ಹೆರಾಲ್ಡ್‌ ಜೆಫ್ರಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರ್ ಹೆರಾಲ್ಡ್‌ ಜೆಫ್ರಿಸ್ (೧೮೯೧-೧೯೮೯)-ಬ್ರಿಟಿಷ್ ಖಗೋಳ ವಿಜ್ಞಾನಿ ಮತ್ತು ಭೂಭೌತವಿಜ್ಞಾನಿ.

ಬದುಕು ಮತ್ತು ಸಾಧನೆ[ಬದಲಾಯಿಸಿ]

ಈತನ ಪ್ರಧಾನ ವೈಜ್ಞಾನಿಕ ಸಿದ್ಧಿಗಳಿವು : ಭೊಕಂಪನ ತರಂಗಗಳ ಕಾಲಗಳನ್ನು ನೀಡುವ ಶಿಷ್ಟ ಕೋಷ್ಟಕಗಳ ರಚನೆ. ಕೆ.ಇ. ಬುಲನ್ ಜೊತೆಗೂಡಿ ಈ ಕಾರ್ಯವನ್ನು ಈತ 1940ರಲ್ಲಿ ಮುಗಿಸಿದ.

ಭೂಮಿಯ ನಡು ತಿರುಳು ದ್ರವರೂಪದಲ್ಲಿದೆ ಎಂದು ಸ್ಪಷ್ಟವಾಗಿ ಹೇಳಿದ ಮೊದಲಿಗ. ಭೂಚಿಪ್ಪಿನ ದೃಢತೆಯ ಒಂದು ಸರಾಸರಿ ಬೆಲೆಗೆ ಮತ್ತು ತಿರುಳಿನ ಧೃಢತೆಯ ಬೇರೆ ಬೇರೆ ಬೆಲೆಗಳಿಗೆ ಭೂದೇಹದಲ್ಲಿನ ಉಬ್ಬರವಿಳಿತದ ಸೈದ್ಧಾಂತಿಕ ಪುಟಿತ ತಗ್ಗುವಿಕೆಯ ಗಣನೆಯನ್ನು ಮಾಡಿ ಈ ಹೇಳಿಕೆಯನ್ನು ಆತ ನೀಡಿದ್ದು. ಈ ಗಣನೆಯೊಡನೆ ವೀಕ್ಷಿತ ದತ್ತಾಂಶಗಳನ್ನು ಹೋಲಿಸಿದಾಗ ತಿರುಳಿನ ದೃಢತೆ ಅತಿ ನಿಮ್ನವಾಗಿರಬೇಕೆಂದು ತಿಳಿಯಿತು. ಆದ್ದರಿಂದ ಅಲ್ಲಿ ದ್ರವಸ್ಥಿತಿ ಇರಬೇಕೆಂದು ಊಹಿಸಿದ.

ಬಾಹ್ಯ ಗ್ರಹಗಳ (ಗುರು ಮತ್ತು ಅದಕ್ಕಿಂತ ಸೂರ್ಯ ದೂರದವು) ಪ್ರಕೃತ ಹೊರಮೈ ಉಷ್ಣತೆಗಳು ಕೇವಲ ಸೂರ್ಯೋಷ್ಣ ವಿಸರಣೆಯ ಮೇಲೆ ಮಾತ್ರ ಅವಲಂಬಿಸಿರಬೇಕು ಮತ್ತು ಆ ಕಾರಣದಿಂದ ಅವು -1200ಅ. ಅಥವಾ ಕಡಿಮೆ ವ್ಯಾಪ್ತಿಯಲ್ಲಿ ಇರಬೇಕು ಎಂದು ಸೊಚಿಸಿದ. ಹೀಗಾಗಿ ಈ ಗ್ರಹಗಳಲ್ಲಿನ ಪ್ರಧಾನ ವಸ್ತುಗಳ ಅಣುತೂಕಗಳು ಕಡಿಮೆ ಇರಬೇಕೆಂದು ಅಂದಾಜು ಮಾಡಿದ. ಪ್ರಯೋಗಗಳು ಈ ಹೇಳಿಕೆಯನ್ನು ಸ್ಥಿರೀಕರಿಸಿವೆ.

ಸಹೋದ್ಯೋಗಿ ಜೇಮ್ಸ್ ಜೀನ್ಸ್‍ನೊಡನೆ ಸೇರಿ ಭೂಮಿಯ ಉದ್ಭವವನ್ನು ಕುರಿತ ಭರತ ವಾದವನ್ನು (ಟೈಡಲ್ ಹೈಪಾಥಿಸಿಸ್) ಮುಂದಿಟ್ಟ (1917). ಸೂರ್ಯನ ಸಮೀಪದಲ್ಲೆ ಹಾದುಹೋಗುತ್ತಿದ್ದ ನಕ್ಷತ್ರವೊಂದು, ಸೂರ್ಯನ ಮೈಮೇಲಿಂದ ಉಬ್ಬರದ ಅಲೆ ಎಬ್ಬಿಸಿ, ಸೆಳೆದು, ಹಾಗೆಯೇ ಮುಂದುವರಿಯಿತು. ಈ ರೀತಿ ಸೆಳೆದ ತಂತುವಿನ ಅಲೆ ಒಡೆದು ಸೌರವ್ಯೂಹದ ಒಂಬತ್ತು ಗ್ರಹಗಳ ಉತ್ಪತ್ತಿಗೆ ಕಾರಣವಾಯಿತು ಎಂಬುದು ಇದರ ಸಾರ.

