ಈಕ್ವಿಲೆನಿನ್
ಗೋಚರ
ಈಕ್ವಿಲೆನಿನ್ (C18H18O2) ಮತ್ತು ಈಕ್ವಿಲಿನ್ (C18H20O2) ಈಸ್ಟ್ರೊಜನ್ ವರ್ಗಕ್ಕೆ ಸೇರಿದ ಸ್ತ್ರೀಲಿಂಗ ನಿರ್ಣಾಯಕ ಚೋದನಿಕಗಳು (ಹಾರ್ಮೋನ್ಸ್). ಇವೆರಡೂ ಗರ್ಭಿಣಿಯಾದ ಹೆಣ್ಣು ಕುದುರೆಗಳ ಮೂತ್ರದಲ್ಲಿ ವಿಪುಲ ಪ್ರಮಾಣದಲ್ಲಿರುತ್ತವೆ.[೧][೨] ಅವುಗಳ ರಚನೆಯಲ್ಲಿ ಈಕ್ವಿಲೆನಿನ್ನಿಗಿಂತ ಈಕ್ವಿಲಿನ್ ಹೆಚ್ಚು ಕ್ರಿಯಾಶಾಲಿಯಾದುದು. ಈ ಸೂತ್ರವನ್ನು ಕೆಳಗೆ ಕೊಡಲಾಗಿದೆ.
ಈಕ್ವಿಲೆನಿನ್ನಿನ ದ್ರವೀಕರಣ ಬಿಂದು 258o - 259೦ ಸೆಂ. ಗ್ರೇ. ಈಕ್ವಿಲೆನಿನ್ ದ್ರವೀಕರಣ ಬಿಂದು 238o – 240o ಸೆಂ. ಗ್ರೇ. ಅಡ್ರಿನಲ್ ಗ್ರಂಥಿಗೆ ಕ್ಯಾನ್ಸರ್ ರೋಗ ತಗುಲಿದಾಗ ಅದರ ಅಂಗಾಂಶಗಳಲ್ಲಿ ಈಕ್ವಿಲೆನಿನ್ ಇರುವುದು ಮಾನವ ದೇಹದಲ್ಲೂ ವ್ಯಕ್ತವಾಗಿದೆ. ಇದು ಮಹತ್ತ್ವದ ಸಂಗತಿ.
ಉಲ್ಲೇಖಗಳು
[ಬದಲಾಯಿಸಿ]- ↑ J. Elks (14 November 2014). The Dictionary of Drugs: Chemical Data: Chemical Data, Structures and Bibliographies. Springer. pp. 494–. ISBN 978-1-4757-2085-3.
- ↑ Fritz MA, Speroff L (28 March 2012). Clinical Gynecologic Endocrinology and Infertility. Lippincott Williams & Wilkins. pp. 751–. ISBN 978-1-4511-4847-3.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: