ಹಿರಿಯ ಬಲಿಪ ನಾರಾಯಣ ಭಾಗವತ
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಹಿರಿಯ ಬಲಿಪ ನಾರಾಯಣ ಭಾಗವತ
ಜನನ
1889ರಲ್ಲಿ ಕೇರಳ ರಾಜ್ಯದ
ಕಾಸರಗೋಡು ಜಿಲ್ಲೆಯ ಪಡ್ರೆ ಗ್ರಾಮದಲ್ಲಿ ಕರ್ಹಾಡಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.
ಕನ್ನಡ ಛಂಧಸ್ಸಿನ ಅಧ್ಯಯನ
ಆಧುನಿಕ ಶಾಲಾ ವಿದ್ಯಾಭ್ಯಾಸವಿಲ್ಲದೆ ಕನ್ನಡ ಭಾಷಾ ಸಾಹಿತ್ಯದಲ್ಲಿ ,ಛಂಧಸ್ಸಿನಲ್ಲಿ ಮತ್ತು ಸಂಗೀತದಲ್ಲಿ ಅಪಾರ ವಿದ್ವತ್ತನ್ನು ಗಳಿಸಿದರು.
ಯಕ್ಷಗಾನ ಕಲಿಕೆ ಮತ್ತು ಪ್ರಸಂಗ ರಚನೆ
ಪಟಾಳಿ ಶಂಕರ ಭಾಗವತ ಮತ್ತು ಕೂಡ್ಲು ಸುಬ್ರಾಯ ಶಾನಭೋಗರಿಂದ ಸಂಗೀತಾಧ್ಯಯನ ಮಾಡಿದ ಇವರು ತೆಂಕು ತಿಟ್ಟಿನ ಮಾದರಿ ಭಾಗವತರಾಗಿದ್ದರು.ಕೇವಲ ಇವರು ಹಾಡುಗಾರಿಕೆಗಳ ಮೇಲೆ ಮಾತ್ರವಲ್ಲ ಮದ್ದಳೆ ವಾದನ, ಚೆಂಡೆವಾದನ, ಹೆಜ್ಜೆಗಾರಿಕೆ ಹಾಗೂ ಸಕಲ ರಂಗ ಪರಂಪರೆಗಳ ಬಗೆಗೆ ಅಧಿಕೃತವಾಗಿ ಬಲ್ಲ ಅತ್ಯುತ್ತಮ ಯಕ್ಷಗಾನ ತಜ್ಞರಾಗಿದ್ದರು. ಇವರೋರ್ವ ಆಶುಕವಿಗಳಾಗಿದ್ದರು.20ಕ್ಕೂ ಹೆಚ್ಚು ಪ್ರಸ೦ಗಗಳ ರಚನೆ ಮಾಡಿದ್ದಾರೆ. ಅಹಲ್ಯಾ ಶಾಪ ಮತ್ತು ವಾನರಾಭ್ಯುದಯ , ೧.ಬ್ರಹ್ಮಕಪಾಲ,
೨.ಪ್ರಹ್ಲಾದ ಚರಿತ್ರೆ,
೩.ಶಶಿಪ್ರಭಾ ಪರಿಣಯ,
೪.ದೇವೀ ಮಹಾತ್ಮೆ, ೫. ಶಕುಂತಲಾ ಪರಿಣಯ, ೬.ಪದ್ಮಾವತೀ ಕಲ್ಯಾಣ, ೭.ಕಚ ದೇವಯಾನಿ, ೮.ಚಂದ್ರಹಾಸ, ೧೦. ಗದಾಪರ್ವ,
೧೧.ಸಮುದ್ರ ಮಥನ,
೧೨.ಜಲಂಧರ ಕಾಳಗ, ೧೩.ರುಕ್ಮಿಣೀ ಸ್ವಯಂವರ, ೧೪.ನರಕಾಸುರ ವಧೆ, ೧೫.ಗರುಡ ಗರ್ವಭಂಗ, ೧೬.ಕೃಷ್ಣಾರ್ಜುನ ಕಾಳಗ, ೧೮.ಉಷಾ ಪರಿಣಯ, ೧೯.ವೀರವರ್ಮ ಕಾಳಗ, ೨೦.ಸಿಂಹಧ್ವಜ ಕಾಳಗ.
ನಿಧನ
ತೆಂಕುತಿಟ್ಟಿನ ಆದರ್ಶ ಭಾಗವತ ,ಪ್ರಸಂಗ ಕವಿ
ಭಾಗವತ, ಮದ್ದಳೆ ವಾದಕ, ಚೆಂಡೆವಾದಕ ಮತ್ತು ಪಾತ್ರಧಾರಿಯಾಗಿದ್ದ ಹಿರಿಯ ಬಲಿಪ ನಾರಾಯಣ ನವೆಂಬರ 1966ರಲ್ಲಿ ನಿಧನ ಹೊಂದಿದರು.ಇವರ ಅಗಲಿಕೆಯು ಯಕ್ಷಗಾನ ಕ್ಷೇತ್ರಕ್ಕೆ ಬಹಳ ನಷ್ಟವನ್ನುಂಟು ಮಾಡಿತು.