ವಿಷಯಕ್ಕೆ ಹೋಗು

ಸದಸ್ಯ:2230175medhakp/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ವಪರಿಚಯ

[ಬದಲಾಯಿಸಿ]

ನನ್ನ ಹೆಸರು ಮೇಧಾ ಕೆ.ಪಿ. ನಾನು ಭಾರತ ದೇಶದ, ಕರ್ನಾಟಕ ರಾಜ್ಯದ, ಬೆಂಗಳೂರು ಜಿಲ್ಲೆಯಲ್ಲಿ ಜನಿಸಿದವಳು. ನನ್ನ ಜನ್ಮದಿನ ೧೯ ಮಾರ್ಚ್, ೨೦೦೪. ನನ್ನ ತಂದೆಯ ಹೆಸರು ಕೃಷ್ಣಪ್ರತಾಪ್ ಕೆ.ಆರ್ ಹಾಗು ತಾಯಿಯ ಹೆಸರು ಸಿಂಧು ಭೈರವಿ. ನಾನು ಬೆಂಗಳೂರಿನಲ್ಲಿ ವಾಸವಾಗಿದ್ದೇನೆ. ನನ್ನ ಮೂಲಸ್ಥಾನ ಶಿವಮೊಗ್ಗ ಪಟ್ಟಣ. ನನ್ನ ನೆಚ್ಚಿನ ಬಣ್ಣ ಕೆಂಪು. ನನ್ನ ಆಸಕ್ತಿಗಳು ನೃತ್ಯ, ಸಂಗೀತ, ಫ್ಯಾಷನ್, ಬರವಣಿಗೆ-ಓದುವಿಕೆ, ರಂಗಭೂಮಿ, ಚಲನಚಿತ್ರಗಳು ಇತ್ಯಾದಿ. ನಾನು ಒಬ್ಬ ನರ್ತಕಿ, ವಿದ್ಯಾರ್ಥಿನಿ, ಓದುಗಾರ್ತಿ, ನಟಿ ಹಾಗು ಲೇಖಕಿ.

ಬಾಲ್ಯ

[ಬದಲಾಯಿಸಿ]

ನಾನು ೧೯ ಮಾರ್ಚ್ ೨೦೦೪ರಂದು, ಬೆಂಗಳೂರಿನ ಶ್ರೀನಗರದ, ಕೆ.ಆರ್ ಆಸ್ಪತ್ರೆಯಲ್ಲಿ [ಇಂದಿನ ಮೀನಾಕ್ಷಿ ಆಸ್ಪತ್ರೆ] ಜನಿಸಿದೆ. ನನ್ನ ಬಾಲ್ಯದ ಮೊದಲನೆಯ ವರ್ಷಗಳನ್ನು ನಾನು ದಕ್ಷಿಣ ಬೆಂಗಳೂರಿನ ಗಿರಿನಗರ ಬಡಾವಣೆಯಲ್ಲಿ ಕಳೆದೆ. ಮೂರು ವರ್ಷಗಳವರೆಗೆ ನಾನು ಕೂಡುಕುಟುಂಬದಲ್ಲಿ ಬಾಳಿದೆ. ಕುಟುಂಬದಲ್ಲಿ ತಂದೆ-ತಾಯಿ, ದೊಡ್ಡಮ್ಮ-ದೊಡ್ಡಪ್ಪ, ಅಜ್ಜಿ ಹಾಗು ತಂಗಿ ಇದ್ದರು. ನಂತರ, ಶಿವಮೊಗ್ಗದಿಂದ ಅಮ್ಮನ ತಂದೆ-ತಾಯಿ ನಮ್ಮೊಡನೆ ಇರಲು ಬಂದಿದುದರಿಂದ, ನಾವು ಬೇರೆ ಹೋಗಬೇಕಾಯಿತು. ಅಂದಿನಿಂದ ನಾನು ನನ್ನ ತಂದೆ-ತಾಯಿ, ಅಜ್ಜ ಹಾಗು ದೊಡ್ಡನ [ಅಮ್ಮನ ಅಮ್ಮ] ಜೊತೆಗಿದ್ದೇನೆ. ಇದಲ್ಲದೆ, ನಾನು ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದೇನೆ. ಆದ್ದರಿಂದ ನಾನು ಕಾಲೇಜಿಗೆ ಹತ್ತಿರದಲ್ಲಿ ವಾಸಿಸಿ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬಹುದು.

