ನಿಜಗುಣ ಶಿವಯೋಗಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಜಗುಣ ಶಿವಯೋಗಿಗಳ ಕಾಲಮಾನ ಕ್ರಿ.ಶ.೧೬೦೦ ಇರಬೇಕೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಇವರು ಚಾಮರಾಜನಗರ ಜಿಲ್ಲೆಯ ಚಿಲುಕವಾಡಿಯ ಸುತ್ತಲಿರುವ ಪ್ರದೇಶಕ್ಕೆ ಪಾಳೆಯಗಾರರಾಗಿದ್ದರು. ಆಧ್ಯಾತ್ಮಕ್ಕೆ ಒಲಿದ ನಿಜಗುಣ ಶಿವಯೊಗಿಗಳು ತಮ್ಮ ಪಟ್ಟವನ್ನು ತ್ಯಜಿಸಿ, ಚಿಲುಕವಾಡಿಯ ಬಳಿಯ ಶಂಭುಲಿಂಗನ ಬೆಟ್ಟದಲ್ಲಿ ಹಲವು ವರ್ಷ ತಪಸ್ಸುಗೈದರೆಂದು ಹೇಳಲಾಗುತ್ತಿದೆ.

ನಿಜಗುಣ ಶಿವಯೋಗಿಗಳ ರಚನೆಗಳು[ಬದಲಾಯಿಸಿ]

೧.ಅರುವತ್ತುಮೂವರು ಪುರಾತನರ ತ್ರಿವಿಧಿ[ಬದಲಾಯಿಸಿ]

೨.ಕೈವಲ್ಯ ಪದ್ಧತಿ[ಬದಲಾಯಿಸಿ]

ಹುಟ್ಟಿನಿಂದಲೇ ನಿಜಗುಣರು ಕವಿಹೃದಯವುಳ್ಳವರಾಗಿದ್ದರು. ಯೋಗಸಾಧನೆ ಮಾಡುತ್ತಿದ್ದಾಗಲೇ ಅವರು ತಮ್ಮ ಅನುಭವಗಳನ್ನು ಕವಿತೆಗಳ ರೂಪದಲ್ಲಿ ಹಾಡಿಕೊಳ್ಳುತ್ತಿದ್ದರು. ಅವರಿಗೆ ಸಂಗೀತದಲ್ಲಿಯೂ ಹೆಚ್ಚಿನ ಪಾಂಡಿತ್ಯವಿತ್ತು. ಆಧ್ಯಾತ್ಮದಂತಹ ಕಠಿಣವಿಷಯದ ಬಗ್ಗೆ ಸರಳವಾದ, ಸುಂದರವಾದ, ಕನ್ನಡದಲ್ಲಿ ಕವನಗಳನ್ನು ರಚಿಸಿದರು. ಅವುಗಳಿಗೆ ಶಾಸ್ತ್ರೀಯ ಕರ್ನಾಟಕ ಸಂಗೀತಕ್ಕೆ ಹೊಂದುವಂತೆ ರಾಗ, ತಾಳಗಳನ್ನು ಹಾಕಿದರು. ಎಲ್ಲರಿಗೂ ತಿಳಿಯುವಂತೆ ಸರಳ ಕನ್ನಡದಲ್ಲಿ ರಾಗಬದ್ಧವಾಗಿ ಬರೆದಿದ್ದರಿಂದ ಅವರ ಕವಿತೆಗಳು ಬಹು ಜನಪ್ರಿಯವಾದವು.

