ವಿಷಯಕ್ಕೆ ಹೋಗು

ಆದಿನಾಥ ಸ್ವಾಮಿ ಬಸದಿ, ವೇಣೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೇಣೂರು ಆದಿನಾಥ ಸ್ವಾಮಿ ಬಸದಿಯು ಕರ್ನಾಟಕ ಜೈನ ಬಸದಿಗಳಲ್ಲಿ ಒಂದಾಗಿದೆ.

ಶ್ರೀ ಶಾಂತಿನಾಥ ಬಸದಿ (ಕಲ್ಲುಬಸದಿ)ಗೆ ಪ್ರವೇಶಿಸುವ ದ್ವಾರದಲ್ಲಿ ಎಲ್ಲರನ್ನು ಸ್ವಾಗತಿಸಲೇ ಎಂಬಂತೆ ಎತ್ತರವಾದ, ಅನೇಕ ಚಿತ್ತಾರದಿಂದ ಕೂಡಿದ ಸುಂದರ ಮಾನಸ್ತಂಭವಿದೆ, ಅನಂತರ ಸಿಗುವುದೇ ಗೋಪುರ. ಶ್ರೀ ಆದೀಶ್ವರ ಸ್ವಾಮಿಯ ಬಸದಿ ಶಾಂತೀಶ್ವರ ಬಸದಿಯ ಎಡಪಕ್ಕದಲ್ಲಿದ್ದು ಬಲು ಚಿಕ್ಕದಾಗಿದೆ.[]

ಇಲ್ಲಿ ಪದ್ಮಾಸನದಲ್ಲಿ ಧ್ಯಾನಮಗ್ನನಾಗಿ ಕುಳಿತಿರುವ ಕರಿಶಿಲೆಯ ಶ್ರೀ ಆದೀಸ್ವರ ಸ್ವಾಮಿಯ ವಿಗ್ರಹವು ಮನಮೋಹಕವಾಗಿದೆ. ಇದು ಭಾರತದಲ್ಲೇ ಅಪೂರ್ವವಾದದ್ದು, ಏಕೆಂದರೆ ಆದೀಶ್ವರ ಸ್ವಾಮಿಯ ಹೆಗಲ ಮೇಲೆ ಕೇಶವು ಎರಡೂ ಬದಿಯಲ್ಲಿ ಹರಡಿಕೊಂಡಿದೆ. ಕೆಲವು ಕಡೆ ಮಾತ್ರ ಆದಿನಾಥರ ಮೂರ್ತಿಗಳಲ್ಲಿ ಈ ವಿನ್ಯಾಸ ಕಂಡು ಬರುತ್ತದೆ. ಆದೀಶ್ವರ ಸ್ವಾಮಿಯ ವಿಗ್ರಹವು ಸುಮಾರು ನಾಲ್ಕೂವರೆ ಐದು ಅಡಿ ಎತ್ತರವಿದೆ. ಇದು ಅಜಿಲ ರಾಜವಂಶದವರಿಂದ ಪ್ರತಿಷ್ಟಾಲಿಸಲ್ಪಟ್ಟ ಮೂರ್ತಿ.

ಬಸದಿಯ ರಚನೆ

[ಬದಲಾಯಿಸಿ]

ಇದರ ಎದುರು ಹೊರಭಾಗದಲ್ಲಿ ತೀರ್ಥಂಕರ ಮಂಟಪ ಇದೆ. ಬಸದಿಯನ್ನು ಪ್ರವೇಶಿಸಲು ೫ ಮೆಟ್ಟಿಲುಗಳಿವೆ. ಇವುಗಳ ಪಕ್ಕದಲ್ಲಿ ಆನೆ ಕಲ್ಲುಗಳಿವೆ. ಇದು ಲಕ್ಷ್ಮಿಯ ಪತ್ರೀಕ ಎನ್ನುತ್ತಾರೆ. ಹೇಳಿಕೆಯ ಪ್ರಕಾರ ಈ ಮೆಟ್ಟಿಲುಗಳಿವೆ ನಮಸ್ಕರಿಸಿ ಅನಂತರ ದ್ವಾರಪಾಲಕರ ಅಪ್ಪಣೆ ಪಡೆಯುವ ಪ್ರತೀಕವಾಗಿ ಹೊಸ್ತಿಲಿಗೆ ನಮಸ್ಕರಿಸಿ ಬಳಿಕ ಪ್ರವೇಶಿಸಬೇಕು. ಇದು ಇಲ್ಲಿ ಅನುಸರಿಸುವ ವಿಧಾನ. ಬಸದಿಯ ಮಾಡಿದ ನಾಲ್ಕು ದಿಕ್ಕುಗಳಲ್ಲಿ ದಿಕ್ಪಾಲಕರ ಮುಖಗಳನ್ನು ಕಾಣಬಹುದು. ಚಿಕ್ಕದಾಗಿ ಈ ಜಿನಾಲಯ ಸುಂದರವಾಗಿದೆ.

ಪೂಜಾ ವಿಧಾನಗಳ

[ಬದಲಾಯಿಸಿ]

ಇಲ್ಲಿನ ಪೂಜಾ ವಿಧಾನಗಳ ಕುರಿತು ಹೇಳುವುದಾದರೆ ಇಲ್ಲಿ ಮುಂಜಾನೆ ೭.೩೦ ಕ್ಕೆ ಆದಿನಾಥ -ಸ್ವಾಮಿಗೆ ಪೂಜೆ ಸಲ್ಲಿಸಿ ಅನಂತರ ಆದಿನಾತನಿಗೆ ಪೂಜೆ ಸಲ್ಲಿಸುವುದು ಕ್ರಮ ಸ್ವಾಮಿಗೆ ಹೂವಿನ ಅಲಂಕಾರ ಮಾಡುವಂತಿಲ್ಲ. ಆದರೆ ಹೂಗಳನ್ನು ಪಾದದ ಬಳಿ ಇಡಬಹುದು. ಪಂಚಾಮೃತ ಅಭಿಷೇಕ ಮಾಡಿದ ನಂತರ ನೀರಿನ ಅಂಶ ಉಳಿಯದಂತೆ ನೋಡಿ ಕೊಳ್ಳಲಾಗುತ್ತದೆ.

ವಿಶೇಷತೆ

[ಬದಲಾಯಿಸಿ]

ಇಲ್ಲಿನ ಸಂಪ್ರದಾಯದಂತೆ ಬಳಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಾವ ಕಾರ್ಯಕ್ರಮ ಆಗಬೇಕಾದರೂ ಮೊದಲು ಆದಿನಾಥ ಸ್ವಾಮಿಯ ಪ್ರಸಾದ ತೆಗೆದುಕೊಂಡು ಹೋಗಬೇಕು. ಹಾಗೆಯೇ ಊರಿನಲ್ಲಿ ಯಾವ ಉತ್ಸವವಾದರೂ ಅರಸರು ಇಲ್ಲಿಗೆ ಬಂದು ಪ್ರಸಾದ ಸ್ವೀಕರಿಸಿಯೇ ಹೋಗಬೇಕು. ಅದಿನಾಥ ಸ್ವಾಮಿ ವೇಣೂರು ಅಜಿಲ ಅರಸರ ಮನೆದೇವರೂ ಹೌದು. ಈ ಜಿನಾಲಯವನ್ನು ಕೆಲವು ವರ್ಷಗಳ ಹಿಂದೆ ಜೀರ್ಣೋದ್ಧಾರ ಮಾಡಲಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೦೧ ed.). ಉಜಿರ: ಮಂಜುಶೀ ಪ್ರಿಂಟರ್ಸ್. p. ೧೯೩.