ಖೂಬ್‍ಸೂರತ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಖೂಬ್‍ಸೂರತ್
ಚಲನಚಿತ್ರದ ಭಿತ್ತಿಪತ್ರ
ನಿರ್ದೇಶನಹೃಷಿಕೇಶ್ ಮುಖರ್ಜಿ
ನಿರ್ಮಾಪಕಹೃಷಿಕೇಶ್ ಮುಖರ್ಜಿ
ಎನ್. ಸಿ. ಸಿಪ್ಪಿ
ಚಿತ್ರಕಥೆಶಾನು ಬ್ಯಾನರ್ಜಿ
ಅಶೋಕ್ ರಾವತ್
ಗುಲ್‍ಜ಼ಾರ್
ಕಥೆಡಿ. ಎನ್. ಮುಖರ್ಜಿ
ಪಾತ್ರವರ್ಗಅಶೋಕ್ ಕುಮಾರ್
ರೇಖಾ
ರಾಕೇಶ್ ರೋಶನ್
ಸಂಗೀತಆರ್. ಡಿ. ಬರ್ಮನ್
ಛಾಯಾಗ್ರಹಣಜಯ್‍ವಂತ್ ಪಠಾರೆ
ಸಂಕಲನಸುಭಾಷ್ ಗುಪ್ತಾ
ಬಿಡುಗಡೆಯಾಗಿದ್ದುಜನೆವರಿ 25, 1980
ದೇಶಭಾರತ
ಭಾಷೆಹಿಂದಿ

ಖುಬ್‍ಸೂರತ್ (ಅನುವಾದ : ಸುಂದರ) 1980 ರ ಒಂದು ಹಿಂದಿ ಭಾಷೆಯ ಹಾಸ್ಯಪ್ರಧಾನ ನಾಟಕೀಯ ಚಲನಚಿತ್ರ. ಹೃಷಿಕೇಶ್ ಮುಖರ್ಜಿ ಇದನ್ನು ನಿರ್ದೇಶಿಸಿ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಗುಲ್ಜಾರ್ ಬರೆದ ಸಂಭಾಷಣೆಗಳಿವೆ. ಈ ಚಿತ್ರದಲ್ಲಿ ರೇಖಾ, ರಾಕೇಶ್ ರೋಶನ್, ಅಶೋಕ್ ಕುಮಾರ್, ದೀನಾ ಪಾಠಕ್ ಮತ್ತು ಶಶಿಕಲಾ ನಟಿಸಿದ್ದಾರೆ. ಈ ಚಿತ್ರವು ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿತು ಮತ್ತು ಬಾಕ್ಸ್ ಆಫ಼ಿಸ್‍ನಲ್ಲಿ ಯಶಸ್ವಿಯಾಯಿತು.

ಈ ಚಿತ್ರವು 1981 ರ ಫಿಲ್ಮ್‌ಫೇರ್ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಮುಖ್ಯ ನಟಿಯಾದ ರೇಖಾ, ಮಂಜು ದಯಾಲ್ ಪಾತ್ರಕ್ಕಾಗಿ ತಮ್ಮ ಮೊದಲ ಫಿಲ್ಮ್‌ಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಗೆದ್ದರು. ಈ ಚಿತ್ರವನ್ನು ತಮಿಳಿನಲ್ಲಿ ಲಕ್ಷ್ಮಿ ವಂದಚು ಎಂದು ಮತ್ತು ಮಲಯಾಳಂನಲ್ಲಿ ವನ್ನು ಕಂಡು ಕೀಳಡಕ್ಕಿ ಎಂದು ರಿಮೇಕ್ ಮಾಡಲಾಯಿತು. ಇದೇ ಹೆಸರಿನ 2014 ರ ಹಿಂದಿ ಚಲನಚಿತ್ರವು ಈ ಚಿತ್ರದ ಮೇಲೆ ಸಡಿಲವಾಗಿ ಆಧಾರಿತವಾಗಿದೆ.