“ಕೈವಲ್ಯ” ಎಂದರೆ ಮುಕ್ತಿ, “ಪದ್ಧತಿ” ಎಂದರೆ ಮಾರ್ಗ ಎಂದು ಅರ್ಥವಾಗುತ್ತದೆ. ಕೈವಲ್ಯ ಪದ್ಧತಿ ಪುಸ್ತಕದಲ್ಲಿ ಮುಕ್ತಿಯನ್ನು ಪಡೆಯುವ ಮಾರ್ಗವನ್ನು ತೋರಿಸಿದ್ದಾರೆ. ಪರಮೇಶ್ವರನ, ಗುರುವಿನ ಸ್ತುತಿಯಿಂದ ಈ ಗ್ರಂಥ ಪ್ರಾರಂಭವಾಗುತ್ತದೆ.ಶ್ರೀಗುರು ವಚನುಪದೇಶವನಾಲಿಸಿ ದಾಗಳಹುದು ನರರಿಗೆ ಮುಕುತಿ. ತಾಯಿ ಮಗುವನ್ನು ಮರಿ, ಪಾಪು, ಬಾಳಾ, ತಮ್ಮಾ ಎಂದು ಮೊದಲಾಗಿ ಬೇರೆ ಬೇರೆ ಹೆಸರಿನಿಂದ ಕರೆದು ಸಂತೋಷಪಡುತ್ತಾಳೆ. ಅದರಂತೆ ಇಲ್ಲಿ ನಿಜಗುಣರು ಶಿವಾ, ಮಹಾದೇವ, ಶಂಕರ, ಪಾರ್ವತೀಧವ, ನೀಲಕಂಠ, ನಾಗಭೂಷಣ, ಚಂದ್ರಮವಳಿ, ಫಾಲಾಕ್ಷ, ಪಶುಪತಿ ಎನ್ನುವ ನೂರು ಎಂಟು ನಾಮಾವಳಿಗಳಿಂದ ಪರಮೇಶ್ವರನನ್ನು ಸ್ತುತಿಸಿದ್ದಾರೆ. “ಉದಯ ಅಸ್ತಮಾನದೊಳು ನೂರೆಂಟು ನಾಮವನ್ನು ಪದುಳದಿಂದ ಓದಿ ಕೇಳಿದವರ್ಗೆ ಶಂಭುಲಿಂಗದ ಕರುಣದಿಂದ ಇತಿತು ಕೊರತೆಯಿಲ್ಲದೆ ಸಕಲ ಸಂಪದಗಳು ಒಂದುಗೂಡಿ ಸದಮಲ ಜ್ಞಾನ ಸದ್ಭಕ್ತಿಗಳು ಮೇಲೊದಗಿ ಕೈಸಾರುತಿಹವು ಇಹದಲ್ಲಿ ಪರದೊಳೊಂದಿದ ಗಣಪದವನೈದಿ ನಿಜಸುಖದೊಳಿಹ ಮುಕ್ತಿ ದೊರೆತುದಿದು ಸತ್ಯ.” ಎಂದು ಈ ಸ್ತೂತ್ರ ಮುಕ್ತಾಯವಾಗುತ್ತದೆ. ಅಂದರೆ ಈ ರೀತಿಯಾಗಿ ದಿನವೂ ಬೆಳಗ್ಗೆ, ಸಂಜೆ ಈಶ್ವರನನ್ನು ಸ್ಮರಿಸಬೇಕು. ಅವರಿಗೆ ಸಕಲ ಸಂಪತ್ತುಗಳು ಸಿಕ್ಕುತ್ತವೆ. ಜ್ಞಾನ, ಭಕ್ತಿಗಳು ದೊರೆತು ಮುಕ್ತಿಯು ದೊರೆಯುತ್ತದೆ ಎಂದು ಹೇಳಿದ್ದಾರೆ. ಅದರಂತೆ ಹ್ರೀಂಕಾರಿ, ವಾಣಿ, ಕಲ್ಯಾಣಿ, ರುದ್ರಾಣಿ, ರಮೆ, ವಿಮಲೆ, ಗಿರಿಜೆ, ಸುಮತಿ, ಸುಲಲಿತೆ, ಮಹೇಶ್ವರಿ, ಮಧುಮಾತೆ ಎನ್ನುವ ಸುಂದರ ಹೆಸರುಗಳಿಂದ ಪಾರ್ವತಿಯನ್ನು ಹಾಡಿ ಹೊಗಳಿದ್ದಾರೆ. ಶಿವ ಮತ್ತು ಪಾರ್ವತಿಯರ ಈ ನೂರೆಂಟು ನಾಮಾವಳಿಗಳನ್ನು ದಿನವೂ ಬೆಳಿಗ್ಗೆ, ಸಂಜೆ ಪೂಜಾ ಸಮಯದಲ್ಲಿ ಹೇಳುವ ರೂಢಿಯನ್ನು ವೀರಶೈವರು ಈಗಲೂ ಇಟ್ಟುಕೊಂಡಿದ್ದಾರೆ.

