ಕೆ. ಆರ್. ಆರ್ಎಮ್ ಕರಿಯಾ ಮಾಣಿಕಂ ಅಂಬಲಂ
ಕೆ. ಆರ್. ಆರ್ಎಮ್ ಕರಿಯಾ ಮಾಣಿಕಂ ಅಂಬಲಂ ಇವರು ಒಬ್ಬ ಭಾರತೀಯ ರಾಜಕಾರಣಿ, ಸಮಾಜ ಸೇವಕ ಮತ್ತು ಮಾಜಿ ಶಾಸಕಾಂಗ ಸಭೆಯ ಸದಸ್ಯರು.
ವೈಯಕ್ತಿಕ ಜೀವನ
[ಬದಲಾಯಿಸಿ]ಅಂಬಲಂ ಇವರು ರಾಮಸಾಮಿ ಅಂಬಲಂ ಅವರ ಒಬ್ಬನೇ ಮಗ. ಇವರು ತಮಿಳುನಾಡಿನ ಶಿವಗಂಗೈ ಜಿಲ್ಲೆ, ದೇವಕೊಟ್ಟೈ ತಾಲೂಕಿನ ಕಪ್ಪಲ್ಲೂರ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಇವರಿಗೆ ಒಬ್ಬ ಮಗ ಮತ್ತು ಮೂವರು ಹೆಣ್ಣುಮಕ್ಕಳು.[೧]
ರಾಜಕೀಯ
[ಬದಲಾಯಿಸಿ]ಅಂಬಲಂ ೧೦೦ಕ್ಕೂ ಹೆಚ್ಚು ಹಳ್ಳಿಗಳು ಮತ್ತು ಕೆಲವು ಪಟ್ಟಣಗಳಿಗೆ ಜನಪ್ರಿಯ ನಾಯಕರಾಗಿ ಕಾರ್ಯನಿರ್ವಹಿಸಿದರು. ಇವರು ಪಸುಂಪೊನ್ ಮುತ್ತುರಾಮಲಿಂಗಂ ಥೇವರ್ ಅವರ ಆತ್ಮೀಯ ಸ್ನೇಹಿತರಾಗಿದ್ದರು.
೧೯೫೭ರಲ್ಲಿ ತಮಿಳುನಾಡಿನ ವಿಧಾನಸಭೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಲ್ಕು ಬಾರಿ ಆಯ್ಕೆಯಾದರು.[೨][೩] ೧೯೬೨ ಮತ್ತು ೧೯೬೭ರ ಚುನಾವಣೆಗಳಲ್ಲಿ ಸ್ವತಂತ್ರ ಪಕ್ಷದ ಅಭ್ಯರ್ಥಿಯಾದರು.[೪][೫] ೧೯೭೭ರ ಚುನಾವಣೆಯಲ್ಲಿ ತಿರುವಾಡನೈಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಭ್ಯರ್ಥಿಯಾಗಿ ನೇಮಕಗೊಂಡರು.
ಅವರ ಮರಣದ ನಂತರ, ಕರೂರ್ ನಾಡು ಮತ್ತು ಕಪ್ಪಲ್ಲೋರ್ ನಾಡಿನಲ್ಲಿ ಗ್ರಾಮದ ಜನರು ಕರೂರ್ ಮತ್ತು ಕಣ್ಣಂಕುಡಿ ಎಂಬ ಎರಡು ಕಂಚಿನ ಪ್ರತಿಮೆಯನ್ನು ಸ್ಥಾಪಿಸಿದರು.
ಉಲ್ಲೇಖಗಳು
[ಬದಲಾಯಿಸಿ]- ↑ "Congress MLA creates a record of sorts in southern districts". The Hindu. 14 May 2006. Archived from the original on 23 February 2014. Retrieved 21 February 2013.
- ↑ Jaishankar, C. (14 May 2006). "Congress MLA creates a record of sorts in southern districts". The Hindu. Archived from the original on 23 February 2014. Retrieved 24 February 2012.
- ↑ "Statistical Report on General Election, 1957, to the Legislative Assembly of Madras" (PDF). Election Commission of India, New Delhi. Retrieved 24 February 2012.
- ↑ "Statistical Report on General Election, 1962, to the Legislative Assembly of Madras" (PDF). Election Commission of India, New Delhi. Retrieved 24 February 2012.
- ↑ "Statistical Report on General Election, 1967, to the Legislative Assembly of Madras" (PDF). Election Commission of India, New Delhi. Retrieved 24 February 2012.