ಮಾರ್ಗೊಸಾ ರಸ್ತೆ
ಮಾರ್ಗೊಸಾ ರೋಡ್ ಎಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿದೆ. ಬೆಂಗಳೂರು ಒಂದು ದೊಡ್ಡ ನಗರ,ಇದನ್ನು ಕೆಂಪೇಗೌಡರು ನಿರ್ಮಾಣ ಮಾಡಿದ್ದಾರೆ ಎಂದು ಹೇಳಲಾಗಿದೆ.
ಮಲ್ಲೇಶ್ವರಂ ಸುಮಾರು ಸಾವಿರಾರು ವರ್ಷಗಳ ಹಿಂದೆಯೇ ನಿರ್ಮಾಣವಾಯಿತು. ಬೆಂಗಳೂರು ಎಂಬ ದೊಡ್ಡ ನಗರದಲ್ಲಿ "ಮಲ್ಲೇಶ್ವರಂ" ಎಂಬ ಒಂದು ದೊಡ್ಡ ರಸ್ತೆ ಅಥವಾ ಮಲ್ಲೇಶ್ವರಂ ಎಂಬ ಒಂದು ಸ್ಥಳ ನಿರ್ಮಾಣವಾಗಿದ್ದರ ಹಿಂದೆಯೂ ಒಂದು ದೊಡ್ಡ ಕಥೆಯಿದೆ. ಮಲ್ಲೇಶ್ವರಂ ಮೊದಲು ಕಾಡು ಪ್ರದಶವಾಗಿತ್ತು ನಂತರ ಹಿರಿಯ ಕೆಂಪೇಗೌಡರು ಕಾಡಾಗಿದ್ದ ಮಲ್ಲೇಶ್ವರಂನ್ನು ಒಂದು ದೊಡ್ಡ ವ್ಯಾಪಾರ ಅಥವಾ ಪೇಟೆಯಾಗಿ ನಿರ್ಮಾಣ ಮಾಡಿದರು.
ಮಾರ್ಗೊಸಾ ರಸ್ತೆ ಇದು ಸುಮಾರು 375 ವರ್ಷಗಳ ಹಿಂದೆಯೇ ಈ ರಸ್ತೆ ನಿರ್ಮಾಣವಾಯಿತು. ಈ ರಸ್ತೆ ಮಲ್ಲೇಶ್ವರಂ ರಸ್ತೆಯೊಡನೆ ಸಂದಿಸುತ್ತದೆ. ಮಾರ್ಗೊಸಾ ರಸ್ತೆ ಈ ರಸ್ತೆಯು K C ಜನರಲ್ ಆಸ್ಪತ್ರೆಯಿಂದ ಹಿಂದಿನ ಸ್ಯಾಂಕಿ ಕೆರೆಯ ರಸ್ತೆಯವರೆಗೂ ಮಾರ್ಗೊಸಾ ರಸ್ತೆ ಎಂಬ ಹೆಸರಿದೆ. ಮಲ್ಲೇಶ್ವರಂ ಸುಮಾರು 18 ಅಡ್ಡ ರಸ್ತೆಗಳನ್ನು ಹೊಂದಿದೆ. ಈ 18 ಅಡ್ಡ ರಸ್ತೆಗಳು ಒಂದಕ್ಕೊಂದು ರಸ್ತೆಗಳನ್ನು ಸಂಧಿಸುತ್ತಾ ಬರುತ್ತವೆ.
ಈ ರಸ್ತೆಯು ಕ್ರಿ.ಶ. 19ನೇ ಶತಮಾನದಲ್ಲಿಯೇ ನಿರ್ಮಾಣವಾಯಿತು. ಅಂದಿನ ಮೈಸೂರು ಮಹಾರಾಜರಾಗಿದ್ದ “ನಾಲ್ವಡಿ ಕೃಷ್ಣ ರಾಜ ಒಡೆಯರು” ತಮ್ಮ ಮಡದಿ ಮಹಾರಾಣಿ “ಕೆಂಪು ಚಲುವಾಜಮ್ಮಣ್ಣಿ” ಅವರ ಹೆಸಿರಿನಲ್ಲಿ ಒಂದು ಸಾರ್ವಜನಿಕ ಆಸ್ಪತ್ರೆಯನ್ನು ನಿರ್ಮಾಣಮಾಡಲು ರಾಜರು ತೀರ್ಮಾನಿಸಿದಾಗ ಅವರ ಹೆಸರಿನಲ್ಲಿ ಕೆಸಿ ಜನರಲ್ ಆಸ್ಪತ್ರೆಯು ನಿರ್ಮಾಣವಾಯಿತು. ಆ ಆಸ್ಪತ್ರೆಯ ಮುಂದೆ ರಸ್ತೆಯನ್ನು ಸಾರ್ವಜನಿಕ ಓಡಾಟದ ದೃಷ್ಟಿಯಿಂದ ನಿರ್ಮಾಣ ಮಾಡಲಾಯಿತು ನಂತರ ಬೆಂಗಳೂರು ನಗರ ಬೆಳದಂತೆ ಆ ರಸ್ತೆಯು ಬೆಳೆಯುತ್ತಾ ಬಂದಿತು. ನಂತರ ಆ ರಸ್ತೆಗೆ “ಮಾರ್ಗೊಸಾ ರಸ್ತೆ ” ಎಂಬ ಹೆಸರನ್ನು ಇಲಾಯಿತು.
