ವಿಕಿಪೀಡಿಯ:ಶುದ್ಧ ಆರಂಭ
ಸಂಕ್ಷಿಪ್ತವಾಗಿ ಈ ಪುಟ: ಪ್ರಸ್ತುತ ನಿರ್ಬಂಧಗಳು ಅಥವಾ ನಿರ್ಬಂಧಗಳ ಅಡಿಯಲ್ಲಿರದ ಬಳಕೆದಾರರು ತಮ್ಮ ಪ್ರಸ್ತುತ ಖಾತೆಯನ್ನು ಬಳಸುವುದನ್ನು ನಿಲ್ಲಿಸಬಹುದು ಮತ್ತು ಹೊಸದನ್ನು ಬಳಸಲು ಪ್ರಾರಂಭಿಸಬಹುದು. ಶುದ್ಧ ಆರಂಭ ಎರಡು ಖಾತೆಗಳನ್ನು ಜೋಡಿಸುವ ಖಾತರಿ ನೀಡುವುದಿಲ್ಲ. ಹಳೆಯ ಸಂಪಾದನೆಯ ಅಭ್ಯಾಸಗಳನ್ನು ಪುನರಾರಂಭಿಸಲು ಶುದ್ಧ ಆರಂಭವನ್ನು ಬಳಸುವ ಬಳಕೆದಾರರನ್ನು ಗುರುತಿಸಬಹುದು ಮತ್ತು ಪರಿಶೀಲನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಸಂಪಾದಕ ಎಂದು ಗುರುತಿಸಬಹುದು. |
ಬಳಕೆದಾರರು ಹಳೆಯ ಖಾತೆಯನ್ನು ಬಳಸುವುದನ್ನು ನಿಲ್ಲಿಸಿ ಹೊಸ ಖಾತೆಯೊಂದಿಗೆ ಹೊಸದಾಗಿ ಪ್ರಾರಂಭಿಸಿದಾಗ ಶುದ್ಧ ಆರಂಭ ಆಗುತ್ತದೆ. ಶುದ್ಧ ಆರಂಭವನ್ನು ಬಯಸುವ ಎರಡು ಸಾಮಾನ್ಯ ಕಾರಣಗಳು ಹಿಂದಿನ ತಪ್ಪುಗಳನ್ನು ಗುರುತಿಸುವುದು ಮತ್ತು ಕಿರುಕುಳವನ್ನು ತಪ್ಪಿಸುವುದು. ಹಳೆಯ ಖಾತೆಯನ್ನು ಸ್ಪಷ್ಟವಾಗಿ ಸ್ಥಗಿತಗೊಳಿಸಬೇಕು ಮತ್ತು ಹೊಸ ಖಾತೆಯು ಹಳೆಯ ನಡತೆಗಳನ್ನು ಬಿಡಬೇಕು. ಹೊಸ ಖಾತೆಯು ನಿಜವಾದ "ಹೊಸ ಪ್ರಾರಂಭ" ಎಂದು ನಿರೀಕ್ಷಿಸಲಾಗುತ್ತದೆ. ಹೊಸ ವಿಷಯಗಳಲ್ಲಿ ಸಂಪಾದನೆ ಮಾಡಬೇಕು ಮತ್ತು ಹಳೆಯ ವಿವಾದಗಳನ್ನು ತಪ್ಪಿಸಬೇಕು.
ನಿಜವಾದ ಶುದ್ಧ ಆರಂಭವನ್ನು ಅಸಮರ್ಪಕವೆಂದು ಪರಿಗಣಿಸಲಾಗುವುದಿಲ್ಲ. ಆದಾಗ್ಯೂ, ಸಂಪಾದಕರು ತಮ್ಮ ಹೊಸ ಖಾತೆಯನ್ನು ಬಳಸಿಕೊಂಡು ಲೇಖನಗಳು ಅಥವಾ ವಿಷಯಗಳ ಸಂಪಾದನೆಯನ್ನು ಹಿಂದಿನಂತೆಯೇ ಪುನರಾರಂಭಿಸಿದರೆ ಅದಕ್ಕೆ ಅನುಗುಣವಾಗಿ ಹಿಂದಿನಂತೆಯೇ ಕಾರ್ಯಕ್ಮ ನಡೆಸಲಾಗುವುದು. ಹಳೆಯ ಖಾತೆಯ ವಿರುದ್ಧ ಸಕ್ರಿಯ ನಿಷೇಧಗಳು, ನಿರ್ಬಂಧಗಳು ಇದ್ದಲ್ಲಿ ಶುದ್ಧ ಆರಂಭವನ್ನು ಅನುಮತಿಸಲಾಗುವುದಿಲ್ಲ.
