ವಿಷಯಕ್ಕೆ ಹೋಗು

ಹ್ವೀಟ್‍ಸ್ಟೋನ್ ಬ್ರಿಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
A Wheatstone bridge has four resistors forming the sides of a diamond shape. A battery is connected across one pair of opposite corners, and a galvanometer across the other pair.
ಹ್ವೀಟ್‍ಸ್ಟೋನ್ ಬ್ರಿಜ್‍ನ ಸರ್ಕ್ಯೂಟ್ ರೇಖಾಚಿತ್ರ. ಅಜ್ಞಾತ ರೋಧ Rx ನ್ನು ಅಳೆಯಬೇಕಾಗಿರುವುದು; ರೋಧಗಳಾದ R1, R2 ಮತ್ತು R3 ಜ್ಞಾತವಾಗಿವೆ. ಇಲ್ಲಿ R2 ವನ್ನು ಸರಿಹೊಂದಿಸಬಹುದು. ಅಳೆದ ವೋಲ್ಟೇಜ್ VG 0 ಆಗಿದ್ದಾಗ, ಎರಡೂ ಕಾಲುಗಳು ಸಮಾನವಾದ ವೋಲ್ಟೇಜ್ ಅನುಪಾತಗಳನ್ನು ಹೊಂದಿರುತ್ತವೆ: R2/R1 = Rx/R3 ಮತ್ತು Rx= R3R2/R1.

ಹ್ವೀಟ್‍ಸ್ಟೋನ್ ಬ್ರಿಜ್ ಎಂದರೆ ಅಜ್ಞಾತ ರೋಧವನ್ನು (ರೆಸಿಸ್ಟೆನ್ಸ್) ಜ್ಞಾತ ಶಿಷ್ಟ ರೋಧದೊಂದಿಗೆ ಹೋಲಿಸಿ ಮೊದಲಿನದರ ವಿದ್ಯುದ್ರೋಧವನ್ನು ಅಳೆಯುವ ಸಾಧನ.[] ಹ್ವೀಟ್‌ಸ್ಟೋನ್ ನೆಟ್‌ವರ್ಕ್, ರೆಸಿಸ್ಟೆನ್ಸ್ ಬ್ರಿಜ್ ಎಂಬ ಹೆಸರುಗಳೂ ಇವೆ. ಇಂಗ್ಲಿಷ್ ಭೌತವಿಜ್ಞಾನಿ ಹಾಗೂ ಉಪಜ್ಞೆಕಾರ ಚಾರ್ಲ್ಸ್ ಹ್ವೀಟ್‌ಸ್ಟೋನ್ (1802-1914) ಎಂಬಾತ ಇಂಗ್ಲಿಷ್ ಗಣಿತವಿದ ಸ್ಯಾಮ್ಯುಯಲ್ ಹಂಟರ್ ಕ್ರಿಸ್ಟಿ ಎಂಬವನ ಚಿಂತನೆಯಿಂದ ಪ್ರಭಾವಿತನಾಗಿ ನಿರ್ಮಿಸಿದ ಸಾಧನವಿದು. ವಿದ್ಯುದ್ರೋಧಗಳ ಹೋಲಿಕೆಯ ವಿಧಾನವನ್ನು ಇಲ್ಲಿ ಅನುಸರಿಸುವುದಿದೆ. ಈ ವಿಧಾನ ವಿದ್ಯುತ್ಪ್ರವಾಹದ ಅತಂತ್ರಸ್ಥಿತಿಯನ್ನು ಅವಲಂಬಿಸಿರುವುದರಿಂದ ಈ ಬ್ರಿಡ್ಜನ್ನು ಬಳಸಿ ಮಾಡುವ ಮಾಪನೆ ನಿಜಮೌಲ್ಯದ್ದಾಗಿರುತ್ತದೆ.

ಹ್ವೀಟ್‌ಸ್ಟೋನ್ ಬ್ರಿಜ್‌ನ ತತ್ತ್ವದ ಆಧಾರದ ಮೇಲೆ ರಚನೆಯಾಗಿರುವ ಮತ್ತೊಂದು ಸಾಧನ ವ್ಯುತ್ಕ್ರಮಪ್ರವಾಹ ಬ್ರಿಜ್. ಪ್ರೇರಕತ್ವವನ್ನು (ಇಂಡಕ್ಟನ್ಸ್) ಮತ್ತು ಧಾರಿತ್ವವನ್ನು (ಕಪ್ಯಾಸಿಟನ್ಸ್) ಇದರಿಂದ ಅಳೆಯುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: