ವಿಷಯಕ್ಕೆ ಹೋಗು

ವಾಹ್ ಚೋಕ್ರಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Woh Chokri
ನಿರ್ದೇಶನಸುಭಾಂಕರ್ ಘೋಷ್
ನಿರ್ಮಾಪಕರವಿ ಮಾಲಿಕ್
ಲೇಖಕಅತುಲ್ ತಿವಾರಿ
ಪಾತ್ರವರ್ಗಪಲ್ಲವಿ ಜೋಷಿ
ನೀನಾ ಗುಪ್ತ
ಪರೇಶ್ ರಾವಲ್
ಓಂ ಪುರಿ
ಯೋಗಿತಾ ಚೆಡ್ಡಾ
ಸ್ವಪ್ನಿಲ್ ದಿವಾನ್
ತುಷಾರ್ ಮೊಹಿಲೆ
ಸಂಗೀತಸಪನ್ ಜಗ್ ಮೋಹನ್
ಛಾಯಾಗ್ರಹಣಮೊಲೊಯ್ ದಾಸ್ ಗುಪ್ತ
ಸಂಕಲನದೀಪಕ್ ಕಪೂರ್
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೭".
  • 1994 (1994)
ಅವಧಿ150 minutes
ದೇಶಭಾರತ
ಭಾಷೆಹಿಂದಿ

ವೋ ಚೋಕ್ರಿ/ವೋಹ್ ಚೋಕ್ರಿ (ಇಂಗ್ಲಿಷ್- ದಟ್ ಚಿಕ್) 1994ರಲ್ಲಿ ಪಲ್ಲವಿ ಜೋಶಿ, ನೀನಾ ಗುಪ್ತಾ, ಪರೇಶ್ ರಾವಲ್ ಮತ್ತು ಓಂ ಪುರಿ ನಟಿಸಿದ ಶುಭಂಕರ್ ಘೋಷ್ ನಿರ್ದೇಶಿಸಿದ ಭಾರತೀಯ ಚಲನಚಿತ್ರವಾಗಿದೆ. ಈ ಚಿತ್ರವು 1993ರಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ 3 ಪ್ರಶಸ್ತಿಗಳನ್ನು ಗೆದ್ದುಕೊಂಡಿತು. [][] ಜೋಶಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ-ವಿಶೇಷ ತೀರ್ಪುಗಾರರ ಪ್ರಶಸ್ತಿ ಗೆದ್ದರೆ, ಪರೇಶ್ ರಾವಲ್ ಅತ್ಯುತ್ತಮ ಪೋಷಕ ನಟ ಮತ್ತು ನೀನಾ ಗುಪ್ತಾ ಈ ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನು ಗೆದ್ದರು.

ಕಥಾವಸ್ತು

[ಬದಲಾಯಿಸಿ]

ಗೀತಾ ದೇವಿ (ನೀನಾ ಗುಪ್ತಾ) ಒಂದು ಪ್ರಮುಖ ಮತ್ತು ಶ್ರೀಮಂತ ಕುಟುಂಬದ ಸೊಸೆಯರಲ್ಲಿ ಒಬ್ಬಳಾಗಿದ್ದು ದುರದೃಷ್ಟವಶಾತ್ ವಿಧವೆಯಳಾಗಿದ್ದಾಳೆ. ಇನ್ನೂ ತಾರುಣ್ಯದಲ್ಲಿದ್ದು ಆಕರ್ಷಕಳಾಗಿರುವ ಆಕೆ ನೆರೆಹೊರೆಯವರಲ್ಲಿ ಒಬ್ಬರಾದ ಲಲಿತ್ ರಾಮ್ಜಿ (ಪರೇಶ್ ರಾವಲ್) ಅವರ ಕುತಂತ್ರಗಳಿಗೆ ಶರಣಾಗುತ್ತಾಳೆ ಮತ್ತು ಆತನೊಂದಿಗೆ ವಾಸಿಸಲು ಪ್ರಾರಂಭಿಸುತ್ತಾಳೆ. ಆಕೆಗೆ ಅಪ್ಸರ (ಪಲ್ಲವಿ ಜೋಶಿ) ಎಂಬ ಮಗಳು ಇದ್ದಾಳೆ ಮತ್ತು ಈ ಮೂವರನ್ನು ಸಂತೋಷದ ಕುಟುಂಬವೆಂದು ಚಿತ್ರಿಸಲಾಗಿದೆ.

