ಕೆಸುವಿನ ಪತ್ರೊಡೆ
ಪತ್ರೊಡೆ, ಕೆಸುವಿನ ಸಾರು, ಕೆಸುವಿನ ಗೊಜ್ಜು ಇವೆಲ್ಲಾ ಮಳೆಗಾಲದ ವಿಶೇಷ ಅಡುಗೆಗಳಾಗಿವೆ.[೧] ಮಲೆಗಾಲದಲ್ಲಿ ಬೆಚ್ಚಗಿನ ಆಹಾರಗಳನ್ನು, ಮೈ ಬೆಚ್ಚಗಿಡುವ ಆಹಾರಗಳನ್ನು ಸೇವಿಸಬೇಕು, ಕೆಸುವಿನ ಎಲೆಯಿಂದ ಮಾಡಿದ ಆಹಾರ ಮೈ ಉಷ್ಣಾಂಶ ಹೆಚ್ಚಿಸುವುದು, ಆದ್ದರಿಂದ ಮಳೆಗಾಲದಲ್ಲಿ ಕೆಸುವಿನಿಂದ ಆಹಾರ ಸೇವಿಸುವುದು ಒಳ್ಳೆಯದು. ಕೆಸುವಿನ ಎಲೆಕೆಸುವಿನ ಎಲೆಯಲ್ಲಿ ತುಂಬಾ ಪೋಷಕಾಂಶಗಳಿರುವುದರಿಂದ ಇದರಿಂದ ತಯಾರಿಸುವ ಪತ್ರೊಡೆಯನ್ನು ಔಷಧೀರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ ಪತ್ರೊಡೆ ಸವಿಯುವುದರಿಂದ ಅದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಅಲ್ಲದೆ ಮಳೆಗಾಲದಲ್ಲಿ ಜೀರ್ಣಕ್ರಿಯೆ ಸ್ವಲ್ಪ ನಿಧಾನವಾಗಿರುತ್ತದೆ. ಪತ್ರೊಡೆಯಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ.
ಕೆಸುವಿನ ಎಲೆಯಲ್ಲಿರುವ ಪೋಷಕಾಂಶಗಳು
[ಬದಲಾಯಿಸಿ]ಕೆಸುವಿನ ಎಲೆಯಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಬಿ, ಥೈಯಾಮಿನ್, ರಿಬೋಫ್ಲೇವಿನ್, ಫೋಲೆಟ್, ಮ್ಯಾಂಗನೀಸ್, ತಾಮ್ರ, ಪೊಟಾಷ್ಯಿಯಂ, ಕಬ್ಬಿಣದಂಶ ಇರುತ್ತದೆ ಎಂದು ಆಯುಷ್ ಇಲಾಖೆ ಹೇಳಿದೆ. ಇದರಲ್ಲಿ ಸಾಕಷ್ಟು ನಾರಿನಂಶ ಕೂಡ ಇದೆ. ಕೆಸುವಿನ ಎಲೆಯಲ್ಲಿ ವಿಟಮಿನ್ಸ್ ಹಾಗೂ ಆ್ಯಂಟಿಆಕ್ಸಿಡೆಂಟ್ ಅಂಶವಿರುವುದರಿಂದ ಪತ್ರೊಡೆ ಸವಿಯುವುದರಿಂದ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು.
ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ
[ಬದಲಾಯಿಸಿ]ಪತ್ರೊಡೆ ಸವಿಯುವುದರಿಂದ ಅದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಅಲ್ಲದೆ ಮಳೆಗಾಲದಲ್ಲಿ ಜೀರ್ಣಕ್ರಿಯೆ ಸ್ವಲ್ಪ ನಿಧಾನವಾಗಿರುತ್ತದೆ. ಪತ್ರೊಡೆಯಲ್ಲಿ ನಾರಿನಂಶ ಅಧಿಕವಿರುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಸಹಕಾರಿ.
ರಕ್ತದೊತ್ತಡ ನಿಯಂತ್ರಿಸುತ್ತದೆ
[ಬದಲಾಯಿಸಿ]ಪತ್ರೊಡೆ ತಿನ್ನುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಉರಿಯೂತದ ಸಮಸ್ಯೆ ಕಡಿಮೆಯಾಗುವುದು. ಹಲ್ಲು ಹಾಗೂ ಮೂಳೆಗಳನ್ನು ಬಲಪಡಿಸುತ್ತದೆ, ಅಲ್ಲದೆ ಸಂಧಿವಾತದ ಸಮಸ್ಯೆ ತಡೆಗಟ್ಟುವುದು.
ಮಧುಮೇಹಿಗಳಿಗೆ ಉತ್ತಮವಾದ ಆಹಾರ
[ಬದಲಾಯಿಸಿ]ಕೆಸುವಿನ ಎಲೆ ರಕ್ತದಲ್ಲಿ ಗ್ಲೂಕೋಸ್ ಹಾಗೂ ಇನ್ಸುಲಿನ್ ನಿಯಂತ್ರಿಸುತ್ತದೆ ಆದ್ದರಿಂದ ಮಧುಮೇಹಿಗಳಿಗೆ ಅತ್ಯುತ್ತಮವಾದ ಆಹಾರವಾಗಿದೆ. ಮಧುಮೇಹಿಗಳು ಕೆಸುವಿನ ಎಲೆಯ ಗೊಜ್ಜು ಕೂಡ ಮಾಡಿ ಸವಿಯಬಹುದು. ಕೆಸವಿನ ಎಲೆ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿಡುತ್ತದೆ.
ತ್ವಚೆ ಆರೋಗ್ಯಕ್ಕೆ ಒಳ್ಳೆಯದು
[ಬದಲಾಯಿಸಿ]ಇದರಲ್ಲಿ ವಿಟಮಿನ್ ಎ ಇರುವುದರಿಂದ ಕಣ್ಣಿಗೆ ಹಾಗೂ ತ್ವಚೆಗೆ ಒಳ್ಳೆಯದು, ಅಲ್ಲದೆ ತ್ವಚೆ ಮೃದುವಾಗುವುದು. ಅಲ್ಲದೆ ತ್ವಚೆಯ ಹೊಳಪು ಕೂಡ ಹೆಚ್ಚುವುದು. ' ನೀವು ಕೆಸುವಿನ ಎಲೆಯಿಂದ ಮಾಡಿದ ಅಡುಗೆಗೆ ಹುಣಸೆ ಹಣ್ಣು ಸೇರಿಸಿ ಮಾಡಬೇಕು, ಇಲ್ಲದಿದ್ದರೆ ಬಾಯಿ ತುರಿಸಬಹುದು.
ಪತ್ರೊಡೆಗೆ ಬೇಕಾಗುವ ಸಾಮಾಗ್ರಿಗಳು
[ಬದಲಾಯಿಸಿ]- ಕೆಸುವಿನ ಎಲೆ ( 30 ರಿಂದ 35)
- ಒಂದು ಕಪ್ ಅಕ್ಕಿ
- ಮುಕ್ಕಾಲು ಕಪ್ ತೊಗರಿಬೇಳೆ
- ಅರ್ಧ ಕಪ್ ಕಡಲೆಬೇಳೆ
- ಒಣಮೆಣಸು ( 20 ಬೇಕಾಗುತ್ತದೆ)
- ಸ್ವಲ್ಪ ಹುಣಸೆ ಹಣ್ಣು
- ಒಣಮೆಣಸು (20 ಬೇಕಾಗುತ್ತದೆ)
- ಒಂದು ಚಮಚ ಜೀರಿಗೆ
- ಕೊತ್ತಂಬರಿ ಕಾಳು ಮೂರು ಚಮಚ
- ಒಂದು ಚಮಚ ಜೀರಿಗೆ
- ಇಂಗು( ಒಂದು ಚಿಟಕಿ)
- ಸ್ವಲ್ಪ ಬೆಲ್ಲ (ಅರ್ಧ ಉಂಡೆಗಿಂತ ಕಡಿಮೆ)
ಪತ್ರೊಡೆ ಮಾಡುವ ವಿಧಾನ
