ವಿಷಯಕ್ಕೆ ಹೋಗು

ಚಂಪಕ ಮಾಲಾವೃತ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಂಪಕಮಾಲಾವೃತ್ತದ ಲಕ್ಷಣ:

ಚಂಪಕಮಾಲಾವೃತ್ತ
UUU U-U -UU U-U U-U U-U -U-
ನಜಭ ಜಜಂಜ ರಂ ಬಗೆ ಗೊಳುತ್ತಿ ರೆ ಚಂಪ ಕಮಾಲೆ ಯೆಂದಪರ್

"ಲಘುನಾಲ್ಕಾಗಿರೆ ಚಂಪಕಂ" ಎಂಬ ಮಾತು ಪ್ರಸಿದ್ಧವಾಗಿಯೇ ಇದೆ.

ಚಂಪಕಮಾಲೆ ನಾಲ್ಕು ಸಮಾನಪಾದಗಳುಳ್ಳ ಪದ್ಯ.  ಪ್ರತಿಯೊಂದು ಪಾದದಲ್ಲೂ ೨೧ ಅಕ್ಷರಗಳಿವೆ.  ಪ್ರತಿ ಪಾದದಲ್ಲಿಯೂ ಅನುಕ್ರಮವಾಗಿ ನ, ಜ, ಭ, ಜ, ಜ, ಜ, ರ – ಎಂಬ ಏಳು ಗಣಗಳಿರುತ್ತವೆ.  ಇಂಥ ವೃತ್ತಗಳೆಲ್ಲ ಚಂಪಕಮಾಲಾವೃತ್ತಗಳೆನಿಸುವುವು.

ಚಂಪಕಮಾಲಾವೃತ್ತದ ಲಕ್ಷಣವನ್ನು ಕೆಳಗಣ ಸೂತ್ರ ವಿವರಿಸುತ್ತದೆ.

ಸೂತ್ರ:- ನಜಭಜಜಂಜರಂ ಬಗೆಗೊಳುತ್ತಿರೆ ಚಂಪಕಮಾಲೆಯೆಂದಪರ್

ನಗಣ ಜಗಣ ಭಗಣ ಜಗಣ ಜಗಣ ಜಗಣ ರಗಣ
UUU U-U -UU U-U U-U U-U -U-
ಎನೆ ನ ಸುನಕ್ಕು ಮಾರರಿ ಪುವಾತ ನ ಧೈ‍ರ್ಯ ಮನಾತ ನೇಳ್ಗೆವೆ
ನಗಣ ಜಗಣ ಭಗಣ ಜಗಣ ಜಗಣ ಜಗಣ ರಗಣ
UUU U-U -UU U-U U-U U-U -U-
ತ್ತನುಗ ತ ಶೌರ್ಯ ಮಂ ಬಳಿ ಯೊಳಿರ್ಪ ಗಜಾತೆ ಗೆ ಸೂಚಿ ಸುತ್ತೆಪು
ನಗಣ ಜಗಣ ಭಗಣ ಜಗಣ ಜಗಣ ಜಗಣ ರಗಣ
UUU U-U -UU U-U U-U U-U -U-
ರ್ಬಿನಕೊ ವೆಸನ್ನೆ ಯಿಗೊರ ವ ನಿನ್ನ ಯ ಶೌರ್ಯ ಮದಿರ್ಕೆ ಖಡ್ಗವೀ
ನಗಣ ಜಗಣ ಭಗಣ ಜಗಣ ಜಗಣ ಜಗಣ ರಗಣ
UUU U-U -UU U-U U-U U-U -U-
ಧನುಗ ರಮೆತ್ತ ನಿನ್ನ ತ ಪಮೆತ್ತ ವಿಚಿತ್ರ ಮಿದಲ್ತೆ ಧಾತ್ರಿಯೊಳ್

---- ಶಬರಶಂಕರವಿಲಾಸ