ಒಂದು ದಿನ ಯಾವುದೇ ವಿವರಣೆಯಿಲ್ಲದೆ ಲಲಿತ್ ಕಣ್ಮರೆಯಾಗುತ್ತಾನೆ ಮತ್ತು ಅಂದಿನಿಂದ, ಪರಿತ್ಯಕ್ತ ತಾಯಿ ಮತ್ತು ಮಗಳ ಜೀವನವು ತೊಂದರೆಗಳಿಗೆ ಸಿಲುಕುತ್ತದೆ . ಆಕೆಯ ಹೆತ್ತವರ ಬಗ್ಗೆ ಶಾಲಾ ಅಧಿಕಾರಿಗಳಿಗೆ ತಿಳಿದಾಗ, ದುಡ್ಡಿಲ್ಲದಾಗ ಅವರ ಜಮೀನುದಾರನು ಅವರನ್ನು ಬಿಡಲು ಒತ್ತಾಯಿಸಿದಾಗ ಅವರು ಗುಡಿಸಲುಗಳಿರುವ ಕಾಲನಿಗೆ ಹೋಗಬೇಕಾಗುತ್ತದೆ. ಗೀತಾ ತನ್ನ ಮಗಳನ್ನು ಪೋಷಿಸಲು ಮತ್ತು ಜೀವನವನ್ನು ನಡೆಸಲು ದಾಸಿಯಾಗಿ ಕೆಲಸ ಮಾಡಲು ಪ್ರಾರಂಭಿಸುತ್ತಾಳೆ. ಈ ಚಲನಚಿತ್ರದಲ್ಲಿ ಕಟುವಾಗಿ ಕಾಡುವ ವಿಷಯವೆಂದರೆ ತನ್ನ ತಂದೆಯೊಂದಿಗಿನ ಅಪ್ಸರಳ ಸಂಬಂಧ. ಆಕೆಯು ಮಗುವಿನಂತಹ ಮನಸ್ಥಿತಿ ಮತ್ತು ನ್ಯಾಯಸಮ್ಮತವಲ್ಲದ ಸಂಬಂಧಗಳ ಮಧ್ಯ ತೂಗುಲ್ಲಾಯೆಯಾಡುತ್ತದೆ.

ಲಲಿತ್ ಈಗ ಯಶಸ್ವಿ ರಾಜಕಾರಣಿಯಾಗಿದ್ದಾನೆಂದು ತಿಳಿದ ಅಪ್ಸರಳು ತನ್ನ ತಾಯಿಗೆ ಅವನನ್ನು ಭೇಟಿಯಾಗಲು ನವದೆಹಲಿಗೆ ತೆರಳುವಂತೆ ಮನವೊಲಿಸುತ್ತಾಳೆ. ಏಕೆಂದರೆ ಆಕೆಯ ತಂದೆ ಅವರನ್ನು ಅವರ ಸದ್ಯದ ಭಯಾನಕ ಸ್ಥಿತಿಯಿಂದ ರಕ್ಷಿಸುತ್ತಾರೆ ಎಂದು ಅವಳಿಗೆ ಅನಿಸುತ್ತದೆ. ಆದರೆ ಲಲಿತ್ ಆಕೆಯನ್ನು ತಿರಸ್ಕರಿಸಿದ ನಂತರ ವಾಪಾಸ್ ಮರಳುತ್ತಾಳೆ. ಮಾನವನ ಒಳ್ಳೆಯತನದಲ್ಲಿ ಎಲ್ಲಾ ಭರವಸೆ ಮತ್ತು ನಂಬಿಕೆಯನ್ನು ಕಳೆದುಕೊಂಡ ಆಕೆ ಮದ್ಯ ಸೇವಿಸುತ್ತಾಳೆ. ಸ್ವಲ್ಪ ಸಮಯದ ನಂತರ, ಆಕೆ ತನ್ನ 16 ವರ್ಷದ ಮಗಳನ್ನು ಒಂಟಿಯಾಗಿ ಬಿಟ್ಟು ಸಾಯುತ್ತಾಳೆ.

