ವಿಷಯಕ್ಕೆ ಹೋಗು

ಒಳನಾಡಿನ ವ್ಯಾಪಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಒಳನಾಡಿನ ವ್ಯಾಪಾರ: ಒಂದು ದೇಶದ ಎಲ್ಲೆಯೊಳಗೆ ನಡೆಯುವ ವ್ಯಾಪಾರ (ಇನ್ಲೆಂಡ್ ಟ್ರೇಡ್; ಹೋಂ ಟ್ರೇಡ್), ಮಾರುವವ ಕೊಳ್ಳುವವರಿಬ್ಬರೂ ಒಂದೇ ದೇಶದಲ್ಲಿದ್ದು ತಂತಮ್ಮಲ್ಲಿ ನಡೆಸುವ ಈ ವ್ಯಾಪಾರ ಭಾರತದಂಥ ರಾಷ್ಟ್ರದಲ್ಲಿ ಅದರ ವಿದೇಶೀ ವ್ಯಾಪಾರಕ್ಕಿಂತ ಬಹುಪಾಲು ಹೆಚ್ಚಾಗಿರುತ್ತದೆ; ಅಧಿಕ ಪ್ರಾಮುಖ್ಯ ಪಡೆದಿರುತ್ತದೆ.

ಒಳದೇಶದ ವ್ಯಾಪಾರವನ್ನು ಸ್ಥೂಲವಾಗಿ ಒಟ್ಟುವ್ಯಾಪಾರ ಅಥವಾ ಠೋಕು ವ್ಯಾಪಾರ ಮತ್ತು ಚಿಲ್ಲರೆ ವ್ಯಾಪಾರ ಅಥವಾ ಕಿರುಕುಳ ವ್ಯಾಪಾರ ಎಂದು ಎರಡು ವಿಧವಾಗಿ ವಿಂಗಡಿಸಬಹುದು. ಉತ್ಪಾದಕನಿಂದ ಹೆಚ್ಚÄ ಮೊತ್ತಗಳಲ್ಲಿ ಪದಾರ್ಥಗಳನ್ನು ಕೊಂಡು ಅಥವಾ ಸಂಗ್ರಹಿಸಿ ಅವನ್ನು ಚಿಲ್ಲರೆ ವ್ಯಾಪಾರಿಗಳಿಗೆ ಮಾರುವುದು ಒಟ್ಟುವ್ಯಾಪಾರಿಯ ಮುಖ್ಯ ಕಾರ್ಯಭಾರ (ನೋಡಿ- ಒಟ್ಟು-ವ್ಯಾಪಾರಿ). ಅನುಭೋಗಿಯ ಬಂiÀÄಕೆಗಳನ್ನು ಪುರೈಸಲು ನಿರತವಾದ ಅರ್ಥವ್ಯವಸ್ಥೆಯ ಸರಪಳಿಯಲ್ಲಿ ಚಿಲ್ಲರೆ ವ್ಯಾಪಾರಿಯೇ ಕೊನೆಯ ಕೊಂಡಿ. ಅನುಭೋಗಿಯ ಅಗತ್ಯಗಳನ್ನು ನಿರೀಕ್ಷಿಸಿ ಅವುಗಳ ಪುರೈಕೆಗಾಗಿ ಸರಕುಸೇವೆಗಳನ್ನು ಸಿದ್ಧವಾಗಿಟ್ಟುಕೊಂಡಿದ್ದು ಸರಬರಾಜು ಮಾಡುವುದು ಇವನ ಕಾರ್ಯಭಾರ. ಸರಕನ್ನು ಹೊತ್ತು ತರುವವನ ಸಣ್ಣ ವ್ಯಾಪಾರದಿಂದ ಹಿಡಿದು ಬಗೆಬಗೆಯ ಪದಾರ್ಥಗಳನ್ನು ಸಂಗ್ರಹಿಸಿ ಮಾರಾಟ ಮಾಡುವ ಸಕಲಸರಕಿನ ಅಂಗಡಿಯವರೆಗೆ ಚಿಲ್ಲರೆ ವ್ಯಾಪಾರ ವೈವಿಧ್ಯಮಯವಾದದ್ದು, (ನೋಡಿ- ಚಿಲ್ಲರೆ-ವ್ಯಾಪಾರಿ) ಉತ್ಪಾದಕನಿಗೂ ಅನುಭೋಗಿಗೂ ನಡುವೆ ನಾನಾ ಬಗೆಯ ಮಧ್ಯವರ್ತಿಗಳೂ (ಮಿಡಲ್ ಮೆನ್) ವ್ಯವಹಾರ ನಡೆಸುತ್ತಾರೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: