ವಿಷಯಕ್ಕೆ ಹೋಗು

ಗುರ್ಜರಿ (ರಾಗ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುರ್ಜರಿ ಭಾರತೀಯ ಶಾಸ್ತ್ರೀಯ ಸಂಗೀತದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯ ಒಂದು ರಾಗವಾಗಿದೆ . ರಾಗ ಗುರ್ಜರಿಗೆ ಭಾರತದ ಗುಜರಾತ್‌ನ ಹೆಸರನ್ನು ಇಡಲಾಗಿದೆ. [] ದಕ್ಷಿಣ ಭಾರತದಲ್ಲಿ, ಕರ್ನಾಟಕ ಸಂಗೀತ ಪದ್ಧತಿಯಲ್ಲಿ ಇದನ್ನು ಶೇಖರಚಂದ್ರಿಕಾ ಎಂದು ಕರೆಯಲಾಗುತ್ತದೆ.

ಇಂದಿನ ಗುರ್ಜರಿ ರಾಗವು ಗುರ್ಜರ್‌ (ಅಥವಾ ಗುಜ್ಜಾರ್‌ಗಳಿಗೆ) ಜನಾಂಗದವರಲ್ಲಿ ಪ್ರಚಲಿತವಿದ್ದ ರಾಗವಾಗಿರಬಹುದು. [] ಇದನ್ನುಗುಜರಿ ತೋಡಿ ಎಂದೂ ಕರೆಯುತ್ತಾರೆ. ಇದು ತೋಡಿ ಥಾಟ್ ನ ರಾಗ.

ಶಾಡವ್-ಶಾಡವ್ ಜಾತಿಗೆ ಸೇರಿದೆ.

ಇದು ಕಾರುಣ್ಯ ಪ್ರಧಾನ ರಾಗ.ಮೂರೂ ಸ್ಥಾಯಿಗಳಲ್ಲಿ ಹಾಡಬಹುದಾಗಿದೆ.

ಇದು ದಿನದ ಎರಡನೇ ಪ್ರಹರದ ರಾಗ. (ಬೆಳಗಿನ ೯ ರಿಂದ ೧೨ ಗಂಟೆವರೆಗೆ.)

ಉಲ್ಲೇಖಗಳು

[ಬದಲಾಯಿಸಿ]
  1. Delvoye, Françoise (2013). New Developments in Asian Studies. Routledge. p. 344. ISBN 9781136174704.
  2. O. Gosvami (1978). The story of Indian music: its growth and synthesis. Scholarly Press. p. 72. ISBN 0403015677. ISBN 978-0-403-01567-2.