ಕೆ. ಬಿ. ಸಿದ್ದಯ್ಯ
ಗೋಚರ
ಕೆ.ಬಿ.ಸಿದ್ದಯ್ಯ ಕನ್ನಡ ಸಾಹಿತ್ಯ ಲೋಕ ಕಂಡ ಚಿಂತಕ, ಹಿರಿಯಚೇತನ ಕವಿ, ವಾಗ್ಮಿ. ನೊಂದವರ, ದಮನಿತರ ದನಿಯಾಗಿ, ಹೋರಾಟದ ಕಿಡಿ, ಹಣತೆ ಸಿದ್ದಯ್ಯ. ನಿಜಕ್ಕೂ ನಮ್ಮೊಳಗಿನ ಹೆಮ್ಮೆ.ಸಾಕಷ್ಟು ಬರೆಯುವ ಶಕ್ತಿ ಇದ್ದರೂ ಹೆಚ್ಚು ಬರೆಯಲಿಲ್ಲ.
ಜನನ/ಜೀವನ
[ಬದಲಾಯಿಸಿ]- ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನ ಕೆಂಕೆರೆಯಲ್ಲಿ ಬೈಲಪ್ಪ ಮತ್ತು ಅಂತೂರಮ್ಮನವರ ಪುತ್ರರಾಗಿ 1954 ಮಾರ್ಚ್ 4 ರಂದು ಜನಿಸಿದ ಕೆ.ಬಿ.ಸಿದ್ದಯ್ಯ, ಅಲ್ಲಿಂದ ತುಮಕೂರಿಗೆ ಬಂದು ನೆಲೆಸಿದರು. ದಲಿತ ಕುಟುಂಬದಲ್ಲಿ ಜನಿಸಿದ ಕೆ.ಬಿ. ಸಿದ್ದಯ್ಯ ಅವರು ಶ್ರೀ ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆಯ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದರು. 1970-80ರ ದಶಕದಲ್ಲಿ ದಲಿತ ಚಳವಳಿಗಳಲ್ಲಿ ಗುರುತಿಸಿಕೊಂಡಿದ್ದರು.
- ಖಂಡ ಕಾವ್ಯವನ್ನೇ ವಿಶಿಷ್ಟವಾಗಿ ಆಯ್ಕೆ ಮಾಡಿಕೊಂಡು ದೇಶೀಯತೆಯ ಮೂಲಕ ವಿಶ್ವವನ್ನು ಕಾಣಲು ಬಯಸಿದ್ದರು. ಮೊದಲಿಗೆ ಕಾವ್ಯದಲ್ಲಿ ಆಧ್ಯಾತ್ಮವನ್ನು ತಂದ ಹೆಗ್ಗಳಿಕೆ ಕೆಬಿ ಅವರದ್ದು. 'ದಕ್ಲಕಥಾದೇವಿ', 'ಬಕಾಲ', 'ಅನಾತ್ಮ', 'ಗಲ್ಲೇಬಾನಿ' ಈ ನಾಲ್ಕು - ಖಂಡಕಾವ್ಯಗಳಾದರೆ; 'ಕತ್ತಲೊಡನೆ ಮಾತುಕತೆ', 'ಬುದ್ದನ ನಾಲ್ಕು ಶ್ರೇಷ್ಠ ಸತ್ಯಗಳು' ಇವು ಗದ್ಯ ಬರಹಗಳು.
- ದಲಿತ ಚಳವಳಿಯೊಂದಿಗೆ ಮುನ್ನಡೆದು ಬಂದಿದ್ದ ಕೆಬಿ ರಾಜ್ಯದ ಉದ್ದಕ್ಕೂ ಸಾಹಿತ್ಯ ವಲಯದಲ್ಲಿ ಪ್ರಭಾವ ಬೀರಿದ್ದರು. ಬುದ್ಧ ಮತ್ತು ಅಲ್ಲಮನ ಕುರಿತು ಗಂಭೀರವಾಗಿ ಓದಿಕೊಂಡಿದ್ದರು. ಅಲ್ಲಮನ ವಚನಗಳನ್ನು ಸಭಿಕರಿಗೆ ಮನವರಿಕೆಯಾಗುವಂತೆ ವಿವರಿಸುತ್ತಿದ್ದರು. ಒಳಮೀಸಲಾತಿಯ ಹೋರಾಟದಲ್ಲೂ ಗುರುತಿಸಿಕೊಂಡಿದ್ದರು.
ಕೃತಿಗಳು
[ಬದಲಾಯಿಸಿ]- ಬಕಾಲ
- ದಕ್ಲಕಥಾದೇವಿ ಕಾವ್ಯ
- ಅನಾತ್ಮ (ಕಾವ್ಯ)
- ನಾಲ್ಕು ಶ್ರೇಷ್ಠಸತ್ಯಗಳು (ಅನುವಾದ)
- ದಲಿತಕಾವ್ಯ (ಸಂಪಾದನೆ)
ಮುಂತಾದವು
ಪ್ರಶಸ್ತಿ-ಪುರಸ್ಕಾರಗಳು
[ಬದಲಾಯಿಸಿ]- ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ (2೦೦4)
- ಕನ್ನಡ ರಾಜ್ಯೋತ್ಸವ ಪ್ರಶಸ್ತಿ (2013)
ಮರಣ
[ಬದಲಾಯಿಸಿ]- ಸಿದ್ದಯ್ಯನವರು ಕೆಲ ದಿನಗಳ ಹಿಂದೆ ಮಾಗಡಿ ತಾಲೂಕಿನ ಕುದೂರು ಹೋಬಳಿಯ ಕೆಂಕೆರೆ ಗ್ರಾಮದ ಬಳಿ ಇರುವ ಅವರ ತೋಟಕ್ಕೆ ಹೋಗುವಾಗ ಕಾರು ಅಪಘಾತವಾಗಿತ್ತು. ಅವರ ಕಾರು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಸಿದ್ದಯ್ಯನವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
- ತೀವ್ರ ರಕ್ತಸ್ರಾವವಾಗಿದ್ದರಿಂದ ಸಿದ್ದಯ್ಯನವರ ಶ್ವಾಸಕೋಶಕ್ಕೆ ಸೋಂಕು ತಗುಲಿದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:೧೮-೧೦-೨೦೧೯ರಂದು ಕೊನೆಯುಸಿರೆಳೆದಿದ್ದಾರೆ. ಸಾಮಾಜಿಕ ಕಳಕಳಿ ಜೊತೆಜೊತೆಗೆ ಕನ್ನಡದ ಹಾಗು ದಲಿತಪರ ಧ್ವನಿ ಇಂದು ಮರೆಯಾಗಿದೆ.
- ಕುದೂರು ಹೋಬಳಿಯ ಕೆಂಕೆರೆ ಗ್ರಾಮಕ್ಕೆ ಸಂಜೆ5.15 ಕ್ಕೆ ಅವರ ಪ್ರಾರ್ಥಿವ ಶರೀರವನ್ನು ಜನರ ಅಂತಿಮ ದರ್ಶನಕ್ಕೆ ಇಡಲಾಯಿತು. ನಂತರ ರಾತ್ರಿ 7 ಕ್ಕೆ ಅಂತ್ಯ ಸಂಸ್ಕಾರ ನೇರವೇರಿತು. ಸಿದ್ದಯ್ಯನವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಒಬ್ಬ ಪುತ್ರನನ್ನು ಬಿಟ್ಟು ಅಗಲಿದ್ದಾರೆ.
ಉಲ್ಲೇಖ
[ಬದಲಾಯಿಸಿ]- ↑ https://www.prajavani.net/news/article/2017/03/04/475677.html
- ↑ https://vijaykarnataka.com/news/tumakuru/senior-dalit-poet-kb-siddaiah-passed-away/articleshow/71642120.cms
- ↑ "ಆರ್ಕೈವ್ ನಕಲು". Archived from the original on 2019-10-19. Retrieved 2019-10-19.
- ↑ "ಆರ್ಕೈವ್ ನಕಲು". Archived from the original on 2019-10-19. Retrieved 2019-10-19.
- ↑ http://m.varthabharati.in/article/2019_10_18/215292
- ↑ http://m.varthabharati.in/article/2019_10_18/215274