ಭೂಮಿಯ ಅಂತರಾಳ ರಚನೆ ಹಾಗೊ ಖಂಡಗಳ ಅಲೆತ ವಾದವನ್ನು ಅನುಮೋದಿಸಿದವರಲ್ಲಿ ಇದಕ್ಕೂ ಮಿಗಿಲಾಗಿ ಒಂದು ಖಂಡದ ಪ್ರಾಣಿ ಹಾಗೂ ಸಸ್ಯವರ್ಗಕ್ಕೂ ಇನ್ನೊಂದು ಖಂಡದ ಜೀವರಾಶಿಗಳಿಗೂ ಇರುವ ಹೋಲಿಕೆಯನ್ನು ವಿವರಿಸಲು ಖಂಡಗಳ ನಡುವೆ ಇದ್ದ ಭೂಸೇತುವೆಯೆ ಕಾರಣ ಎಂಬುದನ್ನು ಮೊತ್ತ ಮೊದಲಿಗೆ ಸಾರಿದ.

ಭೂಮಿಯ ಉಷ್ಣ ಸಂಕೋಚನ ಎಂಬ ವಾದವನ್ನು ಮೊದಲಿಗೆ ಮಂಡಿಸಿದ. ಇದನ್ನು ಗಣಿತಶಾಸ್ತ್ರೀಯವಾಗಿಯೂ ಪ್ರತಿಪಾದಿಸಿದ್ದಾನೆ. ಭೂಮಿಯ ಉಷ್ಣಸಂಕೋಚನೆ ಖಂಡಗಳ ಅಲೆತಕ್ಕೆ ಸಾಮಥ್ರ್ಯವನ್ನು ಒದಗಿಸಿದ್ದ ಅಲ್ಲದೆ, ಪರ್ವತಗಳ ಉಗಮಕ್ಕೂ ಪೂರಕವಾಯಿತು ಎಂಬ ವಾದವನ್ನು ಮಂಡಿಸಿದ. ಉಷ್ಣ ಸಂಕೋಚನೆಗೆ ಈತ ಎರಡು ಕಾರಣ ಕೊಟ್ಟಿರುವನು. ಮೊದಲನೆಯದು ಭೂಮಿ ತನ್ನ ಉಷ್ಣವನ್ನು ಕಳೆದುಕೊಳ್ಳುವುದು, ಎರಡನೆಯದು ಭೂಮ್ಯಾವರ್ತನೆಯ ದರ ಕ್ಷೀಣಿಸುತ್ತಿರುವುದು.

ಜೆಫ್ರೀಸನ 200ಕ್ಕೊ ಹೆಚ್ಚು ಶ್ರೇಷ್ಠ ಪ್ರಬಂಧಗಳು ನಿಯತಕಾಲಿಕೆಗಳಲ್ಲಿ ಬಂದಿವೆ. ಇಂದಿಗೊ ಆಧಾರಗ್ರಂಥವಾಗಿರುವ ದಿ ಅರ್ತ್ ಎಂಬ ಉದ್ಗ್ರಂಥವನ್ನು ಈತ 1924ರಲ್ಲಿ ಕೇಂಬ್ರಿಜಿನ ಸೇಂಟ್ ಜಾನ್ ಕಾಲೇಜಿನಲ್ಲಿದ್ದಾಗ ಬರೆದ.

1946-58ರ ವರೆಗೆ ಖಗೋಳಶಾಸ್ತ್ರದ ಪುಲ್ಮಿಯನ್ ಪ್ರಾಧ್ಯಾಪಕನಾಗಿ ಸೇವೆ ಸಲ್ಲಿಸಿದ. ಈತನಿಗೆ ಸರ್ ಎಂಬ ಗೌರವಾನ್ವಿತ ಪದವಿ 1953ರಲ್ಲಿ ದೊರೆಯಿತು. ರಾಯಲ್ ಅಸ್ಟ್ರನಾಮಿಕಲ್ ಸೊಸೈಟಿ 1937ರಲ್ಲಿ ಚಿನ್ನದ ಪದಕವನ್ನಿತ್ತಿತು. ರಾಯಲ್ ಸೊಸೈಟಿ 1948ರಲ್ಲಿ ರಾಯಲ್ ಪದಕವನ್ನು ನೀಡಿತ