ಶಿಕ್ಷಣ

[ಬದಲಾಯಿಸಿ]

ಮೂರನೇ ವರ್ಷದವಳಾಗಿದ್ದಾಗ, ನನ್ನನು 'ಟೈನಿ ಟ್ವಿನ್ಕ್ಲರ್ಸ್' ಎಂಬ ಶಿಶುವಿಹಾರಕ್ಕೆ ಸೇರಿಸಲಾಯಿತು. ನಂತರ, ವಿಜಯಭಾರತಿ ವಿದ್ಯಾಲಯದಲ್ಲಿ ನನ್ನ ಎಲ್.ಕೆ.ಜಿ ಶಿಕ್ಷಣವನ್ನು ಪಡೆದೆ. ಯು.ಕೆ.ಜಿ ಇಂದ ಆರನೇ ತರಗತಿಯವರೆಗೂ ನಾನು 'ಆಡೆನ್ ಪಬ್ಲಿಕ್ ಶಾಲೆ'ಯಲ್ಲಿ ಓದಿದೆ. ಶಾಲೆಯ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ಅಂತರಶಾಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಶಿಕ್ಷಕರ ಮೆಚ್ಚುಗೆಗೆ ಪಾತ್ರಳಾದೆ. ಆದರೂ ನನ್ನ ಹೆಚ್ಚಿನ ಮಾತು ಹಾಗು ತುಂಟತನದ ಬಗ್ಗೆ ಎಲ್ಲರಿಗೂ ದೂರಿತ್ತು.

ಹನ್ನೆರಡನೇ ಯರ್ಷದವಳಿದ್ದಾಗ ಬಾಡಿಗೆ ಮನೆಯಿಂದ ಸ್ವಂತ ಮನೆಗೆ ಹೋದೆವು. ಆದರಿಂದ ಶಾಲೆ ಬದಲಾಯಿಸಿ, ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಎಂಬ ಶಾಲೆಗೇ ಸೇರಿದೆ. ಅಲ್ಲಿ ನಾನು ಮೂರು ವರ್ಷಗಳ ಕಾಲ ಓದಿ, ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾದೆ. ಅನೇಕ ಅಂತರಶಾಲಾ ಸಾಂಸ್ಕೃತಿಕ ಮತ್ತು ಆಟೋಟ ಸ್ಪರ್ಧೆಗಲ್ಲಿಯು ಕೂಡ ಭಾಗವಹಿಸಿದೆ.

ನಂತರ, ಆಕಾಶ್ ಸಂಸ್ಥೆಯಲ್ಲಿ ನನ್ನ ಪಿ.ಯು.ಸಿ ಶಿಕ್ಷಣವನ್ನು ಮುಗಿಸಿದೆ. ಕೋರೋನ ಕಾಲವಾದುದರಿಂದ, ನಾನು ಕಾಲೇಜಿಗೆ ಹೋಗಲಾಗಲಿಲ್ಲ. ಅದೊಂದು ಕಷ್ಟಕರವಾದ ಸಮಯವಾಗಿದ್ದು, ಓದಿನಿ ಕಡೆಗೆ ಅಷ್ಟು ಗಮನ ಹರಿಯಲಿಲ್ಲ. ಡಿಸ್ಟಿಂಕ್ಷನ್ ಪಡೆದು ತೇರ್ಗಡೆಯಾದೆ. ನಂತರ, ಕ್ರೈಸ್ಟ್ [ಡೀಮ್ಡ್-ಟು-ಬಿ-ಯೂನಿವರ್ಸಿಟಿ] ಅಲ್ಲಿ ಸೇರಿ, ಮಾಧ್ಯಮ-ಶಾಸ್ತ್ರ ಆಂಗ್ಲಭಾಷೆ ಹಾಗು ಮನೋವಿಜ್ಞಾನದ ಅಧ್ಯಯನದಲ್ಲಿ ತೊಡಗಿದ್ದೇನೆ.

ಪಠ್ಯೇತರ ಸಾಧನೆಗಳು

[ಬದಲಾಯಿಸಿ]

ನಾನು ಎಂಟನೇ ವರ್ಷದವಳಾಗಿದ್ದಾಗ ಭರತನಾಟ್ಯ ಕಲಿಕೆಯನ್ನು ಆರಂಭಿಸಿದೆ. ನನ್ನ ಮೊದಲನೆಯ ಉಪಾಧ್ಯಾಯರು ವಿಧುಷಿ ರಾಜೇಶ್ವರಿ. ನಂತರ ನಾನು ಶ್ರೀಮತಿ ಭವಾನಿ ಮೇಲಾಡಿಯವರೊಂದಿಗೆ ಅಧ್ಯಯನ ಪ್ರಾರಂಭಿಸಿದೆ. ಅವರ ಮಾರ್ಗದರ್ಶನದಲ್ಲಿ ಕಿರಿಯ ಹಾಗು ಹಿರಿಯ ದರ್ಜೆಯ ಪರೀಕ್ಷೆಗಳಲ್ಲಿ ಡಿಸ್ಟಿಂಕ್ಷನ್ನೊಂದಿಗೆ ತೇರ್ಗಡೆಯಾದೆ. ಈಗ, ವಿದ್ವತ್ ಪಾಠವನ್ನು ಇವರ ಮಾರ್ಗದರ್ಶನದಲ್ಲಿ ಕಲಿಯುತ್ತಿದ್ದೇನೆ. ಅಲ್ಲದೆ, ಶ್ರೀಮತಿ ಭವಾನಿಯವರ ಗುರುಗಳಾದ, ಸಾಗರದ ವಿಧುಷಿ ಸಮುದ್ಯತಾ ಭಟ್ ರವರಿಂದ ನಾಟ್ಯಶಾಸ್ತ್ರ ಹಾಗು ಕರಣಗಳ ಅಧ್ಯಯನವನ್ನು ಆರಂಭಿಸಿದ್ದೇನೆ. ಅಲ್ಲದೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಕಿರಿಯ ದರ್ಜೆ ಪರೀಕ್ಷಯಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದೇನೆ.

ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ನನಗೆ ಓಟ ಸ್ಪರ್ಧೆಗಳ ಪರಿಚಯವಾಯಿತು. ಅದರಲ್ಲಿ ಆಸಕ್ತಿ ಮೂಡಿ, ೨೦೦ ಮೀಟರ್ ಹಾಗು ೪ x ೧೦೦ ಮೀಟರ್ ಓಟ-ಸ್ಪರ್ಧೆಗಲ್ಲಿ ಭಾಗವಹಿಸಿ ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಿದ್ದೆ. ಆದರೆ, ಕಾಲಕ್ರಮೇಣ, ಓದಿನ ಒತ್ತಡ ಹೆಚ್ಚಾಗಿ, ಆಟೋಟವನ್ನು ಬಿಡಬೇಕಾಯ್ತು.

ಕಾಲೇಜಿನಲ್ಲಿ ರಂಗಭೂಮಿಯ ಪರಿಚಯವಾಯ್ತು. ಧಮನಿ ತಂಡಕ್ಕೆ ಸೇರಿ, ಉತ್ತಮ ನಟ-ನಟಿಯರಿಂದ ಕಲಿಯುವ ಅವಕಾಶ ದೊರಕಿದೆ. 'ಸರ್ಕಾರ ಮಾರಾಟಕ್ಕಿದೆ' ಮತ್ತು '೨೦೩ ಶಾಂತಿ ನಿವಾಸ' ಎಂಬ ನಾಟಕಗಳಲ್ಲಿ ಧಮನಿಯ ಕಡೆಯಿಂದ ನಟಿಸಿದ್ದೇನೆ. ಅಲ್ಲದೆ, ಕ್ರೈಸ್ಟ್ ಯೂನಿವೆರ್ಸಿಟಿಯನ್ನು, ರಂಗಸೌರಭ ತಂಡವು ನಡೆಸುವ 'ಸೌರಭ' ಎಂಬ ರಂಗಕಲಾಸ್ಪರ್ಧೆಯಲ್ಲಿ, ಪ್ರತಿನಿಧಿಸಿದ್ದೇನೆ. ಶಾಸ್ತ್ರೀಯ ನರ್ತನವಲ್ಲದೆ, 'ಸತಿ' ನಾಟಕದಲ್ಲಿ ದಾಸಿಯ ಪಾತ್ರವನ್ನು ವಹಿಸಿದ್ದೇನೆ. 'ಸತಿ' ನಾಟಕವನ್ನು ಸ್ಪರ್ಧೆಯಲ್ಲಲ್ಲದೆ, ಕೆ.ಹೆಚ್ ಕಲಾಸೌಧದಲ್ಲಿ ಪ್ರದರ್ಶಿಸಿ, ಸಂಪೂರ್ಣ ತಂಡವು ಜನರ ಮೆಚ್ಚುಗೆಗೆ ಪಾತ್ರವಾಯಿತು.

ಆಸಕ್ತಿಗಳು

[ಬದಲಾಯಿಸಿ]