ಮಗಳು ವಿಧುರನೊಬ್ಬನ ಮನೆಯಲ್ಲಿ ತನ್ನ ತಾಯಿ ಮುಂಚೆ ಮಾಡುತ್ತಿದ್ದ ಕೆಲಸ ಮಾಡುತ್ತಾಳೆ . ಆ ವಿಧುರ ೧೫ ವರ್ಷಗಳ ಹಿಂದೆ ತನ್ನ ಹೆಂಡತಿಯನ್ನು ಕಳೆದುಕೊಂಡ ಓಂ ಪುರಿ . ಅವನು ಹುಡುಗಿಯ ಉದ್ದಾರದ ಬಗ್ಗೆ ಪ್ರಾಮಾಣಿಕವಾದ ಕಾಳಜಿ ತೋರುತ್ತಾನೆ ಮತ್ತು ನಿಧಾನವಾಗಿ ಅವಳ ನಂಬಿಕೆಯನ್ನು ಗಳಿಸುತ್ತಾನೆ . ಅಂತಿಮವಾಗಿ ವಯಸ್ಸಿನ ಅಂತರದ ಹೊರತಾಗಿಯೂ ತನ್ನೊಂದಿಗೆ ಬದುಕುವಂತೆ ಆಕೆಯನ್ನು ಕೇಳುತ್ತಾನೆ. ಕೆಲವು ಆರಂಭಿಕ ಹಿಂಜರಿಕೆಯ ನಂತರ ಹುಡುಗಿ ಅಪ್ಸರ ಅಂತಿಮವಾಗಿ ಒಪ್ಪಿಕೊಳ್ಳುತ್ತಾಳೆ ಮತ್ತು ಓಂ ಪುರಿಯೊಂದಿಗೆ ವಾಸಿಸಲು ಪ್ರಾರಂಭಿಸುತ್ತಾಳೆ. ಸಂಕ್ಷಿಪ್ತವಾಗಿ ಆ ಯುವತಿಯನ್ನು ಯಾವುದೇ ಕೊರತೆಯಿಲ್ಲದ ಸುರಕ್ಷಿತ ಜೀವನಕ್ಕೆ ಪುನಃಸ್ಥಾಪಿಸಲಾಗುತ್ತದೆ. ಆದರೆ ಆಕೆಯ ರಕ್ಷಕನು ಹೃದಯಾಘಾತದಿಂದ ಸಾಯುತ್ತಾನೆ. ಆಗ ಆತನ ಸಂಬಂಧಿಕರು ಹುಡುಗಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸುತ್ತಾರೆ ಮತ್ತು ಆಕೆಯನ್ನು ವಶಕ್ಕೆ ತೆಗೆದುಕೊಂಡು ಪೊಲೀಸರು ವಿಚಾರಣೆ ನಡೆಸುತ್ತಾರೆ. ಕೆಲವು ತಿಂಗಳುಗಳ ನಂತರ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆಕೆಯನ್ನು ಬಿಡುಗಡೆ ಮಾಡಲಾಗುತ್ತದೆ. ತನ್ನ ಜೀವನಕ್ಕೆ ಬೇರೆ ದಾರಿಯಿಲ್ಲದೇ ಅವಳು ವೇಶ್ಯೆಯಾಗಿ ಸ್ವಲ್ಪ ಸಮಯದವರೆಗೆ ಕೆಲಸ ಮಾಡುತ್ತಾಳೆ.

