆಲೆಯ, ಉಪಯೋಗಿಸಲು ಶಕ್ತಿಶಾಲಿಯಾದ ಹಾಗೂ ಪ್ರತ್ಯೇಕತೆಯಿಂದ ಕೂಡಿರುವ ಸಾಸ್ತ್ರ ಸಾಫ್ಟ್ವೇರನ್ನು ತಯಾರಿಸಲು ಸಹಕಾರಿಯಾಯಿತು. ಸಾಸ್ತ್ರವು ಪ್ರಪಂಚದ ಪ್ರಪ್ರಥಮ ಆತಿಥ್ಯ ಮತ್ತು ಪ್ರವಾಸ ಕ್ಷೇತ್ರಗಳ ಸ್ವಯಂಚಾಲನೆ ನೀಡುವ ಇಕೋಸಿಸ್ಟಮ್ ಸಾಫ್ಟ್ ವೇರ್ ಆಗಿದ್ದು, ಕಳೆದ ೨೫ ವರ್ಷಗಳಿಂದಲೂ ಯಾವುದೇ ರೀತಿಯ ಬದಲಾವಣೆ ಕಾಣದ ಉದ್ಯಮರಂಗದಲ್ಲಿ ಇದೇ ಮೊದಲ ಬಾರಿಗೆ ಗ್ರಾಹಕರೊಡನೆ ನೇರ ಸಂಪರ್ಕವನ್ನೊಳಗೊಂಡಿರುವ ಉದ್ಯಮವಾಗಿದೆ. ಸಾಸ್ತ್ರವು ತಮ್ಮ ವ್ಯವಹಾರಿಕ ಮಾಲಿಕರಿಗೆ ಶೂನ್ಯ ಆದಾಯ ಖರ್ಚು ಮತ್ತು ಶೂನ್ಯ ಕಮಿಷನ್ ಸಾಫ್ಟ್ ವೇರ್ ಗಳಿಗೆ ಶೇಕಡಾ ೧೦೦ ರಷ್ಟು ಅಂತರಜಾಲ ಆಧಾರಿತ ಸೌಲಭ್ಯ ಒದಗಿಸಿದ್ದಲ್ಲದೆ ಅವರ ಹಣ ಉಳಿತಾಯವಾಗುವಿಕೆ ಮತ್ತು ಹೆಚ್ಚಿನ ಲಾಭ ಸಿಗುವಂತೆ ಮಾಡಿದೆ. ಸಾಸ್ತ್ರವು ಈಗ ಆತಿಥ್ಯ ಮತ್ತು ‘MICE'ವ್ಯವಹಾರಕ್ಕೆ ಲಭ್ಯವಾಗಿದ್ದು ಇನ್ನು ಮುಂದೆ ಹೆಚ್ಚಿನ ಕ್ಷೇತ್ರಕ್ಕೂ ವ್ಯಾಪಿಸಲಿದೆ.