ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಟಕೋಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಟಕೋಮ - ಅಮೆರಿಕ ಸಂಯುಕ್ತ ಸಂಸ್ಥಾನಗಳ ಪಶ್ಚಿಮ ವಾಷಿಂಗ್ಟನ್‍ನಲ್ಲಿರುವ ಒಂದು ರೇವುಪಟ್ಟಣ. ಇದು ಕಮೆನ್ಸ್‍ಮೆಂಟ್ ಕೊಲ್ಲಿಯ ಮೇಲಿದೆ.

ವಾಷಿಂಗ್ಟನ್ನಿನ ಇತರ ಕರಾವಳಿ ನಗರಗಳಲ್ಲಿರುವಂತೆ ಈ ನಗರದ ಪೌರರಲ್ಲೂ ಬಹು ಜನ ಸ್ಕಾಂಡಿ ನೇವಿಯನ್ ಮೂಲದವರು.

ಉದ್ಯೋಗ, ಕೈಗಾರಿಕೆ

[ಬದಲಾಯಿಸಿ]

ಟಕೋಮದ ಮುಖ್ಯ ಉತ್ಪನ್ನಗಳು ಚೌಬೀನೆ ಮತ್ತು ಚೌಬೀನೆ ಸಾಮಾನುಗಳು. ಅಲ್ಯೂಮಿನಿಯಂ, ತಾಮ್ರ ಮತ್ತು ತಾಮ್ರದ ಉತ್ಪನ್ನಗಳು, ಕಬ್ಬಿಣ ಮಿಶ್ರಲೋಹಗಳು, ಎರಕದ ಸಾಮಾನುಗಳು, ಇತ್ಯಾದಿ. ವಿದ್ಯುತ್‍ರಾಸಾಯನಿಕ ಯಂತ್ರಸ್ಥಾವರಗಳು ಕಾಸ್ಟಿಕ್ ಮತ್ತು ಕ್ಲೋರಿನ್‍ಗಳನ್ನು ಉತ್ಪಾದಿಸುತ್ತದೆ. ಗಂಡಸರ ಉಡುಪುಗಳನ್ನು ಹೊಲಿದು ಸಿದ್ಧಪಡಿಸುವ ಉದ್ಯಮವೂ ದೊಡ್ಡದು. ಎತ್ತುಗ (ಕ್ರೇನ್) ಮತ್ತು ಲೋಹದ ಸಲಕರಣೆಗಳನ್ನೂ ತಯಾರಿಸುತ್ತಾರೆ. ಪೆಸಿಫಿಕ್ ತೀರದ ಅತ್ಯಂತ ದೊಡ್ಡ ಹಡಗು ತಯಾರಿಕಾ ಕೇಂದ್ರಗಳಲ್ಲಿ ಇದು ಒಂದು. ಇಲ್ಲಿ ಮೀನು ಹಿಡಿಯುವ ದೋಣಿಗಳು, ಸೈನ್ಯಕ್ಕೆ ಬೇಕಾಗುವ ನೌಕೆಗಳು ಮುಂತಾದವನ್ನು ನಿರ್ಮಿಸಲಾಗುತ್ತದೆ. ಈ ನಗರದ ಬಳಿ ಸೈನ್ಯಕ್ಕೆ ಸಂಬಂಧಿಸಿದ ಕೆಲವು ಸಂಸ್ಥೆಗಳಿವೆ.

ಆಕರ್ಷಣೆಗಳು

[ಬದಲಾಯಿಸಿ]

ಟಕೋಮ ಪ್ರದೇಶದಲ್ಲಿ ಪ್ರಜೆಟ್ ಸೌಂಡ್ ವಿಶ್ವವಿದ್ಯಾಲಯ (1888), ಫೆಸಿಫಿಕ್ ಲ್ಯೂಥೆರನ್ ವಿಶ್ವವಿದ್ಯಾಲಯ (1890) ಇವೆ. ವಾಷಿಂಗ್‍ಟನ್ ರಾಜ್ಯ ಇತಿಹಾಸ ಸಂಘದ ಕೇಂದ್ರ ಕಚೇರಿ ಇರುವುದು ಟಕೋಮದಲ್ಲಿ. ಕಮೆನ್ಸ್‍ಮೆಂಟ್ ಕೊಲ್ಲಿಗೆ ಎದುರಾಗಿ ಅದರ ಐದು ಅಂತಸ್ತುಗಳ ವಸ್ತುಸಂಗ್ರಹಾಲಯವಿದೆ. ನಗರದಲ್ಲಿ 35ಕ್ಕೂ ಹೆಚ್ಚು ಉದ್ಯಾನಗಳಿವೆ; ಇವುಗಳ ಒಟ್ಟು ವಿಸ್ತೀರ್ಣ 1,700 ಎಕರೆ. ಇವುಗಳಲ್ಲಿ ಅತಿ ದೊಡ್ಡದಾದ ಒಂದು ಉದ್ಯಾನದಲ್ಲಿ ಸಾರ್ವಜನಿಕ ವಿಹಾರತಾಣ, ಪ್ರಾಣಿಸಂಗ್ರಹಾಲಯ, ರಂಜನೀಯ ದೃಶ್ಯಗಳಿಂದ ಕೂಡಿದ ತೋಟಗಳು ಮುಂತಾದವು ಇವೆ.

ಇತಿಹಾಸ

[ಬದಲಾಯಿಸಿ]

ಹಿಂದೆ ಇದಕ್ಕೆ ಕಮೆನ್ಸ್‍ಮೆಂಟ್ ನಗರ ಎಂಬ ಹೆಸರಿತ್ತು. 1868ರಲ್ಲಿ ಇದರ ಹೆಸರನ್ನು ಟಕೋಮ ಎಂದು ಬದಲಾಯಿಸಲಾಯಿತು. 1875ರಲ್ಲಿ ಇದು ನಗರವಾಗಿ ನಿಯಮಿತವಾಯಿತು.



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಟಕೋಮ&oldid=1082924" ಇಂದ ಪಡೆಯಲ್ಪಟ್ಟಿದೆ