ಮಾನದಂಡ
[ಬದಲಾಯಿಸಿ]- ಶುದ್ಧ ಆರಂಭವನ್ನು ಬಯಸುವ ಬಳಕೆದಾರರು
- ಯಾವುದೇ ಸಕ್ರಿಯ ಅಥವಾ ಅವಧಿ ಮೀರಿದ ನಿರ್ಬಂಧಗಳನ್ನು ಹೊಂದಿರದ ಮತ್ತು ಅವರ ನಡವಳಿಕೆಯ ಬಗ್ಗೆ ಔಪಚಾರಿಕವಾಗಿ ಚರ್ಚಿಸದಿರುವ ಅಥವಾ ಚರ್ಚೆಗೆ ಒಳಪಡದಿರುವ ಉತ್ತಮ ಸ್ಥಿತಿಯಲ್ಲಿರುವ ಯಾವುದೇ ಬಳಕೆದಾರರು ಶುದ್ಧ ಆರಂಭವನ್ನು ಹೊಂದಬಹುದು.
- ಶುದ್ಧ ಆರಂಭವನ್ನು ಪಡೆಯಲಾರದ ಬಳಕೆದಾರರು
- ಪ್ರಸ್ತುತ ಸಕ್ರಿಯವಾಗಿರುವ ನಿಷೇಧಗಳು, ನಿರ್ಬಂಧಗಳು ಅಥವಾ ಇತರ ನಿರ್ಬಂಧಗಳನ್ನು ಹೊಂದಿರುವ ಯಾವುದೇ ಬಳಕೆದಾರರು
"ಶುದ್ಧ ಆರಂಭ" ಹೇಗೆ
[ಬದಲಾಯಿಸಿ]ನೀವು ಹೊಸ ಪ್ರಾರಂಭವನ್ನು ಮಾಡಲು ನಿರ್ಧರಿಸಿದರೆ ಮತ್ತು ಹಿಂದಿನ ಖಾತೆಗೆ ಸಂಪರ್ಕಿಸಲು ಬಯಸದಿದ್ದರೆ, ಹಳೆಯ ಖಾತೆಯನ್ನು ಬಳಸುವುದನ್ನು ನಿಲ್ಲಿಸಿ ಮತ್ತು ನೀವು ಬಳಸುವ ಏಕೈಕ ಖಾತೆಯಾಗುವ ಹೊಸದನ್ನು ರಚಿಸಿ. ನಿಮ್ಮ ಹಳೆಯ ಖಾತೆಯನ್ನು ತ್ಯಜಿಸುವ ಮೊದಲು ಮರುನಾಮಕರಣ ಮಾಡುವುದನ್ನು ನೀವು ಪರಿಗಣಿಸಬಹುದು. ಆದರೆ ಈ ಮರುನಾಮಕರಣವನ್ನು ಸಾರ್ವಜನಿಕವಾಗಿ ಲಾಗ್ ಮಾಡಲಾಗುತ್ತದೆ. ತಪ್ಪು ತಿಳುವಳಿಕೆಗಳ ಸಾಧ್ಯತೆಯನ್ನು ಕಡಿಮೆ ಮಾಡಲು ಹಳೆಯ ಖಾತೆಯ ಬಳಕೆದಾರರ ಪುಟದಲ್ಲಿ ಅದು ನಿಷ್ಕ್ರಿಯವಾಗಿದೆ ಎಂದು {{retired}} ಟ್ಯಾಗ್ ಅನ್ನು ಬಳಸುವ ಮೂಲಕ ತಿಳಿಸಬಹುದುಅಥವಾ ಇತರ ಸಂದೇಶವನ್ನು ಬಿಡುವ ಮೂಲಕ ನೀವು ಗಮನಿಸಬೇಕು. ಯಾವತ್ತೂ ನೀವು ಏಕ ಕಾಲದಲ್ಲಿ ಒಂದಕ್ಕಿಂತ ಹೆಚ್ಚು ಖಾತೆಗಳನ್ನು ಬಳಸಬಾರಬಹುದು.
