ವಿಷಯಕ್ಕೆ ಹೋಗು

ಆದಿನಾಥ ಸ್ವಾಮಿ ಬಸದಿ ಹೊಸಮರ್ಗೋ ತೆಕ್ಕಾರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಬೆಳ್ತಂಗಡಿ ತಾಲೂಕಿನ ಅತ್ಯಂತ ದಕ್ಷಿಣಕ್ಕಿರುವ ತೆಕ್ಕಾರು ಗ್ರಾಮದ ಹೊಸದುರ್ಗ ಎಂಬಲ್ಲಿದೆ. ಇದು ಉಪ್ಪಿನಂಗಡಿಯಿAದ ಬಾಜಾರು ಮುಖಾಂತರ ಹೋಗುವ ಉಪ್ಪಿನಂಗಡಿ ಬಂಟ್ವಾಳ ರಸ್ತೆಯ ಬದಿಯಲ್ಲಿ ಪ್ರಶಾಂತ ಪ್ರದೇಶದಲ್ಲಿದೆ. ಅಂಗಡಿಯಿಂದ ಇಲ್ಲಿಗೆ ೭ ಕಿಲೋ ಮೀಟರ್ ದೂರ ಖಾಸಗಿ ಬಸ್ಸುಗಳ ಸೇವಾ ಸೌಲಭ್ಯವಿದೆ. ರಸ್ತೆಯ ಪಕ್ಕದಲ್ಲಿದ್ದು ಪುರೋಹಿತರ ಮನೆಯೂ ಬಳಿಯಲ್ಲಿಯೇ ಇದೆ. ಬಸದಿಗೆ ಮೇಗಿನ ನೆಲೆಯಿಲ್ಲದೆ ತೀರಾ ಸರಳವಾಗಿ ಕಾಣುವ ಜಿನಾಲಯವಿದೆ. ಆದರೆ ವಿಶೇಷ ಸಾನಿಧ್ಯವಿದೆ ಎಂಬುದು ನಂಬಲಾಗಿದೆ. ಎದುರಿಗೆ ಬಹು ಚಿಕ್ಕದಾಗಿರುವ ಸುಮಾರು ಆರು ಅಡಿ ಎತ್ತರದ ಕಂಬವಿದೆ. ಇದೊಂದು ವಿಶೇಷ ದಿನಂಪ್ರತಿ ಮಧ್ಯಾಹ್ನ ಮತ್ತು ಸಾಯಂಕಾಲ ಹೀಗೆ ಎರಡು ಬಾರಿ ಪೂಜೆ ನಡೆಯುತ್ತದೆ. ಬಸದಿಗೆ ಇರಬೇಕಾದ ಎಲ್ಲ ಮಂಟಪಗಳು ಇದಕ್ಕೆ ಇವೆ.[]

ಪೂಜಾ ಕಾರ್ಯ

[ಬದಲಾಯಿಸಿ]

ಪ್ರತಿ ತಿಂಗಳು ಮೊದಲ ರವಿವಾರ ಊರಿಗೆ ಒಂದೊಂದು ಮನೆಯವರ ವತಿಯಿಂದ ಶ್ರೀ ಸ್ವಾಮಿಗೆ ಕ್ಷೀರಾಭಿಷೇಕ ಮಾಡಲಾಗುತ್ತದೆ. ಶ್ರೀ ಪಾರ್ಶ್ವನಾಥ ಸ್ವಾಮಿಯ ೧೦೮ ನಾಮಸ್ಮರಣೆ ಮಾಡಿ ಶ್ರೀ ಪದ್ಮಾವತಿ ಅಮ್ಮನವರಿಗೆ ೧೦೮ ಕುಂಕುಮಾರ್ಚನೆ ಮಾಡಲಾಗುತ್ತದೆ. ನವರಾತ್ರಿ ಸಮಯದಲ್ಲಿ ಅದೇ ರೀತಿಯ ಪೂಜಾ ಕಾರ್ಯಗಳು ಮತ್ತು ವಿಜಯದಶಮಿಯಂದು ಆದೀಶ್ವರ ಸ್ವಾಮಿಗೆ ಕ್ಷೀರಾಭಿಷೇಕ ಮಾಡಿ ಹೊಸ ಅಕ್ಕಿ ಊಟವನ್ನು ಸಂಬAಧಪಟ್ಟ ೨೦ ಮನೆಯವರು ಕೂಡಾ ಸೇರಿ ಬಸದಿಯಲ್ಲಿ ಆಚರಣೆ ಮಾಡುತ್ತಾರೆ. ಜೀವದಯಾಷ್ಟಮಿಯ ದಿನ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಅಭಿಷೇಕ ಕಲ್ಯಾಣವನ್ನು ಪ್ರತಿವರ್ಷ ನಡೆಸುತ್ತಿದ್ದಾರೆ. ಮಾಸದಲ್ಲಿ ಬೆಳಿಗ್ಗೆ ಪೂಜೆಯನ್ನು ಎಲ್ಲಾ ಮನೆಯವರು ಹಂಚಿ ಮಾಡುತ್ತಾ ಬರುತ್ತಿದ್ದಾರೆ. ಸುಂದರ ಗಂಧಕುಟಿಯ ಮಧ್ಯದಲ್ಲಿ ವಿರಾಜಮಾನರಾಗಿರುವ ಶ್ರೀ ಆದೀಶ್ವರ ಸ್ವಾಮಿ ವಿಶೇಷ ಶೋಭಾನ್ವಿತರಾಗಿದ್ದರೆ.