ಮುಂಬೈನಲ್ಲಿ, ಆಕೆ ಇತರ ಮೂವರು ಬೀದಿ ಮಕ್ಕಳೊಂದಿಗೆ ರೈಲ್ವೆ ನಿಲ್ದಾಣದಲ್ಲಿ ವಾಸಿಸುತ್ತಾಳೆ. ಅವರಲ್ಲಿ ನಾಯಕತ್ವದ ಸ್ಥಾನಮಾನವನ್ನು ಸಹ ಗಳಿಸುತ್ತಾಳೆ. ಒಂದು ದಿನ, ತನ್ನ ತಂದೆ ದೆಹಲಿಯಿಂದ ನಗರಕ್ಕೆ ಬರುತ್ತಿದ್ದಾರೆ ಮತ್ತು ಸಮ್ಮೇಳನವನ್ನು ನೀಡುತ್ತಿದ್ದಾರೆ ಎಂದು ಅವಳು ತಿಳಿದುಕೊಳ್ಳುತ್ತಾಳೆ. ಅವಳು ಹಾಜರಾಗಲು ನಿರ್ಧರಿಸುತ್ತಾಳೆ ಮತ್ತು ಸಮ್ಮೇಳನದ ಸಮಯದಲ್ಲಿ ಅವಳು ಎದ್ದು ತನ್ನ ತಂದೆಗೆ ತಾನು ಅವನ ಮಗಳು ಎಂದು ಕೂಗಲು ಪ್ರಾರಂಭಿಸುತ್ತಾಳೆ. ಲಲಿತ್ ಆಕೆಯ ಕರೆಗಳನ್ನು ನಿರ್ಲಕ್ಷಿಸುತ್ತಾನೆ ಮತ್ತು ಆಕೆಯನ್ನು ಪೊಲೀಸರು ಬೆಂಗಾವಲಾಗಿ ಹೊರಗೆ ಕರೆದೊಯ್ಯುತ್ತಾರೆ ಮತ್ತು ರಸ್ತೆಯ ಕೆಲವು ಮೈಲುಗಳಷ್ಟು ದೂರದಲ್ಲಿ ಬಿಟ್ಟು ಹೋಗುತ್ತಾರೆ.

ಆಗ ಆಕೆಗೆ ತನ್ನ ತಾಯಿ ಹೇಳಿದ್ದು ಸರಿ ಎಂದು ಅರಿವಾಗುತ್ತದೆ ಮತ್ತು ಆಕೆಯ ತಂದೆ ಅವರನ್ನು ಅವರ ಅದೃಷ್ಟಕ್ಕೆ ಬಿಟ್ಟರು ಎಂದು ತಿಳಿಯುತ್ತದೆ. ಜೀವನವು ತೋರಿಸಬಹುದಾದ ಕ್ರೌರ್ಯವನ್ನು ಎದುರಿಸುತ್ತಾ, ತನ್ನ ಅದೃಷ್ಟದ ಬಗ್ಗೆ ಜೋರಾಗಿ ವಿಲಾಪಿಸುತ್ತಾ ಇರುತ್ತಾಳೆ . ತನ್ನ ತಂದೆಯ ಸಹಾಯಕರೊಬ್ಬರು ಅವಳ ಹಿಂದೆ ಜಾರಿಬಿದ್ದಾಗ ಅವರನ್ನು ಕ್ರೂರವಾಗಿ ಕೊಲ್ಲುತ್ತಾಳೆ. ಆಕೆ ಹುಲ್ಲಿನ ಮೇಲೆ ಸಾಯುವುದರೊಂದಿಗೆ ಚಿತ್ರವು ಕೊನೆಗೊಳ್ಳುತ್ತದೆ.

ಪಾತ್ರವರ್ಗ

[ಬದಲಾಯಿಸಿ]
  • ಗೀತಾ ದೇವಿ ಪಾತ್ರದಲ್ಲಿ ನೀನಾ ಗುಪ್ತಾ
  • ಲಲಿತ್ ರಾಮ್ಜಿ ಪಾತ್ರದಲ್ಲಿ ಪರೇಶ್ ರಾವಲ್
  • ಓಂ ಪುರಿ
  • ಅಪ್ಸರಳಾಗಿ ಪಲ್ಲವಿ ಜೋಶಿ

ಉಲ್ಲೇಖಗಳು

[ಬದಲಾಯಿಸಿ]
  1. "41st National Film Awards (PDF)" (PDF). Directorate of Film Festivals. Retrieved 3 March 2012.
  2. "41st National Film Awards". International Film Festival of India. Retrieved 3 March 2012.