ಸದಸ್ಯ:MalnadachBot

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇದು ಮಲ್ನಾಡಾಚ್ ಕೊಂಕ್ಣೊ (ಚರ್ಚೆ) ಅವರು ನಿರ್ವಹಿಸುವ ಬಾಟ್ ಖಾತೆಯಾಗಿದೆ.

ಈ ಬಾಟ್ AutoWikiBrowser ಅನ್ನು ಬಳಸಿ ಕಾರ್ಯನಿರ್ವಹಿಸುತ್ತದೆ. ಇದರ ಬಾಟ್ ಅನುಮೋದನೆಯು ಅಕ್ಟೋಬರ್ ೧೩ ೨೦೨೧ರ ತನಕ ಇದೆ.

ಕಾರ್ಯಗಳು[ಬದಲಾಯಿಸಿ]

  • ಕಾಗುಣಿತ ದೋಷಗಳನ್ನು ಸರಿಪಡಿಸುವುದು. ಉದಾ - ಉಲೇಖಗಳು → ಉಲ್ಲೇಖಗಳು. ಇದನ್ನು ಸಂಪೂರ್ಣ ಸ್ವಯಂಚಾಲಿತವಾಗಿ ನಡೆಸಲಾಗುವುದಿಲ್ಲ, ಎಲ್ಲಾ ಸಂಪಾದನೆಗಳನ್ನು ಪರಿಶೀಲಿಸಿ ಉಳಿಸಲಾಗುವುದು.
  • ಕೆಲ ಜಾಲತಾಣಗಳ ಕೊಂಡಿಗಳನ್ನು http → https ಗೆ ಬದಲಾಯಿಸುವುದು (Uses regex). ಉದಾ - http://www.youtube.com/https://www.youtube.com/. http ಗೆ ಹೋಲಿಸಿದರೆ https ಸುರಕ್ಷಿತವಾಗಿದ್ದು, ಉಪಯೋಗಗಳನ್ನು ಇದರಲ್ಲಿ ಓದಬಹುದು. ಮುಂಚೆ http ಬಳಸಿತ್ತಿದ್ದ ಹಲವು ಜಾಲತಾಣಗಳು https ಗೆ ಬದಲಾಗಿವೆ. ವಿಕಿಯಾದ್ಯಂತ ಇರುವ ಹಳೆಯ http ಕೊಂಡಿಗಳನ್ನು https ಗೆ ಬದಲಾಯಿಸಲಾಗುವುದು. ಆಂಗ್ಲ ವಿಕಿಪೀಡಿಯಾದಲ್ಲಿ Bender the Bot ಮಾಡುವ ಕಾರ್ಯವನ್ನೇ ಇದು ಮಾಡುತ್ತದೆ.
  • ಆಂಗ್ಲ ಕೊಂಡಿಗಳನ್ನು ಕನ್ನಡಕ್ಕೆ ಬದಲಾಯಿಸುವುದು. ಉದಾ - [[India]][[ಭಾರತ]]. ಹೀಗೆ ಮಾಡುವುದರಿಂದ ಕೆಂಪು ಕೊಂಡಿಗಳು ನೀಲಿಯಾಗಿ, ಕನ್ನಡ ವಿಕಿಪೀಡಿಯಾದ ಪುಟಗಳ ನಡುವಿನ ಸಂಪರ್ಕ ಹೆಚ್ಚಾಗುತ್ತದೆ.
  • ಲಿಂಟ್ ದೋಷಗಳನ್ನು ಸರಿಪಡಿಸುವುದು (Uses regex). ಇವು ಹಲವಾರು ಹೆಚ್‌ಟಿ‌ಎಮ್‌ಎಲ್ ಟ್ಯಾಗ್ ದೋಷಗಳು. ಈ ದೋಷಗಳಿಂದಾಗಿ ಪುಟಗಳು ಎಲ್ಲಾ ಉಪಕರಣಗಳಲ್ಲಿ ಒಂದೇ ರೀತಿಯಲ್ಲಿ ಕಾಣುವುದಿಲ್ಲ. ಜುಲೈ ೯ ೨೦೨೧ರಂತೆ ಕನ್ನಡ ವಿಕಿಪೀಡಿಯದಲ್ಲಿ ೨೫ ಸಾವಿರಕ್ಕೂ ಹೆಚ್ಚು ಲಿಂಟ್ ದೋಷಗಳಿವೆ. ಇದರಲ್ಲಿ ಹಲವನ್ನು ಬಾಟ್ ಮೂಲಕ ಸರಿಪಡಿಸಬಹುದು.