ಪಿಕೆ (ಚಲನಚಿತ್ರ)
ಪಿ.ಕೆ
[ಬದಲಾಯಿಸಿ]ಪಿ.ಕೆ. ಒಂದು 2014 ಭಾರತೀಯ ವಿಡಂಬನಾತ್ಮಕ ಹಾಸ್ಯ ನಾಟಕ ಚಿತ್ರ. ಈ ಚಿತ್ರವನ್ನು ಬರೆದು ನಿರ್ದೇಶಿಸಿದವರು ರಾಜ್ಕುಮಾರ್ ಹಿರಾನಿ. ನಿರ್ಮಾಣಿಸಿದವರು ವಿನೋದ್ ಚೋಪ್ರಾ ಮತ್ತು ರಾಜ್ಕುಮಾರ್ ಹಿರಾನಿ. ಈ ಚಲನಚಿತ್ರದಲ್ಲಿ ಬರುವ ಮುಖ್ಯ ಪಾತ್ರ ಅಮೀರ್ ಖಾನ್ ಮತ್ತು ಅನುಷ್ಕಾ ಶರ್ಮಾ ಹಾಗೂ ಪೋಷಕ ಪಾತ್ರಗಳಲ್ಲಿ ಸುಶಾಂತ್ ಸಿಂಗ್ ರಜಪೂತ್, ಬೊಮನ್ ಇರಾನಿ, ಸೌರಭ್ ಶುಕ್ಲಾ, ಮತ್ತು ಸಂಜಯ್ ದತ್ ಕಂಡು ಬರುತ್ತಾರೆ. ಈ ಕಥೆಯು ಅನ್ಯ ಗ್ರಹದಿಂದ ಒಬ್ಬ ವ್ಯಕ್ತಿಯು ಭೂಮಿಗೆ ಸಂಶೋಧನಾ ಕಾರ್ಯಕ್ಕೆಂದು ಬರುತ್ತಾನೆ. ಅವನು ಕಿರುತೆರೆ ಪತ್ರಕರ್ತಿಯೋಂದಿಗೆ ಸ್ನೇಹವನ್ನು ಬೆಳೆಸಿ, ಧಾರ್ಮಿಕ ಮತೀಯ ಸಿದ್ಧಾಂತಗಳು ಮತ್ತು ಮೂಢನಂಬಿಕೆಗಳನ್ನು ಕುರಿತು ಪ್ರಶ್ನಿಸುತ್ತಾನೆ.
ಪಿ.ಕೆ 19 ಡಿಸೆಂಬರ್ 2014 ಬಿಡುಗಡೆಯಾದ ಸಿನಿಮಾ. 2014ರ ಚಲನಚಿತ್ರ ಸಾಲಿನಲ್ಲಿ 200 ನೇ ಬಾಲಿವುಡ್ ಬಿಡುಗಡೆ. ಈ ಚಲನಚಿತ್ರವು ಬಿಡುಗಡೆಯಾದ ನಂತರ ವಿಶ್ವಾದ್ಯಂತ ಸಾಗರೋತ್ತರ 844 ಪರದೆಯ ಸೇರಿದಂತೆ 6000 ಪರದೆಯ ವಿಸ್ತರಿಸಲಾಗಿದೆ. ಪಿ.ಕೆ. ಆರಂಭದಲ್ಲಿ ವಿಶ್ವದಾದ್ಯಂತ 4844 ತೆರೆಗಳಲ್ಲಿ ಪ್ರದರ್ಶಿತವಾಯಿತು. ಪಿ.ಕೆ. ಉತ್ತರ ಪ್ರದೇಶ ಮತ್ತು ಬಿಹಾರ್ನಲ್ಲಿ ಸುಂಕಮಾಫಿ ಮಾಡಲಾಗಿದೆ.
ಇದೊಂದು ಚಲನಚಿತ್ರದ ಕುರಿತ ಚುಟುಕು ಬರಹ/ಪುಟ. ಈ ಚಲನಚಿತ್ರದ ಬಗ್ಗೆ ನಿಮ್ಮಲ್ಲಿ ಮಾಹಿತಿಯಿದ್ದರೆ ಸೇರಿಸಿರಿ. |