ಪ್ರೇಮಾನಂದ್ ಭಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರೇಮಾನಂದ್ ಕ್ರುಶನರಾಮ್ ಭಟ್ ( ಗುಜರಾತಿ : પ્રેમાનંદ કૃષ્ણંરામ ભટ્ટ) (೧೬೩೬-೧೭೧೪), ಮಧ್ಯಕಾಲೀನ ಗುಜರಾತಿ ಕವಿಯಾದ ಇವರು ಪ್ರೇಮಾನಂದ್ ಎಂದೂ ಖ್ಯಾತರು ಮತ್ತು ಅಖ್ಯಾನ ಸಂಯೋಜನೆಗಳಿಗೆ ಹೆಸರುವಾಸಿಯಾದ ಮಾನಭಟ್ (ವೃತ್ತಿಪರ ಕಥೆಗಾರ) ಆಗಿದ್ದರು.

ಜೀವನ[ಬದಲಾಯಿಸಿ]

ಪ್ರೇಮಾನಂದರ ಪ್ರತಿಮೆಯನ್ನು ಬರೋಡದ ಎಂಎಸ್ ವಿಶ್ವವಿದ್ಯಾಲಯದ ಕಲಾ ವಿಭಾಗದ ಬಳಿ ಇರಿಸಲಾಗಿದೆ

ಅವರು ೧೬೪೫ ರಲ್ಲಿ ವಡೋದರಾದಲ್ಲಿ ನಂದೋರ ಚತುರ್ವಂಶಿ ಬ್ರಾಹ್ಮಣರ ಜಾತಿಯಲ್ಲಿ ಜನಿಸಿದರು. ಅವರ ಆಖ್ಯಾನದ ಕೋಲೋಫೋನ್‌ಗಳಲ್ಲಿ ಅವರು "ಗುಜರಾತ್ ಮಧ್ಯದಲ್ಲಿ ನೆಲೆಗೊಂಡಿರುವ, ಧೈರ್ಯಶಾಲಿಗಳ ನಾಡಾದ ವಡೋದರದಲ್ಲಿ, ಜಾತಿ ಚತುರ್ವಂಶಿ ಬ್ರಾಹ್ಮಣರು ಎಂದರೆ ಭಟ್ ಪ್ರೇಮಾನಂದ ಹೆಸರು" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ .ಉದಾಹರಣೆಗೆ, ಆ ಸಮಯದಲ್ಲಿ, ಗುಜರಾತ್ ಅನ್ನು ಮೊಘಲ್ ಗವರ್ನರ್ ಔರಂಗಜೇಬ್ ಆಳುತ್ತಿದ್ದರು . ಆ ಸಮಯದಲ್ಲಿ ಇದನ್ನು ಬಹಿರಂಗವಾಗಿ ಹೇಳಲಾಯಿತು:

"ಮಾರ್ವಾಡಿ ಭಾಷೆಯು ೧೬ ಆಣೆಗಳ (೧ ರೂಪಾಯಿಗೆ ಸಮನಾಗಿದೆ) ಮೌಲ್ಯದ್ದಾಗಿದೆ, ಕಚ್ಚಿ ಭಾಷೆಯು ೧೨ ಆಣೆಗಳ ಮೌಲ್ಯದ್ದಾಗಿದೆ; ಮರಾಠಿ ಭಾಷೆಯು ೮ ಆಣೆಗಳ ಮೌಲ್ಯದ್ದಾಗಿದೆ, ಗುಜರಾತಿ ಭಾಷೆಯು ೪ ಪೈಸೆ (೧ ಆಣೆ ಸಮಾನ) ಮೌಲ್ಯದ್ದಾಗಿದೆ."

ಗುಜರಾತಿ ಭಾಷೆಯನ್ನು ಇಂತಹ ರೀತಿಯಲ್ಲಿ ಅಪಮೌಲ್ಯಗೊಳಿಸಿದ ಸಮಯದಲ್ಲಿ ಜನಿಸಿದ ಪ್ರೇಮಾನಂದರು ಪ್ರತಿಜ್ಞೆ ಮಾಡಿದರು:

"ನಾನು ಗುಜರಾತಿ ಭಾಷೆಗೆ ಗೌರವಾನ್ವಿತ ಸ್ಥಾನವನ್ನು ಸಂಪಾದಿಸುವವರೆಗೂ ನನ್ನ ತಲೆಯ ಮೇಲೆ ಪೇಟವನ್ನು ಧರಿಸುವುದಿಲ್ಲ"

