ರಾಮಚಂದ್ರ ಕೊಟ್ಟಲಗಿ
ರಾಮಚಂದ್ರ ಕೊಟ್ಟಲಗಿಯವರು ೧೯೧೮ ಮೇ ೧೬ರಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿಯಲ್ಲಿ ಜನಿಸಿದರು. ಇವರು ನವೋದಯ ಕಾಲದ ಹೆಸರಾಂತ ಕವಿ ಹಾಗು ಕಾದಂಬರಿಕಾರರು.
ಸಾಹಿತ್ಯ
[ಬದಲಾಯಿಸಿ]ಮೊದಲ ಕಾದಂಬರಿ ದೀಪನಿರ್ವಾಣ. ‘ದೀಪ ಹತ್ತಿತು’ ಇದರ ಎರಡನೆಯ ಭಾಗ. ಉತ್ತರ ಕರ್ನಾಟಕದ ಬ್ರಾಹ್ಮಣ ಕುಟುಂಬದ ಮೂರು ತಲೆಮಾರಿನ ಬದುಕಿನ ಕಥೆಯ ಅನಾವರಣ. ಉತ್ತರ ಕರ್ನಾಟಕದ ಬದುಕನ್ನು ಅರ್ಥೈಸಿಕೊಳ್ಳಲು ಈ ಕಾದಂಬರಿ ಬಹು ಸಹಕಾರಿ. ಈ ಕಾದಂಬರಿಗಳು ಕೊಟ್ಟಲಗಿಯವರ ಸಹೋದರಿಯಿಂದ ಮರಾಠಿಗೂ ಅನುವಾದ. ‘ವಿಲಾಪಿಕಾ’, ‘ವೈನಿ ಸತ್ತಾಗ ನಾನ್ಯಾ ಅತ್ತಾಗ’ ಮತ್ತು ‘ನಾನು ಬಾಳ್ಯಾ ಜೋಶಿ’ ಇನ್ನಿತರ ಪ್ರಸಿದ್ಧ ಕಾದಂಬರಿಗಳು.
ಪ್ರತಿಯೊಬ್ಬ ಬರಹಗಾರರೂ ಬರಹವನ್ನು ಕವನದಿಂದಲೇ ಆರಂಭಿಸುವಂತೆ ಕೊಟ್ಟಲಗಿಯವರು ಬರೆದದ್ದೂ ಮೊದಲು ಕವನಗಳೇ. ‘ಪಿಪಾಸೆ’ ಮೊದಲ ಕವನ ಸಂಕಲನ. ‘ಪ್ರತಿಮಾ’ ಮತ್ತೊಂದು ಕವನ ಸಂಕಲನ. ಎರಡು ಕಥಾ ಸಂಕಲನಗಳು ಪ್ರಕಟಿತ-ಗೀಚುಗೆರೆ ಹಾಗೂ ಚೈತ್ರ ಪಲ್ಲವ. ‘ಭಾಷಾ’ ಸಮನ್ವಯದ ಸಮಸ್ಯೆ’ ಮತ್ತೊಂದು ಪ್ರಮುಖ ಕೃತಿ. ಕೆಲವು ನಾಟಕಗಳು ಪು.ಲ. ದೇಶಪಾಂಡೆ ಯವರಿಂದ ಮರಾಠಿಗೂ ಅನುವಾದ. ಕನ್ನಡ, ಮರಾಠಿ, ಇಂಗ್ಲಿಷ್ ಭಾಷೆಯಲ್ಲಿ ಪಡೆದ ಪ್ರಭುತ್ವ. ನೇರ ಮಾತುಗಾರರಾಗಿ ನಿಷ್ಠುರ ಕಟ್ಟಿಕೊಂಡವರು. ಕನ್ನಡ ವಾರಪತ್ರಿಕೆಯ ಸಂಪಾದಕರಾಗಿದ್ದರು.
ಕೃತಿಗಳು
[ಬದಲಾಯಿಸಿ]- ಪಿಪಾಸೆ (ಕವನ ಸಂಕಲನ)
- ದೀಪ ನಿರ್ವಾಣ (ಕಾದಂಬರಿ)
- ದೀಪ ಹತ್ತಿತು -೧,೨ (ಕಾದಂಬರಿ)
ಪ್ರಶಸ್ತಿ
[ಬದಲಾಯಿಸಿ]ಪ್ರಥಮ ಕವನ ಸಂಕಲನ ‘ಪಿಪಾಸೆ’ಗೆ ಮತ್ತು ಕಥಾಸಂಕಲನ ‘ಗೀಚುಗೆರೆ’ಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡಮಿ ಪ್ರಶಸ್ತಿ