ವಿಷಯಕ್ಕೆ ಹೋಗು

ಚಾರ್ಲೊಟಿ ಮೇರಿಯಾ ಟಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಾರ್ಲೊಟಿ ಮೇರಿಯಾ ಟಕರ್ ( 1821-1893. ವಿಪುಲವಾಗಿ ಶಿಶು ಸಾಹಿತ್ಯವನ್ನು ರಚಿಸಿದ ಬ್ರಿಟನ್ನಿನ ಲೇಖಕಿ. ಹುಟ್ಟಿದ್ದು ಬಾರ್ನೆತ್ ನಗರದಲ್ಲಿ. ಈಕೆ ಮಕ್ಕಳಿಗಾಗಿ ಬರೆದ ಪುಸ್ತಕಗಳಲ್ಲಿ ಮೊದಲನೆಯದು ಕ್ಲೇರ್‍ಮಾಂಟ್ ಟೇಲ್ಸ್ (1859). ಆಗ ಈಕೆ ಬರೆಯುತ್ತಿದ್ದುದು ಎ.ಎಲ್.ಒ.ಎ. (ಎ ಲೇಡೆ ಆಫ್ ಇಂಗ್ಲೆಂಡ್) ಎಂಬ ಗುಪ್ತನಾಮದಲ್ಲಿ. ಈಕೆ ಬರೆದ ಗ್ರಂಥಗಳ ಸಂಖ್ಯೆ ಒಟ್ಟು 142. ಬಹುಮಟ್ಟಿಗೆ ಇಲ್ಲಿನವೆಲ್ಲ ನೀತಿಬೋಧಕ ಕಥೆಗಳು. ಈಕೆಗೆ ಕ್ರೈಸ್ತಧರ್ಮಪ್ರಚಾರ ಕಾರ್ಯದಲ್ಲೂ ತುಂಬ ಆಸಕ್ತಿಯಿತ್ತು. 1875 ರಲ್ಲಿ ಭಾರತಕ್ಕೆ ಬಂದು ನೆಲಸಿ ಕೊನೆಯವರೆಗೂ ಭಾರತೀಯರ ವಿದ್ಯಾಭ್ಯಾಸಕ್ಕೆ ಸಕ್ರಿಯ ಉತ್ತೇಜನವನ್ನು ನೀಡಿ ಉಪಯುಕ್ತ ಸೇವೆ ಸಲ್ಲಿಸಿದಳು. ಕೊನೆಗಾಲದವರೆಗೂ ಲೇಖನ ಕೆಲಸವನ್ನು ಮುಂದುವರಿಸಿದಳು. ಬರೆವಣಿಗೆ ಹಾಗೂ ಶೈಕ್ಷಣಿಕ ಸೇವೆ ಇವಳ ಬಾಳಿಗೆ ಚೈತನ್ಯವನ್ನೂ ತೃಪ್ತಿಯನ್ನೂ ಕೊಟ್ಟ ಮುಖ್ಯ ಚಟುವಟಿಕೆಗಳು. ಈಕೆ ಸತ್ತಿದ್ದು ಅಮೃತ್‍ಸರದಲ್ಲಿ.