ಈಗಲೂ ಸಹ ಈ ರಸ್ತೆಯಲ್ಲಿ ಒಂದು ದೊಡ್ಡ ಕಟ್ಟಡವಿದೆ ಆ ಕಟ್ಟಡಕ್ಕೆ ಮಾರ್ಗೊಸಾ ಕೋರ್ಟ್ ಎಂಬ ಹೆಸರಿದೆ. ಅದು ಈಗಲೂ ಸಹ ಆರ್ಕೋಟ್ಟನ್ನು ಈ ರಸ್ತೆಯಲ್ಲಿ ನಾವು ಕಾಣಬಹುದಾಗಿದೆ. ಮಾರ್ಗಸಾ ರಸ್ತೆಯು ಕೇವಲ ಸಾರ್ವಜನಿಕರಿಗೆ ನಿರ್ಮಾಣವಾದ ರಸ್ತೆಯಲ್ಲ. ಅದು ವ್ಯಾಪಾರ ವಾಣಿಜ್ಯಕ್ಕೆ ನಿರ್ಮಿಸಲಾದ ರಸ್ತೆ ಎಂಬ ಪ್ರತೀತಿಯೂ ಇದೆ. ಈ ರಸ್ತೆಯು 10ನೇ ಅಡ್ಡ ರಸ್ತೆಯಲ್ಲಿ ಕಾಮಾಕ್ಷಿ ಸಿಲ್ಕ್ಸ್ ಎಂಬ ಸೀರೆಯ ಅಂಗಡಿ ಇತ್ತು. ಇದನ್ನು ಮೈಸೂರಿನ ಮಹಾರಾಜರು ನಿರ್ಮಾಣ ಮಾಡಿದ್ದರು. ಅಲ್ಲಿನ ವ್ಯಾಪಾರದ ದೃಷ್ಟಿಯಿಂದ ಸರಕುಗಳನ್ನು ಆಮದು ಮತ್ತು ರಫ್ತು ಮಾಡುವ ಸಲುವಾಗಿ ನಿರ್ಮಾಣ ಮಾಡಲಾಯಿತು.
ನಂತರ ಈ ಆಸ್ಪತ್ರೆಯು ನೇರ ರಸ್ತೆಯನ್ನು ಮಾರ್ಗೊಸ ರಸ್ತೆ ಎಂದು ಕರೆಯಲಾಗುತ್ತದೆ. ಅಂದಿನ ಕಮಿಷನರ್ ಆಗಿದ್ದ ಮಿರ್ಜಾ ರವರು ಈ ರಸ್ತೆಯಲ್ಲಿ ಒಂದು ದೊಡ್ಡ ಆಟದ ಮೈದಾನವನ್ನು ನಿರ್ಮಾಣಮಾಡಿದರು. ಇದನ್ನು ಮಲ್ಲೇಶ್ವರಂ ಆಟದ ಮೈದಾನ ಎಂದು ಕರೆಯಲಾಗುತ್ತದೆ. ಇಲ್ಲಿಗೆ ಬ್ರಿಟನ್ನ ರಾಜ “ಮಾರ್ಗೊಸಾ” ಎಂಬವರು ಬಂದಿದ್ದರು. ಹಾಗಾಗಿ ಈ ರಸ್ತೆಗೆ ಮಾರ್ಗೊಸಾ ರಸ್ತೆ ಎಂದು ಕರೆಯಲಾಯಿತು ಎಂದು ಹೇಳಲಾಗಿದೆ.