ಕಥಾವಸ್ತು[ಬದಲಾಯಿಸಿ]

ದ್ವಾರಕಾ ಪ್ರಸಾದ್ ಗುಪ್ತಾನ (ಅಶೋಕ್ ಕುಮಾರ್) ಪತ್ನಿ ಮತ್ತು ನಾಲ್ವರ ತಾಯಿಯಾದ ಮಧ್ಯವಯಸ್ಕ ನಿರ್ಮಲಾ ಗುಪ್ತಾ (ದೀನಾ ಪಾಠಕ್) ಶಿಸ್ತುಪಾಲಕಿಯಾಗಿದ್ದು ನಿಯಮಗಳ ಪ್ರಕಾರ ತನ್ನ ಮನೆಯನ್ನು ನಡೆಸುತ್ತಿರುತ್ತಾಳೆ. ಅವರು ಯಾವಾಗಲೂ ಅವಳ ಮಾರ್ಗಗಳನ್ನು ಒಪ್ಪುತ್ತಿರುವುದಿಲ್ಲವಾದರೂ, ಪತಿ ಸೇರಿದಂತೆ ಪ್ರತಿಯೊಬ್ಬರೂ ಅವಳ ನಿಯಮಗಳನ್ನು ಅನುಸರಿಸುತ್ತಿರುತ್ತಾರೆ. ಅವಳು ತನ್ನ ಗಂಡುಮಕ್ಕಳಿಗೆ ಹೆಂಡತಿಯರನ್ನು ಸಹ ತಾನೇ ಆರಿಸುತ್ತಿರುತ್ತಾಳೆ, ಮತ್ತು ಈಗ ಅಂಜುನನ್ನು ತನ್ನ ಎರಡನೆಯ ಮಗನಿಗಾಗಿ ಆರಿಸುತ್ತಾಳೆ.

ಅಂಜು ಮತ್ತು ಮಂಜು (ರೇಖಾ) ಶ್ರೀಮಂತ ವಿಧುರನಾದ ರಾಮ್ ದಯಾಲ್‍ನ (ಡೇವಿಡ್) ಪುತ್ರಿಯರಾಗಿರುತ್ತಾರೆ. ಮದುವೆಯ ನಂತರ ಮಂಜು ತನ್ನ ಸಹೋದರಿಯೊಂದಿಗೆ ಇರಲು ಸ್ವಲ್ಪ ಕಾಲ ಬರುತ್ತಾಳೆ. ತಮಾಷೆಯ ಮತ್ತು ತುಂಟ ಹುಡುಗಿಯಾಗಿರುವುದರಿಂದ ಅವಳು ಶೀಘ್ರವೇ ನಿರ್ಮಲಾಳ ಅಸಮ್ಮತಿಯನ್ನು ಪಡೆಯುತ್ತಾಳೆ. ಆದರೆ ಯುವ ವೈದ್ಯನಾದ ಆಕೆಯ ಮೂರನೆಯ ಮಗ ಇಂದರ್ (ರಾಕೇಶ್ ರೋಶನ್) ನಿಧಾನವಾಗಿ ಮಂಜುವಿಗೆ ಹತ್ತಿರವಾಗುತ್ತಾನೆ.

ಸ್ವತಃ ವಿನೋದಪ್ರಿಯ ವ್ಯಕ್ತಿಯಾಗಿದ್ದ ದ್ವಾರಕಾ ಪ್ರಸಾದ್‍ನ ಗಮನವನ್ನೂ ಮಂಜು ಸೆಳೆಯುತ್ತಾಳೆ. ತನ್ನ ಹೆಂಡತಿಯ ನಿಯಂತ್ರಣದ ವರ್ತನೆಯಡಿ ದೀರ್ಘಕಾಲ ಬದುಕಿದ ನಂತರ ತಮಾಷೆಯ ಮಂಜುವಿನ ಉಪಸ್ಥಿತಿಯಿಂದ ಅವನಿಗೆ ನಿರಾಳವೆನಿಸುತ್ತದೆ. ಮಂಜು ಕ್ರಮೇಣ ನಿರ್ಮಲಾಳನ್ನು ಹೊರತುಪಡಿಸಿ ಮನೆಯಲ್ಲಿನ ಎಲ್ಲರ ವಿಶ್ವಾಸವನ್ನು ಗಳಿಸುತ್ತಾಳೆ.

ಒಂದು ದಿನ, ಇತರ ಕುಟುಂಬ ಸದಸ್ಯರ ಮೇಲೆ ನಿರ್ಮಲಾಳ ದಬ್ಬಾಳಿಕೆಯನ್ನು ಎತ್ತಿ ತೋರಿಸುವ ಒಂದು ಸಣ್ಣ ನಾಟಕವನ್ನು ಅವಳು ಪ್ರದರ್ಶಿಸುತ್ತಾಳೆ. ನಿರ್ಮಲಾ ಮನೆಯಲ್ಲಿಲ್ಲವೆಂದು ನಂಬಲಾಗಿರುತ್ತದೆ, ಆದರೆ ಅವಳು ಅದನ್ನು ಆಕಸ್ಮಿಕವಾಗಿ ನೋಡುತ್ತಾಳೆ. ತಾನು ಕುಟುಂಬದ ಯೋಗಕ್ಷೇಮಕ್ಕಾಗಿ ಎಲ್ಲವನ್ನೂ ಮಾಡಿದರೂ ಪ್ರತಿಯೊಬ್ಬರೂ ಅವಳನ್ನು ಸರ್ವಾಧಿಕಾರಿಯೆಂದು ಭಾವಿಸಿದ್ದರಿಂದ ಅವಳು ನೊಂದುಕೊಳ್ಳುತ್ತಾಳೆ. ಇದಲ್ಲದೆ, ಪ್ರತಿಯೊಬ್ಬರೂ ಹೊರಗಿನವಳಾದ ಮಂಜುವಿಳೊಂದಿಗೆ ಸ್ವಾತಂತ್ರ್ಯ ಅನುಭವಿಸಿದರು, ಆದರೆ ತನ್ನೊಂದಿಗಲ್ಲ ಎಂಬ ವಾಸ್ತವಾಂಶವು ಅವಳನ್ನು ಹೆಚ್ಚು ನೋಯಿಸುತ್ತದೆ.

ಮಂಜು ಕ್ಷಮೆಯಾಚಿಸಲು ಪ್ರಯತ್ನಿಸುತ್ತಾಳೆ, ಆದರೆ ನಿರ್ಮಲಾ ಅವಳೊಂದಿಗೆ ಮಾತನಾಡುವುದಿಲ್ಲ. ಅವಳ ಕಲ್ಲು ಮನಸ್ಸನ್ನು ನೋಡಿ ದ್ವಾರಕ ಪ್ರಸಾದ್ ಭಾವನಾತ್ಮಕವಾಗಿ ಅಸಮಾಧಾನಗೊಂಡು ಅವಳ ಮೇಲೆ ಕಿರಿಚುತ್ತಾನೆ. ಇದು ಅವನಿಗೆ ಹೃದಯಾಘಾತವಾಗುವುದಕ್ಕೆ ಕಾರಣವಾಗುತ್ತದೆ. ಮಂಜು ಹೊರತುಪಡಿಸಿ ಎಲ್ಲರೂ ಯಾವುದೋ ಮದುವೆಗೆ ಹೋಗಿದ್ದರಿಂದ ನಿರ್ಮಲಾ ಉದ್ವಿಗ್ನಳಾಗುತ್ತಾಳೆ. ಮಂಜು ಸಮಯೋಚಿತವಾಗಿ ನಡೆದುಕೊಂಡು ದ್ವಾರಕಾ ಪ್ರಸಾದ್‍ನನ್ನು ಉಳಿಸುತ್ತಾಳೆ. ಕೊನೆಗೆ, ನಿರ್ಮಲಾಗೆ ಮಂಜುವಿನ ನಡತೆ ಅರ್ಥವಾಗಿ ಅವಳು ಕೂಡ ಅವಳನ್ನು ಒಪ್ಪುತ್ತಾಳೆ. ಕೊನೆಯಲ್ಲಿ ಮಂಜು ಮತ್ತು ಇಂದರ್ ಮದುವೆಯಾಗುತ್ತಾರೆ.

ಪಾತ್ರವರ್ಗ[ಬದಲಾಯಿಸಿ]

  • ಮಂಜು ದಯಾಲ್ ಪಾತ್ರದಲ್ಲಿ ರೇಖಾ
  • ದ್ವಾರಕಾ ಪ್ರಸಾದ್ ಗುಪ್ತಾ ಪಾತ್ರದಲ್ಲಿ ಅಶೋಕ್ ಕುಮಾರ್
  • ಇಂದರ್ ಗುಪ್ತಾ ಪಾತ್ರದಲ್ಲಿ ರಾಕೇಶ್ ರೋಶನ್
  • ಬಡಿ ಭಾಭಿ ಪಾತ್ರದಲ್ಲಿ ಶಶಿಕಲಾ
  • ಅಂಜು ಗುಪ್ತಾ ಪಾತ್ರದಲ್ಲಿ ಆರಾಧನಾ
  • ನಿರ್ಮಲಾ ಗುಪ್ತಾ ಪಾತ್ರದಲ್ಲಿ ದೀನಾ ಪಾಠಕ್
  • ರಾಮ್ ದಯಾಲ್ ಪಾತ್ರದಲ್ಲಿ ಡೇವಿಡ್
  • ಉಮಾಶಂಕರ್ ಪಾತ್ರದಲ್ಲಿ ಎಸ್. ಎನ್. ಬ್ಯಾನರ್ಜಿ
  • ಅಶ್ರಫ಼ಿ ಲಾಲ್ ಪಾತ್ರದಲ್ಲಿ ಕೇಶ್ತೊ ಮುಖರ್ಜಿ
  • ಜಗನ್ ಗುಪ್ತಾ ಪಾತ್ರದಲ್ಲಿ ರಂಜೀತ್ ಚೌಧರಿ
  • ಮುನ್ನಿ ಪಾತ್ರದಲ್ಲಿ ರೂಪಿಣಿ (ಕೋಮಲ್ ಮಹುವಕರ್)
  • ಡಾಕ್ಟರ್ ಜೋಶಿ ಪಾತ್ರದಲ್ಲಿ ಓಂ ಶಿವಪುರಿ (ಅತಿಥಿ ಪಾತ್ರ)
  • ಡಾಕ್ಟರ್ ಅಬ್ಬಾಸ್ ಪಾತ್ರದಲ್ಲಿ ಆನಂದ್
  • ಚಂದರ್ ಗುಪ್ತಾ ಪಾತ್ರದಲ್ಲಿ ವಿಜಯ್ ಶರ್ಮಾ

ಧ್ವನಿವಾಹಿನಿ[ಬದಲಾಯಿಸಿ]

# ಶೀರ್ಷಿಕೆ ಗಾಯಕ (ಗಳು)
1 "ಸುನ್ ಸುನ್ ಸುನ್ ದೀದಿ" ಆಶಾ ಭೋಸ್ಲೆ
2 "ಕಾಯ್ದಾ ಕಾಯ್ದಾ" ಸಪನ್ ಚಕ್ರವರ್ತಿ, ರೇಖಾ
3 "ಪಿಯಾ ಬಾವರಿ ಪಿಯಾ ಬಾವರಿ" ಅಶೋಕ್ ಕುಮಾರ್, ಆಶಾ ಭೋಸ್ಲೆ
4 "ಸಾರೆ ನಿಯಮ್ ತೋಡ್ ದೋ" ಆಶಾ ಭೋಸ್ಲೆ
5 "ಸಾರೆ ನಿಯಮ್ ತೋಡ್ ದೋ" ಸಪನ್ ಚಕ್ರವರ್ತಿ, ರೇಖಾ

ಪ್ರಶಸ್ತಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]