ವಿಷಯಕ್ಕೆ ಹೋಗು

ಪಿಚ್ಚಾವರಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಿ‍ಚ್ಚಾವರಂ ಭಾರತದ ಅತಿದೊಡ್ಡ ಮ್ಯಾಂಗ್ರೋವ್ ಕಾಡುಗಳಲ್ಲಿ ಒಂದನ್ನು ಹೊಂದಿದೆ
ಕಾಡಿನ ಒಂದು ನೋಟ

ಪಿಚ್ಚಾವರಂ ಭಾರತದ ತಮಿಳುನಾಡು ರಾಜ್ಯದ ಕಡಲೂರು ಜಿಲ್ಲೆಯ ಚಿದಂಬರಂ ಬಳಿಯ ಹಳ್ಳಿ.[][] ಇದು ಉತ್ತರದಲ್ಲಿನ ವೆಲ್ಲಾರ್ ಅಳಿವೆ ಮತ್ತು ದಕ್ಷಿಣದಲ್ಲಿನ ಕೋಲರೂನ್ ಅಳಿವೆ ನಡುವೆ ಇದೆ. ವೆಲ್ಲಾರ್-ಕೋಲರೂನ್ ನದೀಮುಖ ಸಂಕೀರ್ಣವು ಕಿಲ್ಲೈ ಹಿನ್ನೀರು ಮತ್ತು ಕೆಲವು ಅಡಿ ನೀರಿನಲ್ಲಿ ಶಾಶ್ವತವಾಗಿ ಬೇರೂರಿರುವ ಮ್ಯಾಂಗ್ರೋವ್‌ಗಳನ್ನು ರೂಪಿಸುತ್ತದೆ.

ಮ್ಯಾಂಗ್ರೋವ್ ಕಾಡುಗಳು

[ಬದಲಾಯಿಸಿ]

ಪಿಚ್ಚಾವರಂ ಹಲವಾರು ದ್ವೀಪಗಳನ್ನು ಒಳಗೊಂಡಿದೆ. ಇವು ಮ್ಯಾಂಗ್ರೋವ್ ಕಾಡಿನಿಂದ ಆವೃತವಾಗಿರುವ ವಿಶಾಲವಾದ ನೀರಿನ ವಿಸ್ತಾರದ ಮಧ್ಯೆ ಮಧ್ಯೆ ಇವೆ. ಪಿಚ್ಚಾವರಂ ಮ್ಯಾಂಗ್ರೋವ್ ಅರಣ್ಯವು ಭಾರತದ ಅತಿದೊಡ್ಡ ಮ್ಯಾಂಗ್ರೋವ್ ಕಾಡುಗಳಲ್ಲಿ ಒಂದಾಗಿದೆ, ಇದು ಸುಮಾರು ೧೧೦೦ ಹೆಕ್ಟೇರ್ ಪ್ರದೇಶವನ್ನು ಹೊಂದಿದೆ. ಒಂದು ಮರಳು ಪಟ್ಟಿಯು ಇದನ್ನು ಬಂಗಾಳಕೊಲ್ಲಿಯಿಂದ ಬೇರ್ಪಡಿಸುತ್ತದೆ. ಇದು ಆರ್ಥಿಕವಾಗಿ ಮಹತ್ವದ ಕಪ್ಪೆಚಿಪ್ಪು ಮತ್ತು ಫಿನ್‌ಫಿಶ್‌ಗಳ ಅಪರೂಪದ ಪ್ರಭೇದಗಳ ಅಸ್ತಿತ್ವಕ್ಕೂ ಆಶ್ರಯ ನೀಡುತ್ತದೆ.[][]

ಪ್ರಾಣಿವರ್ಗ

[ಬದಲಾಯಿಸಿ]

ಮ್ಯಾಂಗ್ರೋವ್‌ಗಳು ಉಲ್ಲಂಗಿಗಳು, ನೀರುಕಾಗೆಗಳು, ನಾರಾಯಣ ಪಕ್ಷಿ‌ಗಳು, ಕೊಕ್ಕರೆಗಳು, ಹೆರಾನ್‌ಗಳು, ಸ್ಪೂನ್‌ಬಿಲ್‌ಗಳು ಮತ್ತು ನೀರುಹಕ್ಕಿಗಳು ಸೇರಿದಂತೆ ವಲಸೆ ಮತ್ತು ಸ್ಥಳೀಯ ಪಕ್ಷಿಗಳನ್ನು ಆಕರ್ಷಿಸುತ್ತವೆ.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "UNESCO list".
  2. "Mangrove forests". Archived from the original on 2009-12-10. Retrieved 2014-08-04.
  3. "Mangrove".
  4. "ಆರ್ಕೈವ್ ನಕಲು". Archived from the original on 2022-08-16. Retrieved 2021-02-13.

ಹೊರಗಿನ ಕೊಂಡಿಗಳು

[ಬದಲಾಯಿಸಿ]