ದೈವಿಕ ಪ್ರೇರಣೆಯಿಂದ ಎಂದು ಭಾವಿಸಿ, ಪ್ರೇಮಾನಂದರು ಶ್ಲಾಘನೀಯವಾದದ್ದಾದರೂ ಕಠಿಣ ಕೆಲಸವನ್ನು ಕೈಗೊಂಡು ರಾಮಾಯಣ, ಮಹಾಭಾರತ, ಭಾಗವತ, ಹರಿವಂಶ ಪುರಾಣ ಮತ್ತು ಭಕ್ತ-ಕವಿಗಳಾದ ನರಸಿಂಹ ಮೆಹ್ತಾ ಅವರ ಜೀವನದ ಪ್ರಸಂಗಗಳನ್ನು "ಮಾಂಕಲಾ" (ಮಾನ ಆಡುವ ಸಹಾಯದಿಂದ) ಮೂಲಕ ಗುಜರಾತಿನ ಹಲವಾರು ಹಳ್ಳಿಗಳಿಗೆ ತೆಗೆದುಕೊಂಡು ಹೋದರು. ಪ್ರೇಮಾನಂದರು ಮಧ್ಯಯುಗದ ಧಾರ್ಮಿಕ ಮತ್ತು ಸಾಮಾಜಿಕ ಪಿತ್ರಾರ್ಜಿತ ಬಳುವಳಿಯನ್ನು ಕಾವ್ಯಾತ್ಮಕವಾಗಿ ವಿವರಿಸುತ್ತಾ ಗುಜರಾತಿ ಭಾಷೆಗೆ ಹಾಗೂ ಸಮಾಜದ ಜನರಿಗೆ ಅಮೂಲ್ಯವಾದ ಸೇವೆಯನ್ನು ಒದಗಿಸಿದರು. ಅಂದರೆ ಮಹಾಕಾವ್ಯಗಳು ಮತ್ತು ಧರ್ಮಗ್ರಂಥಗಳ ಪ್ರಸಂಗಗಳನ್ನು ಸರಳ ಮತ್ತು ಪರಿಣಾಮಕಾರಿ ಭಾಷೆಯಲ್ಲಿ ಹೇಳುತ್ತಾ ಸಾಂಸ್ಕೃತಿಕ ಜಾಗೃತಿಯ ಅಮೂಲ್ಯವಾದ ಕಾರ್ಯವನ್ನು ನಿರ್ವಹಿಸಿದರು. ಪ್ರೇಮಾನಂದರ ಸೃಷ್ಟಿಗಳು ಗುಜರಾತಿ ಸಾಹಿತ್ಯದ ಅಮೂಲ್ಯ ಆಸ್ತಿಗಳು; ಅವು ಗುಜರಾತಿ ಜನತೆಯ ಸಾಂಸ್ಕೃತಿಕ ಪರಂಪರೆಯಾಗಿದೆ.

ಪ್ರಖ್ಯಾತ ಗುಜರಾತಿ ಕವಿ ನರ್ಮದ್ ಇದನ್ನು ಗುರುತಿಸಿದ್ದಾರೆ:

"ಪ್ರೇಮಾನಂದರ ಭಾಷೆ ಸಾರ್ವತ್ರಿಕವಾಗಿ ಏಕರೂಪವಾಗಿದೆ. ಆಚಾರಗಳು, ಸಂಪ್ರದಾಯಗಳು ಮತ್ತು ಜನರ ಸ್ವಭಾವದ ಚಿತ್ರಣ; ಮತ್ತು ಉತ್ಪ್ರೇಕ್ಷಿತ ವಿವರಣೆಗಳಿಂದ ಅಲಂಕರಿಸಲಾದ ಘಟನೆಗಳ ಮೌಖಿಕ ಚಿತ್ರಣವು ಸ್ಥಳೀಯ ಭಾಷೆಯಲ್ಲಿ ಅವುಗಳ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಇದು ಪ್ರೇಮಾನಂದರ ವಚನಗಳ ಸೌಂದರ್ಯ.

ಮತ್ತು ಶ್ರೇಷ್ಠ ಗುಜರಾತಿ ಕಾದಂಬರಿಕಾರ ನವಲರಾಮ್ ಉಲ್ಲೇಖಿಸಿದ್ದಾರೆ:

"ಯಾರು ಶುದ್ಧ ಮತ್ತು ಗಂಭೀರವಾದ ಪ್ರೇಮದ ಬಗ್ಗೆ ಕವಿತೆಗಳನ್ನು ಬರೆದಿರುವರೊ ಮತ್ತು ದೈವಿಕ ಪ್ರೇಮ ಮತ್ತು ಆನಂದವನ್ನು ಅನುಭವಿಸಿರುವ ಕಲಾಭಿಮಾನಿಗಳಿಗೆ ಯಾರ ಹೆಸರು ತುಂಬಾ ಪ್ರಿಯವಾ, ಅಂತಹ ವಡೋದರಾದ ಪ್ರೇಮಾನಂದರು ಸಮಕಾಲೀನ ಕವಿಗಳಲ್ಲಿ ಸರ್ವೋಚ್ಚ ಸ್ಥಾನವನ್ನು ಆನಂದಿಸುತ್ತಿರುವುದರಲ್ಲಿ ಆಶ್ಚರ್ಯವಿಲ್ಲ. ನಾನು ವೈಯಕ್ತಿಕವಾಗಿ ಎನು ನಂಬಿದ್ದೇನೆಂದರೆ, ಅವರು ಇತರ ಮೂವರು ಮುಂಚೂಣಿ ಕವಿಗಳಿಗೆ ಅವರ ಕಲಾ ಸಾಮ್ರಾಜ್ಯದ ಮೆಟ್ಟಿಲುಗಳ ಬಳಿ ಕುಳಿತುಕೊಳ್ಳಲು ಅವಕಾಶ ನೀಡುತ್ತಾರೆ ಎಂಬುದೇ ಅವರ ದೀನತೆ ಮತ್ತು ವಿನಮ್ರತೆ . ನಿಜವಾಗಿಯೂ! ಪ್ರೇಮಾನಂದರ ಬಗ್ಗೆ ಗುಜರಾತಿ ಜನರು ಹೆಮ್ಮೆ ಪಡಬೇಕು "

ರಸಕವಿ ಪ್ರೇಮಾನಂದರು ತಮ್ಮ ಕಾವ್ಯಾತ್ಮಕ ಮೌಖಿಕ ಪಠಣಗಳನ್ನು ಸಮಯ ಮತ್ತು ಘಟನೆಗಳಿಗೆ ಅನುಗುಣವಾಗಿ ರಚಿಸಿದ್ದಾರೆ. ಉದಾಹರಣೆಗೆ, "ಚೈತ್ರ ಮಾಸ" (ವಿಕ್ರಮ್ ವರ್ಷದ ೬ ನೇ ತಿಂಗಳು) ತಿಂಗಳಿನ "ಓಖಹರನ್" (ಓಖಾ ಎಂಬ ಹೆಸರಿನ ಹುಡುಗಿಯ ಅಪಹರಣ) ಪ್ರಾಮುಖ್ಯತೆ, ಮದುವೆಗಳಿಗೆ ಸಕಾಲವಾದ " ವೈಶಾಖ " ತಿಂಗಳಲ್ಲಿ (ವಿಕ್ರಮ್ ವರ್ಷದ ೭ ನೇ ತಿಂಗಳು) , "ಶಾಮಲಶಾ" ( ನರಸಿಂಹ ಮೆಹ್ತಾ ಮಗನ ಮದುವೆ) ಯ ವಿವರವಾದ ಕಾವ್ಯಾತ್ಮಕ ಚಿತ್ರಣವನ್ನು ಕೇಳುವ ಆನಂದ, "ಭಾದರ್ವೋ" ದಲ್ಲಿ (ವಿಕ್ರಮ್ ವರ್ಷದ ೧೧ ನೇ ತಿಂಗಳು) - ಸತ್ತ ಪೂರ್ವಜರಿಗೆ ವಿಧ್ಯುಕ್ತ ಅರ್ಪಣೆ ಮಾಡುವ ತಿಂಗಳು - ಅವರು ನರಸಿಂಹ ಮೆಹ್ತಾ ಅವರ ಮೃತ ತಂದೆಗೆ ಅಂತಹ ಕೊಡುಗೆಗಳ ವಿವರಣೆಯ ಮೇಲೆ ಕಾವ್ಯಾತ್ಮಕ ವಾಚನವನ್ನು ಪ್ರಸ್ತುತಪಡಿಸಿದರು. ಅವರು ಓಖಹರನ್ ಬರೆದಿದ್ದಾರೆ. [೧]

ಕೊಡುಗೆ[ಬದಲಾಯಿಸಿ]

ಅವರನ್ನು "ರಸ-ಕವಿ" ಎಂಬ ಬಿರುದಿನಿಂದ ಕರೆಯಲಾಗುತ್ತಿತ್ತು. "ನಲಾಖ್ಯನ್ ", "ಸುದಾಮಚರಿತ್ರ", "ದಶಮಸ್ಕಂಧ", "ರನ್ನಯಜ್ಞ", ಓಖಹರನ್, ಕುನ್ವರ್ಬೈನು ಮಾಮೇರು ಅವರ ಪ್ರಸಿದ್ಧ ಸೃಷ್ಟಿಗಳು.

ರಸಕವಿ ಹೆಸರು (ಭಾವನೆಗಳ ಕವಿ) ಪ್ರೇಮಾನಂದ್ "ಆಖ್ಯಾಂಕರ" ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

ಉಲ್ಲೇಖಗಳು[ಬದಲಾಯಿಸಿ]

  1. Dalal, Roshen (2010). Hinduism: An Alphabetical Guide. p. 17. ISBN 9780143414216.