ನಾನು ಚಿಕ್ಕಲ್ಲಿನಿಂದ ಪುಸ್ತಕಗಳ ಬಗ್ಗೆ ಆಸಕ್ತಿ ಹೊಂದಿದ್ದೇನೆ. ನನ್ನ ಕುಟುಂಬದ ಎಲ್ಲ ಸದಸ್ಯರಿಗೂ ಪುಸ್ತಕ ಓದುವ ಹವ್ಯಾಸವಿರುವುದರಿಂದ, ನಾನು ಕೂಡ ಸಣ್ಣ ವಯಸ್ಸಿನಲ್ಲಿಯೇ ಪುಸ್ತಕಗಳನ್ನು ಓದಲು ಪ್ರಾರಂಭಿಸಿದೆ. ನನ್ನ ಮೊದಲನೆಯ ಪುಸ್ತಕ, ಅಮರ ಚಿತ್ರ ಕಥಾ ಸಂಸ್ಥೆಯ ಒಂದು ಪ್ರಸಿದ್ಧ ಕಾಮಿಕ್ ಪುಸ್ತಕ, 'ಇಲಿಯ ವ್ಯಾಪಾರಿ'. ಕಾಲಕ್ರಮೇಣ ಆಂಗ್ಲ ಪುಸ್ತಕಗಳಲ್ಲಿ ಆಸಕ್ತಿ ಮೂಡಿತು. ಬಹಳ ವರ್ಷಗಳ ಕಾಲ ಹ್ಯಾರಿ ಪಾಟರ್, ಪೆರ್ಸಿ ಜ್ಯಾಕ್ಸನ್ ಅಂತಹ ಪುಸ್ತಕಗಳನ್ನು ಓದಿ, ಈಗ ಮನಸ್ಸು ಕನ್ನಡ ಸಾಹಿತ್ಯದ ಕಡೆ ತಿರುಗಿದೆ. ನನ್ನ ಅಚ್ಚುಮೆಚ್ಚಿನ ಲೇಖಕರು, ಎಸ್. ಎಲ್ ಭೈರಪ್ಪ ಹಾಗು ವಸುಧೇಂದ್ರ.

ನನ್ನ ಜೀವನದಲ್ಲಿ ನನಗೆ ಹೆಚ್ಚಿನ ನೆಮ್ಮದಿಯನ್ನು ನೀಡುವ ಚಟುವಟಿಕೆ ನೃತ್ಯವಾಗಿದೆ. ವ್ಯಾಯಾಮದ ಸಾಧನವಲ್ಲದೆ, ಮನೋರಂಜನೆಯ ಮೂಲವು ಆಗಿದೆ. ಅಧ್ಯಾತ್ಮದ ತಿಳುವಳಿಕೆಯನ್ನು ನಾನು ನೃತ್ಯದ ಮೂಲಕ ಬೆಳೆಸಿಕೊಂಡು ಬಂದಿದ್ದೇನೆ. ಭರತನಾಟ್ಯದ ಕಲಿಕೆಯಿಂದ ಪುರಾಣ, ಇತಿಹಾಸ, ಗಣಿತ-ಲೆಕ್ಕಾಚಾರ, ಆಧ್ಯಾತ್ಮ, ಮನೋವಿಜ್ಞಾನ, ಮೊದಲಾದ ವಿಚಾರಗಳ ಬಗ್ಗೆ ಹೊಸ ದೃಷ್ಟಿಕೋನವನ್ನು ಪಡೆದಿದ್ದೇನೆ. ಮುಂದೆ, ಉತ್ತಮ ನರ್ತಕಿಯಾಗಿ, ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ನರ್ತನದ ಮೂಲಕ ಸಾತ್ವಿಕ ಸ್ವಭಾವವನ್ನು, ಸದೃಢ ದೇಹವನ್ನು ಕಲ್ಪಿಸಿಕೊಳ್ಳಬೇಕು ಎಂಬ ಆಸೆ.

ಪುಸ್ತಕಗಳನ್ನು ಓದುವುದರಲ್ಲಿ ಆಸಕ್ತಿಯಿದ್ದವರು ಬರಹದ ಕಡೆಗೆ ಗಮನ ಹರಿಸುವುದು ಸಹಜವೆಂದು ನಾನು ನಂಬಿದ್ದೇನೆ. ನಾನು ಕೂಡ ೧೧ನೇ ವಯಸ್ಸಿನಿಂದ ಕಥೆಗಳನ್ನು ಬರೆಯುವ ಹವ್ಯಾಸದಲ್ಲಿ ತೊಡಗಿದ್ದೇನೆ. ಯಾವುದೇ ಪ್ರಶಂಸೆ, ಪ್ರಶಸ್ತಿಗಳ ಆಕಾಂಕ್ಷೆಯನ್ನು ಹೊಂದಿರದೆ, ಕೇವಲ ನನ್ನ ಸಂತೋಷದ ದೃಷ್ಟಿಯಿಂದ ಕಥೆಗಳನ್ನು, ಸಣ್ಣ ಪ್ರಬಂಧಗಳನ್ನು ಬರೆಯಲು ಯತ್ನಿಸುತ್ತೇನೆ. ಸುಮಾರಾಗಿ ಆಂಗ್ಲಭಾಷೆಯಲ್ಲಿ ಬರೆದಿದ್ದರೂ, ಈ ದಿನಗಳಲ್ಲಿ ಕನ್ನಡದಲ್ಲೂ ಬರೆಯುವ ಪ್ರಯತ್ನದಲ್ಲಿ ತೊಡಗಿದ್ದೇನೆ.