ವಿಷಯಕ್ಕೆ ಹೋಗು

ತಗಟೆ ಸೊಪ್ಪು ಹಲಸಿನ ಬೀಜದ ಸುಕ್ಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತಗಟೆ ಸೊಪ್ಪು ಹಲಸಿನ ಬೀಜದ ಸುಕ್ಕ ಇದನ್ನು ಸಾಮಾನ್ಯವಾಗಿ ಆಟಿ ತಿಂಗಳಲ್ಲಿ ಹಲಸಿನ ಬೀಜ ಮತ್ತು ತಗಟೆ ಸೊಪ್ಪಿನಿಂದ ತಯಾರಿಸುತ್ತಾರೆ.[]

ಬೇಕಾಗುವ ಸಾಮಾಗ್ರಿಗಳು

[ಬದಲಾಯಿಸಿ]
  • ಚಗಟೆ ಸೊಪ್ಪು ಸಣ್ಣಗೆ ಹೆಚ್ಚಿದ್ದು 1/2 ಕಪ್
  • ಹಲಸು ಬೀಜ 10-12
  • ತೆಂಗಿನ ತುರಿ- 1ಕಪ್
  • ಒಣಮೆಣಸು 3-4,
  • ಕೊತ್ತಂಬರಿ -1ಚಮಚ
  • ಸ್ವಲ್ಪ ಹುಳಿ
  • ಸಾಸಿವೆ 1/2 ಚಮಚ
  • ಎಣ್ಣೆ- 1 ಚಮಚ
  • ರುಚಿಗೆ ತಕ್ಕಷ್ಟು ಉಪ್ಪು.[]

ಮಾಡುವ ವಿಧಾನ

[ಬದಲಾಯಿಸಿ]

ಹಲಸಿನ ಕಾಯಿಯ ಬೀಜ ಮತ್ತು ತಗಟೆ ಸೊಪ್ಪಿನ ಚೂರುಗಳನ್ನು ಬೇರೆ ಬೇರೆ ಬೇಯಿಸಿ, ಕೊತ್ತಂಬರಿ, ಒಣ ಮೆಣಸು, ಸ್ವಲ್ಪ ಎಣ್ಣೆ ಹಾಕಿ ಹುರಿದು, ತೆಂಗಿನ ತುರಿಯೊಂದಿಗೆ ಹುಳಿ ಹಾಕಿ ರುಬ್ಬಿಡಿ. ನಂತರ ಬೇಯಿಸಿದ ಹಲಸಿನ ಬೀಜ ಮತ್ತು ತಗಟೆ ಸೊಪ್ಪಿಗೆ ಸೇರಿಸಿ, ಉಪ್ಪು ಹಾಕಿ ಒಂದು ಕುದಿ ಕುದಿಸಿ, ಸಾಸಿವೆ ಒಗ್ಗರಣೆ ಕೊಡಿ.[]

ಬೇರೆ ಭಾಷೆಗಳಲ್ಲಿ ಪಲ್ಯದ ಹೆಸರು

[ಬದಲಾಯಿಸಿ]
  • ತಜಂಕ್ ತಪ್ಪು ಪೆಲತರಿ ಸುಕ್ಕ - ತುಳು

ಉಲ್ಲೇಖಗಳು

[ಬದಲಾಯಿಸಿ]
  1. ರೂಪಾ, ಕೆ ಎಸ್ (27 September 2022). "ತಜಂಕ್ ಎಂಬ ಸಾಮಾನ್ಯ ಸೊಪ್ಪಿನ ಅಸಾಮಾನ್ಯ ಗುಣ !!!". Hosakananda. Retrieved 16 July 2024.
  2. "ಆಟಿ ತಿಂಗಳ ತಿನಿಸು". Vijay Karnataka. Retrieved 16 July 2024.
  3. "Tagate Soppu Palya Recipe". Retrieved 16 July 2024.