೩.ಪರಮಾರ್ಥ ಪ್ರಕಾಶಿಕೆ[ಬದಲಾಯಿಸಿ]

ಒಂಬತ್ತನೆಯ ಶತಮಾನದಲ್ಲಿ ತಮಿಳುನಾಡಿನಲ್ಲಿ ಅರುವತ್ಮೂರು ಜನ ಪುರಾತನರು ಬಾಳಿ ಬೆಳಗಿದರು. ಇವರು ಭಿನ್ನ ಭಿನ್ನ ಜಾತಿಯವರಾಗಿದ್ದು ಕುಲದ ಕಟ್ಟು ನಿಟ್ಟು ಇಲ್ಲದವರಾಗಿದ್ದರು ತಮ್ಮ ಅಗಾಧ ಭಕ್ತಿಯಿಂದ ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದರು.ಸ ದಕ್ಷಿಣ ಭಾರತದಲ್ಲಿ ಈ ಮಹಾಪುರುಷರು ತುಂಬ ಪ್ರಸಿದ್ಧರಾಗಿದ್ದಾರೆ. ಕವಿಗಳು ಸಂಸ್ಕೃತ, ತಮಿಳು, ಕನ್ನಡ ಭಾಷೆಗಳಲ್ಲಿ ಈ ಪುರಾತನರ ಚರಿತ್ರೆಗಳನ್ನು ಬರೆದಿದ್ದಾರೆ. ಈ ಅರವತ್ಮೂರು ಪುರಾತನರಲ್ಲಿ ಪ್ರತಿಯೊಬ್ಬರ ಮೇಲೆ ಮೂರು ಸಾಲಿನ ಒಂದೊಂದು ಪದ್ಯವನ್ನು ನಿಜಗುಣರು ತಮ್ಮ “ಆರವನ್ಮೂರು ಪುರಾತನರ ತ್ರಿವಿಧಿ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಆ ಮೂರು ಸಾಲಿನ ಪದ್ಯ ಅಂದರೆ ತ್ರಿಪದಿಯಲ್ಲಿ ಒಟ್ಟು ಅವರ ಸಮಗ್ರ ಪರಿಚಯವನ್ನೇ ಮಾಡಿಕೊಟ್ಟಿದ್ದಾರೆ. ಅವರಲ್ಲಿ ಬೇಡರ ಕಣ್ಣಪ್ಪನನ್ನು ಕುರಿತು ಬರೆದ ಈ ಪದ್ಯವನ್ನು ಕೇಳಿ:

ಮೃಡನ ದೃಷ್ಟಿಯಲ್ಲಿ ರುಜೆಯಡರಿತೆಂದತಿ ಭೀತಿ ವಿಡಿದು ನಿಜಲೋಚನವಿತ್ತ ಕನ್ನಪ್ಪ ನಡಿಗಳಂ ಪೊತ್ತು ಬಿಡದಿರ್ಪೆ

ಇಲ್ಲಿ ಮೃಡ ಎಂದರೆ ಶಿವ, ರುಜೆ ಎಂದರೆ ರೋಗ, ನಿಜಲೋಚನ ಎಂದರೆ ತನ್ನ ಕಣ್ಣುಗಳು ಎನ್ನುವುದು ಅರ್ಥವಾದರೆ ಸಾಕು. ಅಂತ ಕನ್ನಪ್ಪನ (ಕಣ್ಣಪ್ಪ) ಅಡಿಗಳನ್ನು ಹಿಡಿದು ನಿಜಗುಣರು ಕೊಂಡಾಡಿದ್ದಾರೆ.