ಬಸದಿಯಲ್ಲಿ ಶ್ರೀ ಪದ್ಮಾವತಿ ದೇವಿಯ ಸಾನ್ನಿಧ್ಯವಿದ್ದು, ಬಹಳ ಭಯ ಭಕ್ತಿಯಿಂದ ಅಲಂಕಾರಗೊಳಿಸಿ ಪೂಜಿಸಲಾಗುತ್ತಿದೆ. ಸುಮಾರು ೩೦೦ ವರ್ಷಗಳಿಂದ ಇಲ್ಲಿ ಬಸದಿ ಇದ್ದು ಆರಾಧನೆಗಳು ನಡೆದುಕೊಂಡು ಬರುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.

ಜಾತ್ಯಾತೀತ ಆರಾಧನೆ

[ಬದಲಾಯಿಸಿ]

ಈ ಬಸದಿಗೆ ನಡೆದುಕೊಳ್ಳುವವರು ಜೈನ ಶ್ರಾವಕರು ಮಾತ್ರವಲ್ಲದೆ ಎಲ್ಲಾ ಜಾತಿ ವರ್ಗದವರು ಮುಖ್ಯವಾಗಿ ಇಲ್ಲಿಯ ಶ್ರೀ ಪದ್ಮಾವತಿ ದೇವಿಗೆ ವಿಶೇಷವಾಗಿ ಪೂಜೆ ಹರಕೆಗಳನ್ನು ಸಲ್ಲಿಸುತ್ತಿರುತ್ತಾರೆ. ಅಮ್ಮನವರಿಗೆ ೧೦೦೮ ಸಹಸ್ರನಾಮಗಳೊಂದಿಗೆ ಷೋಡಶಾಭರಣ ಪೂಜೆಯನ್ನು ಮಾಡಲಾಗುತ್ತದೆ. ಆದಾಯದ ಮೂಲ ಅಥವಾ ಸ್ಥಿರಾಸ್ತಿ ಇರುವುದಿಲ್ಲ. ನಿತ್ಯಪೂಜಾ ವ್ಯವಸ್ಥೆಯನ್ನು ಶ್ರಾವಕರ ಮತ್ತು ಭಕ್ತಾದಿಗಳ ದೇಣಿಗೆಯ ಸಹಾಯದಿಂದಲೇ ಮಾಡಲಾಗುತ್ತಿದೆ. ಬೆಳ್ತಂಗಡಿ ತಾಲೂಕಿನ ಅತ್ಯಂತ ದಕ್ಷಿಣ ಭಾಗದಲ್ಲಿರುವ ಈ ಬಸದಿಯ ಮೂಲ ನಾಯಕ ತನ್ನ ಜೀವನದಲ್ಲಿ ಕೈಲಾಸದ ಕಡೆಗೆ ಉತ್ತರಾಭಿಮುಖವಾಗಿ ಇದ್ದಂತೆ ಇಡೀ ತಾಲೂಕಿಗೆ ತನ್ನ ದೃಷ್ಟಿಯನ್ನು ಪ್ರಾರ್ಥಿಸಲಾಗುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. ಶೇಣೈ, ಉಮಾನಾಥ ವೈ. ಕರಾವಳಿ ಕರ್ನಾಟಕದ ಜಿನ ಮಂದಿರಗಳ ದರ್ಶನ (೧ ed.). ಉಜಿರೆ: ಮಂಜೂ ಶ್ರೀ ಪ್ರಿಂಟರ್ಸ್. pp. ೨೩೮.