[ಬದಲಾಯಿಸಿ]ಮೊದಲು ಅಕ್ಕಿ, ತೊಗರಿಬೇಳೆ, ಕಡಲೆಬೇಳೆಯನ್ನು ನೀರಿನಲ್ಲಿ ನೆನೆ ಹಾಕಬೇಕು.ಜೀರಿಗೆ ಮತ್ತು ಕೊತ್ತಂಬರಿಯನ್ನು ಒಂದು ಪಾತ್ರೆಗೆ ಹಾಕಿ ನೀರಿನಲ್ಲಿ ನೆನಸಿಡಿ. ಇದು ಮೂರು ಗಂಟೆ ನೆನೆಯಬೇಕು. ನೀರಿನಲ್ಲಿ ನೆನದ ಬಳಿಕ ಇದನ್ನು ಚೆನ್ನಾಗಿ ರುಬ್ಬಬೇಕು. ರುಬ್ಬಿದ ಹಿಟ್ಟು ದಪ್ಪವಾಗಿರಬೇಕು (ದೋಸೆ ಹಿಟ್ಟಿನಂತಿರಬೇಕು). ನಂತರ 10 ನಿಮಿಷ ನೀರಿನಲ್ಲಿ ನೆನೆಸಿದ ಹುಣಸೆಹಣ್ಣು, ಒಣಮೆಣಸು ಮತ್ತು ಬೆಲ್ಲವನ್ನು ರುಬ್ಬಿಕೊಳ್ಳಬೇಕು. ರುಬ್ಬಿದ ಹಿಟ್ಟಿಗೆ ಹುಣಸೆಹಣ್ಣು, ಒಣಮೆಣಸು ಮತ್ತು ಬೆಲ್ಲದ ಪೇಸ್ಟ್ನ ಹಾಕಿ ಚೆನ್ನಾಗಿ ಮಿಶ್ರಣಗೊಳಿಸಿ. ಇದಕ್ಕೆ ಉಪ್ಪು ಮತ್ತು ಇಂಗನ್ನು ಸೇರಿಸಿ ಚೆನ್ನಾಗಿ ಕಲಸಿ. ತೊಳೆದ ಎಲೆಗಳನ್ನು ಒಂದೊಂದಾಗಿ ತೆಗೆದುಕೊಂಡು ಎರಡು ಕಡೆ (ಎಲೆಯ ಮುಂಭಾಗ ಮತ್ತು ಹಿಂಭಾಗ) ಸಿದ್ಧವಾಗಿರುವ ಮಿಶ್ರಣವನ್ನು ಹಚ್ಚಿ. ಮೊದಲು ಹೀಗೆ 5 ರಿಂದ 6 ಎಲೆಗಳಿಗೆ ಹಚ್ಚಿ. ಹಚ್ಚಿದ ದೊಡ್ಡ ಎಲೆಯ ಮೇಲೆ ಒಂದೊಂದಾಗಿ ಸಣ್ಣ ಎಲೆಗಳನ್ನು ಇಟ್ಟು, ರೋಲ್ ರೀತಿ ಸುತ್ತಿ. ಸುತ್ತಿದ ಬಳಿಕ ಆ ರೋಲ್ಗೆ ಮತ್ತೆ ಸ್ವಲ್ಪ ಹಿಣ್ಣಿನ ಮಿಶ್ರಣವನ್ನು ಹಚ್ಚಿ. ಹೀಗೆ ಎಲ್ಲ ಎಲೆಗಳಿಗೂ ಹಿಟ್ಟನ್ನು ಹಚ್ಚಿ ರೋಲ್ ರೀತಿ ಮಾಡಿ. ಎಲ್ಲಾ ಎಲೆಗಳ ಮೇಲೆ ಹಿಟ್ಟನ್ನು ಹಚ್ಚಿ, ರೋಲ್ ಮಾಡಿದ ನಂತರ ಇಡ್ಲಿ ಬೇಯಿಸುವಂತೆ ರೋಲ್ಗಳನ್ನ ಹಬೆಯಲ್ಲಿ ಬೇಯಿಸಬೇಕು. ಇದು ಬೇಯಲು ಅರ್ಧ ಗಂಟೆ ಬೇಕಾಗುತ್ತದೆ. ಬೆಂದ ನಂತರ ತಣ್ಣಗಾಗಲು ಬಿಡಿ. ಒಂದು ಚಾಕುವಿನಿಂದ ರೋಲ್ನ ತೆಳುವಾಗಿ ಕಟ್ ಮಾಡಿ. ಕಟ್ ಮಾಡಿದ ಪೀಸ್ಗಳನ್ನ ತವಾದಲ್ಲಿ ಎಣ್ಣೆ ಹಾಕಿ ಕರಿದರೆ ಪತ್ರೊಡೆ ಸವಿಯಲು ಸಿದ್ಧ.