ಒಬ್ಬ ಬೇಡ ಅಡವಿಯಲ್ಲಿ ಬೇಟೆಯಾಡಿ, ಮಾಂಸ ತಿಂದು ಜೀವಿಸುತ್ತಿದ್ದ. ಒಂದು ದಿನ ಅವನಿಗೆ ಯಾವ ಬೇಟೆಯೂ ಸಿಕ್ಕಲಿಲ್ಲ. ಹುಡುಕುತ್ತಾ ಅಡವಿಯಲ್ಲಿ ಬಹಳ ದೂರ ಹೋದಾಗ ಶಿವದೇವಾಲಯವನ್ನು ಕಂಡ. ಪೂಜಾರಿ ದೇವರ ಪೂಜೆ ಮುಗಿಸಿ ಒಂದು ಚೂರು ನೈವೇದ್ಯವನ್ನೂ ಹಸಿದ ಬೇಡನಿಗೆ ಕೊಡದೇ ಕೀಳು ಜಾತಿಯವನೆಂದು ಅವನನ್ನು ಒಳಗೆ ಕರೆದುಕೊಳ್ಳದೆ, ಗುಡಿಯ ಬಾಗಿಲು ಹಾಕಿ ಮನೆಗೆ ಹೊರಟು ಹೋದ. ಹಸಿವಿನಿಂದ ಕಂಗೆಟ್ಟ ಬೇಡ ರಾತ್ರಿ ಗುಡಿಯ ಒಳಗೆ ನುಗ್ಗಿ ತನಗೆ ತಿಳಿದಂತೆ ಶಿವಲಿಂಗದ ಪೂಜೆ ಮಾಡಿದ. ಅವನಲ್ಲಿ ಭಕ್ತಿಯಿಂದ ಉತ್ಸಾಹ ಉಕ್ಕಿ ಮತ್ತೆ ಬೇಟೆಗೆ ಹೊರಟ. ಶಿವನಿಗೆ ನೈವೇದ್ಯ ಮಾಡಲು ಮೊಲವನ್ನು ಬೇಟೆಯಾಡಿ ತಂದ. ಅವನ ಮುಗ್ಧ ಭಕ್ತಿಗೆ ಮೆಚ್ಚಿ ಶಿವ ಅದನ್ನು ಸ್ವೀಕರಿಸಿದ. ಮುಂದೆ ಇದೇ ರೀತಿ ಶಿವಲಿಂಗ ಪೂಜೆ ಮಾಡುವುದು ಅವನ ದಿನಚರಿಯಾಯಿತು. ಶಿವನಲ್ಲಿ ತನ್ನ ಕಷ್ಟ ಸುಖಗಳನ್ನು ಹೇಳಿಕೊಳ್ಳುತ್ತಿದ್ದ. ಅವನ ಮುಗ್ಧ ಭಕ್ತಿಗೆ ಮೆಚ್ಚಿದ ಶಿವ ಸಂತೋಷ ಪಟ್ಟ. ಆದರೆ ಅವನನ್ನು ಇನ್ನೂ ಹೆಚ್ಚಿನ ಪರೀಕ್ಷೆಗೆ ಗುರಿ ಮಾಡಲು ನಿರ್ಧರಿಸಿದ. ಒಂದು ದಿನ ನಿತ್ಯದಂತೆ ಅವನು ಗುಡಿಗೆ ಬಂದಾಗ ಶಿವಲಿಂಗ ಎಂದಿನಂತೆ ಇರಲಿಲ್ಲ. ಲಿಂಗದ ಮೇಲೆ ಅದರ ಕಣ್ಣಿರುವ ಜಾಗದಿಂದ ಕೀವು ರಕ್ತ ಸೋರುತ್ತಿತ್ತು. ಅದನ್ನು ನೋಡಿದ ಬೇಡ ಗಾಬರಿಯಾದ. ಓಡಿ ಹೋಗಿ ಪ್ರೀತಿಯಿಂದ ರಕ್ತ, ಕೀವು ಒರೆಸಿದ. ನೀರಿನಿಂದ ತೊಳೆದ. ಮತ್ತೂ ಸೋರಹತ್ತಿತ್ತು. ಅದನ್ನು ನೋಡಿ ಬೇಡನಿಗೆ ಬಹಳ ದುಃಖವಾಯಿತು. “ಅಪ್ಪಾ ನನ್ನಪ್ಪಾ ಶಿವನೇ ನಿನ್ನ ಕಣ್ಣಿಗೆ ಏನಾಯ್ತಪ್ಪಾ” ಎಂದು ಗೋಳಾಡಿದ. ಅತ್ತ, ಕರೆದ. ಇಷ್ಟು ರಕ್ತ ಸುರಿದರೆ ಇನ್ನು ತನ್ನಪ್ಪನಿಗೆ ಕಣ್ಣು ಹೇಗೆ ಕಾಣಿಸಬೇಕು? ಎನ್ನುವ ಚಿಂತೆಯಾಯಿತು ಬೇಡನಿಗೆ. ಕೂಡಲೆ ಅವನಿಗೊಂದು ವಿಚಾರ ಹೊಳೆಯಿತು. ಬಾಣದ ತುದಿಯಿಂದ ತನ್ನ ಕಣ್ಣನ್ನು ಕಿತ್ತು ಶಿವಲಿಂಗದ ಮೇಲಿಟ್ಟ. ತನ್ನೆರಡೂ ಕಣ್ಣುಗಳು ಹೋದರೂ ಸ್ವಲ್ಪವೂ ಬಾಧೆ ತೋರಿಸದೆ, ದುಃಖಪಡದೆ ತನ್ನಪ್ಪನಿಗೆ ಕಣ್ಣು ಕಾಣಿಸಿದರೆ ಸಾಕು ಎಂದು ಸಂತೋಷಪಟ್ಟ. ಅವನ ಭಕ್ತಿಯನ್ನು ನೋಡಿದ ಶಿವನಿಗೆ ಮಮತೆ ಉಕ್ಕಿ ಬಂದಿತು. ತನ್ನ ನಿಜರೂಪ ತೋರಿಸಿದ. ಕಣ್ಣುಗಳನ್ನು ತಿರುಗಿ ಕೊಟ್ಟ. ಅವನೇ ಬೇಡರ ಕಣ್ಣಪ್ಪನೆಂದು ಹೆಸರಾದ.

೪.ಅನುಭವಸಾರ[ಬದಲಾಯಿಸಿ]

೫.ಪರಮಾನುಭವ ಬೋಧೆ[ಬದಲಾಯಿಸಿ]

೬.ವಿವೇಕ ಚಿಂತಾಮಣಿ[ಬದಲಾಯಿಸಿ]

(ಇದರಲ್ಲಿ ಹತ್ತು ಪ್ರಕರಣಗಳಿದ್ದು ಭಾರತೀಯ ದರ್ಶನ, ಸಂಸ್ಕೃತಿ, ಧರ್ಮ, ಜ್ಯೋತಿಷ್ಯ, ಸಂಗೀತ, ಸಾಹಿತ್ಯ, ಖಗೋಳ, ಭೂಮಂಡಲ ಇತ್ಯಾದಿಗಳ ವಿವರಣೆಯಿದೆ) ===೭.ಪರಮಾರ್ಥಗೀತೆ===