ವಿಷಯಕ್ಕೆ ಹೋಗು

ಬೆಟ್ಟದ ನೆಲ್ಲಿಕಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆಟ್ಟದ ನೆಲ್ಲಿಕಾಯಿ
ಬೆಟ್ಟದ ನೆಲ್ಲಿ ಗಿಡ

ಬೆಟ್ಟನೆಲ್ಲಿ, ಬೆಟ್ಟದ ನೆಲ್ಲಿಕಾಯಿಯನ್ನು ವೈಜ್ಞಾನಿಕವಾಗಿ ಎಂಬ್ಲಿಕಾ ಒಫಿಶಿನಾಲಿಸ್ (emblica officinalis) ಎಂದು ಕರೆಯಲಾಗುತ್ತದೆ. ಇದು ಭಾರತಾದ್ಯಂತ ಹಲವು ಪ್ರದೇಶಗಳಲ್ಲಿ ಬೆಳಸುತ್ತಾರೆ ಹಾಗೂ ಅರಣ್ಯಗಳಲ್ಲಿಯೂ ಹೇರಳವಾಗಿ ದೊರೆಯುತ್ತದೆ.

ಪ್ರಾದೇಶಿಕ ಹೆಸರುಗಳು

[ಬದಲಾಯಿಸಿ]

ನೆಲ್ಲಿಕಾಯಿಯನ್ನು ಆಂಗ್ಲ ಭಾಷೆಯಲ್ಲಿ ಇಂಡಿಯನ್ ಗೂಸ್ ಬೆರಿ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಆಮ್ಲ, ಮಲಯಾಳಂನಲ್ಲಿ ನೆಲ್ಲಿ ಎಂಬ ಹೆಸರುಗಳಿವೆ.

ಸಸ್ಯದ ಗುಣಲಕ್ಷಣ

[ಬದಲಾಯಿಸಿ]

ಇದು ಸಣ್ಣ ಹಾಗೂ ಮಧ್ಯಮ ಗಾತ್ರದ ಪತನಶೀಲ ಮರ. ಈ ಸಸ್ಯವು ಸಣ್ಣದಾದ ಹಸಿರು ಬಣ್ಣ ಎಲೆಗಳನ್ನು ಹೊಂದಿರುತ್ತದೆ. ತೊಗಟೆ ನಯವಾಗಿದ್ದು ಬೂದು ಬಣ್ಣವಿರುತ್ತದೆ. ಇದರ ಹೂವು ಹಸಿರು ಮಿಶ್ರಿತ ಹಳದಿ ಬಣ್ಣದಾಗಿರುತ್ತದೆ, ಹಣ್ಣು ವೃತ್ತಕಾರವಾಗಿದ್ದು ೧-೧.೫ಸೆಂ.ಮೀ ಇರುತ್ತದೆ.

ಔಷಧೀಯ ಉಪಯೋಗ

[ಬದಲಾಯಿಸಿ]

ನೆಲ್ಲಿಕಾಯಿಯ ರಸವನ್ನು ಅರಶಿನದೊಂದಿಗೆ ದಿನನಿತ್ಯವು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಿಸಬಹುದು. ಹಾಗೆಯೇ ಸಕ್ಕರೆ ಖಾಯಿಲೆಯಲ್ಲಿ ನೆಲ್ಲಿಕಾಯಿಯ ಚೂರ್ಣವನ್ನು ಖಾಲಿ ಹೊಟ್ಟೆಯಲ್ಲಿ ನೀಡುತ್ತಾರೆ. ಇದರ ರಸವನ್ನು ತುಪ್ಪದೊಂದಿಗೆ ಬೆರೆಸಿ ಜ್ವರವನ್ನು ಕಡಿಮೆ ಮಾಡಲು ಕೊಡುತ್ತಾರೆ. ರಕ್ತಹೀನತೆಯಲ್ಲಿ ಇದರ ಚೂರ್ಣವನ್ನು ಜೇನುತುಪ್ಪದೊಂದಿಗೆ ಸೇವಿಸಬಹುದು. ಕಾಮಾಲೆಯಲ್ಲಿ ಇದರ ರಸವನ್ನು ದ್ರಾಕ್ಷಿಯೊಂದಿಗೆ ನೀಡುತ್ತಾರೆ. ರಕ್ತಸ್ರಾವದಲ್ಲಿ ಇದರ ಚೂರ್ಣವನ್ನು ಸಕ್ಕರೆ ಹಾಗೂ ಜೇನುತುಪ್ಪದೊಂದಿಗೆ ನೀಡಬಹುದು. ಕೂದಲು ಹಾಗೂ ಕಣ್ಣಿನ ಆರೈಕೆಯಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗುತ್ತದೆ. ಬೆಟ್ಟದ ನಲ್ಲಿಕಾಯಿ ವಿಟಮಿನ್ ಸಿ ಪ್ರಮಾಣವು ಅತ್ಯಧಿಕವಾಗಿದೆ. ಕ್ಯಾಲ್ಸಿಯಂ, ಫಾಸ್ಫರಸ್, ಕಬ್ಬಿಣ, ಕ್ಯಾರೋಟಿನ್, ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ‌ನಂತಹ ಅನೇಕ ಖನಿಜಗಳು ಮತ್ತು ಜೀವಸತ್ವಗಳನ್ನು ಹೊಂದಿದೆ. ನೆಲ್ಲಿಕಾಯಿಯಲ್ಲಿ ರೋಗ ನಿರೋಧಕ ಶಕ್ತಿ ಇರುವ ಕಾರಣ ಇದನ್ನು ಆಯುರ್ವೇದ ಚಿಕಿತ್ಸೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. [][]

ವಾಣಿಜ್ಯ ಉಪಯೋಗ

[ಬದಲಾಯಿಸಿ]

ಈ ಸಸ್ಯವನ್ನು ಸ್ವಾಭಾವಿಕ ಹಸಿರು ಬಣ್ಣ ತಯಾರಿಕೆಯಲ್ಲಿ ಬಳಸುತ್ತಾರೆ.

ಬಾಹ್ಯ ಕೊಂಡಿ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. ವನಸಿರಿ
  2. A Text Book Of Dravyaguna Vijnana by Dr. Prakash L Hegde and Dr. Harini A

[] []

  1. ಸಸ್ಯ ಪಟ್ಟಿhttp://www.theplantlist.org/tpl1.1/record/kew-2426619 Archived 2019-02-08 ವೇಬ್ಯಾಕ್ ಮೆಷಿನ್ ನಲ್ಲಿ.
  2. ಅಮೇರಿಕನ್ ಫೈಟೋಪಥೋಲಾಜಿಕಲ್ ಸೊಸೈಟಿ<https://www.apsnet.org/edcenter/intropp/lessons/fungi/Basidiomycetes/Pages/WhitePine.aspx Archived 2018-02-22 ವೇಬ್ಯಾಕ್ ಮೆಷಿನ್ ನಲ್ಲಿ.