ವಿಷಯಕ್ಕೆ ಹೋಗು

ಅಲೆಮಾರಿಯ ಅಂಡಮಾನ್ ಹಾಗು ಮಹಾನದಿ ನೈಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಲೆಮಾರಿಯ ಅಂಡಮಾನ್ ಹಾಗು ಮಹಾನದಿ ನೈಲ್ ಪೂರ್ಣಚಂದ್ರ ತೇಜಸ್ವಿಯವರ ಒಂದು ಕೃತಿ. ಪ್ರಕಾಶಕರು: ಪುಸ್ತಕ ಪ್ರಕಾಶನ.

ಬಗ್ಗೆ

[ಬದಲಾಯಿಸಿ]

ಈ ಪುಸ್ತಕವು ತೇಜಸ್ವಿಯವರ ಎರಡು ಕೃತಿಗಳ ಸಂಕಲನ. ಮೊದಲನೆಯದು 'ಅಲೆಮಾರಿಯ ಅಂಡಮಾನ್' ಎಂಬ ಅಂಡಮಾನ್ ಪ್ರವಾಸ ಕಥನ ಹಾಗು ಎರಡನೆಯದು 'ಮಹಾನದಿ ನೈಲ್' ಎಂಬ ನೈಲ್ ನದಿಯ ಇತಿಹಾಸದ ಹಾಗು ಆ ನದಿಯ ಮೇಲೆ ನಡೆದ ಐತಿಹಾಸಿಕ ಪರಿಶೋಧನೆಗಳ ಕಥೆ. "ಅಲೆಮಾರಿಯ ಅಂಡಮಾನ್ ಮತ್ತು ವಂಡೂರಿನ ಹವಳದ ದಂಡೆಗಳು" ಒಂದು ಅದ್ಬುತ ಪ್ರವಾಸ ಕಥನ. ಈ ಕೃತಿಯು ಕನ್ನಡ ಸಾಹಿತ್ಯ ರಂಗದಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ. ಕಾಲ ಮತ್ತು ದೇಶಗಳಲ್ಲಿ ಏಕಕಾಲಕ್ಕೆ ಚಲಿಸುವ ಲೇಖಕರ ಪ್ರಜ್ಞೆ ಹೊಸ ಅನುಭವವನ್ನು ನೀಡುತ್ತದೆ. ತೇಜಸ್ವಿಯವರ ಮಗು ಸಹಜ ಕುತೋಹಲವು, ಈ ಕೃತಿಯನ್ನು ಒಂದು ಅದ್ಬುತ ಪತ್ತೆದಾರಿ ಕಾದಂಬರಿಯನ್ನಾಗಿ ಪರಿವರ್ತಿಸಿದೆ. "ಮಹಾನದಿ ನೈಲ್" ಒಂದು ಅನ್ವೇಷನಾ ಕಥನ. ಇದು ಕೇವಲ ನೈಲ್ ನದಿಯ ಇತಿಹಾಸದ ಕಥೆಯಾಗಿರದೆ, ಇಡೀ ಈಜಿಪ್ಟ್ ಜನರ ಶತ-ಶತಮಾನಗಳ ಜೀವನದ ಸಂಷ್ಕಿಪ್ತ ಪರಿಚಯವಾಗಿದೆ. ನಿಜ. ತೇಜಸ್ವಿಯವರ ಈ ಕೃತಿ ಅಪ್ರತಿಮ ಕೃತಿ. ಯಾವುದೇ ಪ್ರವಾಸ ಹೊರಟಾಗ ನಾವು ಸುಮ್ಮನೆ ಮೇಲೆ ಮೇಲೆ ನೋಡುತ್ತಾ ಬಂದುಬಿಡುತ್ತೇವೆ. ಆ ಸ್ಥಳದ ಪೂರ್ತಿ ಮಾಹಿತಿ ವಿವರ ತಿಳಿಯುವುದೇ ಇಲ್ಲ. ಹಾ ಆ ಸ್ಥಳ ನೋಡಿದ್ದೇನೆ ಇಷ್ಟೆ. ತೇಜಸ್ವಿ ಹೇಳುತ್ತಾರೆ. ಯಾವುದೇ ಒಂದು ಪ್ರವಾಸ ಹೊರಟಾಗ ಆ ಸ್ಥಳ ನಿಮ್ಮೆದುರು ತೆರೆಯಬೇಕೆಂದರೆ ನಿಮ್ಮ ಬಳಿ ಒಂದು ಕೀಲಿ ಕೈಯಿರಲಿ. ಅದೂ ಎಂತದ್ದು? ಒಂದು ಕ್ಯಾಮರಾ, ಒಂದು ಮೀನಿನ ಗಾಳ, ಒಂದು ಬೈನಾಕುಲರ್ ಇತ್ಯಾದಿ ಆ ಪ್ರವಾಸಿ ಸ್ಥಳ ನಿಮ್ಮೆದುರು ತೆರೆಯುತ್ತಾ ಹೋಗುತ್ತದೆ.

ಅಂಡಮಾನ್ ಕೃತಿ ಓದುತ್ತಿದ್ದರೆ ನಾವೇ ಅಂಡಮಾನ್ ನಲ್ಲಿರುವಂತೆ ಭಾಸವಾಗುತ್ತದೆ. ಆ ವರ್ಣನೆ, ನವಿರು ಹಾಸ್ಯ ಸೂಪರ್ಬ್. ಅಂಡಮಾನಿನ ಸ್ಫಟಿಕ ಸಮುದ್ರ ಶುದ್ದ ಮರಳು ತೀರ ಬಣ್ಣ ಬಣ್ಣದ ಮೀನು ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನಾನು ಎಂದೂ ಜಿಂಗಾ ತಿಂದಿಲ್ಲ. ಆ ಕೃತಿಯಿಂದ ಆ ರುಚಿ ಆಸ್ವಾದಿಸಿದ್ದೇನೆ. ಆ ರುಚಿ ತಿನ್ನದೇ ನನ್ನ ಬಾಯಲ್ಲಿದೆ.

ಈ ಲೇಖನ ಪೂರ್ಣಚಂದ್ರ ತೇಜಸ್ವಿಯವರ ಕೃತಿಯೊಂದನ್ನು ಕುರಿತದ್ದು