ಅಧಿಸೂಚನೆ ಮತ್ತು ಅನುಮತಿ
[ಬದಲಾಯಿಸಿ]ನೀವು ಮಧ್ಯಸ್ಥಿಕೆ ಸಮಿತಿಯ ನಿರ್ಬಂಧಗಳ ಅಡಿಯಲ್ಲಿ ಇಲ್ಲದಿದ್ದರೆ, ನಿಮ್ಮ ಶುದ್ಧ ಆರಂಭದ ಬಗ್ಗೆ ನೀವು ಯಾರಿಗೂ ತಿಳಿಸುವ ಅಗತ್ಯವಿಲ್ಲ.
ಶುದ್ಧ ಆರಂಭಕ್ಕೆ ಯಾರೂ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ತಿಳಿದಿರಲಿ. ನೀವು ಶುದ್ಧ ಆರಂಭವನ್ನು ಪ್ರಯತ್ನಿಸಿದರೆ ಹಾಗೂ ಗುರುತಿಸಲ್ಪಟ್ಟರೆ, ಹಳೆಯ ಮತ್ತು ಹೊಸ ಖಾತೆಗಳ ಅಡಿಯಲ್ಲಿ ನಿಮ್ಮ ಕ್ರಿಯೆಗಳಿಗೆ ನೀವು ಜವಾಬ್ದಾರರಾಗಿರುತ್ತೀರಿ.
ಶುದ್ಧ ಆರಂಭದ ನಂತರ ಸಂಪಾದನೆ
[ಬದಲಾಯಿಸಿ]ಶುದ್ಧ ಆರಂಭದ ನಿಯಮಗಳ ಅಡಿಯಲ್ಲಿ ಖಾತೆಗಳನ್ನು ಬದಲಾಯಿಸುವ ಸಂಪಾದಕರು ನಿಖರವಾಗಿ ಹೊಸ ಪ್ರಾರಂಭವನ್ನು ಬಯಸುತ್ತಿದ್ದಾರೆ ಎಂದು ತಿಳಿಯಲಾಗುವುದು. ಸಮುದಾಯದ ನಡವಳಿಕೆಯನ್ನು ಗೌರವಿಸುವ ರೀತಿಯಲ್ಲಿ ಸಂಪಾದನೆ ಮಾಡಲು ನೀವು ಜವಾಬ್ದಾರರಾಗಿರುತ್ತೀರಿ ಮತ್ತು ನಿಮ್ಮ ಹಿಂದಿನ ಖಾತೆಯ ಅಡಿಯಲ್ಲಿ ನೀವು ತೊಡಗಿಸಿಕೊಂಡಿರಬಹುದಾದ ವಿವಾದಗಳು ಅಥವಾ ಕಳಪೆ ನಡವಳಿಕೆಗಳೊಂದಿಗೆ ಸಂಬಂಧವನ್ನು ಕಡಿದುಕೊಳ್ಳತಕ್ಕದ್ದು.
ಹಿಂದಿನ ಲೇಖನಗಳು ಮತ್ತು ವಿಷಯಗಳಿಗೆ ಹಿಂತಿರುಗುವುದು
[ಬದಲಾಯಿಸಿ]ಶುದ್ಧ ಆರಂಭದ ನಂತರ ಹಳೆಯ ವಿಷಯಗಳನ್ನು ಸಂಪಾದಿಸುವುದನ್ನು ಸಂಪೂರ್ಣವಾಗಿ ತಪ್ಪಿಸುವುದು ಉತ್ತಮ.