ಆದಿನಾಥ ಸ್ವಾಮಿ ಬಸದಿ, ಕೆಪಾಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಥಳ[ಬದಲಾಯಿಸಿ]

ಶ್ರೀ ಆದಿನಾಥ ಸ್ವಾಮಿ ಬಸದಿಯು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಆರಂಬೋಡಿ ಗ್ರಾಮದಲ್ಲಿದೆ

ಮಾರ್ಗ[ಬದಲಾಯಿಸಿ]

ಬಸದಿಗೆ ಬೆಳ್ತಂಗಡಿ,ವೇಣೂರು, ಸಿದ್ದಕಟ್ಟೆ ಮಾರ್ಗವಾಗಿ ಚಲಿಸಿ ಒಕ್ಕಾಡಿಕೋಳಿಯಿಂದ ೧೨ ಕಾವಲು ಎಂಬಲ್ಲಿ ಮೂರುವರೆ ಕಿಲೋಮೀಟರ್ ಸಾಗಬೇಕು.[೧]

ಶಿಲಾನ್ಯಾಸ[ಬದಲಾಯಿಸಿ]

ಬಸದಿಯಲ್ಲಿ ಪೂಜಿಸಲ್ಪಡುವ ಮೂಲ ನಾಯಕ ಪ್ರಥಮ ತೀರ್ಥಂಕರ ಶ್ರೀ ಆದಿನಾಥ ಸ್ವಾಮಿ ಈ ಜಿನ ಮಂದಿರದ ಮೂರ್ತಿ ೪ ಅಡಿ ಎತ್ತರವಿದ್ದು, ಪಂಚ ಲೋಹದಿಂದ ತಯಾರಿಸಲಾಗಿದ್ದು ಖಡ್ಗಾಸನ ಭಂಗಿಯಲ್ಲಿದೆ. ಇದಕ್ಕೆ ಮಕರ ತೋರಣದ ಅಲಂಕಾರವಿದೆ. ಮೂರ್ತಿಯು ಕಲ್ಲಿನಿಂದ ಮಾಡಿದ ಪದ್ಮ ಪೀಠದ ಮೇಲಿದೆ. ಮೂರ್ತಿಯ ಪಕ್ಕದಲ್ಲಿರುವ ಯಕ್ಷ ಯಕ್ಷಿಯರು ಗೋಮುಖ ಯಕ್ಷ ಮತ್ತು ಚಕ್ರೇಶ್ವರ ಯಕ್ಷಿ. ಪ್ರಭಾವಳಿಯಲ್ಲಿ ಪುಷ್ಪಗಳ ಆಕೃತಿಗಳನ್ನು ಮತ್ತು ಮೂರ್ತಿಯ ಎಡ ಮತ್ತು ಬಲ ಬದಿಗಳಲ್ಲಿ ಪಟ್ಟಕಗಳಿರುವ ಸ್ತಂಭಗಳು ಇವೆ. ಬಳಿಯಲ್ಲಿ ಶ್ರುತ ಗಣದರ ವಲಯ ಇವೆ. ಪ್ರಭಾವಳಿಯಲ್ಲಿ ಉಳಿದ ತೀರ್ಥಂಕರುಗಳ ಬಿಂಬಗಳಿವೆ. ಗಂಧ ಕುಟಿ ಇದೆ ಇಲ್ಲಿ ಅನೇಕ ವಿವಿಧ ಜಿನಮೂರ್ತಿಗಳಿವೆ. ಹಾಗೂ ಶ್ರೀ ಬಾಹುಬಲಿಯ ಮೂರ್ತಿ, ನಿಂತುಕೊಂಡಿರುವ ಸ್ವತಂತ್ರವಾಗಿರುವ ಬ್ರಹ್ಮ ಯಕ್ಷ ಮೂರ್ತಿಯನ್ನು ಕಾಣಬಹುದು.ಗಂಧಕುಟಿಯಲ್ಲಿ ವಿಭಿನ್ನ ತೀರ್ಥಂಕರುಗಳ ಸಿಂಹಲಲಾಟ ಸಹಿತವಾದ ಮೂರ್ತಿಗಳಿವೆ. ಶ್ರೀ ಆದಿನಾಥ ಸ್ವಾಮಿಯ ಎದುರುಗಡೆ ಪರ್ಯಂಕಾಸನದಲ್ಲಿರುವ ಒಂದು ಅಮೃತ ಶಿಲೆಯ ಮೂರ್ತಿ ಇದೆ. ಬಸದಿಯ ಗರ್ಭಗುಡಿಯಿಂದ ಹೊರಗೆ ಘಂಟಾ ಮಂಟಪ, ಪ್ರಾರ್ಥನಾ ಮಂಟಪ, ತೀರ್ಥ ಮಂಟಪಗಳನ್ನು ಎದುರಲ್ಲಿ ಗೋಪುರವಿದೆ.ಬಸದಿಯ ಗೋಡೆಗಳ ಮೇಲೆ ಉಜ್ಜಯಂತಗಿರಿ, ಸಮ್ಮೇದ ಶಿಖರ್ಜಿ, ಪಾವಾಪುರಿ, ಚಂಪಾಪುರಿ ಮುಂತಾದ ಪವಿತ್ರ ಕ್ಷೇತ್ರಗಳ ವರ್ಣಚಿತ್ರಗಳನ್ನ, ಬಸದಿಯ ಗೋಪುರದ ಹೊರಗಡೆಯ ಮೇಲೆ ಶ್ರೀ ವೃಷಭ ತೀರ್ಥಂಕರರ ತಾಯಿಗೆ ಆದಂತಹ ೧೬ ಸ್ವಪ್ನಗಳ ವರ್ಣಚಿತ್ರಗಳನ್ನ ಕಾಣಬಹುದು. ಶ್ರೀ ಮಾತೆ ಪದ್ಮಾವತಿ ಮೂರ್ತಿಯು ಇಲ್ಲಿ ಕಾಣಸಿಗುತ್ತದೆ.

ಉಲ್ಲೇಖ[ಬದಲಾಯಿಸಿ]

  1. ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಮಂಜೂಶ್ರೀ ಪ್ರಿಂಟರ್ಸ್. p. ೨೩೯-೨೪೦.