ಸದಸ್ಯ:Chandru konchigeri/ನನ್ನ ಪ್ರಯೋಗಪುಟ
ಗೋಚರ
ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರೀ
ವ್ಯಾಕರಣ ತೀರ್ಥ ಚಂದ್ರಶೇಖರ ಶಾಸ್ತ್ರೀ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಇವರೊಬ್ಬರು ಮಾತ್ರ ವ್ಯಾಕರಣ ತೀರ್ಥ ಎಂದು ಕರೆಯಲ್ಪಡುವ ಸಾಹಿತಿ. ಅಖಂಡ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದಲ್ಲಿ ೧೮೯೩ ರಲ್ಲಿ ಜನಿಸಿದ್ದಾರೆ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಹಿತ್ಯ ಅನುಭವ ಹೊಂದಿರುವ ಇರುವ ಬಸವ ತತ್ವ ರತ್ನಾಕರ ಎಂಬ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ೧೯೪೦ ರಲ್ಲಿ ಧಾರವಾಡದಲ್ಲಿ ಜರುಗಿದ ೨೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಆದ್ಯಕ್ಷ ಸ್ತಾನ ವಹಿಸಿದ್ದರು. ಆ ಸಮ್ಮೇಳನದಲ್ಲಿ ಧಾರವಾಡವೇ ಕರ್ನಾಟಕ ರಾಜ್ಯಧಾನಿ ಆಗಬೇಕೆಂದು ಅಂದು ಒತ್ತಾಯಿಸಿದ್ದರು. ಕರ್ನಾಟಕ ಏಕೀಕರಣ ಹೋರಾಟಕ್ಕೆ ಐತಿಹಾಸಿಕ ಹಂಪಿಯಲ್ಲಿ ಚಾಲನೆ ನೀಡಿದ್ದರು. ಅಂದು ಮನೆ ಬಿಟ್ಟು ಹೋರಾಟಕ್ಕೆ ಹೋದವರು ಮನೆ ಮಡದಿ ಮಕ್ಕಳು ಎನ್ನದೇ ಹಗಲು ರಾತ್ರಿ ಹೋರಾಟ ಮಾಡಿದ್ದರು. ಆ ಹೋರಾಟದಿಂದ ಇವರನ್ನು ಏಕೀಕರಣ ಶಾಸ್ತ್ರೀ ಎಂದು ಕರೆಯಲಾಗುತ್ತಿದೆ.